Tag: ಫಿಟ್ ಇಂಡಿಯಾ

  • ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ

    ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದೆ.

    ನರೇಂದ್ರ ಮೋದಿ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಹುಟ್ಟುಹಾಕಿ, ವಿಶ್ವದರ್ಜೆಯಲ್ಲಿ ಅಥ್ಲೆಟಿಕ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂಬುದು ಅವರ ಬಹುದೊಡ್ಡ ಆಸೆಯಾಗಿದೆ. ಈ ಹಿನ್ನೆಲೆ ಇಂದು ಮೋದಿ ಅವರು ಉತ್ತರ ಪ್ರದೇಶದ ಮೀರತ್‍ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಅಡಿಪಾಯ ಹಾಕಿದರು. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಈ ವಿಶ್ವವಿದ್ಯಾಲಯವನ್ನು ಮೀರತ್‍ನ ಸರ್ಧಾನ ಪಟ್ಟಣದ ಸಲಾವಾ ಮತ್ತು ಕೈಲಿ ಪ್ರದೇಶಗಳಲ್ಲಿ 700 ಕೋಟಿ ರೂ. ಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಜಿಮ್‍ಗೆ ತೆರಳಿದ ಮೋದಿ ಅವರು ದೇಶಾದ್ಯಂತ ‘ಫಿಟ್ ಇಂಡಿಯಾ’ ಎಂಬ ಸಂದೇಶವನ್ನು ಹರಡುವ ಸಲುವಾಗಿ ಸ್ವತಃ ಅವರೇ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಮೋದಿ ಅಭಿಮಾನಿಗಳು ಖುಷ್ ಆಗಿದ್ದಾರೆ.

    ಈ ವೇಳೆ ಮಾತನಾಡಿದ ಮೋದಿ ಅವರು, 700 ಕೋಟಿ ರೂಪಾಯಿ ಮೌಲ್ಯದ ಈ ವಿಶ್ವವಿದ್ಯಾಲಯವು ಯುವಕರಿಗೆ ಅಂತಾರಾಷ್ಟ್ರೀಯ ಕ್ರೀಡಾ ಸೌಲಭ್ಯಗಳನ್ನು ಒದಗಿಸುತ್ತದೆ. ಪ್ರತಿ ವರ್ಷ 1000ಕ್ಕೂ ಹೆಚ್ಚು ಹುಡುಗಿಯರು ಮತ್ತು ಹುಡುಗರು ಇಲ್ಲಿಂದ ಪದವಿ ಪಡೆಯುತ್ತಾರೆ ಎಂದು ತಿಳಿಸಿದರು.

    ಏನಿದರ ವಿಶೇಷತೆ?
    ಈ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಹಾಕಿ, ಫುಟ್‍ಬಾಲ್ ಮೈದಾನಗಳು, ಬ್ಯಾಸ್ಕೆಟ್‍ಬಾಲ್, ವಾಲಿಬಾಲ್, ಹ್ಯಾಂಡ್‍ಬಾಲ್ ಮತ್ತು ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಕೋರ್ಟ್, ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ, ಹಲವು ಹಾಲ್ ಮತ್ತು ಸೈಕ್ಲಿಂಗ್ ಟ್ರ್ಯಾಕ್ ಎಲ್ಲ ರೀತಿಯ ಕ್ರೀಡೆಗಳಿಗೂ ಇಲ್ಲಿ ಸ್ಥಳವಕಾಶವನ್ನು ನೀಡಲಾಗುತ್ತೆ. ಈ ವಿಶ್ವವಿದ್ಯಾಲಯದಲ್ಲಿ ಆರ್ಚರಿ, ವೇಟ್‍ಲಿಫ್ಟಿಂಗ್, ಶೂಟಿಂಗ್, ಕ್ಯಾನೋಯಿಂಗ್, ಕಯಾಕಿಂಗ್, ಜಿಮ್ನಾಸ್ಟಿಕ್ಸ್ ಮತ್ತು ಸ್ಕ್ವಾಷ್ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದಂತೆ ಹಲವು ಸೌಲಭ್ಯಗಳು ಲಭ್ಯವಿರುತ್ತವೆ. ಇದನ್ನೂ ಓದಿ: ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್, ತಿರುಕನ ರೀತಿಯೇ ಇರಲಿ: ಆರ್.ಅಶೋಕ್

    ಘೋಷಣೆಯ ಪ್ರಕಾರ, ವಿಶ್ವವಿದ್ಯಾನಿಲಯವು 540 ಮಹಿಳೆಯರು ಮತ್ತು 540 ಪುರುಷರನ್ನು ಒಳಗೊಂಡಂತೆ 1,080 ಕ್ರೀಡಾಪಟುಗಳಿಗೆ ತರಬೇತಿ ನೀಡಲು ಸಾಧ್ಯವಾಗುತ್ತದೆ.

  • 30 ಬಸ್ಕಿ ಹೊಡೆದ್ರೆ ರೈಲ್ವೇ ಪ್ಲಾಟ್‍ಫಾರಂ ಟಿಕೆಟ್ ಫ್ರೀ

    30 ಬಸ್ಕಿ ಹೊಡೆದ್ರೆ ರೈಲ್ವೇ ಪ್ಲಾಟ್‍ಫಾರಂ ಟಿಕೆಟ್ ಫ್ರೀ

    ನವದೆಹಲಿ: ದೇಶಾದ್ಯಂತ ಫಿಟ್ ಇಂಡಿಯಾ ಉತ್ತೇಜಿಸಲು ಕೇಂದ್ರ ಸರ್ಕಾರ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇದರ ಭಾಗವಾಗಿ 30 ಬಸ್ಕಿ ಹೊಡೆದರೆ ಫ್ರೀ ಪ್ಲಾಟ್‍ಫಾರಂ ಟಿಕೆಟ್ ನೀಡುವ ಯೋಜನೆಯನ್ನು ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

    ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತವಾಗಿ ಪ್ಲಾಟ್‍ಫಾರಂ ಟಿಕೆಟ್ ಕೊಡುವಂತಹ ಮೆಷಿನ್‍ನ್ನು ಇರಿಸಲಾಗಿದೆ. ಈ ಮಷಿನ್ ಮುಂದೆ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಅದು ಫ್ರೀಯಾಗಿ ಟಿಕೆಟ್ ಕೊಡುತ್ತದೆ.

    ಪ್ರಯಾಣಿಕರೊಬ್ಬರು ಫ್ರೀ ಟಿಕೆಟ್ ಪಡೆಯುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿರು ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಫಿಟ್‍ನೆಸ್‍ನೊಂದಿಗೆ ಉಳಿತಾಯ. ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಫಿಟ್‍ನೆಸ್ ಉತ್ತೇಜಿಸಲು ಒಂದು ವಿಶಿಷ್ಟ ಪ್ರಯೋಗವನ್ನು ಮಾಡಲಾಗಿದೆ. ಇಲ್ಲಿ ಇರಿಸಲಾದ ಯಂತ್ರದ ಮುಂದೆ ಬಸ್ಕಿ ಹೊಡೆದರೆ ಪ್ಲಾಟ್‍ಫಾರಂ ಟಿಕೆಟ್‍ಗಳನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಸದೃಢ ಭಾರತವನ್ನು ರೂಪಿಸುವ ಜೊತೆಗೆ ಭಾರತದ ನಾಗರಿಕರ ಆರೋಗ್ಯದ ಕಾಳಜಿಯಿಂದ ಫಿಟ್ ಇಂಡಿಯಾ ಯೋಜನೆ ಜಾರಿಗೆ ತಂದಿದ್ದಾರೆ. ಅದರ ಭಾಗವಾಗಿ ಪಿಯೂಷ್ ಗೋಯೆಲ್ ಅವರು ಫ್ರೀ ಪ್ಲಾಟ್‍ಫಾರಂ ಟಿಕೆಟ್ ಯೋಜನೆ ಜಾರಿಗೆ ತಂದಿದ್ದಾರೆ.

    ನೂತನ ಯೋಜನೆ ಈಗಾಗಲೇ ದೆಹಲಿಯಲ್ಲಿ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರೆ ರೈಲ್ವೆ ನಿಲ್ದಾಣದಲ್ಲಿ ಯಂತ್ರವನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

  • ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲು ಬಳಸಿ- ಫಿಟ್ ಇಂಡಿಯಾಗೆ ಮೋದಿ ಚಾಲನೆ

    ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲು ಬಳಸಿ- ಫಿಟ್ ಇಂಡಿಯಾಗೆ ಮೋದಿ ಚಾಲನೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಫಿಟ್ ಇಂಡಿಯಾ ಅಭಿಯಾನ ಚಾಲನೆ ನೀಡಿ ರಾಷ್ಟ್ರದ ಜನರು ಸದೃಢರಾಗುವಂತೆ ಕೋರಿಕೊಂಡಿದ್ದಾರೆ.

