Tag: ಫಿಲಂ ಸಿಟಿ

  • 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    ಮೈಸೂರು: ಇಲ್ಲಿನ ಇಮ್ಮಾವು ಗ್ರಾಮದಲ್ಲಿ (Immavu Village )160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ (Mysuru Film City) ನಿರ್ಮಿಸಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಮೈಸೂರು ನಗರದಲ್ಲಿ ದಸರಾ ಉತ್ಸವ ಅಂಗವಾಗಿ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲು ತೀರ್ಮಾನಿಸಿ ಇಮ್ಮಾವು ಗ್ರಾಮದಲ್ಲಿ 110 ಎಕರೆ ವಿಸ್ತೀರ್ಣದ ಭೂಮಿಯನ್ನು ಮೀಸಲಿರಿಸಲಾಗಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಜಮೀನನ್ನು ಗುರುತಿಸಿ ನೀಡಲು ತೀರ್ಮಾನಿಸಲಾಗಿದೆ. ಮಾದರಿ ಸಿನಿಮಾ ನಗರಿಯನ್ನು ನಿರ್ಮಿಸುವುದು ಸರ್ಕಾರ ಹಾಗೂ ಚಿತ್ರರಂಗದವರ ಉದ್ದೇಶವಾಗಿದ್ದು, ಇನ್ನು ಮೂರು ವರ್ಷದೊಳಗೆ ಫಿಲಂಸಿಟಿಯನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. ಇದನ್ನೂ ಓದಿ: ಅಶೋಕ್ ಹೆಗಲ ಮೇಲೆ ಬಂದೂಕು ಇಟ್ಟು ಸಿದ್ದರಾಮಯ್ಯ ಕಡೆ ಗುರಿ ಹೊಡೆದಿದ್ದಾರೆ- ಸಿಟಿ ರವಿ

    ಚಿತ್ರರಂಗದ (Kannada Film Industry) ಬೆಳವಣಿಗೆಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಾ ಬಂದಿದೆ. ಕನ್ನಡ ಚಲನಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಚಿತ್ರರಂಗ ಬೆಳೆಯಬೇಕು. ಜನರು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿಯೇ ವೀಕ್ಷಿಸಬೇಕು. ದಸರಾ ಚಲನಚಿತ್ರೋತ್ಸವ ಅಕ್ಟೋಬರ್ 04ರಿಂದ 10ರವರೆಗೆ ನಡೆಯಲಿದ್ದು, ದೇಶ ವಿದೇಶಗಳ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳು ಪ್ರದರ್ಶನವಾಗಲಿದೆ. ಚಲನಚಿತ್ರೋತ್ಸವದಲ್ಲಿ ಹಳೆಯ ಹಾಗೂ ಹೊಸ ಸಿನಿಮಾಗಳನ್ನು ವೀಕ್ಷಿಸುವ ಸುವರ್ಣ ಅವಕಾಶವಿದ್ದು, ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: Breaking | ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್

    ನಟ ನಿರ್ಮಾಪಕ ದಿವಂಗತ ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ಬಾರಿ ದಸರಾ ಚಿತ್ರೋತ್ಸವವನ್ನು ದ್ವಾರಕೀಶ್ ಅವರ ಗೌರವಾರ್ಥವಾಗಿ ಹಮ್ಮಿಕೊಳ್ಳಲಾಗಿದೆ. ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ವ್ಯಕ್ತಿ. ದ್ವಾರಕೀಶ್ ಅವರ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದ ಸಿಎಂ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ದ್ವಾರಕೀಶ್ ಅವರ ಜೊತೆ ಪ್ರಯಾಣಿಸಿದ ನೆನಪನ್ನು ಸ್ಮರಿಸಿ ಅವರೊಂದಿಗಿದ್ದ ಸ್ನೇಹ ಬಾಂಧವ್ಯವನ್ನು ಮೆಲುಕು ಹಾಕಿದರು. ಇದನ್ನೂ ಓದಿ: ದಸರಾ, ದೀಪಾವಳಿ ಹಬ್ಬಕ್ಕೆ ರೈಲ್ವೆ ಇಲಾಖೆ ಬಂಪರ್ ಗಿಫ್ಟ್

  • ಯಶ್ ಬೇಡಿಕೆ ಬೆನ್ನಲ್ಲೇ ಬೆಂಗ್ಳೂರಲ್ಲಿ ಫಿಲಂ ಸಿಟಿಗೆ 500 ಕೋಟಿ ರೂ. ಘೋಷಣೆ

    ಯಶ್ ಬೇಡಿಕೆ ಬೆನ್ನಲ್ಲೇ ಬೆಂಗ್ಳೂರಲ್ಲಿ ಫಿಲಂ ಸಿಟಿಗೆ 500 ಕೋಟಿ ರೂ. ಘೋಷಣೆ

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಬೆಂಗಳೂರಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಮಾಡಲು 500 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.

    ಈ ಮೂಲಕ ನಟ ರಾಕಿಂಗ್ ಸ್ಟಾರ್ ಯಶ್ ಬೇಡಿಕೆಯ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗುತ್ತಿರುವುದು ಚಿತ್ರರಂಗಕ್ಕೆ ಖುಷಿ ನೀಡಿದೆ. ಫೆಬ್ರವರಿ 26 ರಂದು ನಡೆದ ಚಲನಚಿತ್ರೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ್ದ ಯಶ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದರು.

    ಮನವಿಯೇನು..?
    ಕರ್ನಾಟಕದಲ್ಲಿ ಹುಡುಗರಿಗೆ ತುಂಬಾನೇ ಕನಸು, ಹುರುಪು, ಶಕ್ತಿಯಿದೆ. ಹೀಗಾಗಿ ದೊಡ್ಡದಾಗಿ ಒಂದು ಸ್ಟುಡಿಯೋ ಕಟ್ಟಿಸಿ ಬಿಡಿ. ಕಾಲ ಕಾಲದಿಂದ ಬರೀ ಅಲ್ಲೊಂದಷ್ಟು ಎಕ್ರೆ ಬಂತಂತೆ, ಇಲ್ಲೊಂದಷ್ಟು ಎಕ್ರೆ ಬಂತಂತೆ. ಈ ಜಾಗ, ಆ ಜಾಗ ಅಂತ ಹೋಗ್ತಾನೇ ಇದೆ ಸರ್. ಎಲ್ಲೋ ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಹೀಗಾಗಿ ನಮಗೆ ಶಕ್ತಿ ಕೊಡಿ. ತೆರಿಗೆ ರೂಪದಲ್ಲಿ ಎಷ್ಟು ವಾಪಸ್ ಕೊಡ್ತೀವಿ ಅಂದ್ರೆ ತುಂಬಾ ಖುಷಿಯಾಗಿ ಬಿಡಬೇಕು. ಇದರಿಂದ ಇಡೀ ಉದ್ಯಮನೂ ಬೆಳೆಯುತ್ತದೆ. 70ನೇ ದಶಕದಲ್ಲಿ ಕನ್ನಡ ಚಿತ್ರರಂಗದ ಒಂದು ಯುಗ ಇತ್ತು ಅಂತ ನೀವು ಹೇಳಿದ್ರಿ. ಇದೀಗ ಆ ಕೆಲಸ ಮಾಡುವಂತಹ ಸಾಕಷ್ಟು ಹುಡುಗರು ಇಲ್ಲೇ ಇರುತ್ತಾರೆ. ಆದರೆ ಅವರಿಗೆ ಶಕ್ತಿ ತುಂಬಬೇಕಷ್ಟೆ ಎಂದು ಹೇಳಿದ್ದರು.

    70ರ ದಶಕದಲ್ಲಿ ಎಲ್ಲವೂ ಚೆನ್ನೈನಲ್ಲಿ ನಡೆಯುತ್ತಿತ್ತು. ಹೀಗಾಗಿ ಅವರಿಗೆ ಕಲಿಯೋದಕ್ಕೆ ಜಾಗ ಇತ್ತು. ಬೇರೆ ಬೇರೆ ಅಸಿಸ್ಟೆಂಟ್ ಡೈರೆಕ್ಟರುಗಳಾಗಿ ಸಿನಿಮಾ ಕೆಲಸ ತಿಳಿದುಕೊಳ್ಳಲು ಸಾಕಷ್ಟು ಅವಕಾಶಗಳು ಕೂಡ ಇತ್ತು. ಆದ್ರೆ ಈಗ ಎಲ್ಲರೂ ಏಕಲವ್ಯಗಳಾಗಿ ಬಿಟ್ಟಿದ್ದೇವೆ. ನಾವೇ ಎಲ್ಲೋ ಸಿನಿಮಾ ನೋಡಿಕೊಂಡು ಕಲಿತು ನಂತರ ಬೇರೆಯವರ ಜೊತೆ ಸ್ಪರ್ಧೆ ಮಾಡುತ್ತಿದ್ದೇವೆ. ಹೀಗಾಗಿ ಸ್ಟುಡಿಯೋ ಮಾಡುವ ಮೂಲಕ ಶಕ್ತಿ ತುಂಬಿ ಎಂದು ಬಿಎಸ್‍ವೈ ಅವರಿಗೆ ಯಶ್ ಮನವಿ ಮಾಡಿಕೊಂಡಿದ್ದರು.

  • ಕುರುಕ್ಷೇತ್ರ ಶೂಟಿಂಗ್‍ ನಿಂದ ಬಂದ ಮೇಲೆ ಬೇಸರದಲ್ಲಿದ್ದಾರೆ ದರ್ಶನ್!

    ಕುರುಕ್ಷೇತ್ರ ಶೂಟಿಂಗ್‍ ನಿಂದ ಬಂದ ಮೇಲೆ ಬೇಸರದಲ್ಲಿದ್ದಾರೆ ದರ್ಶನ್!

    ಬೆಂಗಳೂರು: ಕೋಟಿ ಹೃದಯಗಳನ್ನು ಗೆದ್ದ ಸ್ಯಾಂಡಲ್‍ವುಡ್ ಸಾರಥಿ ಈಗ ಬೇಸರದಲ್ಲಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ದೂರದ ಹೈದರಾಬಾದ್‍ನ ರಾಮೋಜಿರಾವ್ ಸ್ಟುಡಿಯೋದಲ್ಲಿ ಬೀಡು ಬಿಟ್ಟಿದ್ದ ದರ್ಶನ್ ಈಗ ತಾಯಿನಾಡಿಗೆ ವಾಪಸ್ ಬಂದಿದ್ದಾರೆ. ಸದ್ಯ ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ ರಾಮೋಜಿ ಫಿಲಂ ಸಿಟಿಯಂತ ಶೂಟಿಂಗ್ ತಾಣ ಕರ್ನಾಟಕದಲ್ಲಿ ನಿರ್ಮಾಣವಾಗದ್ದಕ್ಕೆ ಬೇಸರಗೊಂಡಿದ್ದಾರೆ.

    ರಾಮೋಜಿ ರಾವ್ ಅಂತ ಸುಸರ್ಜಿತ ಶೂಟಿಂಗ್ ಸ್ಪಾಟ್ ಕರ್ನಾಟಕದಲ್ಲಿ ಇಲ್ಲವಲ್ಲ. ಅನಿವಾರ್ಯವಾಗಿ ಇಲ್ಲಿಗೆ ಬಂದು ಶೂಟಿಂಗ್ ಮಾಡಬೇಕಾಯ್ತು ಎಂದು ದರ್ಶನ್ ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ನಮ್ಮಲಿರೋದು ಕೆಲವೇ ಕೆಲವು ಸ್ಟುಡಿಯೋಗಳು. ಅಲ್ಲಿ ದೊಡ್ಡ ದೊಡ್ಡ ಸೆಟ್ ಹಾಕೋದು ಕಷ್ಟ. ಪೌರಾಣಿಕ ಸಿನಿಮಾಗಳು ಮಾಡೋದು ಇನ್ನೂ ಕಷ್ಟ ಎಂದು ದರ್ಶನ್ ಹೇಳಿದ್ದಾರೆ.

    ಸಿನಿಮಾ ಕೆಲಸಗಳಿಗೆ ಎಂದು ಕೊಟ್ಟಿದ್ದ ಹೆಸರಘಟ್ಟದ 240 ಎಕರೆ ಜಾಗ ಸದುಪಯೋಗ ಆಗದೆ ಇರೋದರ ಬಗ್ಗೆ ದರ್ಶನ್‍ಗೆ ಬೇಸರವಾಗಿದೆ. 2005ರಲ್ಲಿ ಕೊಟ್ಟಿದ್ದ ಈ ಜಾಗ ನಾನಾ ಕಾರಣಗಳಿಂದ ಕನ್ನಡ ಚಿತ್ರರಂಗದ ಕೈ ತಪ್ಪಿತು. ಈಗ ಮೈಸೂರಿನಲ್ಲಿ 100 ಎಕರೆ ಜಾಗದಲ್ಲಿ ಚಿತ್ರನಗರಿ ಶುರುವಾಗಲಿದೆ. ಆದರೆ ಯಾವಾಗ ಕನ್ನಡದ ಚಿತ್ರನಗರಿ ಕೆಲಸ ಆಗುತ್ತೆ ಎನ್ನೋದಕ್ಕೆ ಕಾಲವೇ ಉತ್ತರಿಸಬೇಕು.

    ನಮ್ಮಲ್ಲಿ ಅನುಕೂಲಗಳು ಇದ್ದರೂ ಬೇರೆ ಊರಿನಲ್ಲಿ ಕನ್ನಡ ಸಿನಿಮಾ ನಿರ್ಮಿಸುತ್ತಿದ್ದೇವೆ. ರಾಜ್ಯದಲ್ಲಿ ಕನ್ನಡ ಸಿನಿಮಾ ಕೋಟಿ ರೂ. ವ್ಯವಹಾರ ನಡೆಸುತ್ತಿದ್ದರೂ ಒಂದು ಅತ್ಯುತ್ತಮ ಸ್ಟುಡಿಯೋ ನಿರ್ಮಾಣವಾಗದ ವಿಚಾರ ದರ್ಶನ್ ಅವರನ್ನು ಕಾಡುತ್ತಿದೆ.