Tag: ಫಿನ್‍ಲ್ಯಾಂಡ್

  • ಪಾವೊ ನೂರ್ಮಿ ಗೇಮ್ಸ್‌ನಿಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಔಟ್

    ಪಾವೊ ನೂರ್ಮಿ ಗೇಮ್ಸ್‌ನಿಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಔಟ್

    ಹೆಲ್ಸಿಂಕಿ/ನವದೆಹಲಿ: ಇದೇ ಜೂನ್ 13 ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಪಾವೊ ನೂರ್ಮಿ ಗೇಮ್ಸ್-2023 (Paavo Nurmi Games 2023) ರಿಂದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ (Neeraj Chopra) ಹೊರಗುಳಿಸಿದ್ದಾರೆ. ಅಲ್ಲದೆ, ಮಾಜಿ ವಿಶ್ವ ಚಾಂಪಿಯನ್ ಜರ್ಮನಿಯ ಜೊಹಾನ್ಸ್ ವೆಟರ್ (Johannes Vetter) ಕೂಡ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

    ನೀರಜ್ ಚೋಪ್ರಾ ಅವರು ಕಳೆದ ತಿಂಗಳು ತರಬೇತಿ ಸಮಯದಲ್ಲಿ ಅನುಭವಿಸಿದ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಜೂನ್ 4ರಂದು ನೆದರ್‌ಲೆಂಡ್‌ನಲ್ಲಿ ನಡೆದ FBK ಗೇಮ್ಸ್‌ನಿಂದಲೂ ಹೊರಗುಳಿದಿದ್ದರು. ಇದನ್ನೂ ಓದಿ: ಮತ್ತೊಂದು ಇತಿಹಾಸ – ಡೈಮಂಡ್‌ ಟ್ರೋಫಿ ಗೆದ್ದ ನೀರಜ್‌ ಚೋಪ್ರಾ

    NEERAJ

    ಪಾವೊ ನೂರ್ಮಿ ಗೇಮ್ಸ್ 1957 ರಿಂದ ಟುರ್ಕ್‌ನಲ್ಲಿ ನಡೆಯುವ ವಾರ್ಷಿಕ ಫಿನ್ನಿಷ್ ಅಥ್ಲೆಟಿಕ್ಸ್ ಕೂಟವಾಗಿದೆ. ಈ ಸ್ಪರ್ಧೆಯು ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಡ್ ಕಾರ್ಯಕ್ರಮ ಎಂದೇ ಹೆಸರುವಾಸಿಯಾಗಿದೆ.

    ನೀರಜ್ ಚೋಪ್ರಾ ಕಳೆದ ವರ್ಷ ಫಿನ್‌ಲ್ಯಾಂಡ್ ಟೂರ್ನಿಯಲ್ಲಿ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಬಾಚಿಕೊಂಡಿದ್ದರು. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ ಪರಮ ವಿಶಿಷ್ಟ ಸೇವಾ ಪದಕ

    NEERAJ

    ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಲಾಸನ್‌ನಲ್ಲಿ ನಡೆದ ಡೈಮಂಡ್ ಲೀಗ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 89.04 ಮೀ. ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದು, ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ನೀರಜ್ ಪಾತ್ರರಾಗಿದ್ದರು.

  • ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

    ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

    ಹೆಲ್ಸಿಂಕಿ: ಫಿನ್‌ಲ್ಯಾಂಡ್‌ನ ನಿರ್ಗಮಿತ ಪ್ರಧಾನಿ (Finland PM) ಸನ್ನಾ ಮರಿನ್‌ (Sanna Marin) ವಿಚ್ಛೇದನ ಘೋಷಣೆ ಮಾಡಿದ್ದು, ಪತಿ ಮಾರ್ಕಸ್‌ ರೈಕೊನೆನ್‌ ಅವರೊಂದಿಗೆ ಜೊತೆಯಾಗಿ ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    19‌ ವರ್ಷಗಳ ನಮ್ಮ ಸುದೀರ್ಘ ಜೀವನಕ್ಕೆ ಹಾಗೂ ನಮ್ಮ ಪುಟ್ಟ ಮಗಳಿಗೆ ಕೃತಜ್ಞರಾಗಿರುತ್ತೇವೆ. ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ. ತಮ್ಮ 5 ವರ್ಷದ ಮಗಳನ್ನು ಇಬ್ಬರೂ ಸಮಾನವಾಗಿ ನೋಡಿಕೊಳ್ಳುವುದಾಗಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಮ್ರಾನ್‌ ಖಾನ್‌ ಬೆನ್ನಲ್ಲೇ ಪಾಕ್‌ ವಿದೇಶಾಂಗ ಮಾಜಿ ಸಚಿವ ಅರೆಸ್ಟ್‌ – ಅಜ್ಞಾತ ಸ್ಥಳಕ್ಕೆ ಶಿಫ್ಟ್‌

    2020ರಲ್ಲಿ ಕೋವಿಡ್‌ (Covid) ಬಿಕ್ಕಟ್ಟಿನ ವೇಳೆ ರೈಕೊನೆನ್‌ ಹಾಗೂ ಮರಿನ್‌ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದರು.

    ಮರಿನ್ ಮತ್ತು ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಕಳೆದ ತಿಂಗಳು ಫಿನ್‌ಲ್ಯಾಂಡ್‌ನ ಸಂಸತ್ತಿನ ಚುನಾವಣೆಯಲ್ಲಿ ರಾಷ್ಟ್ರೀಯ ಒಕ್ಕೂಟದ ಪಕ್ಷ ಮತ್ತು ರಾಷ್ಟ್ರೀಯವಾದಿ ಫಿನ್ಸ್ ಪಕ್ಷದ ಎದುರು ಪರಾಭವಗೊಂಡಿತ್ತು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

    2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮರಿನ್‌ ವಿಶ್ವದ ಕಿರಿಯ ಪ್ರಧಾನಿ ಹಾಗೂ ಹೊಸ ನಾಯಕರಿಗೆ ರೋಲ್‌ ಮಾಡೆಲ್‌ ಎನಿಸಿಕೊಂಡಿದ್ದರು.

  • ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್

    ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್

    ಹೆಲ್ಸಿಂಕಿ: ಫಿನ್‌ಲ್ಯಾಂಡ್‌ನ ಮಹಿಳಾ ಪ್ರಧಾನಿ 36 ವರ್ಷದ ಸನ್ನಾ ಮರಿನ್ ತಮ್ಮ ಸೆಲೆಬ್ರಿಟಿ ಸ್ನೇಹಿತರೊಂದಿಗಿನ ಪಾರ್ಟಿಯಲ್ಲಿ ಮಾದಕ ನೃತ್ಯ ಮಾಡಿದ್ದು, ಈ ವೀಡಿಯೋ ಈಗ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

    ಸನ್ನಾ ಮರಿನ್ ಅವರ ಮಾದಕ ನೃತ್ಯದ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಇದರಿಂದ ಅವರು ಮಾದಕ ವಸ್ತುಗಳನ್ನು ಬಳಕೆ ಮಾಡಿರುವುದಾಗಿ ಡ್ರಗ್ ಪರೀಕ್ಷೆಗೆ ಒಳಗಾಗುವಂತೆ ಇತರರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು

    ಇತ್ತೀಚೆಗೆ ಪ್ರಧಾನಿ ಅವರು ಕೋವಿಡ್‌ಗೆ ತುತ್ತಾಗಿದ್ದರು. ಹೀಗಿದ್ದೂ ಅವರು ಕ್ವಾರಂಟೈನ್‌ನಲ್ಲಿ ಇರದೇ ಹೊರಗೆ ಸುತ್ತಾಡುತ್ತಿದ್ದರು ಎಂದು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ಖಾಸಗಿ ವೀಡಿಯೋ ಸೋರಿಕೆಯಾಗಿದೆ. ಸದ್ಯ ಖಾಸಗಿ ವೀಡಿಯೋ ಪ್ರಧಾನಿಯವರ ಮುಜುಗರಕ್ಕೆ ಕಾರಣವಾಗಿದೆ.

