Tag: ಫುಡ್ ಡೆಲಿವರಿ ಮ್ಯಾನ್

  • ವಿಡಿಯೋ: ಸ್ಕೂಟರ್ ಮೇಲೆ ಮದ್ವೆಯಾಗಿ ಸಹೋದ್ಯೋಗಿಗಳೊಂದಿಗೆ ಮೆರವಣಿಗೆ ಹೊರಟ ಫುಡ್ ಡೆಲಿವರಿ ಮ್ಯಾನ್!

    ವಿಡಿಯೋ: ಸ್ಕೂಟರ್ ಮೇಲೆ ಮದ್ವೆಯಾಗಿ ಸಹೋದ್ಯೋಗಿಗಳೊಂದಿಗೆ ಮೆರವಣಿಗೆ ಹೊರಟ ಫುಡ್ ಡೆಲಿವರಿ ಮ್ಯಾನ್!

    ಬೀಜಿಂಗ್: ಸಾಮಾನ್ಯವಾಗಿ ಮದುವೆ ಮಂಟಪದಲ್ಲಿ, ದೇವಸ್ಥಾನಗಳಲ್ಲಿ ಮದುವೆಯಾಗೋದನ್ನ ನೋಡಿದ್ದೀವಿ. ಇತ್ತೀಚೆಗೆ ಡೆಸ್ಟಿನೇಷನ್ ವೆಡ್ಡಿಂಗ್ ತುಂಬಾ ಫೇಮಸ್ ಆಗಿರೋದ್ರಿಂದ ಅರಮನೆ, ಬೀಚ್‍ಗಳಲ್ಲೂ ಮದ್ವೆಯಾಗ್ತಾರೆ. ಆದ್ರೆ ಸ್ಕೂಟರ್ ಮೇಲೆ ಮದುವೆಯಾಗಿರೋದನ್ನ ಎಲ್ಲಾದ್ರೂ ಕೇಳಿದ್ದೀರಾ?

    ಇಂತಹದ್ದೊಂದು ಅಪರೂಪ ಮದುವೆ ಚೀನಾದಲ್ಲಿ ನಡೆದಿದೆ. ಫುಡ್ ಡೆಲಿವರಿ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರೋ ವ್ಯಕ್ತಿ ಸ್ಕೂಟರ್ ಮೇಲೆಯೇ ವಿವಾಹವಾಗಿದ್ದಾರೆ. ವರನ ಸಹೋದ್ಯೋಗಿಗಳು ಸಮವಸ್ತ್ರ ಹಾಗೂ ಹೆಲ್ಮೆಟ್ ಧರಿಸಿ ಬೈಕ್‍ಗಳಲ್ಲಿ ನವ ವಧು-ವರರನ್ನ ಹಿಂಬಾಲಿಸಿದ್ದು, ಇವರ ಮದುವೆ ಮೆರವಣಿಗೆ ಜನರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಮದುವೆ ವಿಡಿಯೋ ಸಖತ್ ಹಿಟ್ ಆಗಿದೆ.

    ಅಕ್ಟೋಬರ್ 1ರಂದು ಉತ್ತರ ಚೀನಾದ ಟಿಯಾಂಜಿನ್‍ನಲ್ಲಿ ಈ ವಿವಾಹ ನಡೆದಿದೆ ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಆದ್ರೆ ಇದು ಫುಡ್ ಡೆಲಿವರಿ ಕಂಪೆನಿಯ ಪಬ್ಲಿಸಿಟಿ ಗಿಮಿಕ್‍ನ ಭಾಗವಾಗಿತ್ತಾ? ಎಂಬುದು ಸ್ಪಷ್ಟವಾಗಿಲ್ಲ ಅಂತ ಕೂಡ ವರದಿಯಲ್ಲಿ ಹೇಳಲಾಗಿದೆ.