    ಇಂದು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಶಸ್ಸಿಗಾಗಿ ಲಿಫ್ಟ್ ಅಲ್ಲ, ಮೆಟ್ಟಿಲುಗಳನ್ನು ಬಳಸಿ ಫಿಟ್ ಆಗಿರಬೇಕು ಎಂದು ಕರೆಕೊಟ್ಟರು.

    ಸಚಿವರು, ಶಾಲಾ ಮಕ್ಕಳು ಮತ್ತು ಸೆಲೆಬ್ರಿಟಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದು ಬೋರ್ಡ್ ರೂಮ್ ಆಗಿರಲಿ ಬಾಲಿವುಡ್ ಆಗಿರಲಿ ನಾವು ಫಿಟ್ ಆಗಿರಬೇಕು. ನಮಗೆ ಫಿಟ್ ಆದ ದೇಹವಿದ್ದರೆ. ಮನಸ್ಸು ನಿಯಂತ್ರಣದಲ್ಲಿರುತ್ತದೆ. ಈ ಫಿಟ್ ಇಂಡಿಯಾ ಚಾಲೆಂಜ್ ಅನ್ನು ಎಲ್ಲರೂ ಸ್ವೀಕರಿಸಬೇಕು. ‘ಸ್ವಚ್ಛ ಭಾರತ್’ ಅಭಿಯಾನದಂತೆ ಇದನ್ನು ಎಲ್ಲರೂ ಸ್ವೀಕಾರ ಮಾಡಿ ಎಂದು ಜನರಲ್ಲಿ ಮೋದಿ ಕೋರಿಕೊಂಡರು.

    ನಾವು ಫಿಟ್‍ನೆಸ್ ಅನ್ನು ಜೀವನದ ಮಂತ್ರವಾಗಿ ಮಾಡಿಕೊಳ್ಳಬೇಕು. ನಾವು ಆಹಾರ ಪದ್ಧತಿ ಮತ್ತು ದೇಹದ ಫಿಟ್‍ನೆಸ್ ಬಗ್ಗೆ ಮಾತನಾಡುತ್ತೇವೆ ಆದರೆ ಊಟದ ಟೇಬಲ್ ಬಳಿ ಬಂದಾಗ ನಾವು ಅದನ್ನು ಪಾಲಿಸುವುದಿಲ್ಲ. ಈಗಿನ ನಮ್ಮ ಯಂತ್ರಚಾಲಿತ ಜೀವನ ಶೈಲಿಗೆ ನಮ್ಮ ತಂತ್ರಜ್ಞಾನವು ಬಹುದೊಡ್ಡ ಕಾರಣ. ಕೆಲವು ದಶಕಗಳ ಹಿಂದೆ, ಒಬ್ಬ ಸಾಮಾನ್ಯ ವ್ಯಕ್ತಿಯು ದಿನದಲ್ಲಿ 8-10 ಕಿ.ಮೀ ನಡೆಯುತ್ತಿದ್ದ, ಸೈಕ್ಲಿಂಗ್ ಮಾಡುತ್ತಿದ್ದ ಅಥವಾ ಓಡುತ್ತಿದ್ದನು. ಆದರೆ ಈಗ ತಂತ್ರಜ್ಞಾನದಿಂದ ಈ ಎಲ್ಲಾ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ನಾವು ಈಗ ಕಡಿಮೆ ನಡೆಯುತ್ತೇವೆ ಎಂದು ಮೋದಿ ಹೇಳಿದರು.

    ತಮ್ಮ ದೈನಂದಿನ ದಿನಚರಿಯಲ್ಲಿ ದಿನ ಯೋಗ ಮಾಡುವ ಮೋದಿ ಅವರು ಜನರು ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾವು ಹಿಂದಿನ ಕಾಲದಲ್ಲಿ 60 ವರ್ಷ ಆದ ನಂತರ ಹೃದಯಾಘಾತವಾಗುತ್ತದೆ ಎಂದು ಕೇಳಿದ್ದವು. ಆದರೆ ಈಗ 30, 40 ವರ್ಷಕ್ಕೆ ಜನರು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ. ನಮ್ಮ ಜೀವನದಲ್ಲಿ ನಾವು ಮಾಡಿಕೊಂಡ ಸಣ್ಣ ಬದಲಾವಣೆ ನಮ್ಮ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

    ಈ ಫಿಟ್ ಇಂಡಿಯಾ ಚಳುವಳಿಯು ರಾಷ್ಟ್ರೀಯ ಕ್ರೀಡಾದಿನವನ್ನು ಸೂಚಿಸುತ್ತದೆ. ರಾಷ್ಟ್ರದ ಜನರ ದೈನಂದಿನ ದಿನದಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.