Tag: ಫೀರದೋಸ್ ಅನ್ಸಾರಿ

  • ಆಳಂದ ದರ್ಗಾ ಗಲಾಟೆಯ ಮಾಸ್ಟರ್ ಮೈಂಡ್ ಫೀರ್‌ದೋಸ್ ಖಾನ್‌ ಗಡಿಪಾರಿಗೆ ಜಿಲ್ಲಾಡಳಿತ ಆದೇಶ

    ಆಳಂದ ದರ್ಗಾ ಗಲಾಟೆಯ ಮಾಸ್ಟರ್ ಮೈಂಡ್ ಫೀರ್‌ದೋಸ್ ಖಾನ್‌ ಗಡಿಪಾರಿಗೆ ಜಿಲ್ಲಾಡಳಿತ ಆದೇಶ

    ಕಲಬುರಗಿ: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಒಳಗಿನ ಅಪವಿತ್ರಗೊಂಡ ಶಿವಲಿಂಗ ಸ್ವಚ್ಛತೆ ಹಾಗೂ ಪೂಜೆ ವೇಳೆ ಕೋಮು ಗಲಭೆ ಸೃಷ್ಟಿಸಿ, ಕಲ್ಲು ತೂರಾಟ ನಡೆದ ಪ್ರಕಣದ ಮಾಸ್ಟರ್ ಮೈಂಡ್ ಫೀರ್‌ದೋಸ್ ಖಾನ್ ಅನ್ಸಾರಿಯನ್ನು ಜಿಲ್ಲಾಡಳಿತ ಗೂಂಡಾ ಆಕ್ಟ್ ನಡಿ ಪ್ರಕರಣ ದಾಖಲಿಸಿ ಗಡಿ ಪಾರು ಮಾಡಿದೆ.

    ಶಿವರಾತ್ರಿ ಹಬ್ಬದಂದು, ಲಾಡ್ಲೆ ಮಶಾಕ್ ದರ್ಗಾದ ಒಳಗಿನ ಶಿವಲಿಂಗ ಪೂಜೆಗೆ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಬಿಜೆಪಿ ಶಾಸಕರು ತೆರಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾರು, ಸೇರಿದಂತೆ ಕೇಂದ್ರ ಸಚಿವರ ಹಾಗೂ ಶಾಸಕರ ಕಾರು ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಪ್ರಕಣದಲ್ಲಿ ಫೀರ್‌ದೋಸ್ ಖಾನ್ ಪಾತ್ರವಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗಡಿಪಾರು ಮಾಡಲು ಮುಂದಾಗಿದೆ. ಸದ್ಯ ಫೀರ್‌ದೋಸ್ ಖಾನ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದ್ದಾನೆ. ಇದನ್ನೂ ಓದಿ: ಕೇಂದ್ರ ಸಚಿವ ಭಗವಂತ ಖೂಬಾ ವಾಹನದ ಮೇಲೆ ಕಲ್ಲು ತೂರಾಟ

    ಯುಪಿಯಲ್ಲಿ ಬುಲ್ಡೋಜರ್ ಮಾದರಿಯಂತೆ, ರಾಜ್ಯದಲ್ಲಿ ಕೋಮು ಗಲಭೆಯಲ್ಲಿ ಭಾಗಿಯಾಗಿರುವ ಪುಂಡರನ್ನು ಮಟ್ಟಹಾಕಲು ರಾಜ್ಯ ಸರ್ಕಾರ ಗೂಂಡಾ ಆಕ್ಟ್ ಅಡಿ ಪ್ರಕರಣ ದಾಖಲಿಸಿ, ಗಡಿ ಪಾರು ಮಾಡಲು ಆದೇಶ ಮಾಡಿದೆ. ಈ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾನೂನು ಕ್ರಮ ಬಿಗಿಗೊಳಿಸಿದೆ.  ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ 9 ತಿಂಗಳಷ್ಟೇ ಆಯಸ್ಸು: ಸಿಎಂ ಇಬ್ರಾಹಿಂ