    ವೀಡಿಯೋದಲ್ಲಿ ಕಂಡುಬಂದಿರುವ ಗಣ್ಯ ವ್ಯಕ್ತಿಗಳಲ್ಲಿ ಫಿನ್ನಿಷ್ ಗಾಯಕಿ ಅಲ್ಮಾ ಮತ್ತು ಅವರ ಸಹೋದರಿ ಅನ್ನಾ, ರಾಪರ್ ಪೆಟ್ರಿ ನೈಗಾರ್ಡ್, ಟಿವಿ ಹೋಸ್ಟ್ ಟಿನ್ನಿ ವಿಕ್ಸ್‌ಟ್ರೋಮ್‌, ರೇಡಿಯೊ ಹೋಸ್ಟ್ ಕರೋಲಿನಾ ಟುಮಿನೆನ್ ಮತ್ತು ಅವರದ್ದೇ ಆದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಇದ್ದಾರೆ. ವಿಶೇಷವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಫಿನ್‌ಲ್ಯಾಂಡ್ NATO (ನ್ಯಾಟೋ)ಗೆ ಸೇರಲು ತಟಸ್ಥ ಧೋರಣೆ ತಾಳಿದ್ದು, ರಷ್ಯಾದೊಂದಿಗೆ ಸೆಣಸಾಡುತ್ತಿದೆ. ಈ ಹೊತ್ತಿನಲ್ಲಿ ಪ್ರಧಾನಿಯವರ ನಡವಳಿಕೆಯು ನಾಯಕರಿಗೆ ಶೋಭಾಯಮಾನವಲ್ಲ ಎಂಬ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯ ಬಯಸುತ್ತೆ: ಪಾಕ್‌ ಪ್ರಧಾನಿ

    ಇತ್ತೀಚೆಗೆ ಸ್ಥಳೀಯ ಮಾಧ್ಯಮವೊಂದು ಮರಿನ್ ಅವರನ್ನು ಶಾಂತ ರಾಜಕಾರಣಿ ಎಂದು ಹೊಗಳಿತ್ತು. ಆದರೆ ಇತ್ತೀಚಿನ ಅವರ ನಡವಳಿಕೆಯಿಂದ ಎಲ್ಲೆಡೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

    ಇದಕ್ಕೆ ಸ್ಪಷ್ಟನೆ ನೀಡಿರುವ ಮರಿನ್, ಇದರಲ್ಲಿ ಮುಚ್ಚಿಡಲು ಏನೂ ಇಲ್ಲ. ನಾನು ಮಾದಕ ದ್ರವ್ಯವನ್ನೂ ಸೇವಿಸಿಲ್ಲ. ನೃತ್ಯ ಮಾಡಿದ್ದೇನೆ, ಹಾಡಿದ್ದೇನೆ. ಕಾನೂನು ಬದ್ಧ ಕೆಲಸಗಳನ್ನೇ ಪಾರ್ಟಿಯಲ್ಲಿ ಮಾಡಿದ್ದೇನೆ. ಆದರೆ ಹೆಚ್ಚು ಕುಡಿದಿರಲೂ ಇಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಮರಿನ್ 2019 ರಲ್ಲಿ ತಮ್ಮ 34ನೇ ಹರೆಯದಲ್ಲಿ ಪ್ರಧಾನಿಯಾಗಿದ್ದು ವಿಶ್ವದ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ

    ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ

    ಹೆಲ್ಸಿಂಕಿ: ಫಿನ್‍ಲ್ಯಾಂಡ್‍ನಲ್ಲಿ ನಡೆಯುತ್ತಿರುವ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2022ರಲ್ಲಿ ಭಾಗವಹಿಸಿ 100 ಮೀಟರ್ ಓಟದ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ 94ರ ಹರೆಯದ ಭಗವಾನಿ ದೇವಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

    ಭಗವಾನಿ ದೇವಿ 94ರ ಹರೆಯದಲ್ಲಿ 100 ಮೀಟರ್ ಓಟವನ್ನು 24.74 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದಲ್ಲದೆ ಶಾಟ್‍ಪುಟ್‍ನಲ್ಲಿ ಕಂಚಿನ ಪದಕ ಪಡೆದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ವೈರಲ್ ಆಗುತ್ತಿದೆ SKY ಸಿಡಿಸಿದ ಬ್ಯಾಕ್‍ವರ್ಡ್ ಪಾಯಿಂಟ್ ಸಾಲಿಡ್ ಸಿಕ್ಸ್

    ಈ ಹಿಂದೆ ಭಗವಾನಿ ದೇವಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 3 ಚಿನ್ನದ ಪದಕ ಪಡೆದು ಮಿಂಚಿದ್ದರು. ಬಳಿಕ 94ರ ಹರೆಯದಲ್ಲಿ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದರು. ಇದೀಗ ಫಿನ್‍ಲ್ಯಾಂಡ್‍ನಲ್ಲಿ ಕೂಡ ಭಗವಾನಿ ದೇವಿ ಚಿನ್ನದ ಬೇಟೆ ಮುಂದುವರಿಸಿದ್ದಾರೆ.

    ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 100 ಮೀಟರ್ ಓಟ, ಜಾವಲಿನ್ ಥ್ರೋ, ಶಾಟ್‍ಪುಟ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆ ಇದೀಗ ಅದೆಷ್ಟೋ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದು ಭಗವಾನಿ ದೇವಿ ಸಾಧನೆಗೆ ಕೇಂದ್ರ ಕ್ರೀಡಾ ಸಚಿವಾಲಯ ಶುಭಕೋರಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಯ ಜಾಹೀರಾತು ನಿಲ್ಲಿಸಿದ ವಿವೋ

    Live Tv
    [brid partner=56869869 player=32851 video=960834 autoplay=true]

  • ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?

    ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?

    ಬ್ರಸೆಲ್ಸ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ಯುರೋಪ್ ಪ್ರವಾಸದಲ್ಲಿ ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದರು.

    ಮೋದಿ ಅವರು ಟ್ವೀಟ್ ಮಾಡುವ ಮೂಲಕ ವಿಷಯವನ್ನು ತಿಳಿಸಿದ್ದು, ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ ಫೋಟೋ ಮತ್ತು ಔತಣಕ್ಕೆ ಕುಳಿತುಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಮೋದಿ ಅವರು ಫಿನ್‍ಲ್ಯಾಂಡ್ ಪ್ರಧಾನಿ ಜೊತೆ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಮೋದಿ ಅವರು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ 

    ಮೋದಿ ಅವರು ಟ್ವೀಟ್‍ನಲ್ಲಿ, ಇಂದು ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ್ದು ತುಂಬಾ ಅನುಕೂಲವಾಯಿತು. ಭಾರತ-ಫಿನ್‍ಲ್ಯಾಂಡ್ ಡಿಜಿಟಲ್ ಪಾಲುದಾರಿಕೆ, ವ್ಯಾಪಾರ ಪಾಲುದಾರಿಕೆ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸು ಕುರಿತು ಮಾತುಕತೆ ಮಾಡಿದ್ದು, ಅದಕ್ಕೆ ಅಪಾರ ಸಾಮರ್ಥ್ಯವಿದೆ. ನಮ್ಮ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸುವ ಮಾರ್ಗಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಬರೆದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ಮೋದಿ ಅವರು ನಾರ್ವೆ, ಸ್ವೀಡನ್ ಮತ್ತು ಐಸ್‍ಲ್ಯಾಂಡ್‍ನ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳ ಸರಣಿಯನ್ನು ನಡೆಸಿದರು. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