Tag: ಫೀಲ್ಡಿಂಗ್

  • ಏನ್ ಫೀಲ್ಡಿಂಗ್ ಗುರು! – ಬೆನ್ ಸ್ಟೋಕ್ಸ್ ಫ್ಲೈಯಿಂಗ್ ಎಫರ್ಟ್

    ಏನ್ ಫೀಲ್ಡಿಂಗ್ ಗುರು! – ಬೆನ್ ಸ್ಟೋಕ್ಸ್ ಫ್ಲೈಯಿಂಗ್ ಎಫರ್ಟ್

    ಸಿಡ್ನಿ: ಇಂಗ್ಲೆಂಡ್ (England) ತಂಡದ ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಫೀಲ್ಡಿಂಗ್ (Fielding) ಕಂಡು ಕ್ರಿಕೆಟ್ (Cricket) ಅಭಿಮಾನಿ ಬೆರಗಾಗಿದ್ದಾರೆ.

    ಆಸ್ಟ್ರೇಲಿಯಾ (Australia) ಹಾಗೂ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಮೂಲಕ ಸಿಕ್ಸರ್ ಹೋಗುತ್ತಿದ್ದ ಬಾಲ್ ತಡೆದು 4 ರನ್ ಉಳಿಸಿ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ಆಸ್ಟ್ರೇಲಿಯಾ ಇಂಗ್ಲೆಂಡ್ ನೀಡಿದ್ದ 179 ರನ್‍ಗಳನ್ನು ಚೇಸಿಂಗ್ ಮಾಡುತ್ತಿತ್ತು. 12 ಓವರ್‌ನಲ್ಲಿ ಮಿಚೆಲ್ ಮಾರ್ಷ್, ಸ್ಯಾಮ್ ಕರನ್ ಎಸೆತವನ್ನು ಸಿಕ್ಸರ್‌ಗಟ್ಟಲು ಬಿಗಿಯಾಗಿ ಬಾರಿಸಿದರು. ಈ ವೇಳೆ ಲಾಂಗ್‍ಆಫ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೋಕ್ಸ್ ಸಿಕ್ಸ್ ಹೋಗುತ್ತಿದ್ದ ಬಾಲನ್ನು ಹಾರಿ ಹಿಡಿದು ಬೌಂಡರಿ ರೋಪ್‍ನಿಂದ ಹೊರ ಎಸೆದರು. ಈ ಮೂಲಕ 4 ರನ್ ಸೇವ್ ಮಾಡಿದರು. ಇದೀಗ ಸ್ಟೋಕ್ಸ್ ಮಿಂಚಿನ ಫೀಲ್ಡಿಂಗ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ. ಇದನ್ನೂ ಓದಿ: ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಟೋಕ್ಸ್ ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡದಿದ್ದರೂ, ಭರ್ಜರಿ ಫೀಲ್ಡಿಂಗ್ ಮೂಲಕ ಮಿಂಚುತ್ತಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ (T20 World Cup) ಆರಂಭಕ್ಕೂ ಮುನ್ನ ಮತ್ತೊಮ್ಮೆ ತಮ್ಮ ಫೀಲ್ಡಿಂಗ್ ಸಾಮರ್ಥ್ಯ ಸಾಭೀತು ಪಡಿಸಿದ್ದಾರೆ.

    ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತು. 179 ರನ್‍ಗಳ ಗುರಿ ಪಡೆದ ಆಸ್ಟ್ರೇಲಿಯಾ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 170 ರನ್ ಸಿಡಿಸಲಷ್ಟೇ ಶಕ್ತವಾಯಿತು. ಇತ್ತ ಇಂಗ್ಲೆಂಡ್‌ 8 ರನ್‍ಗಳ ಜಯದೊಂದಿಗೆ ಆಸ್ಟ್ರೇಲಿಯಾಗೆ ತವರಿನ ನೆಲದಲ್ಲೇ  ಟಕ್ಕರ್ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

    ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

    ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ IPL ಟೂರ್ನಿಯ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ದೆಹಲಿ ಕ್ಯಾಪಿಟಲ್ಸ್ ಸೋಲು ಕಂಡಿತು. ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿದ್ದ ಮುಂಬೈ ತನ್ನ ಜೊತೆಗೆ ದೆಹಲಿಯನ್ನೂ ಸೀಸನ್‌ನಿಂದ ಹೊರಗೆಳೆಯಿತು.

