ಬೆಂಗಳೂರು: ದುಷ್ಕರ್ಮಿಗಳು ಫುಡ್ ಡೆಲಿವರಿ ಕೊಡಲು ಹೋಗುತ್ತಿದ್ದ ಯುವಕನಿಗೆ ಲಾಂಗ್ ಮಚ್ಚು ತೋರಿಸಿ ದರೋಡೆ ಮಾಡಿದ ಘಟನೆ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 12 ಗಂಟೆಗೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೈಕ್‍ನಲ್ಲಿ ಫುಡ್ ಡೆಲಿವರಿ ಕೊಡಲು ಹೋಗುತ್ತಿದ್ದ ರಾಜು ಎಂಬ ಯುವಕನ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದು, ಮಧ್ಯರಾತ್ರಿ ದರೋಡೆ ಮಾಡಿದ್ದಾರೆ. ಪುಂಡರು ಯುವಕನ ಬಳಿ ಇದ್ದ ಮೊಬೈಲ್, ಹಣ ಸೇರಿ ಬೈಕ್ ಸಮೇತ ಕಿತ್ತುಕೊಂಡು ಪರಾರಿಯಾಗಿದ್ದಾರೆ. ದಮ್ಮಯ್ಯ ಅಂತ ಬೇಡಿದರೂ ಬಿಡದೇ ಲಾಂಗ್ ಬೀಸಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ
5 ಮಂದಿ ದುಷ್ಕರ್ಮಿಗಳ ಕೃತ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನೈ: ಫುಡ್ ಡೆಲಿವರಿ ಬಾಯ್‍ಗೆ ನಡು ರಸ್ತೆಯಲ್ಲಿ ಪೊಲೀಸ್‍ವೊಬ್ಬರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನಲ್ಲಿ ಈ ಘಟನೆ ನಡೆದಿದೆ.
ವೆಂಕಟೇಶ್ ಮತ್ತು ಪೊಲೀಸ್ ಅಧಿಕಾರಿ ಧರ್ಮರಾಜ್ ನಡುವೆ 600 ರೂಪಾಯಿ ದಂಡದ ವಿಚಾರವಾಗಿ ವಾಗ್ವಾದ ನಡೆದಿದ್ದು, ವೆಂಕಟೇಶ್ ಬಳಿ ವಾಹನದ ದಾಖಲೆಗಳಿಲ್ಲದ ಕಾರಣ ದಂಡ ವಿಧಿಸಲಾಗಿದೆ. ಈ ವೇಳೆ ಹಣ ಕಟ್ಟಲು ನಿರಾಕರಿಸಿದ್ದಕ್ಕೆ ವೆಂಕಟೇಶ್ ಮೇಲೆ ಪೊಲೀಸ್ ಹಲ್ಲೆ ನಡೆಸಿದ್ದಾರೆ. ಘಟನೆ ವೇಳೆ ದಾರಿಹೋಕರು ವೆಂಕಟೇಶ್‍ಗೆ ಹೊಡೆಯುವುದನ್ನು ನಿಲ್ಲಿಸುವಂತೆ ಧರ್ಮರಾಜ್‍ಗೆ ಮನವಿ ಮಾಡಿದರೂ ಅವರು ನಿಲ್ಲಿಸಲಿಲ್ಲ. ಅಂತಿಮವಾಗಿ ಇತರ ಕೆಲವು ಪೊಲೀಸರು ಮಧ್ಯ ಪ್ರವೇಶಿಸಿ ವೆಂಕಟೇಶನನ್ನು ಕರೆದೊಯ್ದಿದ್ದಾರೆ.
ವೆಂಕಟೇಶ್, ಧರ್ಮರಾಜ್ ಅವರಿಗೆ ಚಾಕುವಿನಿಂದ ಬೆದರಿಕೆ ಹಾಕಿರುವುದಾಗಿ ಶ್ರೀವಿಲ್ಲಿಪುತ್ತೂರು ಪೊಲೀಸರು ಸೆಕ್ಷನ್ 294 (ಬಿ), 353, 307, ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಇದೀಗ ಧರ್ಮರಾಜ್ ವೆಂಕಟೇಶ್ ಅವರನ್ನು ಅಮಾನುಷವಾಗಿ ಥಳಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ದೌರ್ಜನ್ಯವನ್ನು ಹಲವರು ಖಂಡಿಸಿದ್ದಾರೆ. ಇದನ್ನೂ ಓದಿ: ಸೂರತ್‍ನಲ್ಲಿ ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆ – 5 ಮಂದಿ ಸಾವು, 20 ಮಂದಿ ಅಸ್ವಸ್ಥ