Tag: ಫುಡ್

  • ಅವಧಿ ಮೀರಿದ ಪದಾರ್ಥಗಳ ಮಾರಾಟ – ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳಿಂದ ಕ್ಷಿಪ್ರ ಕ್ರಮ!

    ಅವಧಿ ಮೀರಿದ ಪದಾರ್ಥಗಳ ಮಾರಾಟ – ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳಿಂದ ಕ್ಷಿಪ್ರ ಕ್ರಮ!

    ಬೆಂಗಳೂರು: ಬಸ್ ನಿಲ್ದಾಣ, ವ್ಯಾಪಾರ ಮಳಿಗೆ ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ಮಾರಾಟ (Expired Ingredients Sales) ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

    ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಬಿತ್ತರವಾದ ಸುದ್ದಿ ಅನ್ವಯ ಕ್ರಮಕ್ಕೆ ಸಿಎಂ ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಅಧಿಕಾರಿಗಳಿಂದ ಕ್ರಮದ ಕುರಿತು ಸಿಎಂ ಕಚೇರಿಯಿಂದ (CM Of Karnataka office) ಮಾಧ್ಯಮ ಹೇಳಿಕೆ ಬಿಡುಗಡೆಯಾಗಿದೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು!

    ಬಸ್‌ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡುವಿಕೆ, ನೈರ್ಮಲ್ಯದ ಕೊರತೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ಆಧರಿಸಿ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಂಡಿರುತ್ತಾರೆ.

    ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ 2006 (Food Security Act 2006) ಮತ್ತು ನಿಯಮಗಳು 2011 ಅನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲು 2024ರ ಜೂನ್‌ ತಿಂಗಳಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿರುತ್ತದೆ. ಇದನ್ನೂ ಓದಿ:  ದರ್ಶನ್ ಹೆಸ್ರು ಹೇಳದಂತೆ 30 ಲಕ್ಷಕ್ಕೆ ನಡೆದಿತ್ತಾ ಡೀಲ್? – ಇಂಚಿಂಚು ಮಾಹಿತಿ ಬಾಬ್ಬಿಟ್ಟ ಆರೋಪಿ ಪ್ರದೋಶ್‌

    ಅದರಂತೆ ರಾಜ್ಯಾದ್ಯಂತ 201 ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಕಚೇರಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುವಂತೆ ಅರಿವು ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಪುನರ್‌ ಪರಿಶೀಲನೆ ಸಂದರ್ಭದಲ್ಲಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಾಮಾನುಸಾರ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

  • ಪತ್ನಿ ಮಹಾಲಕ್ಷ್ಮಿಗಾಗಿ ‘ಡೆಲಿವರಿ ಬಾಯ್’ ಆದರಂತೆ ರವೀಂದರ್: ಮನದಾಳ ಬಿಚ್ಚಿಟ್ಟ ಮನ್ಮಥ

    ಪತ್ನಿ ಮಹಾಲಕ್ಷ್ಮಿಗಾಗಿ ‘ಡೆಲಿವರಿ ಬಾಯ್’ ಆದರಂತೆ ರವೀಂದರ್: ಮನದಾಳ ಬಿಚ್ಚಿಟ್ಟ ಮನ್ಮಥ

    ಟಿ ಮಹಾಲಕ್ಷ್ಮಿ (Mahalakshmi) ಅವರನ್ನು ಮದುವೆಯಾದ ನಂತರ ನಿರ್ಮಾಪಕ ರವೀಂದರ್ (Ravinder Chandrasekaran) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು. ಹೀಗೆ ತಮ್ಮ ಸುಖ ದಾಂಪತ್ಯ (Marriage) ಜೀವನದ ರಸಗಳಿಗೆಯನ್ನು ಗಂಭೀರವಾಗಿ ಒಂದೊಂದು ಸಲ ತಮಾಷೆಯಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಪತಿ ಮಹಾಲಕ್ಷ್ಮಿ ಈ ರವಿವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಬೇಕು ಎಂದು ಹೇಳಿಕೊಟ್ಟಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ರವಿವಾರದಂದು ಸಾಮಾನ್ಯವಾಗಿ ನಾನ್ ವೆಜ್ ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ಬರೆದುಕೊಂಡಿದ್ದಾರೆ.

    ಅಲ್ಲದೇ, ಊಟ ತಗೆದುಕೊಂಡು ಹೋದ ಬಟ್ಟಲು, ಡಬ್ಬಿಗಳನ್ನು ವಾಪಸ್ಸು ತರುವಂತೆ ಹೆಂಡತಿಗೆ ಕೇಳಿಕೊಂಡಿದ್ದಾರೆ. ಅವುಗಳಿಗಾಗಿ ಅತ್ತೆ ಕಾಯುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಮಿಸ್ ಮಾಡದೇ ಎಲ್ಲವನ್ನೂ ತಗೆದುಕೊಂಡು ಬಾ ಎಂದು ಸೋಷಿಯಲ್ ಮೀಡಿಯಾ ಮೂಲಕವೇ ಹೆಂಡತಿಗೆ ಹೇಳಿದ್ದಾರೆ. ಆ ಒಂದು ದಿನ ಫುಡ್ ಡೆಲಿವರಿ ಬಾಯ್ (Delivery Boy) ಆದ ಅನುಭವನ್ನು ರವೀಂದರ್ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಟನ್ ಅಂದ್ರೆ ಇಷ್ಟಾನಾ? ಮಟನ್ ಕೈಮಾ ಉಂಡೆ ಸಾಂಬಾರ್‌ ಒಮ್ಮೆ ಟ್ರೈ ಮಾಡಿ

