Tag: ಫಿಲ್ಮ್ ಫೆಸ್ಟಿವೆಲ್

  • ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ವರ್ಷದಿಂದಲೇ ಭಾರತ ಸರ್ಕಾರವು ಅತ್ಯುತ್ತಮ ವೆಬ್ ಸೀರೀಸ್ (Web Series) ತಯಾರಕರಿಗೆ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸಚಿವ ಅನುರಾಗ ಠಾಕೂರ್ (Anurag Thakur) ತಿಳಿಸಿದ್ದಾರೆ. ಈ ವರ್ಷದ ನವೆಂಬರ್ 20 ರಿಂದ ನಡೆಯಲಿರುವ ಗೋವಾ ಚಿತ್ರೋತ್ಸವದಲ್ಲಿ (Goa Film Festival) ಪ್ರಶಸ್ತಿ (Award)  ಪ್ರದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.

    ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ವೆಬ್ ಸರಣಿಗಳು ನೋಡುಗರನ್ನು ಸೆಳೆಯುತ್ತಿವೆ. ಅವುಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದೇ ವರ್ಷದಿಂದಲೇ ಪ್ರಶಸ್ತಿ ನೀಡುವುದಾಗಿ ಅವರು ಟ್ವೀಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

    ವೆಬ್ ಸರಣಿಯ ಆಯ್ಕೆಯ ಮಾನದಂಡದ ಬಗ್ಗೆಯೂ ಅವರು ಹೇಳಿದ್ದು, ಅತ್ಯುತ್ತಮ ಕಥೆ, ತಾಂತ್ರಿಕ ಶ್ರೀಮಂತಿಕೆ, ಹೇಳುವ ಕ್ರಮ ಹಾಗೂ ಜನರ ಮೇಲೆ ಅದು ನೀಡಿದ ಪರಿಣಾಮ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.

     

    ಈ ಪ್ರಶಸ್ತಿಯು ಓಟಿಟಿ ವೇದಿಕೆಯ ಮೇಲೆ ಬಂಡವಾಳ ಹೂಡುವವರಿಗೆ ಉತ್ತೇಜಿಸುವ ಜೊತೆಗೆ , ಎಲೆಮರೆಯಂತೆ ಕೆಲಸ ಮಾಡುವ ಪ್ರತಿಭೆಗಳನ್ನೂ ಗುರುತಿಸುವಂತಾಗಲಿದೆ ಎನ್ನುವುದು ಸಚಿವರ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆನಿಮೇಷನ್ ಸಿನಿಮಾವಾದ ಸುತ್ತೂರು ಮಠದ ಇತಿಹಾಸ

    ಆನಿಮೇಷನ್ ಸಿನಿಮಾವಾದ ಸುತ್ತೂರು ಮಠದ ಇತಿಹಾಸ

    13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ಹೊಸದೊಂದು ಪರಂಪರೆಗೆ ನಾಂದಿ ಹಾಡಿತು. ಮೈಸೂರಿನ ಸುತ್ತೂರು ಮಠದ ಸಾವಿರ ವರ್ಷಗಳ ಇತಿಹಾಸವನ್ನು ಕಟ್ಟಿಕೊಡುವ ‘ಸುತ್ತೂರು ಗುರು ಪರಂಪರೆ’ ಹೆಸರಿನ ಆನಿಮೇಷನ್ ಸಿನಿಮಾವನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಈ ಪ್ರದರ್ಶನಕ್ಕೆ ಸುತ್ತೂರು ಮಠದ ಶಿವಮೂರ್ತಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಗಮಿಸಿದ್ದರು. ಇದೇ ಮೊದಲ ಬಾರಿಗೆ ಚಿತ್ರೋತ್ಸವದಲ್ಲಿ ಹೆಸರಾಂತ ಎರಡು ಮಠದ ಸ್ವಾಮಿಗಳು ಆಗಮಿಸಿದ್ದು ವಿಶೇಷ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ಈಗಾಗಲೇ ಈ ಆನಿಮೇಷನ್ ಸಿನಿಮಾ ಜಪಾನ್, ಅಮೆರಿಕಾ, ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನವಾಗಿದೆ. ಹಲವು ಬಹುಮಾನಗಳನ್ನೂ ಪಡೆದಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕರ್ನಾಟಕದಲ್ಲಿ ಪ್ರದರ್ಶನವಾಗಿದ್ದು ವಿಶೇಷ. ಸಿನಿಮಾ ಪ್ರದರ್ಶನದ ನಂತರ ಮಾತನಾಡಿದ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ‘ಚಿತ್ರೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ವಿಸ್ಮಯ ನಡೆದಿದೆ. ಚಿತ್ರೋತ್ಸವಕ್ಕೆ ಈ ಮೂಲಕ ಹೊಸ ಆಯಾಮ ಸಿಕ್ಕಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಪ್ರಂಶಸೆ ವ್ಯಕ್ತ ಪಡಿಸಿದ್ದಾರೆ” ಎಂದರು. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಪ್ರದರ್ಶನದ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಜೈರಾಜ್, ಜಾನಪದತಜ್ಞ ಗೊ.ರು.ಚನ್ನಬಸಪ್ಪ, ಆನಿಮೇಷನ್ ಚಿತ್ರ ನಿರ್ದೇಶಕ ಅಬ್ದುಲ್ ಕರೀಂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ‘ಪೆದ್ರೊ’ ಸಿನಿಮಾಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮನ್ನಣೆ ಸಿಗಲಿಲ್ಲ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಬೇಸರ ವ್ಯಕ್ತ ಪಡಿಸಿದ್ದರು. ಇದನ್ನೂ ಓದಿ : ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಈ ಚಿತ್ರಕ್ಕೆ ಅನ್ಯಾಯವಾಗಿದೆ ಎಂದು ರಿಷಬ್ ಧ್ವನಿ ಎತ್ತುತ್ತಿದ್ದಂತೆಯೇ ಇನ್ನೂ ಅನೇಕ ನಿರ್ದೇಶಕರು ಕೂಡ ರಿಷಬ್ ಪರ ನಿಂತುಕೊಂಡರು. ಆದರೂ, ಚಿತ್ರೋತ್ಸವ ‘ಪೆದ್ರೊ’ ಮರೆತು ಐದು ದಿನಗಳಿಂದ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅದು ಈ ಸಿನಿಮಾ ಮತ್ತು ಚಿತ್ರೋತ್ಸವದ ಕುರಿತಾಗಿಯೇ ಎನ್ನುವುದು ವಿಶೇಷ. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಇನ್ನೇನು ಸದ್ಯದಲ್ಲೇ ಶುರುವಾಗಲಿರುವ ಕೇರಳ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವೆಲ್ ಗೆ ‘ಪೆದ್ರೊ’ ಆಯ್ಕೆಯಾಗಿದೆ. ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಅದು ಪ್ರದರ್ಶನಗೊಳ್ಳಲಿದೆ. ಇದನ್ನೂ ಓದಿ : ಸಂಭಾವನೆ ಹೆಚ್ಚಿಸ್ಕೊಂಡ್ರಂತೆ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಬೆಡಗಿ

    ನಾಗೇಶ್ ಹೆಗ್ಡೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರ್ದೇಶಕರ ತಂದೆಯೇ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೊಂದು ರಿಯಾಲಿಸ್ಟಿಕ್ ಸಿನಿಮಾವಾಗಿದ್ದು, ಈ ಹಿಂದೆ ತೆರೆಕಂಡ ‘ತಿಥಿ’ ಮಾದರಿಯಲ್ಲೇ ಮೂಡಿ ಬಂದಿದೆ.