    ಐಪಿಎಲ್ 15ನೇ ಆವೃತ್ತಿಯಲ್ಲಿ ತನ್ನ 14ನೇ ಪಂದ್ಯವನ್ನಾಡಿದ ಮುಂಬೈ ಇಂಡಿಯನ್ಸ್ ತಂಡ ಗೆದ್ದು ಆವೃತ್ತಿಗೆ ಗುಡ್‌ಬೈ ಹೇಳಿತು. 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ರೋಹಿತ್ ಶರ್ಮಾ ಪಡೆಯಿಂದ RCB ತಂಡವು ಪ್ಲೇ ಆಫ್ ಪ್ರವೇಶಿಸಲು ಸಹಕಾರಿಯಾಯಿತು. ಇದನ್ನೂ ಓದಿ: ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    TIM DEVID

    ಕೊನೆಯ ಪಂದ್ಯವನ್ನು ಗೆದ್ದಿದ್ದರೆ ದೆಹಲಿಗೆ ಪ್ಲೇ ಆಫ್ ಪ್ರವೇಶಿಸುವ ಉತ್ತಮ ಅವಕಾಶವಿತ್ತು. ಮುಂಬೈ ವಿರುದ್ಧ ರಿಷಭ್ ಪಂತ್ ಪಡೆಯ ಗೆಲುವಿಗೆ ಉತ್ತಮ ಅವಕಾಶವಿತ್ತು. ಆದರೆ ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ ದೆಹಲಿ ಸೋಲಬೇಕಾಯಿತು. ಮ್ಯಾಚ್ ಮುಗಿದ ಬಳಿಕ ತಮ್ಮ ತಂಡದ ಸೋಲಿಗೆ ಕಾರಣವೇನೆಂಬುದನ್ನು ನಾಯಕ ರಿಷಭ್ ಪಂತ್ ಹೇಳಿದ್ದಾರೆ. ಇದನ್ನೂ ಓದಿ: ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಈ ಕುರಿತು ಮಾತನಾಡಿದ ರಿಷಭ್ ಪಂತ್, ನಾವು ಉತ್ತಮವಾಗಿಯೇ ಆಡಿದ್ದೆವು. ಆದರೆ ಕೆಲವು ತಪ್ಪುಗಳಿಂದಾಗಿ ಸೋಲಬೇಕಾಯಿತು. ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಫೇಲ್ ಆಗಿದ್ದರಿಂದ ಸೋಲಾಗಿದೆ. ಟೂರ್ನಿಯುದ್ದಕ್ಕೂ ನಾವು ಇದೇ ತೊಂದರೆಯನ್ನು ಎದುರಿಸಿದ್ದೇವೆ. ನಾವು ನಮ್ಮ ತಪ್ಪುಗಳಿಂದ ಪಾಠ ಕಲಿತಿದ್ದೇವೆ. ಮುಂದಿನ ಸೀಸನ್‌ನಲ್ಲಿ ಬಲಿಷ್ಠ ತಂಡವಾಗಿ ಮರಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ತಂಡದ ಈ ಗೆಲುವಿನಲ್ಲಿ ಟಿಮ್ ಡೇವಿಡ್ ಪಾತ್ರ ಬಹುಮುಖ್ಯವಾಗಿದೆ. ಕೇವಲ 11 ಎಸೆತಗಳಲ್ಲಿ ಅವರು 34 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಒಂದು ಬಾರಿ ಟಿಮ್ ಡೇವಿಡ್ ಕ್ಲೀನ್ ಔಟ್ ಆಗಿದ್ದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಈ ವೇಳೆ ರಿಷಭ್ ಪಂತ್ ಡಿಆರ್‌ಎಸ್ ರಿವ್ಯೂ ತೆಗೆದುಕೊಳ್ಳಲಿಲ್ಲ. ಆದರೆ ಟಿಮ್ ಡೇವಿಡ್ ಸ್ಪಷ್ಟವಾಗಿ ಔಟಾಗಿರುವುದು ಬಳಿಕ ಗೊತ್ತಾಯಿತು. ಇದರಿಂದಾಗಿ ದೆಹಲಿಗೆ ದೊಡ್ಡ ಹೊಡೆತ ಬಿದ್ದಂತಾಯಿತು. ಒಂದು ವೇಳೆ ರಿವ್ಯೂ ತೆಗೆದುಕೊಂಡಿದ್ದರೆ ಟಿಮ್ ಡೇವಿಡ್ ಸ್ಫೋಟಕ ಆಟಕ್ಕೆ ಬ್ರೇಕ್ ಬೀಳುತ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧ್ಯವೂ ಆಗುತ್ತಿತ್ತು.