    ಮಟನ್ ಅಂದ್ರೆ ಇಷ್ಟಾನಾ? ಮಟನ್ ಕೈಮಾ ಉಂಡೆ ಸಾಂಬಾರ್‌ ಒಮ್ಮೆ ಟ್ರೈ ಮಾಡಿ

    ಳಿಗಾಲದ ಸಂದರ್ಭದಲ್ಲಿ ನಾಲಿಗೆಯು ರುಚಿ ರುಚಿಯಾದ ಖಾದ್ಯವನ್ನು ಸೇವಿಸಲು ಬಯಸುತ್ತದೆ. ನಾನ್‌ವೆಜ್ ಪ್ರಿಯರಿಗಂತು ನಾನ್‌ವೆಜ್ ಪದಾರ್ಥಗಳ ಪರಿಮಳ ಮೂಗಿಗೆ ಸೋಕಿದಾಗ ಬಾಯಲ್ಲಿ ನೀರೂರುತ್ತದೆ. ಹಾಗಾದ್ರೆ ಮಟನ್ ಕೈಮಾ ಉಂಡೆ ಸಾಂಬಾರ್‌ ನ್ನು ನೀವು ಎಂದಾದರೂ ಊಟ, ರೊಟ್ಟಿಗೆ ಹಾಕಿ ತಿಂದಿದ್ದೀರಾ? ಇಲ್ಲವಾದಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ಊಟದೊಂದಿಗೆ ಮಿಶ್ರಣ ಮಾಡಿ ತಿನ್ನಿ. ಈ ಮಟನ್ ಕೈಮಾ ಉಂಡೆ ಸಾಂಬಾರು ಮಾಡುವ ವಿಧಾನ ನಿಮಗಾಗಿ.

    ಉಂಡೆಗೆ ಬೇಕಾಗುವ ಸಾಮಾಗ್ರಿಗಳು:
    * ಮಟನ್ – 500 ಗ್ರಾಂ
    * ಮಟನ್ ಮೂಳೆ
    * ಕೊತ್ತಂಬರಿ ಪುಡಿ – 1 ಚಮಚ
    * ಕೊಬ್ಬರಿ – ಸ್ವಲ್ಪ
    * ಬೆಳ್ಳುಳ್ಳಿ – 1
    * ಖಾರದ ಪುಡಿ – 1 ಚಮಚ
    * ಕರಿಮೆಣಸು – ಸ್ವಲ್ಪ
    * ಚಕ್ಕೆ – 4
    * ಲವಂಗ – 4
    * ಮೊಟ್ಟೆ – 1
    * ಕರಿಕಡಲೆ – ಸ್ವಲ್ಪ
    * ತೆಂಗಿನ ಕಾಯಿ – 1
    * ಈರುಳ್ಳಿ – 1
    * ಬೆಳ್ಳುಳ್ಳಿ – 1
    * ಟೊಮೆಟೋ – 1
    * ಗಸಗಸೆ – ಸ್ವಲ್ಪ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಎಣ್ಣೆ ಸ್ವಲ್ಪ
    * ಉಪ್ಪು ರುಚಿಗೆ ತಕ್ಕಷ್ಟು ಇದನ್ನೂ ಓದಿ: ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಮಟನ್, ಮಟನ್ ಮೂಳೆ, ಬೆಳ್ಳುಳ್ಳಿ, ಕೊತ್ತಂಬರಿ ಪುಡಿ, ಕೊಬ್ಬರಿ, ಕರಿಮೆಣಸು, ಚಕ್ಕೆ, ಲವಂಗ ಪದಾರ್ಥಗಳನ್ನು ನೀರು ಹಾಕದೇ ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ


    * ಕರಿಕಡಲೆಯನ್ನು ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಬೇಕು.

    * ನಂತರ ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು ಹುರಿಕಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು.

    * ನಂತರ ಕುಕ್ಕರನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಅರಿಶಿನ ಪುಡಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ: ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ

    * ಬಳಿಕ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಟೊಮೆಟೋ, ಗಸಗಸೆ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
    * ಅಗತ್ಯಕ್ಕೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ರಿಂದ 15 ನಿಮಿಷ ಕುದಿಸಬೇಕು.

    * ಕುದಿಯುತ್ತಿರುವ ಮಸಾಲೆಗೆ ಈಗಾಗಲೇ ಮಾಡಿಟ್ಟಿರುವ ಉಂಡೆಗಳನ್ನು ಹಾಕಿ 10-15 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಕೈಮಾ ಉಂಡೆ ಸಾರು ಸಿದ್ಧವಾಗುತ್ತದೆ.

  • ಐಸ್ ಕ್ಯಾಂಡಿ ಇಡ್ಲಿ ಆಯ್ತು ಈಗ ಬ್ಲ್ಯಾಕ್ ಇಡ್ಲಿ ಸರದಿ – ವೀಡಿಯೋ ವೈರಲ್

    ಐಸ್ ಕ್ಯಾಂಡಿ ಇಡ್ಲಿ ಆಯ್ತು ಈಗ ಬ್ಲ್ಯಾಕ್ ಇಡ್ಲಿ ಸರದಿ – ವೀಡಿಯೋ ವೈರಲ್

    ಮುಂಬೈ: ನಾಗ್ಪುರದ ರಸ್ತೆ ಬದಿಯ ಅಂಗಡಿಯಲ್ಲಿ ಬ್ಲ್ಯಾಕ್ ಇಡ್ಲಿ ಗ್ರಾಹಕರ ಗಮನ ಸೆಳೆಯುತ್ತಿದ್ದು, ಇದೀಗ ಬ್ಲ್ಯಾಕ್ ಇಡ್ಲಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಫುಡ್ ಪ್ರಿಯರನ್ನು ತಮ್ಮತ್ತ ಸೆಳೆಯಲು ಹೋಟೆಲ್‍ಗಳು ಹಲವಾರು ಐಡಿಯಾಗಳನ್ನು ಮಾಡುತ್ತಲೆ ಇರುತ್ತದೆ. ಇತ್ತೀಚೆಗಷ್ಟೇ ಐಸ್ ಕ್ಯಾಂಡಿ ಇಡ್ಲಿ, ಪಾವ್ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ಬ್ಲ್ಯಾಕ್ ಇಡ್ಲಿ ಸರದಿ. ಇದನ್ನೂ ಓದಿ:  ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    ಹೌದು, ಈ ವೀಡಿಯೋವನ್ನು ವಿವೇಕ್ ಮತ್ತು ಆಯೇಶಾ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಬೂದು-ಕಪ್ಪು ಬಣ್ಣದ ಇಡ್ಲಿ ಹಿಟ್ಟನ್ನು ಸವ್ಟ್ ನಿಂದ ಇಡ್ಲಿ ತಟ್ಟೆಗೆ ತುಂಬಿ ಬೇಯಿಸಿದರು. ನಂತರ ಬೇಯಿಸಿದ ಇಡ್ಲಿಯನ್ನು ತಟ್ಟೆಯೊಂದಕ್ಕೆ ಹಾಕಿ ಅದರ ಮೇಲೆ ತುಪ್ಪ ಹಾಗೂ ಮಿಲಗಾಯಿ ಪುಡಿಯನ್ನು ಉದುರಿಸಿ ನಂತರ ಅದಕ್ಕೆ ತೆಂಗಿನ ಕಾಯಿ ಚಟ್ನಿ ಹಾಕಿ ಬಡಿಸಿದ್ದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಐಸ್ ಕ್ಯಾಂಡಿ ಇಡ್ಲಿ ಬಳಿಕ ವೈರಲ್ ಆಗ್ತಿದೆ ಇಡ್ಲಿ ವಡಾಪಾವ್

