Tag: ಫಿಂಗರ್ ಪ್ರಿಂಟ್

  • ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳ ಫ್ರಿಂಗರ್‌ ಪ್ರಿಂಟ್‌ ಮ್ಯಾಚ್‌

    ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳ ಫ್ರಿಂಗರ್‌ ಪ್ರಿಂಟ್‌ ಮ್ಯಾಚ್‌

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ‌ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಕ್ರೈಂ ಸೀನ್ ಫಿಂಗರ್ ಪ್ರಿಂಟ್ ಜೊತೆ ಹತ್ತಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ (Finger Print) ಹೋಲಿಕೆಯಾಗಿರುವ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ವಿಧಿ ವಿಜ್ಞಾನ ಪರೀಕ್ಷೆಯಲ್ಲಿ (FSL) ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದೆ. ಇದನ್ನೂ ಓದಿ: WWEಗೆ ನಿವೃತ್ತಿ ಹೇಳಿದ ಜಾನ್‌ ಸೀನಾ

    ಕ್ರೈಂ ಸೀನ್, ಶವ ಬಿಸಾಕಿದ ಜಾಗ, ಶವ ಸಾಗಾಟ ಮಾಡಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿ, ಮೃತನ‌ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಾಗಾಟ ಮಾಡಿದ ಕಾರ್, ಆರೋಪಿಗಳ ಬಟ್ಟೆಗಳ ಮೇಲಿನ‌ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿತ್ತು. ಇದನ್ನೂ ಓದಿ: ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ

    ಎಫ್‌ಎಸ್‌ಎಲ್‌ ತಜ್ಞರನ್ನ ಬಳಸಿ ಫಿಂಗರ್ ಪ್ರಿಂಟ್ ಸಂಗ್ರಹಿಸಲಾಗಿತ್ತು. ಆರೋಪಿಗಳ ಬಂಧನದ ಬಳಿಕ ಎಲ್ಲರ ಫಿಂಗರ್ ಪ್ರಿಂಟ್ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು.

     

    ತನಿಖೆ ವೇಳೆ ಪೊಲೀಸರು ಪ್ರಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸದೇ ಇದ್ದರೆ ಆರೋಪಿಗಳು ಪ್ರಕರಣದಿಂದ ಖುಲಾಸೆ ಆಗುತ್ತಾರೆ. ಈ ಪ್ರಕರಣದಲ್ಲಿ ಫಿಂಗರ್‌ ಪ್ರಿಂಟ್‌ ಹೋಲಿಕೆಯಾಗಿದು ಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಇದು ಪ್ರಮುಖ ಸಾಕ್ಷ್ಯವಾಗಲಿದೆ.

  • ಫಿಂಗರ್ ಪ್ರಿಂಟ್ ಮೂಲಕ ವಾಟ್ಸಪ್ ಓಪನ್ ಮಾಡಿ – ಈ ಫೀಚರ್ ಹೇಗೆ ಸೆಟ್ ಮಾಡಬೇಕು?

    ಫಿಂಗರ್ ಪ್ರಿಂಟ್ ಮೂಲಕ ವಾಟ್ಸಪ್ ಓಪನ್ ಮಾಡಿ – ಈ ಫೀಚರ್ ಹೇಗೆ ಸೆಟ್ ಮಾಡಬೇಕು?

    ಬೆಂಗಳೂರು: ಫಿಂಗರ್ ಪ್ರಿಂಟ್ ಮೂಲಕ ಇನ್ನು ಮುಂದೆ ವಾಟ್ಸಪ್ ಓಪನ್ ಮಾಡಬಹುದು. ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್, ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಆಂಡ್ರಾಯ್ಡ್ ಬಳಕೆದಾರರಿಗೆ ಈಗ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ನೀಡಿದೆ.

    ಈ ಮೊದಲು ಐಓಎಸ್ ಬಳಕೆದಾರರಿಗೆ ವಾಟ್ಸಪ್ ಈ ವೈಶಿಷ್ಟ್ಯವನ್ನು ನೀಡಿತ್ತು. ಆದರೆ ಈಗ ಆಂಡ್ರಾಯ್ಡ್ ಬೀಟಾ ಅವೃತ್ತಿಯ ಅಪ್ಲಿಕೇಶನ್ ಬಳಸುವ ಬಳಕೆದಾರರಿಗೆ ಈ ಫೀಚರ್ ನೀಡಿದೆ.

    ಬಳಸೋದು ಹೇಗೆ?
    ವಾಟ್ಸಪ್ ಅಪ್ಲಿಕೇಶನ್ ಹೋಗಿ ಅಲ್ಲಿ ಕಾಣುತ್ತಿರುವ ಮೂರು ಚುಕ್ಕೆಯನ್ನು ಒತ್ತಿ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ನಂತರ ಅಕೌಂಟ್ ಹೋಗಿ. ಬಳಿಕ ಪ್ರೈವೆಸಿ ಹೋದಾಗ ಕೆಳಗಡೆ ಫಿಂಗರ್ ಪ್ರಿಂಟ್ ಲಾಕ್ ಕಾಣುತ್ತದೆ.

    ಇಲ್ಲಿ ಅನ್ ಲಾಕ್ ಆಯ್ಕೆಯನ್ನು ಎನೆಬಲ್ ಮಾಡಿ. ಎನೆಬಲ್ ಮಾಡಿದ ಕೂಡಲೇ ಅಲ್ಲಿ ಆಟೋ ಮ್ಯಾಟಿಕ್ ಲಾಕ್ ಎಷ್ಟು ಸಮಯದ ಒಳಗಡೆ ಆಗಬೇಕು ಎನ್ನುವ ಆಯ್ಕೆಯನ್ನು ನಿಮ್ಮ ಮುಂದೆ ತೋರಿಸುತ್ತದೆ. ಇಮಿಡಿಯೆಟ್ಲಿ ಅಥವಾ ಒಂದು ನಿಮಿಷ ಅಥವಾ 30 ನಿಮಿಷದ ನಂತರ ಲಾಕ್ ಆಗಬೇಕೇ ಎಂದು ಕೇಳುತ್ತದೆ. ಇಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಆರಿಸಿಕೊಂಡರೆ ಫಿಂಗರ್ ಪ್ರಿಂಟ್ ಲಾಕ್ ಆನ್ ಆಗುತ್ತದೆ. ಪ್ರತ್ಯೇಕವಾಗಿ ಮತ್ತೆ ನೀವು ಕೈ ಬೆರಳನ್ನು ಒತ್ತಬೇಕಾಗಿಲ್ಲ. ಈಗಾಗಲೇ ನೀವು ಯಾವೆಲ್ಲ ಕೈ ಬೆರಳಿನ ಅಚ್ಚನ್ನು ಫೋನಿಗೆ ನೀಡಿದ್ದಿರೋ ಆ ಎಲ್ಲ ಕೈ ಬೆರಳನ್ನು ಬಳಸಿಕೊಂಡು ವಾಟ್ಸಪ್ ಲಾಕ್ ಓಪನ್ ಮಾಡಬಹುದು.

     

     

    ಎಲ್ಲರಿಗೂ ಸಿಗಲ್ಲ:
    ಹೆಚ್ಚಿನ ಜನ ಬಳಸುತ್ತಿರುವ ವಾಟ್ಸಪ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ ನಿಮಗೆ ಈ ಫೀಚರ್ ಸಿಗುವುದಿಲ್ಲ. ನೀವು ವಾಟ್ಸಪ್ ಬೀಟಾ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ ಮಾತ್ರ ಈ ಫೀಚರ್ ಸಿಗುತ್ತದೆ.

    ವಾಟ್ಸಪ್ ಯಾವುದೇ ಹೊಸ ವಿಶೇಷತೆಗಳನ್ನು ಮೊದಲು ಬೀಟಾ ಆವೃತ್ತಿಗೆ ಪರಿಚಯಿಸುತ್ತದೆ. ಬಳಿಕ ಎಲ್ಲ ಬಳಕೆದಾರರಿಗೆ ಆ ಸೇವೆಯನ್ನು ವಿಸ್ತರಿಸುತ್ತದೆ. ಈ ಆವೃತ್ತಿಯ ವಾಟ್ಸಪ್ ಬೇಕಿದ್ದಲ್ಲಿ ಈಗ ಬಳಕೆ ಮಾಡುತ್ತಿರುವ ವಾಟ್ಸಪ್ ಅನ್ನು ಅನ್ ಇನ್ ಸ್ಟಾಲ್ ಮಾಡಿ ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸಪ್ ಬೀಟಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಬೇಕಾಗುತ್ತದೆ.

  • ಇನ್ನು ಮುಂದೆ ಫೋನ್ ಲಾಕ್ ಓಪನ್ ಆದ್ರೂ ವಾಟ್ಸಪ್ ತೆರೆಯಲ್ಲ!

    ಇನ್ನು ಮುಂದೆ ಫೋನ್ ಲಾಕ್ ಓಪನ್ ಆದ್ರೂ ವಾಟ್ಸಪ್ ತೆರೆಯಲ್ಲ!

    ಕ್ಯಾಲಿಫೋರ್ನಿಯಾ: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ವಿಶೇಷತೆ ಸೇರಿಸಲು ಸಿದ್ಧತೆ ನಡೆಸುತ್ತಿದೆ.

    ಪ್ರಸ್ತುತ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು ಓದಬಹುದು. ಪ್ರೈವೆಸಿ ಇಲ್ಲದ ಕಾರಣ ಬಳಕೆದಾರರ ಮಾಹಿತಿ ಮತ್ತು ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ರೀತಿಯ ದುರುಪಯೋಗ ಆಗುವುದನ್ನು ತಪ್ಪಿಸಲು ಮತ್ತು ಪ್ರೈವೆಸಿಗಾಗಿ ವಾಟ್ಸಪ್ ಫಿಂಗರ್ ಪ್ರಿಂಟ್ ದೃಢೀಕರಣವನ್ನು ಸೇರಿಸಲು ಮುಂದಾಗಿದೆ.

    ಈಗ ಹೇಗೆ ಫೋನ್ ಲಾಕ್ ತೆಗೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಬಳಕೆಯಾಗುತ್ತದೋ ಅದೇ ರೀತಿಯಾಗಿ ವಾಟ್ಸಪ್ ಓಪನ್ ಮಾಡಬೇಕಾಗುತ್ತದೆ. ಈ ವಿಶೇಷತೆ ಬೇಕಾಗಿದ್ದಲ್ಲಿ ಸೆಟ್ಟಿಂಗ್ಸ್ –> ಆಕೌಂಟ್–> ಪ್ರೈವೆಸಿ ಹೋಗಿ ಫಿಂಗರ್ ಪ್ರಿಂಟ್ ಸೆನ್ಸರ್ ಎನೆಬಲ್ ಮಾಡಿಕೊಳ್ಳಬೇಕಾಗುತ್ತದೆ.

    ಆರಂಭದಲ್ಲಿ ಈ ವಿಶೇಷತೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು ನಂತರ ಐಓಎಸ್ ಬಳಕೆದಾರರಿಗೆ ಸಿಗಲಿದೆ. ಆಂಡ್ರಾಯ್ಡ್ ಮಾರ್ಶ್ ಮೆಲ್ಲೋ ಮತ್ತು ನಂತರ ಬಿಡುಗಡೆಯಾಗಿರುವ ಎಲ್ಲ ಆಪರೇಟಿಂಗ್ ಸಿಸ್ಟಂಗಳಿಗೆ ಅಪ್‍ಡೇಟ್ ಆಗಲಿರುವ ವಾಟ್ಸಪ್ ಆ್ಯಪ್ ಬೆಂಬಲ ನೀಡಲಿದೆ ಎಂದು ವಾಟ್ಸಪ್‍ಬೀಟಾಇನ್ಫೋ ವರದಿ ಮಾಡಿದೆ.

    ಫಿಂಗರ್ ಪ್ರಿಂಟ್ ಸೆನ್ಸರ್ ವಾಟ್ಸಪ್ ಖಾತೆ ತೆರೆಯಲು ಮಾತ್ರ ಬಳಕೆಯಾಗುತ್ತದೆ ಹೊರತು ಪ್ರತ್ಯೇಕವಾಗಿ ವ್ಯಕ್ತಿಗಳ ಚಾಟ್ ಓಪನ್ ಮಾಡಲು ಬಳಕೆಯಾಗುವುವುದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv