Tag: ಫಿಶ್

  • ಮೀನು ಸೇವಿಸಿದರೆ ದೇಹಕ್ಕೆ ಎಷ್ಟು ಪೌಷ್ಟಿಕಾಂಶ ಸಿಗುತ್ತೆ?

    ಮೀನು ಸೇವಿಸಿದರೆ ದೇಹಕ್ಕೆ ಎಷ್ಟು ಪೌಷ್ಟಿಕಾಂಶ ಸಿಗುತ್ತೆ?

    ನವದೆಹಲಿ: ಕಡಲ ತೀರದಲ್ಲಿ ಸಿಗುವ ಆಹಾರ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಫಿಶ್. ಮಾಂಸಾಹಾರವಾಗಿರುವ ಫಿಶ್ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

     

    ಫಿಶ್ ಸಮುದ್ರ ತೀರದಲ್ಲಿ ಸಿಗುವ ಜನಪ್ರಿಯ ಆಹಾರ. ನಾನ್‍ವೆಜೀಟಿರಿಯಲ್ ಫುಡ್‍ಗಳಲ್ಲಿ ಒಂದಾಗಿರುವ ಫಿಶ್ ನಾನ್ ವೆಜ್ ಪ್ರಿಯರಿಗೆ ಬಹಳ ಅಚ್ಚುಮೆಚ್ಚು. ಅಲ್ಲದೆ ಫಿಶ್ ಸೇವಿಸುವುದರಿಂದ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ.

    ಮೀನಿನ ಖಾದ್ಯಗಳಲ್ಲಿ ಫಿಶ್ ಕರಿ ಕೂಡ ಒಂದಾಗಿದ್ದು, ವಿಶ್ವದ ಎಲ್ಲಾ ಕಡೆ ಫಿಶ್ ದೊರೆಯುತ್ತದೆ. ಭಾರತವು ವೈವಿಧ್ಯಮ ದೇಶವಾಗಿದ್ದು, ವಿವಿಧ ಪ್ರದೇಶಗಳಲ್ಲಿ ತನ್ನದೇ ಶೈಲಿಯ ಭಿನ್ನ ಭಿನ್ನ ರುಚಿ ಹಾಗೂ ಪರಿಮಳವನ್ನು ಹೊಂದಿರುವ ಮೀನು ಖಾದ್ಯಗಳನ್ನು ಜನ ತಯಾರಿಸುತ್ತಾರೆ.

    ಫಿಶ್‍ನ ಯಾವುದಾದರೂ ಡಿಶ್ ತಯಾರಿಸಲು ಪ್ರಯತ್ನಿಸುವವರಿಗೆ ಮೀನು ಕರಿ ಬಹಳ ಸರಳ ಮತ್ತು ಸುಲಭವಾಗಿ ತಯಾರಿಸಬಹುದಾಗಿದೆ. ಆರೋಗ್ಯ ಮತ್ತು ರುಚಿಯನ್ನು ಹೊರತು ಪಡಿಸಿ ಮೀನು ಸಾಂಸ್ಕøತಿಕ ಆಹಾರ ಪದ್ದತಿಯು ಆಗಿದೆ. 150 ಗ್ರಾಂ ಮೀನು ಸೇವಿಸುವುದರಿಂದ ದೇಹಕ್ಕೆ ಸರಾಸರಿ ಸುಮಾರು 215ರಷ್ಟು ಕ್ಯಾಲೋರಿ ಅಂಶ ಸಿಗುತ್ತದೆ.

     

    ಮೀನು ಸೇವಿಸುವುದರಿಂದ ದೇಹಕ್ಕೆ ಸಿಗುವ ಪೌಷ್ಟಿಕಾಂಶಗಳು

    ಪ್ರೋಟಿನ್ – 25.2 ಗ್ರಾಂ
    ಕಾರ್ಬೋಹೈಡ್ರೇಟ್‍ಗಳು – 2.3 ಗ್ರಾಂ
    ಶುಗರ್ – 1.9 ಗ್ರಾಂ
    ನಾರಿನಾಂಶ – 0.8 ಗ್ರಾಂ
    ಕೊಬ್ಬು – 10.5 ಗ್ರಾಂ
    ಸ್ಯಾಚುರೇಟೆಡ್ – 1.5 ಗ್ರಾಂ
    ಪೊಟ್ಯಾಸಿಯಮ್ – 497.7 ಮಿ.ಗ್ರಾಂ
    ಸೋಡಿಯಮ್ – 521.5 ಮಿ.ಗ್ರಾಂ
    ಕೊಲೆಸ್ಟ್ರಾಲ್ – 76.3 ಮಿ.ಗ್ರಾಂ

    ಆರೋಗ್ಯದ ಪ್ರಯೋಜನಗಳು
    ಫಿಶ್ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವ ಮೂಲಕ ಹೃದಯವನ್ನು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಮೀನು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

     

    ಮಧುಮೇಹ, ಎಡಿಎಚ್‍ಡಿ, ಬುದ್ಧಿಮಾಂದ್ಯತೆ ಮತ್ತು ಖಿನ್ನತೆ ಸಂಬಂಧಿಸಿದಂತೆ ಕಾಯಿಲೆಗಳನ್ನು ನಿಯಂತ್ರಿಸಲು ಫಿಶ್ ಸಹಾಯಕಾರಿಯಾಗಿದೆ. ಮೀನು ದೇಹದ ಮೂಳೆಯನ್ನು ಗಟ್ಟಿಯಾಗಿಸುತ್ತದೆ.

    ಆಡುಗೆ ಟಿಪ್ಸ್
    ಅಡುಗೆ ಮಾಡುವಾಗ ಬಳಸುವ ಪದಾರ್ಥಗಳ ಮೇಲೆ ಗಮನವಿರಲಿ. ಯಾವ ಪದಾರ್ಥವನ್ನು ಹೆಚ್ಚಾಗಿ ಬಳಸಬಾರದು ಏಕೆಂದರೆ ದೇಹದಲ್ಲಿ ಕ್ಯಾಲೋರಿ ಸಂಖ್ಯೆಯನ್ನು ಹೆಚ್ಚಿಸುತ್ತದೆ.

    ಅಡುಗೆ ಮಾಡುವಾಗ ಆದಷ್ಟು, ಆಲಿವ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಬಳಸಲು ಪ್ರಯತ್ನಿಸಿ. ಆಹಾರವನ್ನು ಮಿತವಾಗಿ ಸೇವಿಸಿ. ಇದು ನಿಮ್ಮ ದೇಹದಲ್ಲಿನ ಕ್ಯಾಲೊರಿ ಸಂಖ್ಯೆಯನ್ನು ನಿರ್ಬಂಧಿಸುತ್ತದೆ.

  • ಭಾನುವಾರದ ಬಾಡೂಟಕ್ಕೆ ಸಿಕ್ಕಾಪಟ್ಟೆ ಕ್ಯೂ

    ಭಾನುವಾರದ ಬಾಡೂಟಕ್ಕೆ ಸಿಕ್ಕಾಪಟ್ಟೆ ಕ್ಯೂ

    ಗದಗ: ನಗರದಲ್ಲಿ ನಾನ್‍ವೆಜ್ ಪ್ರಿಯರು ಮಾರ್ಕೆಟ್ ಓಪನ್ ಆಗುತ್ತಿದ್ದಂತೆ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.

    ಇಂದು ಭಾನುವಾರದ ಬಾಡೂಟಕ್ಕಾಗಿ 3 ಗಂಟೆ ಮಾತ್ರ ಮಾಂಸ ಮಾರಾಟ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ. ಜಿಲ್ಲಾಡಳಿತ ಈ ಆದೇಶದ ಅನ್ವಯ ನಗರದ ನಾನ್‍ವೆಜ್ ಮಾರ್ಕೆಟ್‍ನಲ್ಲಿ ಜನಸ್ತೋಮ ನಿರ್ಮಾಣವಾಗಿತ್ತು.

    ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಂಸ ಪ್ರಿಯರನ್ನ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮೂರು ಸರದಿ ಸಾಲಿನಲ್ಲಿ ನಿಲ್ಲಿಸಿ ಮಾಂಸ ಖರೀದಿಗೆ ಅವಕಾಶ ಕಲ್ಪಿಸಿದರು. ಕೆಜಿ ಮಟನ್‍ಗೆ 700 ರೂ.ರಿಂದ 800 ರೂ., ಕೆಜಿ ಚಿಕನ್‍ಗೆ 200 ರೂ.ರಿಂದ 230 ರೂ. ಆಗಿದೆ. ಫಿಶ್ ಕೆಜಿಗೆ 250 ರೂ.ರಿಂದ 300 ರೂಪಾಯಿ. ಹೀಗೆ ಮಾಂಸದ ದರ ಗಗನಕ್ಕೆರಿದೆ.

    ಮಾಂಸ ಮಾರಾಟ ಹೆಸರಿನಲ್ಲಿ ಹಗಲು ದರೋಡೆ ನಿಲ್ಲಬೇಕು. ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಅಂತರ ಕಾಯ್ದುಕೊಳ್ಳಬೇಕು. ಮಟನ್, ಚಿಕನ್, ಫಿಶ್ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಹಣ ಸುಲಿಗೆ ಮಾಡಬಾರದು ಅಂತ ಪೊಲೀಸ್ ಅಧಿಕಾರಿಗಳು ಮಾಂಸ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಪೊಲೀಸರ ಸರ್ಪಗಾವಲಿನಲ್ಲಿ ಜನ ಸರದಿ ಸಾಲಿನಲ್ಲಿ ಮಟನ್, ಚಿಕನ್, ಫಿಶ್ ಖರೀದಿ ಮಾಡಿದರು.

  • ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?

    ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?

    ಬೆಂಗಳೂರು: ಕೊರೊನಾ ವೈರಸ್‍ಗೆ ಈಗಾಗಲೇ ದೇಶಾದ್ಯಂತ ಜನರು ಭಯಭೀತರಾಗಿದ್ದಾರೆ. ಜೊತೆಗೆ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಎಫೆಕ್ಟ್‌ಗಳನ್ನು ಕಾಣುತ್ತಿದ್ದೇವೆ. ಆದರೆ ಈಗ ಈ ಕೊರೊನಾ ನಾನ್ ವೆಜ್ ಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಮಟನ್ ಮತ್ತು ಫಿಶ್ ಕೊಳ್ಳಂಗಿಲ್ಲ, ತಿನ್ನಂಗಿಲ್ಲವೆನ್ನುವಂತಾಗಿದೆ.

    ಯಾವುದೇ ಫುಡ್ ಸ್ಟ್ರೀಟ್‍ಗೆ, ನಾನ್ ವೆಜ್ ಹೊಟೇಲ್‍ಗೆ ಹೋದರೆ ಮೊದಲು ಬಹುತೇಕರು ಮಟನ್, ಫಿಶ್ ರೆಸಿಪಿಗಳನ್ನು ಆರ್ಡರ್ ಮಾಡುತ್ತಿದ್ದರು. ಅದರಲ್ಲೂ ಡಯಟ್ ಮಾಡೋರಿಗೆ, ಜಿಮ್‍ನಲ್ಲಿ ವರ್ಕೌಟ್ ಮಾಡೋರಿಗೆ ಮತ್ತು ಕೂಲ್ ಫುಡ್ ಇಷ್ಟ ಪಡುವವರಿಗೆ ಮಟನ್ ಅಚ್ಚುಮೆಚ್ಚು. ಇನ್ಮುಂದೆ ಫಿಶ್, ಮಟನ್ ತಿನ್ನೋ ಮುನ್ನ ಯೋಚಿಸಬೇಕಾಗಿದೆ.

    ಹೌದು..ಚಿಕನ್, ಕೋಳಿ ತಿಂದರೆ ಕೊರೊನಾ ವೈರಸ್ ಬರುತ್ತೆ ಅಂತ ಇತ್ತೀಚೆಗೆ ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಈ ಫೇಕ್ ಸುದ್ದಿಗೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದೆ. ಹೀಗಾಗಿ ಜನರು ಕೋಳಿ ಮಾಂಸ ತಿನ್ನುವುದನ್ನೇ ಬಿಡುತ್ತಿದ್ದಾರೆ. ಇದರಿಂದ ಚಿಕನ್ ಬೇಡಿಕೆ ಕಡಿಮೆಯಾಗಿದೆ. 130, 140 ಇದ್ದ ಚಿಕನ್ ರೇಟ್ 80, 90ಕ್ಕೆ ಇಳಿದಿದೆ. ಇದರಿಂದ ಮಟನ್ ಹಾಗೂ ಫಿಶ್ ರೇಟ್ ಹೆಚ್ಚಾಗಿದೆ.

    ಕಳೆದ ವಾರದ ಬೆಲೆ ಇವತ್ತಿನ ಬೆಲೆ ನೋಡೋದಾದ್ರೆ:
    ಕಳೆದ ವಾರ ಕೆ.ಜಿ ಮಟನ್‍ಗೆ 550 ರೂ ಇತ್ತು. ಆದರೆ ಇಂದು 700 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಕಳೆದ ವಾರ ಕೆ.ಜಿಗೆ 120ರೂ. ಇದ್ದ ಫಿಶ್ ಇಂದು 200 ರೂಪಾಯಿಗೆ ಜಿಗಿದಿದೆ.

    ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ಹಾಗೂ ಫಿಶ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800 ರೂ.ಗಳಿಗೆ ಏರಿಕೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಇದು ನಾನ್‍ವೆಜ್ ಪ್ರಿಯರಿಗೆ ಬೇಸರವನ್ನುಂಟು ಮಾಡಿದೆ ಎಂದು ನಾನ್ ವೆಜ್ ಪ್ರಿಯ ಮಹಮದ್ ಇದ್ರೀಸ್ ಚೌದ್ರೀ ಹೇಳಿದ್ದಾರೆ.

  • ಭಾನುವಾರದ ಬಾಡೂಟಕ್ಕೆ ಮಾಡಿ ತಿನ್ನಿ ರುಚಿ ರುಚಿಯಾದ ಚೈನೀಸ್ ಫಿಶ್ ಕರ್ರಿ

    ಭಾನುವಾರದ ಬಾಡೂಟಕ್ಕೆ ಮಾಡಿ ತಿನ್ನಿ ರುಚಿ ರುಚಿಯಾದ ಚೈನೀಸ್ ಫಿಶ್ ಕರ್ರಿ

    ಭಾನುವಾರ ಬಂತೆಂದರೆ ಸಾಕು ನಾಲಿಗೆಗೆ ರುಚಿ ರಚಿಯಾದ ಅಡುಗೆಗಳು ಬೇಕೇ ಬೇಕು. ಹಾಗಂತ ರುಚಿ ರುಚಿಯಾದ ಅಡುಗೆಯನ್ನು ಸವಿಯಲು ಹೋಟೆಲ್‍ಗೆ ಹೋಗೋದೇನು ಬೇಕಾಗಿಲ್ಲ. ಬದಲಿಗೆ ನಿಮ್ಮ ಮನೆಯಲ್ಲೇ ಅತ್ಯಂತ ಸರಳವಾದ ಮತ್ತು ರುಚಿ ರುಚಿಯಾದ ಅಡುಗೆಯನ್ನು ಮಾಡಬಹುದು. ಅದಕ್ಕೆ ಈ ಚೈನೀಸ್ ಫಿಶ್ ಕರ್ರಿಯೇ ಸಾಕ್ಷಿ.

    ಚೈನೀಸ್ ಫಿಶ್ ಕರ್ರಿ ಮಾಡಲು ಬೇಕಾಗು ಸಾಮಾಗ್ರಿಗಳು
    * 4 ಮೀನು (ಮಧ್ಯಮಗಾತ್ರದ ಮೀನು)
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
    * ಈರುಳ್ಳಿ 4
    * ಕಾಳು ಮೆಣಸಿನ ಪುಡಿ 2 ಟೇಬಲ್ ಸ್ಪೂನ್
    * ಧನಿಯಾ ಪುಡಿ 2 ಟೇಬಲ್ ಸ್ಪೂನ್
    * ಅರಿಶಿನ ಪುಡಿ ಒಂದು ಚಿಟಿಕೆ
    * ಕೆಂಪು ಮೆಣಸಿನ ಪುಡಿ 2 ಟೇಬಲ್ ಸ್ಪೂನ್
    * ಹುಣಸೆ ಹುಳಿ ರಸ ಅರ್ಧ ಕಪ್
    * ಟೊಮೆಟೊ 2
    * ಉಪ್ಪು
    * ಕೊತ್ತಂಬರಿ ಸೊಪ್ಪು
    * ಕೊಬ್ಬರಿ ಎಣ್ಣೆ 2 ಚಮಚ
    * ಕುಕ್ಕಿಂಗ್ ವೈನ್ ಅರ್ಧ ಟೆಬಲ್ ಸ್ಪೂನ್

    ಚೈನೀಸ್ ಫಿಶ್ ಕರ್ರಿ ಮಾಡುವ ವಿಧಾನ
    * ಮೊದಲು ಒಂದು ಜಾರ್‍ಗೆ ಹೆಚ್ಚಿದ 2 ಈರುಳ್ಳಿ, 1 ಟೇಬಲ್ ಸ್ಪೂನ್ ಧನಿಯಾಪುಡಿ, 1 ಟೇಬಲ್ ಸ್ಪೂನ್ ಕಾಳು ಮೆಣಸಿನ ಪುಡಿ, 1 ಟೇಬಲ್ ಸ್ಪೂನ್ ಕೆಂಪು ಮೆಣಸಿನ ಪುಡಿ ಮತ್ತು ಹೆಚ್ಚಿದ 2 ಟೊಮೆಟೊವನ್ನು ಮಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
    * ಒಂದು ದೊಡ್ಡ ಪ್ಯಾನ್‍ಗೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಆದ ನಂತರ ಅದಕ್ಕೆ ಉಳಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ನಂತರ ಮಿಕ್ಸಿಯಲ್ಲಿ ಕಡೆದ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ.

    * ಅದಕ್ಕೆ ಹುಣಸೆ ರಸವನ್ನು ಹಾಕಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ತಿರುವಿ.
    * ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
    * ನಂತರ ಕುದಿಯುತ್ತಿರುವಾಗ ತೊಳೆದ ಮೀನನ್ನು ಹಾಕಿ ಮಿಕ್ಸ್ ಮಾಡಿ ಪ್ಯಾನ್ ಮುಚ್ಚಳವನ್ನು ಮುಚ್ಚಿ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
    * ನಂತರ ಮೀನು ಬೆಂದ ಬಳಿಕ ಅದನ್ನು ಒಂದು ಬೌಲ್‍ಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಅದಕ್ಕೆ ಮುಚ್ಚಳವನ್ನು ಮುಚ್ಚಿ ಅರ್ಧ ಗಂಟೆ ಬಿಡಿ.
    * ನಂತರ ಆ ಮುಚ್ಚಳವನ್ನು ತೆಗೆದರೆ ಚೈನೀಸ್ ಫಿಶ್ ಕರ್ರಿ ಸವಿಯಲು ಸಿದ್ಧ.