    ನಾಗ್ಪುರದ ಬೀದಿಬದಿಯಲ್ಲಿರುವ ಆಲ್ ಅಬೌಟ್ ಇಡ್ಲಿ ಎಂಬ ಅಂಗಡಿಯಲ್ಲಿ ಈ ಬ್ಲ್ಯಾಕ್ ಇಡ್ಲಿ ದೊರೆಯುತ್ತದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳನ್ನು ಮಾಡಿದ್ದಾರೆ.

  • ಹೊಸ ಅಡುಗೆ ಮಾಡಲು ಟ್ರೈ ಮಾಡುತ್ತಿರುವ ಬ್ಯಾಚುಲರ್ಸ್‌ಗೆ ಇಲ್ಲಿದೆ ಪನ್ನೀರ್ ಮಸಾಲ ರೆಸಿಪಿ

    ಹೊಸ ಅಡುಗೆ ಮಾಡಲು ಟ್ರೈ ಮಾಡುತ್ತಿರುವ ಬ್ಯಾಚುಲರ್ಸ್‌ಗೆ ಇಲ್ಲಿದೆ ಪನ್ನೀರ್ ಮಸಾಲ ರೆಸಿಪಿ

    ಳಿಗಾಲದ ಸಂದರ್ಭದಲ್ಲಿ ನಾಲಿಗೆ ರುಚಿಕರವಾದ ಹಾಗೂ ಬಿಸಿಬಿಸಿಯಾದ ಖಾದ್ಯವನ್ನು ಸವಿಯಲು ಬಯಸುತ್ತದೆ. ಅದರಲ್ಲೂ ರೋಟಿ, ಬಟಾರ್ ನಾನ್ ಹಾಗೂ ಪನ್ನೀರ್ ಮಸಾಲ ಕಾಂಬಿನೇಶನ್ ಎಷ್ಟು ರುಚಿ ಅಲ್ವಾ. ನೀವು ಮನೆಯಲ್ಲಿಯೇ ಪನ್ನೀರ್ ಮಸಾಲ ಮಾಡಬಹುದು. ನೀವು ಬ್ಯಾಚುಲರ್ ಆಗಿದ್ದರೆ, ಹೊಸ ಅಡುಗೆ ಮಾಡಲು ಟ್ರೈ ಮಾಡುತ್ತಿದ್ದರೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಎಣ್ಣೆ- ಅರ್ಧ ಕಪ್
    * ಲವಂಗ – 2
    * ಚೆಕ್ಕೆ – 2
    * ಹಸಿಮೆಣಸು -3
    * ಏಲಕ್ಕಿ – 3
    * ಈರುಳ್ಳಿ _ 3
    * ದನಿಯಾ ಪುಡಿ _ 1 ಚಮಚ
    * ಖಾರದ ಪುಡಿ – 1 ಚಮಚ
    * ಅರಶಿಣ ಪುಡಿ – 1 ಚಮಚ
    * ಮೊಸರು – 1 ಕಪ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    * ಜೀರಿಗೆ ಪುಡಿ – 1 ಚಮಚ
    * ಟೊಮೆಟೋ – 2
    * ಮೊಸರು – 2 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಪನ್ನೀರ್ – 200 ಗ್ರಾಂ
    * ಹಸಿರು ಮೆಣಸಿನಕಾಯಿ – 4
    * ಗರಂ ಮಸಾಲೆ – 1 ಚಮಚ
    * ಬೆಣ್ಣೆ – 1 ಚಮಚ
    * ಕೊತ್ತಂಬರಿ ಸೊಪ್ಪು – 2 ಚಮಚ
    * ಒಣ ಮೆಂತೆ ಸೊಪ್ಪು ಹುಡಿ – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಬೇಕು. ನಂತರ ಚೆಕ್ಕೆ, ಏಲಕ್ಕಿ, ಲವಂಗ, ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 
    * ಬಳಿಕ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ಅರಶಿನ ಪುಡಿ, ಇದರ ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.

