Tag: ಫಿಲಿಪ್ಪಿನ್ಸ್

  • ಆಸಿಯಾನ್ ಶೃಂಗದಲ್ಲಿ ಡೊನಾಲ್ಡ್ ಟ್ರಂಪ್ ಎಡವಟ್ಟು

    ಆಸಿಯಾನ್ ಶೃಂಗದಲ್ಲಿ ಡೊನಾಲ್ಡ್ ಟ್ರಂಪ್ ಎಡವಟ್ಟು

    ಮನಿಲಾ: ಫಿಲಿಪ್ಪಿನ್ಸ್ ಮನಿಲಾದಲ್ಲಿ ಆಸಿಯಾನ್ ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ.

    ಶೃಂಗದ ವೇಳೆ ಪರಸ್ಪರ ಏಕತೆ ಪ್ರದರ್ಶಿಸುವ ಸಲುವಾಗಿ ವಿಶ್ವದ ಎಲ್ಲ ನಾಯಕರು ಕೈ ಕೈ ಹಿಡಿದುಕೊಂಡು ಗ್ರೂಪ್ ಫೋಟೋಗೆ ಪೋಸ್ ಕೊಡಲು ನಿಂತಿದ್ದರು. ಈ ವೇಳೆ ಡೊನಾಲ್ಡ್ ಟ್ರಂಪ್ ಕೈ ಕೊಡಲು ಪರದಾಡಿದ್ದಾರೆ. ಕೊನೆಗೆ ಕೈಯನ್ನು ನೀಡುವ ಮೂಲಕ ಗ್ರೂಪ್ ಫೋಟೋಗೆ ಪೋಸ್ ನೀಡಿದ್ದಾರೆ.

    ಟ್ರಂಪ್ ಕೈ ಕೊಡಲು ಪರದಾಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಶೃಂಗದಲ್ಲಿ ಭಾರತದ ಪ್ರಧಾನಿ ಮೋದಿ, ಚೀನಾ, ರಷ್ಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕೆನಡಾ, ಜಪಾನ್, ದಕ್ಷಿಣ ಕೊರಿಯಾದ ನಾಯಕರು ಭಾಗವಹಿದ್ದರು.

    ಆಸಿಯಾನ್ ಶೃಂಗದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಅವರು ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

    https://twitter.com/ASEAN/status/930281982046625796

  • ಫಿಲಿಪೈನ್ಸ್ ಅಧ್ಯಕ್ಷರ ಜೊತೆ ಹೊಲದಲ್ಲಿ ರೈತರಾದ್ರು ಪ್ರಧಾನಿ ಮೋದಿ

    ಫಿಲಿಪೈನ್ಸ್ ಅಧ್ಯಕ್ಷರ ಜೊತೆ ಹೊಲದಲ್ಲಿ ರೈತರಾದ್ರು ಪ್ರಧಾನಿ ಮೋದಿ

    ಮನಿಲಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳ್ಳಂಬೆಳಗ್ಗೆ ಹೊಲದಲ್ಲಿ ಹಾರೆ ಹಿಡಿದುಕೊಂಡು ಕೆಲಕಾಲ ರೈತರಾಗಿದ್ದರು.

    ಮೂರು ದಿನಗಳ ಕಾಲ ಫಿಲಿಪ್ಪಿನ್ಸ್ ಪ್ರವಾಸದಲ್ಲಿರುವ ಮೋದಿ ಅವರು ಇಂದು ಲಾಸ್ ಬನೋಸ್‍ನಲ್ಲಿರುವ ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಫಿಲಿಪ್ಪಿನ್ಸ್ ಅಧ್ಯಕ್ಷರ ಜೊತೆಗೂಡಿ ಹಾರೆಯಿಂದ ಹೊಲದಲ್ಲಿ ಮಣ್ಣು ತೆಗೆದು ಒಂದು ಗಿಡವನ್ನು ನೆಟ್ಟಿದ್ದಾರೆ. ನಂತರ ಅಕ್ಕಿ ಪ್ರಯೋಗಾಲಯವನ್ನು ಇಬ್ಬರು ಜಂಟಿಯಾಗಿ ಉದ್ಘಾಟಿಸಿದರು.

    ಐಆರ್‍ಆರ್‍ಐ ಸಂಸ್ಥೆಯು ಉತ್ತಮ ಗುಣಮಟ್ಟದ ಅಕ್ಕಿ ಬೀಜವನ್ನು ಅಭಿವೃದ್ಧಿಪಡಿಸುವ ಹಾಗೂ ಆಹಾರ ಕೊರತೆಯ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ದಕ್ಷಿಣ ಏಷ್ಯಾದ ಮೊದಲ ಪ್ರಾಥಮಿಕ ಕೇಂದ್ರವನ್ನು ವಾರಣಾಸಿಯಲ್ಲಿ ತೆರೆಯಲು ಐಆರ್‍ಆರ್‍ಐ ಮಾಡಿದ್ದ ಪ್ರಸ್ತಾಪಕ್ಕೆ ಜುಲೈನಲ್ಲಿ ಸಂಸತ್ತು ಅನುಮೋದನೆ ನಿಡಿತ್ತು. ವಾರಣಾಸಿ ಸೆಂಟರ್ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅಕ್ಕಿ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

    31 ನೇ ಏಷ್ಯನ್ ಸಮಿತ್ ಸಮಾರಂಭದಲ್ಲಿ ವಿಶ್ವದ ಪ್ರಮುಖ ನಾಯಕರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಅದ್ಧೂರಿಯಾಗಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವು ಮರೆಗು ನೀಡಿತ್ತು. ಮೂರು ದಿನಗಳ ಕಾಲದಲ್ಲಿ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡುಟೆರ್ಟೆ ಮತ್ತು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೆ ದ್ವಿ ಪಕ್ಷೀಯ ಮಾತುಕತೆ ನಡೆಸಲಿದ್ದಾರೆ.