Tag: ಫಿಸಿಯೋಥೆರಪಿ

  • ನಟ ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ – ಇತ್ತ ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ

    ನಟ ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ – ಇತ್ತ ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸಲ್ಲಿ ಜೈಲು ಪಾಲಾಗಿರೊ ನಟ ದರ್ಶನ್‌ಗೆ ಈ ಬಾರಿ ಬೆಳಕಿಲ್ಲದ ದೀಪಾವಳಿಯಾಗಿದೆ. ಇತ್ತ ಬೆನ್ನು ನೋವು ಹಿನ್ನೆಲೆ ಫಿಸಿಯೋಥೆರಪಿ ನೀಡಲು ಜೈಲಿನ ವೈದ್ಯರು ಪತ್ರ ಬರೆದಿದ್ದಾರೆ.

    ಪ್ರತೀ ಭಾರೀ ಕುಟುಂಬದ ಜೊತೆ ದೀಪಾವಳಿ ಆಚರಣೆ ಮಾಡ್ತಿದ್ದ ನಟನಿಗೆ ಜೈಲಿನ ಕತ್ತಲು ಬೆಳಕನ್ನ ಕಸಿದಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ದರ್ಶನ್ ಅದ್ದೂರಿ ದೀಪಾವಳಿ ಆಚರಿಸ್ತಿದ್ರು. ಈ ಬಾರಿ ದರ್ಶನ್ ಬದುಕಿನಲ್ಲಿ ಬೆಳಕಿರದ ಕತ್ತಲೆಯ ದೀಪಾವಳಿಯಾಗಿದೆ. ಕಳೆದ ಬಾರಿ ದೀಪಾವಳಿ ಟೈಂಗೆ ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಮನೆಯಲ್ಲೇ ರೆಸ್ಟ್ ಮಾಡುವಂತಾಗಿತ್ತು. ಆದ್ರೀಗ ಮತ್ತೆ ಸೆಂಟ್ರಲ್ ಜೈಲಿನಲ್ಲಿರೋ ದರ್ಶನ್‌ಗೆ ದೀಪಾವಳಿ ಬೆಳಕನ್ನ ಕಸಿದುಕೊಂಡಿದ್ದು, ದರ್ಶನ್ ಈಗ ಸೆಲ್‌ನಲ್ಲಿ ಬೆಳಕು ನೋಡುವಂತಾಗಿದೆ. ಹಾಸಿಗೆ ದಿಂಬಿಲ್ಲ, ಕ್ವಾರಂಟೈನ್ ಸೆಲ್‌ನಲ್ಲೇ ಇರುವ ಅನಿವಾರ್ಯ ಸ್ಥಿತಿಯಲ್ಲಿದ್ದು, ಕನಿಷ್ಟ ಸೌಲಭ್ಯದ ವ್ಯವಸ್ಥೆ ಸರಿಯಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೊಟ್ಟಿರೋ ವರದಿಯಿಂದ ಬೇಸರಗೊಂಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

    ಇನ್ನೂ ಜೈಲಿನಲ್ಲಿ ದರ್ಶನ್‌ಗೆ ಈಗಾಗ್ಲೇ ಬೆನ್ನು ನೋವಿಗೆ ಹೀಟಿಂಗ್ ಬೆಲ್ಟ್ ಹಾಗೂ ಚೇರ್ ನೀಡಲಾಗಿದೆ. ಈ ನಡುವೆ ಕೇಂದ್ರ ಕಾರಾಗೃಹ ಆಸ್ಪತ್ರೆ ಮುಖ್ಯ ವೈದ್ಯರು, ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. ಇತ್ತೀಚಿಗೆ ಜೈಲಿನಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ನಟ ದರ್ಶನ್‌ಗೆ ಮೊದಲು ಜೈಲಿನ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಬಳಿಕ ಸಿ.ವಿ ರಾಮನ್ ಆಸ್ಪತ್ರೆ ಫಿಸಿಯೋಥೆರಪಿ ತಂಡದಿಂದ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ಅಗತ್ಯ ಇರುವವರೆಗೂ ಕಾರಾಗೃಹಕ್ಕೆ ವೈದ್ಯರ ತಂಡ ನಿಯೋಜಿಸಲು ಹಾಗೂ ಹೀಟಿಂಗ್ ಬೆಲ್ಟ್ ನೀಡಲು ಮನವಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಬೆನ್ನು ನೋವಿನ ಬಗ್ಗೆಯೂ ಉಲ್ಲೇಖವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

    ಮತ್ತೊಂದೆಡೆ ದರ್ಶನ್ ಕಾನೂನಿನ ಹೋರಾಟಕ್ಕೆ ಪತ್ನಿ ವಿಜಯಲಕ್ಷ್ಮಿ ಬಿಟ್ಟು ಯಾರಿಂದಲೂ ಸಹಾಯದ ಮಾತಿಲ್ಲವಂತೆ. ಇದರಿಂದ ಬೇಸರಗೊಂಡು ಮೌನಕ್ಕೆ ಶರಣಾಗಿದ್ದು, ಬ್ಯಾರಕ್‌ನಲ್ಲಿ ಶಿಷ್ಯಂದಿರ ಬಳಿ ಆಗ್ಗಾಗ್ಗೆ ಬೇಸರ ವ್ಯಕ್ತಪಡಿಸುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿವೆ.ಇದನ್ನೂ ಓದಿ: ಪತ್ನಿಯನ್ನು ಕೊಂದು ಬೋರ್‌ವೆಲ್‌ಗೆ ಹಾಕಿದ್ದ ಪತಿ – 12 ಅಡಿ ಆಳದಲ್ಲಿ ಮೃತದೇಹ ಪತ್ತೆ

  • ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಫಿಸಿಯೋಥೆರಪಿ ಚಿಕಿತ್ಸೆ

    ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಫಿಸಿಯೋಥೆರಪಿ ಚಿಕಿತ್ಸೆ

    ಬಳ್ಳಾರಿ: ಬೆನ್ನುನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ನಟ ದರ್ಶನ್‌ (Darshan) ಅವರಿಗೆ ಫಿಸಿಯೋಥೆರಪಿ (Physiotherapy) ಚಿಕಿತ್ಸೆ ನೀಡಲಾಗಿದೆ.

    ಶುಕ್ರವಾರ ಸಂಜೆ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಜೈಲಿನ ಹೈ ಸೆಕ್ಯೂರಿಟಿ ಸೆಲ್‌ನಲ್ಲೇ ದರ್ಶನ್ ಗೆ ಒಂದು ಗಂಟೆ ಫಿಸಿಯೋಥೆರಪಿ ಮಾಡಲಾಗಿದೆ.

    ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ L1, L5 ನಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ವಿಮ್ಸ್ ಆಸ್ಪತ್ರೆಯ ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ಸ್ಕ್ಯಾನಿಂಗ್, ಸರ್ಜರಿ ಹಾಗೂ ಫಿಸಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು. ಇದನ್ನೂ ಓದಿ: ಸಿಎಂ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ

     

    ವೈದ್ಯರ ಸಲಹೆಯಂತೆ ಬುಧವಾರವೇ ಆರೋಪಿ ದರ್ಶನ್‌ಗೆ ಫಿಸಿಯೋಥೆರಪಿ ಆರಂಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಫಿಸಿಯೋಥೆರಪಿ ಮಾಡಿಸಲು ಸಾಧ್ಯವಾಗಿರಲಿಲ್ಲ.

    ಶುಕ್ರವಾರ ಸಂಜೆ ಆರೋಪಿ ದರ್ಶನ್ ಗೆ ಫಿಸಿಯೋಥೆರಪಿ ಮಾಡಲಾಗಿದೆ. ಈಗಾಗಲೇ ವೈದ್ಯರ ಸೂಚನೆ ಮೇರೆಗೆ ಮೆಡಿಕಲ್ ಬೆಡ್, ದಿಂಬು, ಚೇರ್ ಕೊಡಲಾಗಿದ್ದು, ಕೊಂಚ ಮಟ್ಟಿಗೆ ದರ್ಶನ್ ಬೆನ್ನು ನೋವು ಕಡಿಮೆ ಆಗಿದೆ ಎನ್ನಲಾಗಿದೆ.