Tag: ಫಿರಂಗಿ

  • ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿಯಿಂದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ – ಹೊವಿಟ್ಜರ್ ವಿಶೇಷತೆ ಏನು?

    ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿಯಿಂದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ – ಹೊವಿಟ್ಜರ್ ವಿಶೇಷತೆ ಏನು?

    ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಕೆಂಪು ಕೋಟೆಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ವೇಳೆ ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾದ ಎರಡು ‘ಹೊವಿಟ್ಜರ್’ ಫಿರಂಗಿಗಳಿಂದ ’21 ಗನ್ ಸೆಲ್ಯೂಟ್’ ಮಾಡಲಾಯಿತು.

    ಈ ಫಿರಂಗಿಯನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ), ಶಸ್ತ್ರಾಸ್ತ್ರ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಎಆರ್‌ಡಿಇ) ನೇತೃತ್ವದ ವಿಜ್ಞಾನಿಗಳು ಹಾಗೂ ಫಿರಂಗಿ ಅಧಿಕಾರಿಗಳ ತಂಡ ತಯಾರಿಸಿದೆ.

    ಕಳೆದ ವರ್ಷದವರೆಗೆ 21 ಗನ್ ಸೆಲ್ಯೂಟ್ ಅನ್ನು ಬ್ರಿಟಿಷ್ ನಿರ್ಮಿತ 7 ವಿಂಟೇಜ್ 25 ಪೌಂಡರ್ ಗನ್ ಬಳಸಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಮೊದಲ ಸಲ ಭಾರತದಲ್ಲೇ ತಯಾರಾದ 2 ಹೋವಿಟ್ಜರ್ ಗನ್‌ಗಳನ್ನು ಬಳಸಲಾಗಿದೆ.

    ಏನಿದರ ವಿಶೇಷತೆ?
    ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್(ಎಟಿಎಜಿಎಸ್) ಎಂದೂ ಕರೆಯಲಾಗುವ ಫಿರಂಗಿ, ವಿಶ್ವದ ಲಾಗ್ ರೇಂಜ್ ಫಿರಂಗಿಗಳಲ್ಲಿ ಒಂದಾಗಿದೆ. ಲಾಂಗ್ ರೇಂಜ್ ಫಿರಂಗಿಗಳಿಗೆ ಸಾಮಾನ್ಯವಾಗಿ ಹೋವಿಟ್ಜರ್ ಎಂದೇ ಕರೆಯಲಾಗುತ್ತದೆ. ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನವು ಯಶಸ್ಸನ್ನು ಪಡೆದಿದೆ: ರಾಜ್ಯಪಾಲ

    ಈ ಬಗ್ಗೆ ವಿವರಿಸಿದ ಡಿಆರ್‌ಡಿಒ ಸಂಪನ್ಮೂಲ ಹಾಗೂ ನಿರ್ವಾಹಕ ಸಂಗಮ್ ಸಿನ್ಹಾ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಬಳಸಲಾಗಿರುವ ಫಿರಂಗಿ ಭಾರತಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಇದು ವಿಶ್ವದ ಅತಿ ಉದ್ದ ಶ್ರೇಣಿಯ ಫಿರಂಗಿಯಾಗಿದ್ದು, 45 ರಿಂದ 48 ಕಿ.ಮೀ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.

    ಮೊದಲ ಬಾರಿಗೆ ಇದನ್ನು ಭಾರತದಲ್ಲಿಯೇ ತಯಾರಿಸಲಾಗಿರುವುದು ದೊಡ್ಡ ವಿಚಾರ. ಸ್ವದೇಶೀ ಫಿರಂಗಿಯನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ 21 ಗನ್ ಸೆಲ್ಯೂಟ್‌ಗಾಗಿ ಬಳಸಲಾಗುತ್ತಿದೆ. ಇದನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದುಇದು ಭಾರತೀಯ ಸೇನೆಗೆ ದೊಡ್ಡ ಬಲ ನೀಡಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಅಜಾದಿ ಗೌರವ್ ಯಾತ್ರೆ

    Live Tv
    [brid partner=56869869 player=32851 video=960834 autoplay=true]

  • ದೇಶದ ಪ್ರಥಮ ಸ್ವದೇಶಿ ಬೋಫೋರ್ಸ್ ಸೇನೆಗೆ ಸೇರ್ಪಡೆ: ಧನುಷ್ ವಿಶೇಷತೆ ಏನು? ವಿಡಿಯೋ ನೋಡಿ

    ದೇಶದ ಪ್ರಥಮ ಸ್ವದೇಶಿ ಬೋಫೋರ್ಸ್ ಸೇನೆಗೆ ಸೇರ್ಪಡೆ: ಧನುಷ್ ವಿಶೇಷತೆ ಏನು? ವಿಡಿಯೋ ನೋಡಿ

    ನವದೆಹಲಿ: ದೇಶೀಯ ಬೋಫೋರ್ಸ್ ಎಂದೇ ಖ್ಯಾತಿ ಪಡೆದಿರುವ ಅತ್ಯಾಧುನಿಕ ಫಿರಂಗಿ ಗನ್ ‘ಧನುಷ್’ ಸೋಮವಾರ ಸೇನೆಗೆ ಸೇರ್ಪಡೆಯಾಗಿದೆ.

    ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 6 ಧನುಷ್ ಫಿರಂಗಿಗಳು ಸೇನೆಗೆ ಸೇರ್ಪಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಶೇ.81ರಷ್ಟು ಭಾಗಗಳನ್ನು ದೇಶದಲ್ಲಿ ಉತ್ಪಾದಿಸಲಾಗಿದೆ. ‘ಧನುಷ್’, ವಿದೇಶಿ ಬೋಫೋರ್ಸ್ ಫಿರಂಗಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. 2019ರ ವೇಳೆಗೆ ಶೇ.91 ರಷ್ಟು ಭಾಗಗಳು ಭಾರತದಲ್ಲೇ ಉತ್ಪಾದನೆಯಾಗಲಿದೆ.

    ವಿಶೇಷತೆ ಏನು?
    ಸ್ವೀಡನ್ನಿನ ಬೋಫೋರ್ಸ್ 27 ಕಿ.ಮೀ. ದೂರದವರೆಗೆ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದ್ದರೆ ಧನುಷ್ 38 ಕಿ.ಮೀ ದೂರದ ಗುರಿಯನ್ನು ಧ್ವಂಸ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ದೇಶದ ಪ್ರಥಮ ಸ್ವದೇಶಿ ಗನ್ ಇದಾಗಿದ್ದು ಶಸ್ತ್ರಾಸ್ತ್ರ ಕಾರ್ಖಾನೆಗಳ ಮಂಡಳಿ ಫಿರಂಗಿಯನ್ನು ಸೇನೆಗೆ ಹಸ್ತಾಂತರಿಸಿದೆ.

    155ಎಂಎಂ/45 ಕ್ಯಾಲಿಬರ್ ಟೋವ್ಡ್ ಗನ್ ಯಾವುದೇ ಭೂಪ್ರದೇಶದಲ್ಲಿ ಬಳಸಬಹುದಾಗಿದೆ. ಹಗಲು, ರಾತ್ರಿ ಸೇರಿದಂತೆ ಪರ್ವತ, ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಸುಲಭವಾಗಿ ಬಳಕೆ ಮಾಡಬಹುದು. ಅತ್ಯಂತ ಹೆಚ್ಚು ಸೆಕೆ ಇರುವ ಝಾನ್ಸಿ, ಪೋಖ್ರಾನ್ ಅತ್ಯಂತ ಚಳಿ ಇರುವ ಸಿಕ್ಕಿಂ ಮತ್ತು ಲೇಹ್ ನಲ್ಲೂ ಈ ಫಿರಂಗಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

    ಡಿಆರ್‌ಡಿಒ, ಬಿಜಿಕ್ಯುಎ, ಬಿಇಎಲ್ ಸೇರಿದಂತೆ ಹಲವು ಸಂಸ್ಥೆಗಳು ಈ ಫಿರಂಗಿ ನಿರ್ಮಾಣಕ್ಕೆ ಸಹಕಾರ ನೀಡಿವೆ. ನ್ಯಾವಿಗೇಷನ್ ಬೇಸ್ಡ್ ಸೈಟಿಂಗ್ ಸಿಸ್ಟಮ್ ಅಟೋ ಲೇಯಿಂಗ್ ಫೆಸಿಲಿಟಿ, ಆನ್ ಬೋರ್ಡ್ ಬ್ಯಾಲಿಸ್ಟಿಕ್ ಕಂಪ್ಯೂಟೇಷನ್, ಡೇ ಆಂಡ್ ನೈಟ್ ಡೈರೆಕ್ಟ್ ಫೈರಿಂಗ್ ಸಿಸ್ಟಮ್ ಸೆಲ್ಪ್ ಪ್ರೊಪಲ್ಶನ್ ಯೂನಿಟ್ ಮುಂತಾದ ವ್ಯವಸ್ಥೆ ಫಿರಂಗಿಯಲ್ಲಿದೆ.

    ಒಂದು ಧನುಷ್ ನಿರ್ಮಾಣಕ್ಕೆ 14.50 ಕೋಟಿ ರೂ. ವೆಚ್ಚವಾಗಲಿದ್ದು, ಒಟ್ಟು 114 ‘ಧನುಷ್’ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ. 7 ಸಾವಿರ ಕೆಜಿ ತೂಕದ ಈ ಫಿರಂಗಿಯನ್ನು 6 ರಿಂದ 8 ಮಂದಿ ಸೈನಿಕರು ನಿಯಂತ್ರಿಸಬಹುದು.

    2017ರಲ್ಲಿ ಇದರ ಪ್ರಯೋಗಿಕ ಪರೀಕ್ಷೆಗಳು ಆರಂಭಗೊಂಡು 2018ರ ಮಧ್ಯ ಭಾಗದಲ್ಲಿ ವೇಳೆ ಇದರ ಅಂತಿಮ ಪರೀಕ್ಷೆ ಮುಕ್ತಾಯಗೊಂಡಿತ್ತು. 2019ರ ವೇಳೆಗೆ ಈ ಗನ್ ಉತ್ಪಾದನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.

  • ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯದಲ್ಲಿ ಬಾಂಬ್ ಸ್ಫೋಟ 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ

    ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯದಲ್ಲಿ ಬಾಂಬ್ ಸ್ಫೋಟ 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ

    ಮುಂಬೈ: ಮಹಾರಾಷ್ಟ್ರದ ವಾರ್ಧಾ ಬಳಿಯಿರುವ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯ ಪುಲ್‍ಗಾಂವ್ ನಲ್ಲಿ ನಡೆದ ಸ್ಫೋಟದಿಂದಾಗಿ 6 ಮಂದಿ ಸಾವನ್ನಪ್ಪಿ 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಪುಲ್‍ಗಾಂವ್ ನಲ್ಲಿ ಸಂಭವಿಸಿದ ಸ್ಫೋಟದಿಂದಾಗಿ, ಶಸ್ತ್ರಾಸ್ತ್ರ ಕಾರ್ಖಾನೆಯ ಸಿಬ್ಬಂದಿ ಸೇರಿದಂತೆ 5 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಇವರಲ್ಲಿ 4 ಮಂದಿ ಸ್ಥಳದಲ್ಲೇ ಮೃತಪಟ್ಟರೇ, ಇನ್ನಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಇವರಲ್ಲದೇ 11 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    ಮಧ್ಯಪ್ರದೇಶದ ಕಮಾರಿಯಾ ಶಸ್ತ್ರಾಸ್ತ್ರ ಕಾರ್ಖಾನೆಯಿಂದ 23 ಎಂಎಂ ಫಿರಂಗಿಗಳನ್ನು ವಾರ್ಧಾ ಬಳಿಯಿರುವ ಪುಲ್‍ಗಾಂವ್ ನ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಮಂಗಳವಾರ ಬೆಳಗ್ಗೆ 7.15ರ ಸುಮಾರಿಗೆ ಕಾರ್ಮಿಕನ ಕೈಯಿಂದ ಬಿದ್ದ ಫಿರಂಗಿಯೊಂದು ಏಕಾಏಕಿ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಖಿಲ್ ಪಿಂಗ್‍ಕಲ್ ಹೇಳಿದ್ದಾರೆ.

    ಈ ಬಗ್ಗೆ ಸೇನಾ ಅಧಿಕಾರಿಗಳು ಮಾತನಾಡಿ, ಕಮಾರಿಯಾ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ತಂದಿದ್ದ ಫಿರಂಗಿಗಳನ್ನು ಕಂಟ್ರಾಕ್ಟರ್ ಹಾಗೂ ಕಾರ್ಮಿಕರ ನೆರವಿನಿಂದ ಪುಲ್‍ಗಾಂವ್ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಈ ವೇಳೆ ಅವಧಿ ಮುಗಿದ ಶೆಲ್ ವೊಂದು ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

    ಪುಲ್‍ಗಾಂವ್ ಶಸ್ತ್ರಾಸ್ತ್ರ ಸಂಗ್ರಹಾಲಯ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಯುದ್ಧ ಸಾಮಗ್ರಿ ಸಂಗ್ರಹಾಲಯವಾಗಿದೆ. 2016ರಲ್ಲಿಯೂ ಇದೇ ಪುಲ್‍ಗಾಂವ್ ಸೇನಾ ಸಂಗ್ರಹಾಲಯದಲ್ಲಿ ಇಂತಹುದೇ ದುರ್ಘಟನೆ ಸಂಭವಿಸಿ 16 ಮಂದಿ ಸಾವಿಗೀಡಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews