Tag: ಫಿಶ್ ಫ್ರೈ

  • ಬಂಗುಡೆ ಪೆಪ್ಪರ್‌ ಫ್ರೈ ಸವಿದ್ರೆ ಮನೆಯಲ್ಲಿ ಮತ್ತೆ ಮತ್ತೆ ಅದನ್ನೇ ಮಾಡ್ತೀರ…

    ಬಂಗುಡೆ ಪೆಪ್ಪರ್‌ ಫ್ರೈ ಸವಿದ್ರೆ ಮನೆಯಲ್ಲಿ ಮತ್ತೆ ಮತ್ತೆ ಅದನ್ನೇ ಮಾಡ್ತೀರ…

    ಕೆಲಸದ ಒತ್ತಡದಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವವರು ರುಚಿಕರ ಆಹಾರ ಸವಿಯಬೇಕಾದ್ರೆ ಹೋಟೆಲನ್ನೇ ಅವಲಂಬಿಸಿರ್ತಾರೆ. ಇನ್ನೂ ಕೆಲವರು ಅಷ್ಟು ಟೈಂ ಯಾರ್‌ ಕೊಡ್ತಾರೆ ಅಂತ ಇಷ್ಟವಿದ್ದರೂ ನೆಚ್ಚಿನ ಸ್ಫೈಸಿ ಫುಡ್‌ ಮಾಡೋಕಾಗದೇ ಅರ್ಜೆಂಟ್‌ನಲ್ಲಿ ಆಗಿದ್ದನ್ನು ಮಾಡಿಕೊಳ್ತಾರೆ. ಮನೆಗಳಲ್ಲಿ ಚಿಕನ್‌, ಮಟನ್‌ ಪೆಪ್ಪರ್‌ ಫ್ರೈ ಮಾಡೋದು ಸಹಜ.. ಆದ್ರೆ ಬಂಗುಡೆ ಪೆಪ್ಪರ್‌ ಫ್ರೈ ಕೂಡ ಸುಲಭವಾಗಿ ಮಾಡಬಹುದು ಅನ್ನೋದಕ್ಕೆ ಒಂದಿಷ್ಟು ಟಿಪ್ಸ್‌ ಇಲ್ಲಿದೆ.

    ಈ ಫಿಶ್ ಫ್ರೈ ಗರಿ ಗರಿಯಾಗಿರುತ್ತೆ ಮತ್ತು ರುಚಿಕರವಾಗಿಯೂ ಇರುತ್ತೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ. ಒಮ್ಮೆ ಇದನ್ನ ಸವಿದ್‌ರೆ ಮತ್ತೆ ಮತ್ತೆ ಸವಿಯಬೇಕು ಅಂತ ಅನ್ನಿಸುತ್ತೆ. ಇದನ್ನ ಹೇಗೆ ಮಾಡಬೇಕು ಅಂತ ನೋಡೋದಾದ್ರೆ…

    ಬೇಕಾಗುವ ಸಾಮಗ್ರಿಗಳು:
    * ಬಂಗುಡೆ ಮೀನು – ಅರ್ಧ ಕೆಜಿ
    * ಕಾಳುಮೆಣಸಿನ ಪುಡಿ – 1 ಚಮಚ
    * ಸೋಂಪು ಪುಡಿ – 1 ಚಮಚ
    * ಕರಿಬೇವು- ಸ್ವಲ್ಪ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಗರಂ ಮಸಾಲೆ- ಅರ್ಧ ಚಮಚ
    * ನಿಂಬೆರಸ – 1 ಚಮಚ
    * ಅರಿಶಿಣ – ಸ್ವಲ್ಪ
    * ಖಾರದಪುಡಿ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ ಪೌಡರ್- ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
    * ಒಂದು ಬೌಲ್‍ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು.
    * ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು.
    * ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಕೇರಳ ಶೈಲಿಯಲ್ಲಿ ಮಾಡಿ ‘ಫಿಶ್ ಫ್ರೈ’

    ಕೇರಳ ಶೈಲಿಯಲ್ಲಿ ಮಾಡಿ ‘ಫಿಶ್ ಫ್ರೈ’

    ಕೇರಳ ಎಂದರೆ ಮೀನಿನ ರೆಸಿಪಿಗೆ ಫೇಮಸ್. ಕೇರಳಗೆ ಹೋದ ನಾನ್‍ವೆಜ್ ಪ್ರಿಯರು ‘ಫಿಶ್ ಫ್ರೈ’ ತಿನ್ನದೆ ಬರವುದೇ ಇಲ್ಲ. ಕೇರಳ ಶೈಲಿಯಲ್ಲಿಯೇ ಮಿನು ತಿನ್ನಬೇಕು ಎಂದು ಜನರು ರೆಸ್ಟೋರೆಂಟ್‌ಗಳನ್ನು ಹುಡುಕುತ್ತಿರುತ್ತಾರೆ. ಆದರೆ ಬೇಕು ಎಂದಾಗ ಅದೇ ರೀತಿ ರುಚಿ ಸಿಗಾದೇ ಹಲವು ಜನರು ‘ಫಿಶ್ ಫ್ರೈʼ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಅದಕ್ಕೆ ನಾವು ಕೇರಳ ಶೈಲಿಯಲ್ಲಿ ಸಿಂಪಲ್ ಆಗಿ ‘ಫಿಶ್ ಫ್ರೈ’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ. ಇದು ಮಸಾಲೆಯುಕ್ತವಾಗಿರುವುದರಿಂದ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ.

    ಬೇಕಾಗಿರುವ ಸಾಮಾಗ್ರಿಗಳು:
    * ಅವೊಲಿ ಮೀನು – 1
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್


    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ನಿಂಬೆ ರಸ – 2 ಟೀಸ್ಪೂನ್
    * ಕರಿಬೇವು – 10 ರಿಂದ 15 ಎಲೆಗಳು
    * ಎಣ್ಣೆ – ಅರ್ಧ ಕಪ್
    * ನಿಂಬೆ ಹೋಳು – 2
    * ಕಟ್ ಮಾಡಿದ ಈರುಳ್ಳಿ – 1 ಕಪ್

    ಮಾಡುವ ವಿಧಾನ:
    * ಮೀನುಗಳನ್ನು ಸ್ವಚ್ಛಗೊಳಿಸಿ, ಅದರ ಎರಡೂ ಬದಿಗಳನ್ನು ಕಟ್ ಮಾಡಿ.
    * ಕೆಂಪು ಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡುವ ಮೂಲಕ ಮಸಾಲಾವನ್ನು ತಯಾರಿಸಿ.
    * ಎರಡೂ ಬದಿಗಳಲ್ಲಿ ಮೀನಿನ ಮಸಾಲಾವನ್ನು ಸಮವಾಗಿ ಲೇಪಿಸಿ, 30 ನಿಮಿಷಗಳ ಕಾಲ ಮಸಾಲಾ ಜೊತೆಗೆ ಬಿಡಿ.
    * ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಮಸಾಲಾ ಮೀನನ್ನು ಮಧ್ಯಮ ಉರಿಯಲ್ಲಿ ಫ್ರೈ(ಕಡಿಮೆ ಎಣ್ಣೆಯನ್ನು ಬಳಸಿ) ಮಾಡಿ.
    * ಅದು ಚೆನ್ನಾಗಿ ಸುಟ್ಟು, ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ತದನಂತರ ಇನ್ನೊಂದು ಬದಿ ಬೇಯಿಸಲು ತಿರುಗಿಸಿ.
    * ಕೊನೆಗೆ ಕರಿದ ಮೀನಿನ ಫ್ರೈ ಮೇಲೆ ಪೇಪರ್ ಪೌಡರ್, ನಿಂಬೆ ರಸ ಮತ್ತು ಈರುಳ್ಳಿ ಹಾಕಿ ಬಡಿಸಿ.

    Live Tv

  • ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿ ಫಿಶ್ ಫ್ರೈ

    ಚೆಟ್ಟಿನಾಡ್ ಶೈಲಿಯಲ್ಲಿ ಮಾಡಿ ಫಿಶ್ ಫ್ರೈ

    ಪ್ರತಿ ಬಾರಿ ಒಂದೇ ರೀತಿಯ ಫಿಶ್ ಫ್ರೈ ಮಾಡಿ ಬೇಜಾರಾಗಿರುತ್ತೆ. ಹೀಗಾಗಿ ಈ ಬಾರಿ ಅತ್ಯಂತ ಕ್ರಿಪ್ಸಿ ಹಾಗೂ ರುಚಿಕರವಾದ ರೀತಿಯಲ್ಲಿ ಫ್ರೈ ಮಾಡಿ. ತಮಿಳುನಾಡಿನ ಚೆಟ್ಟಿನಾಡ್ ಪ್ರದೇಶದ ಫಿಶ್ ಫ್ರೈ ಫುಲ್ ಫೇಮಸ್. ಅದೇ ರೀತಿಯಲ್ಲಿ ನಿಮ್ಮ ಮನೆಯಲ್ಲಿಯೇ ಫಿಶ್ ಫ್ರೈ ಮಾಡುವ ರೆಸಿಪಿಯನ್ನ ಇಲ್ಲಿ ಹೇಳಿಕೊಡಲಾಗುತ್ತೆ.

    ಬೇಕಾಗುವ ಸಾಮಗ್ರಿಗಳು:
    * ಸುರ್ಮೈ ಫಿಲೆಟ್‍ಗಳು(ರಾಜ ಮೀನು) – 2
    * ಎಣ್ಣೆ – 2 ಚಮಚ
    * ಬೆಳ್ಳುಳ್ಳಿ – 7 ರಿಂದ 8
    * ಲವಂಗ – 1
    * ಶುಂಠಿ – ಸ್ವಲ್ಪ
    * ಜೀರಿಗೆ – 1 ಟೀಸ್ಪೂನ್
    * ಕೊತ್ತಂಬರಿ ಬೀಜ – 2 ಟೀಸ್ಪೂನ್
    * ಕರಿಮೆಣಸು – 2 ಟೀಸ್ಪೂನ್


    * ಸಾಸಿವೆ – 1/2 ಟೀಸ್ಪೂನ್
    * ಕರಿಬೇವಿನ ಎಲೆಗಳು – 9-10
    * ಕತ್ತರಿಸಿದ ಟೊಮೆಟೊ – 1/2 ಕಪ್
    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಕಾರ್ನ್‍ಫ್ಲೋರ್ – 1 ಕಪ್
    * ಅರಿಶಿನ ಪುಡಿ – 2 ಟೀಸ್ಪೂನ್
    * ಹುಣಸೆ ನೀರು – 5 ಕಪ್
    * ನಿಂಬೆ ತುಂಡುಗಳು, ರುಚಿಗೆ ಬೇಕಾದಷ್ಟು ಉಪ್ಪು

    ಮಾಡುವ ವಿಧಾನ:
    * ಮೀನಿನ ತುಂಡುಗಳನ್ನು ಸಮಾನ ತುಂಡುಗಳಾಗಿ ಕತ್ತರಿಸಿ.
    * ಬಾಣಲೆಯಲ್ಲಿ ಒಣ ಹುರಿದ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಫೆನ್ನೆಲ್, ಕೊತ್ತಂಬರಿ ಬೀಜ, ಕರಿಮೆಣಸು, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.

    * ಫ್ರೈ ಮಾಡಿದ ಮಿಶ್ರಣಕ್ಕೆ ಕತ್ತರಿಸಿದ ಟೊಮೆಟೊ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಹುಣಸೆ ನೀರನ್ನು ಸೇರಿಸಿ ಮಸಾಲೆ ರೆಡಿ ಮಾಡಿ.
    * ಮೀನಿನ ಮೇಲೆ ಸ್ವಲ್ಪ ಕಾರ್ನ್‍ಫ್ಲೋರ್ ಸಿಂಪಡಿಸಿ. ಮೀನುಗಳ ತುಂಡುಗಳನ್ನು ಮಸಾಲೆಯೊಂದಿಗೆ ಚೆನ್ನಾಗಿ ಡಿಪ್ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿ. (ಕಾರ್ನ್‍ಫ್ಲೋರ್ ಮಸಾಲಾವನ್ನು ಅಂಟಿಸಲು ಸಹಾಯ ಮಾಡುತ್ತೆ)
    * 15-20 ನಿಮಿಷಗಳ ಕಾಲ ತಣ್ಣಗಾಗಲು ಬಿಟ್ಟು, ಅದಕ್ಕೆ ನಿಂಬೆ ರಸವನ್ನು ಸೇರಿಸಿ.

     

  • ಪೆಪ್ಪರ್ ಪೌಡರ್ ಬಳಸಿ ಮಾಡಿ ಬಂಗುಡೆ ಫ್ರೈ

    ಪೆಪ್ಪರ್ ಪೌಡರ್ ಬಳಸಿ ಮಾಡಿ ಬಂಗುಡೆ ಫ್ರೈ

    ಬಂಗುಡೆ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.  ಈ  ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.

    ಬೇಕಾಗುವ ಸಾಮಗ್ರಿಗಳು:
    * ಬಂಗುಡೆ ಮೀನು – ಅರ್ಧ ಕೆಜಿ
    * ಕಾಳುಮೆಣಸಿನ ಪುಡಿ – 1 ಚಮಚ
    * ಸೋಂಪು ಪುಡಿ – 1 ಚಮಚ
    * ಕರಿಬೇವು- ಸ್ವಲ್ಪ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಗರಂ ಮಸಾಲೆ- ಅರ್ಧ ಚಮಚ
    * ನಿಂಬೆರಸ – 1 ಚಮಚ
    * ಅರಿಶಿಣ – ಸ್ವಲ್ಪ
    * ಖಾರದಪುಡಿ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ ಪೌಡರ್- ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
    * ಒಂದು ಬೌಲ್‍ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ರುಚಿಯಾದ ಬಾಳೆಎಲೆ ಫಿಶ್ ಫ್ರೈ

    ರುಚಿಯಾದ ಬಾಳೆಎಲೆ ಫಿಶ್ ಫ್ರೈ

    ವೀಕೆಂಡ್‍ನಲ್ಲಿ 2 ದಿನಗಳಕಾಲ ಮನೆಯಲ್ಲಿಯೇ ಇರಬೇಕು. ಹೊರಗೆ ಯಾವುದೇ ಹೋಟೆಲ್, ಅಂಗಡಿ ಮುಗ್ಗಟ್ಟುಗಳು ತೆರೆದಿರುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ನೀವು ತುಂಬಾ ಸರಳವಾಗಿ ರುಚಿಯಾಗಿ ಬಾಳೆಎಲೆ ಫಿಶ್ ಫ್ರೈ ಮಾಡಿ ಸವಿಯ ಬಹುದಾಗಿದೆ. ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಬಾಳೆ ಎಲೆ
    * ಮೀನು ಅರ್ಧ ಕೆಜಿ
    * ಕೊಬ್ಬರಿ ಎಣ್ಣೆ- 2 ಕಪ್
    * ಬ್ಯಾಡಗಿ ಮೆಣಸು – 5ರಿಂದ7
    * ಗುಂಟೂರು ಮೆಣಸು -6 ರಿಂದ7
    * ಕೊತ್ತಂಬರಿ ಬೀಜ -2 ರಿಂದ 3 ಚಮಚ
    * ಜೀರಿಗೆ- ಅರ್ಧ ಚಮಚ
    * ಮೆಂತೆ- ಅರ್ಧ ಚಮಚ
    * ಹುಣಸೆಹಣ್ಣು ಸ್ವಲ್ಪ
    * ಉಪ್ಪು ರುಚಿಗೆ ತಕ್ಕಷ್ಟು
    * ಅರಿಶಿಣ ಚಿಟಿಕೆ

    ಮಾಡುವ ವಿಧಾನ:

    * ಕೊತ್ತಂಬರಿ ಬೀಜ, ಜೀರಿಗೆ, ಗುಂಟೂರು ಮೆಣಸು ,ಬ್ಯಾಡಗಿ ಮೆಣಸು, ಹುಣಸೆಹಣ್ಣು, ಮೆಂತೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು.

    * ಹುರಿದಿಟ್ಟ ಈ ಸಾಮಾಗ್ರಿಗಳು ತಣ್ಣಗಾದ ಬಳಿಕ ಮಿಕ್ಸಿಜಾರಿಗೆ ಎಲ್ಲವನ್ನು ಹಾಕಿ ಸಣ್ಣದಾಗಿ ಪೌಡರ್ ಮಾಡಿಕೊಳ್ಳಬೇಕು. ನಂತರ ಸ್ಪಲ್ಪ ಸ್ವಲ್ಪ ನೀರು ಸೇರಿಸುತ್ತಾ ಚೆನ್ನಾಗಿ ರುಬ್ಬಿ ಮಸಾಲೆಯನ್ನು ತಯಾರಿಸಿಕೊಳ್ಳಬೇಕು.

    * ಚೆನ್ನಾಗಿ ತೊಳೆದು ಮೀನಿನ ಮಧ್ಯಭಾದದಲ್ಲಿ ಸಿಳಿರಬೇಕು ಯಾಕೆಂದ್ರೆ ಮಸಾಲೆ ಚೆನ್ನಾಗಿ ಮೀನಿನ ಒಳಗೆ ಹೋಗುತ್ತದೆ.

    * ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ಈಗ ಮೀನಿಗೆ ಚೆನ್ನಾಗಿ ಮಸಾಲೆಯನ್ನು ಹಚ್ಚಿ ಬಾಳೆ ಎಲೆಯ ಜೊತೆಯಲ್ಲಿ ಸುತ್ತಿಕೊಳ್ಳಬೇಕು.

    * ಒಂದು ತವಾಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಬಾಳೆ ಎಲೆಯಲ್ಲಿ ಸುತ್ತಿಟ್ಟ ಮಸಾಲೆ ಮೀನಿಗಳನ್ನು ಹಾಕಿ ಚೆನ್ನಾಗಿ ಬೇಯಿಸಬೇಕು. ಇದೀಗ ರುಚಿಯಾದ ಮತ್ತು ಸರಳವಾದ ಬಾಳೆಎಲೆ ಫಿಶ್ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಚಿಕನ್ ನೋಡಿ ಕುಣಿದು ಕುಪ್ಪಳಿಸಿದ ಶುಭಾ ಪೂಂಜಾ!

    ಚಿಕನ್ ನೋಡಿ ಕುಣಿದು ಕುಪ್ಪಳಿಸಿದ ಶುಭಾ ಪೂಂಜಾ!

    ವಾರ ದೊಡ್ಮನೆ ಸ್ಪರ್ಧಿಗಳು ಲಕ್ಷುರಿ ಬಜೆಟ್ ಟಾಸ್ಕ್‍ನಲ್ಲಿ ನಾನ್ ವೆಜ್ ಕಳೆದುಕೊಂಡು ಬೇಸರದಲ್ಲಿದ್ದರು. ಆದರೆ ಈ ಮಧ್ಯೆ ಬಿಗ್‍ಬಾಸ್ ನಿನ್ನೆ ಶುಭಾ ಪೂಂಜಾರನ್ನು ಕನ್ಫೆಕ್ಷನ್ ರೂಮ್‍ಗೆ ಕರೆದು, ಊಟದಲ್ಲಿ ನೀವು ಏನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಕೇಳಿದ್ದಾರೆ. ಹೀಗೆ ಕೇಳಿದ ತಕ್ಷಣ ನಿಟ್ಟುಸಿರುಬಿಟ್ಟು ಬಹಳ ಖುಷಿಯಿಂದ ಫಿಶ್ ಫ್ರೈ, ಅಂಜಲ್ ಫಿಶ್ ಫ್ರೈನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದರ ಜೊತೆ ಐಸ್ ಕ್ರೀಮ್ ಕೊಟ್ಟರೆ ಚೆಂದ ಎಂದು ನಗುತ್ತಾ ಬಾಯಿ ಚಪ್ಪರಿಸಿಕೊಂಡು ಹೇಳುತ್ತಾರೆ.

    ಚಂಡೇಶ್ವರ ಶಿಕ್ಷೆಯಾಗಿ ನಿಮಗೆ ಚಿಕನ್ ಕಳೆದುಕೊಂಡಾಗ ಏನು ಅನಿಸಿತು ಎಂದು ಬಿಗ್‍ಬಾಸ್ ಕೇಳಿದಾಗ, ತುಂಬಾ ಬೇಜಾರ್ ಆಯ್ತು ಬಿಗ್‍ಬಾಸ್ ಪ್ರತಿದಿನ ಅನ್ನ-ಸಾಂಬಾರ್ ತಿನ್ನುತ್ತಿದ್ದೇವೆ. ಕನಿಷ್ಟಪಕ್ಷ ಚಿಕನ್ ಸಾಂಬರ್ ಆದರೂ ಬರುತ್ತಿತ್ತು ಈಗ ಅದು ಹೋಯಿತು ಎಂದು ಶುಭ ಅಲವತ್ತುಕೊಂಡಿದ್ದಾರೆ.

    ಬಳಿಕ ನೀವು ಚಿಕನ್ ಕಳೆದುಕೊಂಡಾಗ ಬಹಳಷ್ಟು ಸಲ ಚಿಕನ್ ಬೇಕು ಎಂದಿದ್ದನ್ನು ಬಿಗ್‍ಬಾಸ್ ಗಮನಿಸಿದ್ದಾರೆ. ಹಾಗಾಗಿ ನಿಮಗೆ ಬಿಗ್‍ಬಾಸ್, ಇದೀಗ ಚಿಕನ್ ನೀಡಲು ಇಚ್ಛಿಸುತ್ತಾರೆ ಎನ್ನುತ್ತಾರೆ. ಇದನ್ನು ಕೇಳಿದ ತಕ್ಷಣ ಶುಭ ಸಂತಸದಿಂದ ಸೋಫಾದ ಮೇಲೆಯೇ ಕುಣಿದು ಕುಪ್ಪಳಿಸಿ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸುತ್ತಾರೆ.

    ನಂತರ ನಿಮ್ಮ ಮುಂದೆ ಇರುವ ತಟ್ಟೆಯನ್ನು ತೆರೆದು ನೋಡಿ ಎಂದಾಗ ಶುಭ ತಟ್ಟೆಯನ್ನು ಓಪನ್ ಮಾಡಿ ನೋಡುತ್ತಾರೆ. ಈ ವೇಳೆ ತಟ್ಟೆ ತುಂಬಾ ಚಿಕನ್ ತುಂಬಿರುವುದನ್ನು ನೋಡಿ ಶುಭಾ ಅಚ್ಚರಿಗೊಂಡು ಕಿರುಚಾಡುತ್ತಾ ಫುಲ್ ಖುಷ್ ಆಗ್ತಾರೆ.

    ಆದರೆ ಕೊನೆಗೆ ಬಿಗ್‍ಬಾಸ್, ನೀವು ಈ ಚಿಕನ್‍ನನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕು. ಯಾವುದೇ ಕಾರಣಕ್ಕೂ ತಿನ್ನುವಂತಿಲ್ಲ ಹಾಗೂ ಕೆಳಗೆ ಇಡುವಂತಿಲ್ಲ ಎಂದು ಟ್ವಿಸ್ಟ್ ಕೊಡುತ್ತಾರೆ. ಮುಂದಿನ ಆದೇಶದವರೆಗೂ ಮನೆಯ ಎಲ್ಲಾ ಸ್ಪರ್ಧಿಗಳು ಒಬ್ಬೊಬ್ಬರಾಗಿ ಚಿಕನನ್ನು ವರ್ಗಾಯಿಸಿಕೊಂಡು ತಿನ್ನದಂತೆ ಹಾಗೂ ಕೆಳಗಿಡದಂತೆ ನೋಡಿಕೊಳ್ಳಬೇಕು. ಹೀಗೆ ನೋಡಿಕೊಂಡರೆ ನಾಳೆ ಚಿಕನ್ ಕಳುಹಿಸಿಕೊಡಲಾಗುತ್ತದೆ ಎಂದು ಹೇಳುತ್ತಾರೆ.