    ಕ್ಯಾಚ್ ಕೈಚೆಲ್ಲಿದ್ದೇ ಎಡವಟ್ಟಾಯ್ತು: ರಿಷಭ್ ಪಂತ್ ಸೇರಿದಂತೆ ದೆಹಲಿಯ ಕೆಲ ಆಟಗಾರರು ಕೆಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡಕ್ಕೆ ಭಾರೀ ಪೆಟ್ಟು ನೀಡಿತು. ಉತ್ತಮ ಫೀಲ್ಡಿಂಗ್ ಮಾಡಿದ್ದರೆ ಮುಂಬೈ ವಿರುದ್ಧ ದೆಹಲಿ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳು ಇದ್ದವು. ಆದರೆ ಕೈಚೆಲ್ಲಿದ ಕ್ಯಾಚ್‌ಗಳಿಂದ ದೆಹಲಿ ಸೋಲು ಕಾಣಬೇಕಾಯಿತು.

  • ಡೈವಿಂಗ್ ವೇಳೆ ಆಟಗಾರನಿಗೆ ಡಿಕ್ಕಿ – ಫಾಫ್ ಡು ಪ್ಲೆಸಿಸ್ ಆಸ್ಪತ್ರೆಗೆ ದಾಖಲು

    ಡೈವಿಂಗ್ ವೇಳೆ ಆಟಗಾರನಿಗೆ ಡಿಕ್ಕಿ – ಫಾಫ್ ಡು ಪ್ಲೆಸಿಸ್ ಆಸ್ಪತ್ರೆಗೆ ದಾಖಲು

    ಅಬುಧಾಬಿ: ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡುತ್ತಿರುವ ಫಾಫ್ ಡು ಪ್ಲೆಸಿಸ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರವಾಗಿ ಆಡುತ್ತಿದ್ದಾರೆ. ಶನಿವಾರ ಪೇಶಾವರ ತಂಡದ ವಿರುದ್ಧ ನಡೆಯುತ್ತಿದ್ದ ಪಂದ್ಯದ ವೇಳೆ ಪಾಕ್ ಆಟಗಾರ ಮೊಹಮ್ಮದ್ ಹಸ್ನೈನ್ ಗೆ ಢಿಕ್ಕಿ ಹೊಡೆದಿದ್ದಾರೆ.

    ಏಳನೇ ಓವರ್ ವೇಳೆ ಬೌಂಡರಿ ತಡೆಯಲು ಫಾಫ್ ಡೈವ್ ಹೊಡೆದಿದ್ದಾರೆ. ಈ ವೇಳೆ ಎದುರಿನಿಂದ ಬಂದ ಹಸ್ನೈನ್ ಕಾಲು ಗಂಟಿಗೆ ಫಾಫ್ ತಲೆ ಬಡಿದಿದ್ದು, ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.

    ಗಂಭೀರವಾಗಿ ತಲೆಗೆ ಏಟು ಬಿದ್ದ ನಂತರ ಅವರನ್ನು ಅಬುಧಾಬಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ : ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್! 

    ಫಾಫು ಡು ಪ್ಲೆಸಿಸ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಟ್ರೆಂಡಿಂಗ್ ಟಾಪಿಕ್ ಆಗಿದ್ದು ಅಭಿಮಾನಿಗಳು ಶೀಘ್ರವಾಗಿ ಗುಣಮುಖವಾಗುವಂತೆ ಹಾರೈಸುತ್ತಿದ್ದಾರೆ.

  • ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ

    ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ

    – ಬೆಂಗಳೂರಿನ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ

    ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಷೇತ್ರರಕ್ಷಣೆಯಲ್ಲಿ ತಪ್ಪು ಮಾಡುವುದನ್ನು ಬಿಡಬೇಕು ಎಂದು ತಂಡದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

    ಸೋಮವಾರ ಐಪಿಎಲ್ ಅಭಿಮಾನಿಗಳಿಗೆ ಹಬ್ಬದ ವಾತವಾರಣ ಸೃಷ್ಟಿಯಾಗಿತ್ತು. ಟೂರ್ನಿಯ ಎರಡು ಬಲಿಷ್ಠ ತಂಡಗಳಾದ  ಆರ್‌ಸಿಬಿ  ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದು, ರನ್ ಹೊಳೆಯನ್ನೇ ಹರಿಸಿದ್ದವು. ಈ ರೋಚಕ ಪಂದ್ಯ ಕೊನೆಯಲ್ಲಿ ಸೂಪರ್ ಓವರ್ ತಲುಪಿದ್ದು, ಈ ಸೂಪರ್ ಓವರಿನಲ್ಲಿ ಆರ್‌ಸಿಬಿ ತಂಡ ಗೆದ್ದು ಅಭಿಮಾನಿಗಳನ್ನು ರಂಜಿಸಿತ್ತು.

    ಈ ಪಂದ್ಯದ ನಂತರ ಮಾತನಾಡಿದ ಆರ್‌ಸಿಬಿ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್, ಇದು ಒಂದು ಅದ್ಭುತ ಪಂದ್ಯ. ನಾವು ಕೂಡ ಮುಂಬೈ ವಿರುದ್ಧ ಪ್ರಬಲವಾಗಿ ಆಡಿದ್ದೇವೆ. ಎರಡನೇ ಇನ್ನಿಂಗ್ಸ್‍ನಲ್ಲಿ ನಾವು ಮುಂಬೈಗೆ ಸ್ವಲ್ಪ ಸುಲಭ ಮಾಡಿಕೊಟ್ಟೆವು. ಫೀಲ್ಡಿಂಗ್‍ನಲ್ಲಿ ಬಹಳ ತಪ್ಪುಗಳನ್ನು ಮಾಡಿದ್ದೇವೆ. ಇದನ್ನು ನಾವು ಇನ್ನು ಮುಂದಿನ ಪಂದ್ಯಗಳಲ್ಲಿ ನಿಲ್ಲಿಸಬೇಕು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

    ನಮ್ಮ ತಂಡಕ್ಕೆ ಇದು ಟೂರ್ನಿಯ ಮೂರನೇ ಪಂದ್ಯ. ನಮಗೆ ಇನ್ನೂ ಸಮಯವಿದೆ. ನಾವು ನಮ್ಮ ಸ್ಕಿಲ್ ಮತ್ತು ಫೀಲ್ಡಿಂಗ್ ಮೇಲೆ ಗಮನಹರಿಸುತ್ತೇವೆ. ಕಳೆದ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರು ಅದ್ಭುತವಾಗಿ ಆಡಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಎಬಿಡಿ ಮಾತನಾಡಿರುವ ಈ ವಿಡಿಯೋವನ್ನು ಆರ್‌ಸಿಬಿ ತಂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಎಬಿಡಿ ಬ್ಯಾಟಿಂಗ್ ಜೊತೆ ಕೀಪಿಂಗ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ಕಳೆದ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಎಬಿಡಿ ಕೇವಲ 24 ಎಸೆತದಲ್ಲಿ 55 ರನ್ ಸಿಡಿಸಿ ಮಿಂಚಿದ್ದರು. ಈ ಇನ್ನಿಂಗ್ಸ್‍ನಲ್ಲಿ ಎಬಿಡಿ 4 ಫೋರ್ ಮತ್ತು 4 ಸಿಕ್ಸರ್ ಭಾರಿಸಿದ್ದರು. ಜೊತೆಗೆ ಆರ್‌ಸಿಬಿ ಪರ ಸೂಪರ್ ಓವರಿನಲ್ಲಿ ಬ್ಯಾಟಿಂಗ್ ಮಾಡಿದ ಎಬಿಡಿ ಒಂದು ಬೌಂಡರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

  • ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಜಡೇಜಾ – ವಿಡಿಯೋ ವೈರಲ್

    ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಜಡೇಜಾ – ವಿಡಿಯೋ ವೈರಲ್

    ಕ್ರೈಸ್ಟ್ ಚರ್ಚ್: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿ ಒಂದು ಕೈಯಲ್ಲಿ ಕ್ಯಾಚ್ ಹಿಡಿದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಶಮಿ ಎಸೆದ 72ನೇ ಓವರಿನ ಕೊನೆ ಎಸೆತವನ್ನು ನೀಲ್ ವ್ಯಾಗ್ನರ್ 21 ರನ್(41 ಎಸೆತ, 3 ಬೌಂಡರಿ) ಬಲವಾಗಿ ಹೊಡೆದರು. ಬಾಲ್ ಸಿಕ್ಸ್ ಅಥವಾ ಬೌಂಡರಿಗೆ  ಹೋಯಿತು ಎಂದೇ ಭಾವಿಸುತ್ತಿದ್ದಾಗ ಡೀಪ್ ಸ್ಕ್ಯಾರ್ ಲೆಗ್ ನಲ್ಲಿದ್ದ ಜಡೇಜಾ ಗಾಳಿಯಲ್ಲಿ ಹಾರಿ ಎಡಗೈಯಲ್ಲಿ ಹಿಡಿದೇ ಬಿಟ್ಟರು.

    ಬಾಲ್ ಜಡೇಜಾ ಕೈ ಸೇರಿದ್ದನ್ನು ನೋಡಿ ಶಮಿ ಸೇರಿದಂತೆ ಆಟಗಾರರು ಒಮ್ಮೆ ಆಶ್ಚರ್ಯಚಕಿತರಾಗಿ ಸಂತಸ ವ್ಯಕ್ತಪಡಿಸಿದರು. ಬೌಲಿಂಗ್‍ನಲ್ಲೂ ಮಿಂಚಿದ ಜಡೇಜಾ 10 ಓವರ್ ಎಸೆದು 2 ಮೇಡನ್ ಮಾಡಿ 22 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ.

    ಜಡೇಜಾ ಕ್ಯಾಚ್ ಹಿಡಿದ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಟ್ವಿಟ್ಟರ್ ನಲ್ಲಿ ಜಡೇಜಾ ಕ್ಯಾಚ್ ಹಿಡಿದಿದ್ದನ್ನು ಪ್ರಶಂಸಿಸಿದ್ದಾರೆ. ವಾವ್, ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಬಲ್ಲ ಕ್ಯಾಚ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಜಡೇಜಾ ಅವರನ್ನು ಅಭಿನಂದಿಸುತ್ತಿದ್ದಾರೆ. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

    https://twitter.com/kingkohliaddict/status/1233949159780044801

     

  • ಕ್ಯಾಚ್ ಹಿಡಿಯಲು ಹೋಗಿ ಡಿಕ್ಕಿ – ಸಾವು ಬದುಕಿನ ನಡುವೆ ಆಟಗಾರರು

    ಕ್ಯಾಚ್ ಹಿಡಿಯಲು ಹೋಗಿ ಡಿಕ್ಕಿ – ಸಾವು ಬದುಕಿನ ನಡುವೆ ಆಟಗಾರರು

    ಕೋಲಾರ: ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಯ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಆಟಗಾರರು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಪರಸ್ಪರ ಡಿಕ್ಕಿಯಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಮೈದಾನದಲ್ಲಿ ಪ್ರಜ್ಞೆ ಕಳೆದುಕೊಂಡ ಆಟಗಾರರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲಿ ಇಂದು ನಡೆದಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಘಟನೆ ನಡೆದಿದೆ. ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಕ್ಯಾಚ್ ಹಿಡಿಯಲು ಹೋದ ಸಂದರ್ಭದಲ್ಲಿ ಡೀಪ್ ಸ್ಕ್ವೇರ್ ಲೇಗ್ ಹಾಗೂ ಡೀಪ್ ಮೀಡ್ ವಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾನು ಪ್ರಕಾಶ್, ಶ್ರೀನಿವಾಸ್ ಕ್ಯಾಚ್ ಹಿಡಿಯಲು ಯತ್ನಿಸಿದ್ದರು. ಈ ವೇಳೆ ಆಟಗಾರ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕ್ಷಣ ಮಾತ್ರದಲ್ಲಿ ಇಬ್ಬರು ಮೈದಾನದಲ್ಲೇ ಪ್ರಜ್ಞೆ ತಪ್ಪಿಬಿದ್ದಿದ್ದರು.

    ಇಬ್ಬರು ಆಟಗಾರರು ಪ್ರಜ್ಞೆ ಕಳೆದುಕೊಂಡ ಕಾರಣ ಸಹ ಆಟಗಾರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ಬಳಿಕ ಶ್ರೀನಿವಾಸ್ ಚೇತರಿಕೆ ಕಂಡಿದ್ದು, ಭಾನು ಪ್ರಕಾಶ್‍ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಆಟದ ವೇಳೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೂರ್ನಿಯನ್ನು ವೆಬ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ಟೂರ್ನಿಯಲ್ಲಿ ರೈಸಿಂಗ್ ಸ್ಟಾರ್ಸ್ ಹಾಗೂ ಎಸ್‍ಎಎಸ್ ಕ್ರಿಕೆಟರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಭಾನು ಹಾಗೂ ಶ್ರೀನಿವಾಸ್ ರೈಸಿಂಗ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದರು.

  • ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಯುವಿ ಅಸಮಾಧಾನ

    ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಯುವಿ ಅಸಮಾಧಾನ

    ನವದೆಹಲಿ: ವೆಸ್ಟ್ಇಂಡೀಸ್ ವಿರುದ್ಧದ ಟಿ-20ಯ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಭಾರತ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‍ಗಳಿಂದ ಜಯ ಸಾಧಿಸಿತ್ತಾದರೂ ಫೀಲ್ಡಿಂಗ್‍ನಲ್ಲಿ ಅನೇಕ ತಪ್ಪುಗಳನ್ನು ಎಸಗಿತ್ತು.

    ಹೈದರಾಬಾದ್‍ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ವೀಂಡಿಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್‍ಗಳ ನಷ್ಟಕ್ಕೆ 207 ರನ್ ಗಳಿಸಿತ್ತು. ಭಾರತದ ನಿಧಾನಗತಿಯ ಫೀಲ್ಡಿಂಗ್‍ನಿಂದಾಗಿ ವೆಸ್ಟ್ ಇಂಡೀಸ್ ಬೃಹತ್ ಮೊತ್ತ ಪೇರಿಸಿತ್ತು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ರೋಹಿತ್ ಶರ್ಮಾ ತಲಾ ಒಂದು ಕ್ಯಾಚ್‍ಗಳನ್ನು ಕೈಬಿಟ್ಟರೆ, ನಾಯಕ ವಿರಾಟ್ ಕೊಹ್ಲಿ ಕೂಡ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: 16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ

    ಈ ವಿಚಾರವಾಗಿ ಶುಕ್ರವಾರ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಭಾರತ ಇಂದು ಮೈದಾನದಲ್ಲಿ ತುಂಬಾ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿದೆ. ಯುವ ಆಟಗಾರರು ಸರಿಯಾಗಿ ಬಾಲ್ ಹಿಡಿಯದ ಕಾರಣ ಕ್ರಿಕೆಟಿನಲ್ಲಿ ದುಬಾರಿ ಆಯ್ತು. ಈ ರೀತಿಯ ರನ್‍ಗಳಿಗೆ ಕಡಿವಾಣ ಹೇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ 44 ರನ್ ಗಳಿಸಿದ್ದ ಶಿಮ್ರಾನ್ ಹೆಟ್ಮಾಯೆರ್ ನೀಡಿದ್ದ ಕ್ಯಾಚ್ ಅನ್ನು ವಾಷಿಂಗ್ಟನ್ ಸುಂದರ್ ಕೈಬಿಟ್ಟರು. ಪರಿಣಾಮ ಶಿಮ್ರಾನ್ ಟಿ-20ಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು. ಇದೇ ಓವರ್ ನಲ್ಲಿ ರೋಹಿತ್ ಶರ್ಮಾ 24 ರನ್‍ಗಳಿಸಿದ್ದ ಪೊಲಾರ್ಡ್ ಕ್ಯಾಚ್ ಕೈಬಿಟ್ಟರು. ಇದರಿಂದಾಗಿ 19 ಎಸೆತಗಳಲ್ಲಿ 37 ರನ್ ಗಳಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಭಾರತದ ವಿರುದ್ಧ ಎರಡನೇ ಅತಿ ಹೆಚ್ಚು ಮೊತ್ತವನ್ನು ದಾಖಲಿಸಿತು.