    * ನಂತರ ಅದೇ ಬಾಣಲೆಗೆ ಟೊಮೆಟೋ ಪೇಸ್ಟ್, ಮೊಸರು, ಎರಡು ಕಪ್‍ನಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ಹಸಿ ಮೆಣಸಿನಕಾಯಿ, ಗರಂ ಮಸಾಲೆ ಹಾಕಿ. ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿದರೆ ರುಚಿಯಾದ ಪನ್ನೀರ್ ಮಸಾಲ ಸವಿಯಲು ಸಿದ್ಧವಾಗುತ್ತದೆ. ಸಬ್ಬಸ್ಸಿಗೆ ಸೊಪ್ಪಿನಿಂದ ತಯಾರಿಸಿ ಆರೋಗ್ಯಕರವಾದ ಸೂಪ್

  • ಸಖತ್ ಟೇಸ್ಟ್ ಈ ಚಿಕನ್ ಹರಿಯಾಲಿ – ನೀವೂ ಒಮ್ಮೆ ಟ್ರೈ ಮಾಡಿ

    ಸಖತ್ ಟೇಸ್ಟ್ ಈ ಚಿಕನ್ ಹರಿಯಾಲಿ – ನೀವೂ ಒಮ್ಮೆ ಟ್ರೈ ಮಾಡಿ

    ರುಚಿರುಚಿಯಾದ ಆಹಾರ ಸೇವಿಸುವುದೆಂದರೆ ಎಲ್ಲರಿಗೂ ಒಂದು ರೀತಿಯಲ್ಲಿ ಇಷ್ಟ. ಆದ್ರೆ ಅನ್ನದೊಂದಿಗೆ ಚಿಕನ್ ಕರಿ ಇದ್ರೆ ಎಷ್ಟು ಚಂದ ಅಲ್ವಾ. ಬಹಳ ಮಂದಿಯ ಊಟಕ್ಕೆ ಚಿಕನ್ ಕರಿ ಇರ್ಲೇಬೇಕು. ಚಿಕನ್ ಎಂದಾಕ್ಷಣ ನೆನಪಾಗೋದು ಚಿಕನ್ ಹರಿಯಾಲಿ. ಹಾಗಾದ್ರೆ ಈ ಚಿಕನ್ ಹರಿಯಾಲಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಚಿಕನ್- 1/5 ಕೆ.ಜಿ
    * ಈರುಳ್ಳಿ _ 2
    * ಎಣ್ಣೆ- 4-5 ಚಮಚ
    * ಪುದಿನಾ – 1/2 ಕಪ್
    * ಹಸಿಮೆಣಸು – 5-6
    * ಏಲಕ್ಕಿ -3
    * ಚೆಕ್ಕೆ -2
    * ಜೀರಾ ಪೌಡರ್ – 1/2 ಚಮಚ
    * ಖಾರದ ಪುಡಿ – 1 ಚಮಚ
    * ಮೊಸರು – 1/2 ಕಪ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಕಪ್
    * ಕೊತ್ತಂಬರಿ ಸೊಪ್ಪು – 1/2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    ಮಿಕ್ಸಿಗೆ ಮೊದಲು ಪುದಿನ ಸೊಪ್ಪು, ಮೊಸರು, ಹಸಿ ಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿ. ರುಬ್ಬಿದ ಮೇಲೆ ಪಕ್ಕದಲ್ಲಿರುವ ಬಾಣಲೆಗೆ ಎಣ್ಣೆ ಹಾಕಿ. ನಂತರ ಚೆಕ್ಕೆ, ಹಾಗೂ ಏಲಕ್ಕಿ ಹಾಕಿ. ಬಳಿಕ ಕಟ್ ಮಾಡಿದ ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಬೇಕು. ಸ್ವಲ್ಪ ಸಮಯದ ಮೇಲೆ ಚಿಕನ್ ಹಾಕಿ ಫ್ರೈ ಮಾಡಿ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

    ಚಿಕನ್ ಕಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಫ್ರೈ ಆಗುತ್ತಿರುವಾಗ ಜಿರಾ ಪೌಡರ್, ಖಾರ ಪುಡಿ, ಮೊಸರು ಇವುಗಳನ್ನು ಹಾಕಿ. ನಂತರ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿದ ಪದಾರ್ಥವನ್ನ ಬಾಣಲೆಗೆ ಹಾಕಿ ಸ್ವಲ್ಪ ಕುದಿಸಿ. ಕುದಿಸಿದ ಬಳಿಕ ಉಪ್ಪು ಹಾಕಿ. ನಂತರ 15-20 ನಿಮಿಷದಷ್ಟು ಬಾಣಲೆಯ ಮೇಲೆ ಮುಚ್ಚಳ ಹಾಕಿ ಬೇಯಿಸಿ. ಬೆಂದ ಮೇಲೆ ರುಚಿಯಾದ ಚಿಕನ್ ಹರಿಯಾಲಿ ಸಿದ್ಧವಾಗುತ್ತದೆ.

  • ಶನಿವಾರ ಮಾಡಿ ವೆಜ್ ಬಿರಿಯಾನಿ

    ಶನಿವಾರ ಮಾಡಿ ವೆಜ್ ಬಿರಿಯಾನಿ

    ವೀಕ್‍ಎಂಡ್‍ನಲ್ಲಿ ಮಾಂಸ ಊಟವನ್ನು ಮಾಡಲು ಪ್ರತ್ರಿಯೊಬ್ಬರು ಆಸೆ ಪಡುತ್ತಾರೆ. ಹೆಚ್ಚಿನವರು ಶನಿವಾರ ಆಗಿರುವುದರಿಂದ ಮಾಂಸ ಸೇವೆನೆ ಮಾಡುವುದಿಲ್ಲ. ನಾಳೆ ಮಾಂಸದ ಊಟವನ್ನು ಮಾಡುವ ನೀವು ಇಂದು ಮೆನೆಯಲ್ಲಿ ರುಚಿ ರುಚಿಯಾದ ವೇಜ್ ಬಿರಿಯಾನಿ ಮಾಡಿ.. ಇದನ್ನೂಓದಿ: ಗರಿಗರಿಯಾದ ಆಲೂ ಬೋಂಡಾ ಮಾಡುವ ವಿಧಾನ

    ಬೇಕಾಗುವ ಸಾಮಗ್ರಿಗಳು:
    * ಬಾಸ್ಮತಿ ಅಕ್ಕಿ -1 ಕಪ್ ನೆನೆ ಹಾಕಿರಬೇಕು
    * ಈರುಳ್ಳಿ – 1 ಕಪ್
    * ಬೀನ್ಸ್ – 1 ಕಪ್
    * ಕ್ಯಾರೆಟ್ – 1 ಕಪ್
    * ಬಟಾಣಿ – 1/2 ಕಪ್
    * ಬೆಳ್ಳುಳ್ಳಿ ಪೇಸ್ಟ್ – 2 ಟೀ ಸ್ಪೂನ್
    * ಶುಂಠಿ ಪೇಸ್ಟ್ – 2 ಟೀ ಸ್ಪೂನ್
    * ಟೊಮೆಟೊ ಪೇಸ್ಟ್ – 1 ಕಪ್
    * ಪುದೀನಾ- ಅಗತ್ಯಕ್ಕೆ ತಕ್ಕಷ್ಟು
    * ಕೊತ್ತಂಬರಿ ಸೊಪ್ಪು
    * ತುಪ್ಪ – 4 1ಈ ಸ್ಪೂನ್
    * ಮೊಸರು – 1 ಕಪ್
    * ಖಾರದ ಪುಡಿ – ಅರ್ಧ ಟೀ ಸ್ಪೂನ್
    * ಚಕ್ಕೆ – 1
    * ಲವಂಗದ ಎಲೆ
    * ಲವಂಗ- 2
    * ಇಂಗು ಚಿಟಿಕೆ
    * ಉಪ್ಪು ರುಚಿಗೆ ತಕ್ಕಷ್ಟು
    * ಗರಂ ಮಸಾಲ ಪುಡಿ
    * ಜೀರಿಗೆ – 1 ಟೀ ಸ್ಪೂನ್
    * ಏಲಕ್ಕಿ – 4

    ಮಾಡುವ ವಿಧಾನ:
    * ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ಪಾತ್ರೆಯಲ್ಲಿ 5-10 ನಿಮಿಷಗಳ ಕಾಲ ನೆನೆಯಿಟ್ಟಿರಬೇಕು.
    * ಒಂದು ಪಾತ್ರೆಯಲ್ಲಿ ಅಕ್ಕಿಗೆ ಎರಡರಷ್ಟು ಪ್ರಮಾಣದಲ್ಲಿ ನೀರನ್ನು ಹಾಕಿ ಕುದಿಸಿ. ನಂತರ ಅಕ್ಕಿ, ಉಪ್ಪು, ಒಂದು ಏಲಕ್ಕಿ, ಲವಂಗ ಮತ್ತು ಒಂದು ಟೀ ಚಮಚ ತುಪ್ಪ ಸೇರಿಸಿ, ಬೇಯಲು ಬಿಡಿ.


    * ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಇಂಗು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಸೇರಿಸಿ ಹುರಿಯಿರಿ. ಈರುಳ್ಳಿ ಬೇಯುತ್ತಿದ್ದಂತೆ ಏಲಕ್ಕಿ ಮತ್ತು ಬೇ ಎಲೆಯನ್ನು ಸೇರಿಸಿ.  ಇದನ್ನೂ ಓದಿ : ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್


    * ನಂತರ ಕ್ಯಾರೆಟ್, ಬೀನ್ಸ್, ಟೊಮೆಟೊ ಪೇಸ್ಟ್, ಅರಿಶಿಣ, ಉಪ್ಪು, ಬಟಾಣಿ, ಪುದೀನಾ, ಕೊತ್ತಂಬರಿ ಮತ್ತು ಮೊಸರನ್ನು ಸೇರಿಸಿ, ತರಕಾರಿಗಳು ಸ್ವಲ್ಪ ಮೃದುವಾಗುವವರೆಗೆ 2-3 ನಿಮಿಷಗಳ ಕಾಲ ಬೇಯಿಸಬೇಕು.


    * ನಂತರ ಈ ಮೊದಲೆ ತಯಾರಿಸಿದ ಮಸಾಲೆ ಇರುವ ಪಾತ್ರೆಗೆ ತಪ್ಪ ಹಾಗೂ ಇನ್ನಿತರ ಮಸಾಲೆಯನ್ನು ಹಾಕಿ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ವೇಜ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.

  • ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್

    ಮೊಟ್ಟೆ, ಆಲೂಗಡ್ಡೆ, ಟೊಮಾಟೋ ಬಳಸಿ ತಯಾರಿಸಿ ಅಫ್ಘಾನಿ ಆಮ್ಲೆಟ್

    ಲಾಕ್‍ಡೌನ್ ನಿಂದ ಮನೆಯಲ್ಲಿ ಬಂಧಿಯಾಗಿರೋ ಎಷ್ಟೋ ಜನಕ್ಕೆ ಹೊಸ ರುಚಿ ನೋಡಬೇಕೆಂದು ಕಾಯುತ್ತಿದ್ದಾರೆ. ಹೊರಗೆ ಹೋಗಿ ತರೋಣ ಅಂದ್ರೆ ಲಾಕ್‍ಡೌನ್. ಇನ್ನು ಮತ್ತೆ ಕೆಲವರಿಗೆ ವರ್ಕ್ ಫ್ರಂ ಹೋಮ್ ಇರೋದರಿಂದ ಹೊರಗೆ ಹೋಗಕ್ಕೂ ಆಗಲ್ಲ. ಮನೆಯಲ್ಲಿ ಅಡುಗೆ ಮಾಡಿಕೊಳ್ಳೋಕು ಸಮಯ ಇರಲ್ಲ. ಮನೆಯಲ್ಲಿ ಮೊಟ್ಟೆ, ಆಲೂಗಡ್ಡೆ ಮತ್ತು ಟೊಮಾಟೋ ಇದ್ರೆ ರುಚಿಯಾದ ಅಫ್ಘಾನಿ ಆಮ್ಲೆಟ್ ಟ್ರೈ ಮಾಡಿ. ಬೇಗನೂ ಆಗುತ್ತೆ, ಬಾಯಿಗೆ ಹೊಸ ರುಚಿ ಸಿಕ್ಕಂತೆ ಆಗುತ್ತೆ.

    ಬೇಕಾಗುವ ಸಾಮಾಗ್ರಿಗಳು
    * ಆಲೂಗಡ್ಡೆ – ಒಂದು ಮಧ್ಯಮ ಗಾತ್ರದ್ದು
    * ಟೊಮಾಟೋ – ಒಂದು ಅಥವಾ ಎರಡು
    * ಈರುಳ್ಳಿ- 1 (ಚಿಕ್ಕದು)
    * ಮೊಟ್ಟೆ – 4 ರಿಂದ 5
    * ಅಡುಗೆ ಎಣ್ಣೆ – 1/4 ಕಪ್
    * ಉಪ್ಪು- ರುಚಿಗೆ ತಕ್ಕಷ್ಟು
    * ಬ್ಲ್ಯಾಕ್ ಪೆಪ್ಪರ್ ಪೌಡರ್ – 1/4 ಟೀ ಸ್ಪೂನ್
    * ಹಸಿ ಮೆಣಸಿನಕಾಯಿ- 2
    * ಕೋತಂಬರಿ ಸೊಪ್ಪು

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ ಪ್ಯಾನ್‍ಗೆ ಹಾಕಿ. ಹೀಗೆ ಆಲೂಗಡ್ಡೆಯನ್ನು ಕಡಿಮೆ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.
    * ಆಲೂಗಡ್ಡೆ ಬೇಯುತ್ತಿದ್ದಂತೆ ಸಣ್ಣದಾಗಿ ಕತ್ತರಿಸಿರುವ ಈರುಳ್ಳಿ ಸೇರಿಸಿ ಚೆನ್ನಾಗಿ ಕಲಕಿ. ಈರುಳ್ಳಿ ಹಸಿ ವಾಸನೆ ಹೋದ ನಂತ್ರ ಕತ್ತರಿಸಿದ ಟೊಮಾಟೋ ಮಿಕ್ಸ್ ಮಾಡಿಕೊಂಡು ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ.

    * ಆಲೂಗಡ್ಡೆ, ಟೊಮಾಟೋ ಮತ್ತು ಈರುಳ್ಳಿ ಮಿಶ್ರಣ ಬೇಯುತ್ತಿದ್ದಂತೆ ಬ್ಲ್ಯಾಕ್ ಪೆಪ್ಪರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಕಿ. ನಂತರ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿ.
    * ಈಗ ಆಲೂಗಡ್ಡೆ ಸಾಫ್ಟ್ ಆಗಿರುತ್ತೆ. ಈಗ ಮೇಲೆ ಒಂದೊಂದರಂತೆ ಮೊಟ್ಟೆಗಳನ್ನು ಒಡೆದು ಹಾಕಿ. ತದನಂತರ ಮೇಲೆ ಸ್ವಲ್ಪ ಬ್ಲ್ಯಾಕ್‍ಪೆಪ್ಪರ್ ಪೌಡರ್ ಉದುರಿಸಿ. ಉದ್ದವಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ, ಕೊನೆಗೆ ಕೋತಂಬರಿ ಸೊಪ್ಪು ಉದುರಿಸಿ. ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿದ್ರೆ ಸ್ಪೈಸಿ ಅಫ್ಘಾನಿ ಆಮ್ಲೆಟ್ ಸವಿಯಲು ಸಿದ್ಧ

  • ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಮಾಡುವ ವಿಧಾನ

    ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಮಾಡುವ ವಿಧಾನ

    ಳೆದ ವಾರ ದೀಪಾವಳಿ ಸಂಭ್ರಮದಲ್ಲಿ ಸಿಹಿಯೂಟ ಮಾಡಿರುತ್ತೀರಿ. ನಾಳೆ ಭಾನುವಾರ ರಜೆ ಬಾಡೂಟ ಇರಲೇಬೇಕು. ಚಿಕನ್ ನಲ್ಲಿಯೇ ಏನಾದ್ರೂ ವೆರೈಟಿ ಟ್ರೈ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದೀರಾ ? ಹಾಗಾದ್ರೆ ಕೋಲ್ಕತ್ತಾ ಶೈಲಿಯ ರೇಜನಾ ಚಿಕನ್ ಗ್ರೇವಿ ಮಾಡಿ.

    ಬೇಕಾಗುವ ಸಾಮಾಗ್ರಿಗಳು
    ಚಿಕನ್ – 1 ಕೆಜಿ
    ಮೊಸರು – 1 ಕಪ್
    ಬೆಳ್ಳುಳ್ಳಿ, ಶುಂಠಿ ಪೇಸ್ಟ್- 3 ಟೀ ಸ್ಪೂನ್
    ಗ್ರೀನ್ ಚಿಲ್ಲಿ ಪೇಸ್ಟ್ – 2 ಟೀ ಸ್ಪೂನ್ (ಮೂರು)
    ಪೆಪ್ಪರ್ ಪೌಡರ್- 1/2 ಟೀ ಸ್ಪೂನ್
    ಉಪ್ಪು – 2 ಟೀ ಸ್ಪೂನ್
    ತುಪ್ಪ- 2 ಟೀ ಸ್ಪೂನ್
    ಗಸಗಸೆ- 2 ಟೀ ಸ್ಪೂನ್
    ಗೋಡಂಬಿ- 10 ರಿಂದ 12
    ಎಣ್ಣೆ- 5 ರಿಂದ 6 ಟೀ ಸ್ಪೂನ್
    ಏಲಕ್ಕಿ – 5
    ಲವಂಗ – 2
    ಕಾಳು ಮೆಣಸು – 5
    ಒಣ ಮೆಣಸಿನಕಾಯಿ – 5
    ಎರಡು ಈರುಳ್ಳಿ ಪೇಸ್ಟ್
    ಕೇವರಾ ವಾಟರ್ – 1 ಟೀ ಸ್ಪೂನ್ (ಬೇಕಿದ್ದಲ್ಲಿ ಮಾತ್ರ ಬಳಸಬಹುದು)

    ಮಾಡುವ ವಿಧಾನ
    * ಮೊದಲಿಗೆ ಮಿಕ್ಸಿಂಗ್ ಬೌಲ್ ನಲ್ಲಿ ಚೆನ್ನಾಗಿ ತೊಳೆದುಕೊಂಡಿರುವ ದೊಡ್ಡ ದೊಡ್ಡ ಪೀಸ್ ಗಳ ಚಿಕನ್ ಹಾಕಿಕೊಳ್ಳಿ
    * ಚಿಕನ್ ಹಾಕಿರೋ ಮಿಕ್ಸಿಂಗ್ ಬೌಲ್ ಗೆ ಮೊಸರು, ಬೆಳ್ಳುಳ್ಳಿ-ಪೇಸ್ಟ್, ಗ್ರೀನ್ ಚಿಲ್ಲಿ ಪೇಸ್ಟ್, ಪೆಪ್ಪರ್ ಪೌಡರ್, ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತಟ್ಟೆ ಮುಚ್ಚಿ ಎರಡು ಗಂಟೆ ಎತ್ತಿಡಿ. ಮಿಶ್ರಣವೆಲ್ಲ ಚಿಕನ್ ಗೆ ಚೆನ್ನಾಗಿ ಮೆತ್ತಿಕೊಳ್ಳುತ್ತದೆ.

    * ಮಿಕ್ಸಿ ಜಾರಿಗೆ ಎರಡು ಟೇಬಲ್ ಸ್ಪೂನ್ ಗಸಗಸೆ ಮತ್ತು 10 ರಿಂದ 12 ಗೋಡಂಬಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ಮೂರರಿಂದ ನಾಲ್ಕು ಟೀ ಸ್ಪೂನ್ ನೀರು ಸೇರಿಸಿದ್ರೆ ಪೇಸ್ಟ್ ಚೆನ್ನಾಗಿ ಆಗುತ್ತದೆ.
    * ಈಗ ಸ್ಟೌವ್ ಮೇಲೆ ಪ್ಯಾನ್ ಇರಿಸಿ 5 ರಿಂದ 6 ಟೀ ಸ್ಪೂನ್ ಎಣ್ಣೆ ಹಾಕಿ. (ಎಣ್ಣೆ ಬದಲಾಗಿ ತುಪ್ಪ ಬಳಸಬಹುದು)
    * ಎಣ್ಣೆ ಬಿಸಿ ಆಗುತ್ತಿದ್ದಂತೆ ಏಲಕ್ಕಿ, ಲವಂಗ, ಒಣ ಮೆಣಸಿನಕಾಯಿ ಮತ್ತು ಕಾಳು ಮೆಣಸು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.

    * ಇದೇ ಪ್ಯಾನ್ ಗೆ ಈರುಳ್ಳಿ ಪೇಸ್ಟ್ ಮಿಕ್ಸ್ ಮಾಡಿ, ಹಸಿ ವಾಸನೆ ಹೋಗುವರೆಗೂ 8 ರಿಂದ 10 ನಿಮಿಷ ಫ್ರೈ ಮಾಡಿಕೊಳ್ಳಬೇಕು.
    * ಮಸಾಲೆ ಘಮ ಘಮ ಎಂದು ಬರುತ್ತಿದ್ದಂತೆ ಮಿಶ್ರಣದಲ್ಲಿರುವ ಚಿಕನ್ ಪೀಸ್ ಗಳನ್ನು ಒಂದೊಂದಾಗಿ ಹಾಕಿ ಪ್ಲಿಪ್ ಮಾಡುತ್ತಿರಬೇಕು.
    * ಚಿಕನ್ ಹಾಕಿದ ನಂತರ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ ನಂತರ ಈ ಮೊದಲು ರುಬ್ಬಿಟ್ಟಿಕೊಂಡಿರುವ ಗೋಡಂಬಿ ಮತ್ತು ಗಸಗಸೆ ಪೇಸ್ಟ್ ಹಾಕಿ ಕಲಕಿ.
    * ನಂತರ 1 ಕಪ್ ನಷ್ಟು ನೀರು ಹಾಕಿ 10 ರಿಂದ 12 ನಿಮಿಷ ಕುದಿಸಿದ್ರೆ ಕೇವರಾ ವಾಟರ್ ಬೆರಸಿದ್ರೆ ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಸವಿಯಲು ಸಿದ್ಧ.

  • ದೀಪಾವಳಿ ಸ್ಪೆಷಲ್- ಗೋಧಿ ಹಲ್ವಾ, ಕಜ್ಜಾಯ ಮಾಡುವ ವಿಧಾನ

    ದೀಪಾವಳಿ ಸ್ಪೆಷಲ್- ಗೋಧಿ ಹಲ್ವಾ, ಕಜ್ಜಾಯ ಮಾಡುವ ವಿಧಾನ

    ದೀಪಾವಳಿ ಸಂಭ್ರಮಾಚರಣೆ ಎಲ್ಲೆಡೆ ಮನೆಮಾಡಿದೆ. ದೀಪಾವಳಿ ಹಬ್ಬಕ್ಕೆ ರುಚಿಯಾಗಿರುವ ಸಿಹಿತಿಂಡಿ ಇಲ್ಲ ಅಂದ್ರೆ ಹೇಗೆ ಹಬ್ಬ ಎನ್ನಿಸಿಕೊಳ್ಳುತ್ತದೆ. ಈ ರುಚಿಯಾದ ಎರಡು ಸ್ವೀಟ್ ಮಾಡುವುದರೊಂದಿಗೆ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.

    ಗೋಧಿ ಹಲ್ವಾ/ ಗೋಧಿ ಹಾಲುಬಾಯಿ

    ಬೇಕಾಗುವ ಸಾಮಗ್ರಿಗಳು:
    * ನೆನಸಿಟ್ ಗೋಧಿ- 1 ಕಪ್
    * ನೀರು- 3 ಕಪ್
    * ಬೆಲ್ಲದ ಪುಡಿ-1 ಕಪ್ ಬೆಲ್ಲ
    * ಏಲಕ್ಕಿ- 4
    * ಪಿಂಚ್ ಕೇಸರಿ – ಅದನ್ನು 2 ಟೀಸ್ಪೂನ್ ನೀರಿನಲ್ಲಿ ನೆನೆಸಿಟ್ಟಿರಬೇಕು
    * ಕತ್ತರಿಸಿದ ಗೋಡಂಬಿ ತುಂಡುಗಳು – 2 ಟೀ ಸ್ಪೂನ್
    * ತೆಂಗಿನ ಎಣ್ಣೆ ಅಥವಾ ತುಪ್ಪ – 3 ರಿಂದ 3.5 ಟೀ ಸ್ಪೂನ್