    ಒಟ್ಟಾರೆ ಚಿಕನ್ ನೀಡಿದನ್ನು ನೋಡಿ ಸ್ವರ್ಗವೇ ಸಿಕ್ಕಿದಂತೆ ಆನಂದಿಸಿದ ಶುಭಾ ಪೂಂಜಾರಿಗೆ, ಚಿಕನ್ ತಿನ್ನದೇ ನೋಡಿಕೊಳ್ಳುವಂತೆ ಬಿಗ್‍ಬಾಸ್ ಟ್ವಿಸ್ಟ್ ನೀಡುವ ಮೂಲಕ ನಿರಾಸೆ ಮೂಡಿಸಿದ್ದರೆ ಎಂದರೆ ತಪ್ಪಾಗಲಾರದು.

  • ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ- ತಿಂಗಳಿಗೆ 1 ಲಕ್ಷ ರೂ. ಸಂಪಾದನೆ

    ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ- ತಿಂಗಳಿಗೆ 1 ಲಕ್ಷ ರೂ. ಸಂಪಾದನೆ

    – ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ

    ಚೆನ್ನೈ: ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ ಮಾಡಿ ತಿಂಗಳಿಗೆ ಒಂದು ಲಕ್ಷ ರೂ. ಸಂಪಾದಿಸುತ್ತಿದ್ದಾರೆ.

    27 ವರ್ಷದ ಮೋಹನ್ ಕುಮಾರ್ ತಮಿಳುನಾಡಿನ ಕರೂರ್ ನಿವಾಸಿಯಾಗಿದ್ದು, ಅವರ ಕುಟುಂಬಸ್ಥರು ಮೀನಿನ ವ್ಯವಹಾರ ನಡೆಸುತ್ತಿದ್ದು, ಅದಕ್ಕಾಗಿ ಮೋಹನ್ ತಮ್ಮ ಪ್ರೊಫೆಸರ್ ಕೆಲಸವನ್ನು ಬಿಟ್ಟಿದ್ದಾರೆ. ಮೋಹನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಕರೂರ್ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.

    ಪಲಾನಿವೇಲ್ ಹಾಗೂ ಸೆಲ್ವಿ ರಾಣಿ, ಮೋಹನ್ ಅವರ ತಂದೆ-ತಾಯಿ ಆಗಿದ್ದು, ಗಾಂಧಿಗ್ರಾಮದಲ್ಲಿ ಫಿಶ್ ಫ್ರೈ ಅಂಗಡಿ ಇಟ್ಟುಕೊಂಡಿದ್ದಾರೆ. ಮೋಹನ್ ಅವರಿಗೆ ಪ್ರೊಫೆಸರ್ ಕೆಲಸ ಬದಲು ಮೀನು ಫೈ ಮಾಡಿ ಮಾರಾಟ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

    ಈ ಬಗ್ಗೆ ಮೋಹನ್ ಮಾತನಾಡಿ, ಕಾಲೇಜು ಮುಗಿದ ನಂತರ ನಾನು ನನ್ನ ಪೋಷಕರಿಗೆ ಸಹಾಯ ಮಾಡುತ್ತಿದ್ದೆ. ಆದರೆ ನನ್ನ ಪೋಷಕರಿಗೆ ಅದು ಇಷ್ಟವಿರಲ್ಲ. ಅವರಿಗೆ ನಾನು ಮೀನು ಮಾರಾಟ ಮಾಡುವುದು ಇಷ್ಟವಿಲ್ಲ. ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದರು. ಅಲ್ಲದೆ ಎಂಜಿನಿಯರಿಂಗ್ ನಂತರ ನಾನು ಮೀನು ಮಾರಾಟ ಮಾಡುವುದನ್ನು ನೋಡಿ ಹಲವರು ನನಗೆ ಹುಚ್ಚ ಎಂದು ಹೇಳಿದ್ದರು. ಆದರೆ ನಾನು ನನ್ನ ಪ್ರೊಫೆಸರ್ ವೃತ್ತಿಗಿಂತ ಈ ಕೆಲಸವನ್ನು ತುಂಬಾ ಇಷ್ಟಪಡುತ್ತೇನೆ ಎಂದರು.

    ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಈ ಅಂಗಡಿಯನ್ನು ಮುಚ್ಚಬೇಕಾಯಿತು. ಆಗ ಈ ವ್ಯವಹಾರದಲ್ಲಿ ಬಂದ ಲಭ ಅದನ್ನು ನಿವಾರಿಸಲು ಸಹಾಯ ಮಾಡಿತು. ನಾನು ಈ ಕೆಲಸದಲ್ಲಿ ತುಂಬಾನೇ ಕಷ್ಟಪಟ್ಟಿದ್ದೇನೆ. ನನ್ನ ಕುಟುಂಬಸ್ಥರು ಕೂಡ ನನಗೆ ಸಹಾಯ ಮಾಡಿಲ್ಲ. ನಾನು ಮೀನುಗಳನ್ನು ಕರೂರ್‍ನ ಹಲವು ಹೋಟೆಲ್‍ಗಳಿಗೆ ಹಾಗೂ ಸಣ್ಣ ಅಂಗಡಿಗಳಿಗೆ ಎರಡು ಮೂರು ಟನ್ ಮೀನು ಹಾಗೂ ಮಾಂಸವನ್ನು ಒದಗಿಸಿ ತಿಂಗಳಿಗೆ ಸುಮಾರು 1 ಲಕ್ಷ ರೂ. ಸಂಪಾದಿಸುತ್ತೇನೆ ಎಂದು ಮೋಹನ್ ತಿಳಿಸಿದರು.

  • ದಿಢೀರ್ ಫಿಶ್ ಫ್ರೈ ಮಾಡುವ ವಿಧಾನ

    ದಿಢೀರ್ ಫಿಶ್ ಫ್ರೈ ಮಾಡುವ ವಿಧಾನ

    ಮೀನು ಎಲ್ಲರಿಗೂ ಆರೋಗ್ಯಕರವಾದ ಆಹಾರವಾಗಿದೆ. ಹೀಗಾಗಿ ಕೆಲ ಮಂದಿ ಪ್ರತಿವಾರ ಸಂಡೇ ಬಂದರೆ ಚಿಕನ್, ಮಟನ್, ಮಾಡಿ ತಿನ್ನುತ್ತಿರುತ್ತಾರೆ. ಇಲ್ಲಿ ಎರಡು ಬಗೆಯ ಮೀನಿನ ಖಾದ್ಯವನ್ನು ತಯಾರಿಸುವ ವಿಧಾನದ ಮಾಹಿತಿಯನ್ನು ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕ್ಲೀನ್ ಮಾಡಿ ಸ್ಲೈಸ್ ಮಾಡಿದ ಫಿಶ್ – ಅರ್ಧ ಕೆಜಿ
    2. ಖಾರದ ಪುಡಿ – 1 ಚಮಚ
    3. ದನಿಯಾ ಪುಡಿ – 1 ಚಮಚ
    4. ಅರಿಶಿಣ ಪುಡಿ – ಚಿಟಿಕೆ
    5. ಕಾಳು ಮೆಣಸಿನ ಪುಡಿ – 1 ಚಮಚ
    6. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    7. ಉಪ್ಪು – ರುಚಿಗೆ ತಕ್ಕಷ್ಟು
    8. ಕರಿಬೇವಿನ ಸೊಪ್ಪು
    9. ನಿಂಬೆಹಣ್ಣು – ಅರ್ಧ ಹೋಳು
    10. ನೀರು – 1 ಚಮಚ
    11. ಎಣ್ಣೆ – 3-4 ಚಮಚ

    ಮಾಡುವ ವಿಧಾನ
    * ಒಂದು ಬೌಲ್‍ಗೆ ಖಾರದಪುಡಿ, ದನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. ತುಂಬಾ ನೀರು ಮಾಡಿಕೊಳ್ಳಬೇಡಿ.
    * ಬಳಿಕ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ ಅರ್ಧ ಗಂಟೆ ಕಾಲ ಇಟ್ಟುಬಿಡಿ. ನೆನಸಿಡಿ.
    * ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಸಾಲೆ ಹಾಕಿದ್ದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ..