    ವಿಂಡೀಸ್ ಒಡ್ಡಿದ್ದ ಬೃಹತ್ ಮೊತ್ತದ ಸವಾಲನ್ನು ನಾಯಕ ವಿರಾಟ್ ಕೊಹ್ಲಿ ಬೇಧಿಸಿದರು. ಪಂದ್ಯದಲ್ಲಿ 94 ರನ್ (50 ಎಸೆತ, 6 ಬೌಂಡರಿ, 6 ಸಿಕ್ಸರ್) ಗಳಿಸಿದ ಕೊಹ್ಲಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಇದು ಕೊಹ್ಲಿ ಅವರ ಟಿ20 ಮಾದರಿಯ ಟಾಪ್ ಸ್ಕೋರ್ ಆಗಿದೆ.

  • ಭರ್ಜರಿ ಫೀಲ್ಡಿಂಗ್ : ಅಪಾಯದಿಂದ ಪಾರಾದ ಪೊಲಾರ್ಡ್- ವಿಡಿಯೋ

    ಭರ್ಜರಿ ಫೀಲ್ಡಿಂಗ್ : ಅಪಾಯದಿಂದ ಪಾರಾದ ಪೊಲಾರ್ಡ್- ವಿಡಿಯೋ

    ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ವೆಸ್ಟ್ ಇಂಡೀಸಿನ ಕೀರನ್  ಪೊಲಾರ್ಡ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

    ಬ್ಯಾಟಿಂಗ್ ವೇಳೆ ಭಾರೀ ಹೊಡೆತಗಳನ್ನು ಸಿಡಿಸಿ ಖ್ಯಾತಿ ಪಡೆದಿರುವ ಪೊಲಾರ್ಡ್, ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಫೀಲ್ಡಿಂಗ್, ಬೌಲಿಂಗ್ ನಲ್ಲೂ ಮಿಂಚುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲೂ ಪೋಲಾರ್ಡ್ ಫೀಲ್ಡಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಆರಂಭಿಕ ಚೆನ್ನೈ ಪಂದ್ಯದ ವೇಳೆ ಸುರೇಶ್ ರೈನಾ ನೀಡಿದ್ದ ಕ್ಯಾಚನ್ನು ಒಂದೇ ಕೈಯಲ್ಲಿ ಹಿಡಿದಿದ್ದರು. ಆದರೆ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೌಂಡರಿಯತ್ತ ಸಾಗುತ್ತಿದ್ದ ಚೆಂಡು ಹಿಡಿಯಲು ಹೋಗಿ ಅಪಾಯದಿಂದ ಪಾರಾಗಿದ್ದಾರೆ.

    https://twitter.com/JunkieCricket/status/1124137767691280390

    ಪಂದ್ಯದ 4ನೇ ಓವರಿನಲ್ಲಿ ಘಟನೆ ನಡೆದಿದ್ದು, ಮಿಡ್ ಆನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಪೊಲಾರ್ಡ್ ಬೌಂಡರಿಯತ್ತ ಸಾಗಿದ್ದ ಚೆಂಡನ್ನು ಬೆನ್ನಟ್ಟಿದ್ದಾರೆ. ಬೌಂಡರಿ ಗೆರೆಯ ಬಳಿ ಕಾಲಿನಿಂದ ಬಾಲನ್ನು ತಡೆದು ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ವೇಗವಾಗಿ ಓಡಿದ್ದ ಕಾರಣ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ಅಳವಡಿಸಿದ್ದ ಬ್ಯಾರಿಕೇಡ್ ಹಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕ್ಷಣಕಾಲ ಕ್ರೀಡಾಂಗಣದಲ್ಲಿದ್ದ ಆಟಗಾರು ಶಾಕ್ ಆಗಿದ್ದರು.

    ಘಟನೆಯಲ್ಲಿ ಪೊಲಾರ್ಡ್ ಅವರಿಗೆ ಯಾವುದೇ ರೀತಿ ಗಾಯಗೊಂಡಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡ ಸ್ಪಷ್ಟಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಪಂದ್ಯದಲ್ಲಿ ಸೂಪರ್ ಓವರ್ ಮೂಲಕ ಮುಂಬೈ ಜಯ ಪಡೆದಿದ್ದು ವಿಶೇಷವಾಗಿತ್ತು.