    ಮಾಡುವ ವಿಧಾನ:
    * 6 ರಿಂದ 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಗೋಧಿಯನ್ನು ತೊಳೆದು ನೆನೆಸಿಡಬೇಕು.
    * ಬೆಲ್ಲಕ್ಕೆ 1/4 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸೋಸಿ ಎತ್ತಿಟ್ಟುಕೊಳ್ಳಿ.
    * ನೆನೆಸಿದ ಗೋಧಿಗೆ ಅರ್ಧ ಕಪ್ ನೀರನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಸೋಸಿ.
    * ರುಬ್ಬಿ ಸೋಸಿ ತೆಗೆದಿರುವ ನೀರನ್ನು, ಸೊಸಿ ತೆಗೆದಿರುವ ಬೆಲ್ಲದ ನೀರಿಗೆ ಸೇರಿಸ ಬೇಕು.
    * ಈ ಮಿಶ್ರಣಕ್ಕೆ ಏಲಕ್ಕಿ ಸೇರಿಸಿ ಕಡಿಮೆ ಉರಿಯಲ್ಲಿ ಪ್ಯಾನ್ ಇರಿಸಿ ತಿರುಗಿಸುತ್ತಾ ಇರಬೇಕು.
    * ಈ ಮಿಶ್ರಣವು ದಪ್ಪವಾಗಲು ಪ್ರಾರಂಭಿಸಿದ ನಂತರ ಉರಿ ಕಡಿಮೆ ಮಾಡಿ, 1 ಟೀಸ್ಪೂನ್ ತೆಂಗಿನ ಎಣ್ಣೆ ಅಥವಾ ತುಪ್ಪ ಸೇರಿಸಬೇಕು.
    * ಕೇಸರಿ ನೀರು, ಮತ್ತು ಗೋಡಂಬಿ ತುಂಡುಗಳನ್ನು ಸೇರಿಸಿ ಮಿಶ್ರಣ ದಪ್ಪವಾಗುವವರೆಗೆ ಒಲೆ ಮೇಲೆ ಇಟ್ಟು ಬಿಸಿ ಮಾಡಿಟ್ಟುಕೊಳ್ಳಿ.
    * ತುಪ್ಪವನ್ನು ಸವರಿರುವ ತಟ್ಟೆಗೆ ಈ ಮಿಶ್ರಣವನ್ನು ಹಾಕಿ ತಣ್ಣಗಾಗಲು ಇಡಬೇಕು.
    * ನಂತರ ಚಾಕುಗೆ ಸ್ವಲ್ಪ ತುಪ್ಪ ಸವರಿ ಹಲ್ಬಾಯಿಯನ್ನು ಕತ್ತರಿಸಿದರೆ ಹಬ್ಬಕ್ಕೆ ಗೋಧಿ ಹಾಲುಬಾಯಿ ಸವಿಯಲು ಸಿದ್ಧವಾಗುತ್ತದೆ.

    ಕಜ್ಜಾಯ
    ನೆನೆಸಿದ ದೋಸೆ ಅಕ್ಕಿ- 1 ಕಪ್
    ಬೆಲ್ಲ -1 ಕಪ್
    ಎಳ್ಳು- 1 ಸ್ಪೂನ್
    ಗಸಗಸೆ _ 1 ಸ್ಪೂನ್
    ಏಲಕ್ಕಿ- 1/2 ಸ್ಪೊನ್
    ಅಡುಗೆ ಎಣ್ಣೆ

    ಮಾಡುವ ವಿಧಾನ:
    * ಒಂದು ದಿನ ಮೊದಲೇ ನೆನಸಿಟ್ಟ ಅಕ್ಕಿಯನ್ನು ಒಂದು ಬಟ್ಟೆಯ ಮೇಲೆ ಹಾಕಿ ಸೋಸಿ ನೀರು ತೆಗೆದು ಅಕ್ಕಿಯನ್ನು ಒಣಗಿಬೇಕು.
    * ಒಣಗಿರುವ ಅಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು.
    * ಪುಡಿ ಮಾಡಿರುವ ಅಕ್ಕಿಯನ್ನು ಚೆನ್ನಾಗಿ ಜರಡಿಯಿಂದ ಸೋಸಿ ತೆಗೆಯಬೇಕು.
    * ಒಂದು ಪಾತ್ರೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಪಾಕ ಗಟ್ಟಿಯಾಗಿ ಉಂಡೆ ರೂಪಕ್ಕೆ ಬರುವವರೆಗೆ ಬಿಸಿ ಮಾಡಬೇಕು.
    * ಈ ಬೆಲ್ಲದ ಪಾಕಕ್ಕೆ ಎಳ್ಳು, ಗಸಗಸೆ, ಏಲಕ್ಕಿ ಪೌಡರ್ ಹಾಕಿ ಸ್ವಲ್ಪ ಬಿಸಿ ಮಾಡಬೇಕು.
    * ಬೆಲ್ಲದ ಪಾಕಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಗಟ್ಟಿಯಾಗುವರೆಗೆ ಬಿಸಿಮಾಡಿ ತಣ್ಣಗಾಗಲು ಬಿಡಬೇಕು.
    * ಈ ಮಿಶ್ರಣದಿಂದ ಸಣ್ಣ ಸಣ್ಣದಾಗಿರುವ ಉಂಡೆಗಳನ್ನು ಮಾಡಿ ರೊಟ್ಟಿಯಂತೆ ಕಜ್ಜಾಯವನ್ನು ತಟ್ಟಬೇಕು.
    * ಈ ಕಜ್ಜಾಯವನ್ನು ಎಣ್ಣೆ ಬಾಣಲೆಯಲ್ಲಿ ಬಿಟ್ಟು ಫ್ರೈ ಮಾಡಿಕೊಳ್ಳಿ.
    * ಈಗ ರುಚಿ ರುಚಿಯಾಗಿರುವ ಕಜ್ಜಾಯ ಸವಿಯಲು ಸಿದ್ಧವಾಗುತ್ತದೆ.