    ಈ ಫಿಶ್ ಫ್ರೈ ಅನ್ನು ಮತ್ತೊಂದು ವಿಧಾನದಲ್ಲೂ ಮಾಡಬಹುದು
    * ಮೊದಲಿಗೆ ಚೆನ್ನಾಗಿ ಕ್ಲೀನ್ ಮಾಡಿದ ಸ್ಲೈಸ್ ಕಟ್ ಮಾಡಿದ ಮೀನಿಗೆ ಅರಿಶಿಣ ಸ್ವಲ್ಪ, ಉಪ್ಪು ಸೇರಿಸಿ ಎರಡೂ ಕಡೆ ಲೇಪಿಸಿ 10ರಿಂದ 15 ನಿಮಿಷ ಇಡಿ.
    * ಹೀಗೆ ಮಾಡುವುದರಿಂದ ಫಿಶ್‍ನಲ್ಲಿನ ವಾಸನೆ ಕಡಿಮೆ ಆಗುತ್ತದೆ ಜೊತೆಗೆ ರುಚಿಯೂ ಹೆಚ್ಚಿರುತ್ತದೆ.
    * ಈಗ ಒಂದು ಬೌಲ್‍ಗೆ ಖಾರದಪುಡಿ, ಧನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. (ಈ ಮೊದಲೇ ಫಿಶ್‍ಗೂ ಉಪ್ಪು ಹಾಕಿರುವುದರಿಂದ ನೋಡಿಕೊಂಡು ಉಪ್ಪು ಸೇರಿಸಿ)
    * ಬಳಿಕ ಮೊದಲೇ ಅರಿಶಿಣ ಉಪ್ಪು ಹಚ್ಚಿಟ್ಟಿದ್ದ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ 5 ರಿಂದ 10 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ. ನೆನಸಿಡಿ.
    * ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮ್ಯಾರಿನೇಟ್ ಮಾಡಿದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ.
    * ಇದು ಫಿಶ್ ಫ್ರೈ ಅನ್ನು ಸೈಡ್ ಡಿಶ್ ಆಗಿಯೂ ಬಳಸಬಹುದು..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರುಚಿಕರವಾದ ಫಿಶ್ ಫ್ರೈ ಮಾಡುವ ವಿಧಾನ

    ರುಚಿಕರವಾದ ಫಿಶ್ ಫ್ರೈ ಮಾಡುವ ವಿಧಾನ

    ಫಿಶ್ ಐಟಂಗಳು ಎಲ್ಲರಿಗೂ ತುಂಬಾ ಫೆವರೇಟ್ ಆಹಾರವಾಗಿದೆ. ಫಿಶ್ ತಿಂದರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮೀನು ಸೇವಿಸಿದರೆ ಮೆದುಳು ಚುರುಕಾಗುತ್ತದೆ. ಮನೆಯಲ್ಲಿ ಮಾಡಿ ಫಿಶ್ ಫ್ರೈ ತಿನ್ನುವುದರಿಂದ ರುಚಿಯೂ ಹೆಚ್ಚಾಗಿರುತ್ತದೆ. ಆದ್ದರಿಂದ ನಿಮಗಾಗಿ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಖಾರದ ಪುಡಿ – 1 ಚಮಚ
    2. ಕಾಳು ಮೆಣಸಿನ ಪುಡಿ – ಕಾಲು ಚಮಚ
    3. ಅರಿಶಿಣ – ಚಿಟಿಕೆ
    4. ಉಪ್ಪು – ರುಚಿಗೆ ತಕ್ಕಷ್ಟು
    5. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    6. ನಿಂಬೆ ಹಣ್ಣು – 1
    7. ಎಣ್ಣೆ – 4-5 ಚಮಚ
    8. ಫಿಶ್ – 6-8 ಪೀಸ್‍ಗಳು
    (ಖಾರ ಜಾಸ್ತಿ ಬೇಕಾದವರು ಖಾರದ ಪುಡಿ ಜಾಸ್ತಿ ಬಳಸಬಹುದು)

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್‍ಗೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಹೋಳು ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ. 2 ರಿಂದ 3 ಚಮಚದಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. (ತುಂಬಾ ತೆಳ್ಳಗೆ ಮಿಶ್ರಣ ಬೇಡ)
    * ಮಿಶ್ರಣಕ್ಕೆ ತೊಳೆದ ಮೀನಿನ ಪೀಸ್‍ಗಳನ್ನು ಸೇರಿಸಿ. ಫಿಶ್‍ಪೀಸ್‍ಗೆ ಮಿಶ್ರಣವನ್ನು ಸಮಪ್ರಮಾಣದಲ್ಲಿ ಕೋಟ್ ಮಾಡಿ ಲೇಪಿಸಿ.
    * ಸುಮಾರು ಅರ್ಧ ಗಂಟೆಗಳ ಕಾಲ ಮುಚ್ಚಿಡಿ.
    * ಈಗ ಒಂದು ಫ್ರೈಯಿಂಗ್ ಪ್ಯಾನ್‍ಗೆ 2-3 ಚಮಚ ಎಣ್ಣೆ ಹಾಕಿ, ಕಾದ ಬಳಿಕ ಫಿಶ್ ಪೀಸ್‍ಗಳನ್ನು ಹಾಕಿ ಎರಡೂ ಬದಿ ಚೆನ್ನಾಗಿ ಫ್ರೈ ಮಾಡಿ. (ಬೇಕಿದ್ದಲ್ಲಿ ಮಾತ್ರ ಮತ್ತೆ ಎಣ್ಣೆ ಬಳಸಿ)
    * ಈಗ ಫ್ರೈ ಆದ ಫಿಶ್ ಪೀಸ್‍ಗೆ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ.. ಈರುಳ್ಳಿ, ನಿಂಬೆಹಣ್ಣಿನ ಸ್ಲೈಸ್ ಜೊತೆಗೆ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv