Tag: ಫಾರ್ಮಾ ಕಂಪನಿ

  • ದೀಪಾವಳಿ ಗಿಫ್ಟ್‌ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

    ದೀಪಾವಳಿ ಗಿಫ್ಟ್‌ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

    ಚಂಡೀಗಢ: ಉದ್ಯೋಗಿಗಳ ಕಾರ್ಯಗಳನ್ನು ಗುರುತಿಸುವ ವಿನೂತನ ಮಾದರಿಯನ್ನು ಕಳೆದ ಕೆಲ ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಔಷಧ ತಯಾರಿಕಾ ಕಂಪನಿಯ ಮಾಲೀಕ ಎಂ.ಕೆ. ಭಾಟಿಯಾ, ಈ ದೀಪಾವಳಿಗೂ (Deepavali) ಕಂಪನಿ ನೌಕರರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಬೋನಸ್, ಸ್ವೀಟ್ ಬದಲಿಗೆ ದುಬಾರಿ ಕಾರುಗಳನ್ನೇ ಉಡುಗೊರೆಯಾಗಿ (Diwali Festive Gift) ನೀಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

    ಹರಿಯಾಣದ ಖ್ಯಾತ ಉದ್ಯಮಿ ಹಾಗೂ ಮಿಟ್ಸ್ ಕಾರ್ಟ್ ಸಂಸ್ಥೆಯ ಮಾಲೀಕ ಎಂ.ಕೆ ಭಾಟಿಯಾ (MK Bhatia) ನೌಕರರಿಗೆ ಈ ಬಾರಿಯೂ ದುಬಾರಿ ಕಾರು ಗಿಫ್ಟ್ ಮಾಡೋ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ 12 ಜನ ನೌಕರರಿಗೆ ವಿವಿಧ ಬಣ್ಣದ ಟಾಟಾ ಪಂಚ್ ಕಾರುಗಳನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಶ್ರೀರಾಮನಗರಿಯಲ್ಲಿ ಝಗಮಗಿಸಿದ ದೀಪೋತ್ಸವ – 26 ಲಕ್ಷ ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ

    ಈವರೆಗೂ 51 ನೌಕರರಿಗೆ ಎಸ್‌ಯುವಿ ಕಾರುಗಳ ಉಡುಗೊರೆ ನೀಡಿದ್ದಾರೆ. ಉದ್ಯಮದೊಂದಿಗೆ ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿರುವ ಭಾಟಿಯಾ ಹರಿಯಾಣದ ಪಂಚಕುಲಾದಲ್ಲಿ ಮಿಟ್ಸ್‌ ಕಾರ್ಟ್‌ ಎಂಬ ಕಂಪನಿ ಹೊಂದಿದ್ದಾರೆ. ಪ್ರತಿ ಸಲ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ನೀಡ್ತಾ ಬಂದಿದ್ದಾರೆ. ಇದನ್ನೂ ಓದಿ: ಬೆಳಕಿನ ಹಬ್ಬ ಎಲ್ಲರ ಜೀವನವನ್ನು ಸಾಮರಸ್ಯ, ಸಂತೋಷ, ಸಮೃದ್ಧಿಯಿಂದ ಬೆಳಗಲಿ – ದೀಪಾವಳಿಗೆ ಮೋದಿ ವಿಶ್

    ಅದೇ ರೀತಿ ಈ ಬಾರಿಯೂ ಉದ್ಯೋಗಿಗಳನ್ನು ಕಾರ್ ಶೋರೂಮ್‌ಗೆ ಕರೆದೊಯ್ದು ಹೊಸ ಕಾರುಗಳನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ಕಾರು ಸ್ವೀಕರಿಸಿದ ಸಿಬ್ಬಂದಿ ಶೋರೂಮ್‌ನಿಂದ ಕಚೇರಿವರೆಗೂ ಕಾರು ಓಡಿಸುತ್ತಾ ಬಂದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

  • ಕಳಪೆ ಗುಣಮಟ್ಟದ ಔಷಧಿ ತಯಾರಿಕೆ – 18 ಕಂಪನಿಗಳ ಪರವಾನಗಿ ರದ್ದು

    ಕಳಪೆ ಗುಣಮಟ್ಟದ ಔಷಧಿ ತಯಾರಿಕೆ – 18 ಕಂಪನಿಗಳ ಪರವಾನಗಿ ರದ್ದು

    – 20 ರಾಜ್ಯಗಳ 76 ಕಂಪನಿಗಳಲ್ಲಿ ಡಿಸಿಜಿಐ ತಪಾಸಣೆ

    ನವದೆಹಲಿ: ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧ ತಯಾರಿಸುತ್ತಿದ್ದ ಕಂಪನಿಗಳ (Pharmaceutical Companies) ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ (Government Of India) ಹಾಗೂ ರಾಜ್ಯ ಸರ್ಕಾರಗಳು, 18 ಕಂಪನಿಗಳ ಪರವಾನಗಿಯನ್ನ ರದ್ದುಗೊಳಿಸಿವೆ.

    ಬರೋಬ್ಬರಿ 20 ರಾಜ್ಯಗಳ 76 ಕಂಪನಿಗಳಿಗೆ ಸೇರಿದ ಸ್ಥಳಗಳಲ್ಲಿ ಭಾರತೀಯ ಔಷಧಿ ನಿಯಂತ್ರಣ ಮಹಾ ನಿರ್ದೇಶನಾಲಯ (DCGI) ಹಾಗೂ ವಿವಿಧ ರಾಜ್ಯ ಸರ್ಕಾರಗಳು ಜಂಟಿ ಕಾರ್ಯಾಚರಣೆ ನಡೆಸಿದ ಬಳಿಕ 18 ಕಂಪನಿಗಳ ಪರವಾನಗಿಯನ್ನು ಸರ್ಕಾರ ರದ್ದುಗೊಳಿಸಿದೆ. ಆದರೆ ಪರವಾನಗಿ ರದ್ದುಗೊಳಿಸಿರುವ ಕಂಪನಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಪ್ಯಾನ್‌ – ಆಧಾರ್‌ ಕಾರ್ಡ್‌ ಲಿಂಕ್‌; ಜೂನ್‌ 30 ರವರೆಗೆ ಅವಧಿ ವಿಸ್ತರಣೆ

    ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸುತ್ತಿದ್ದ 76 ಕಂಪನಿಗಳ ಮೇಲೆ ಮೊದಲ ಹಂತದಲ್ಲಿ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ 1940ರ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ. 18 ಕಂಪನಿಗಳ ಪರವಾನಗಿ ರದ್ದು ಮಾಡಿರುವುದಲ್ಲದೇ, 26 ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿಮಾಡಲಾಗಿದೆ. 3 ಕಂಪನಿಗಳ ಕೆಲವು ಉತ್ಪನ್ನಗಳಿಗೆ ನೀಡಿದ್ದ ಅನುಮತಿ ರದ್ದು ಮಾಡಲಾಗಿದೆ. ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ಈ ಕಾರ್ಯಾಚರಣೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಕಳಪೆ ಗುಣಮಟ್ಟದ ಔಷಧಗಳ ವಿರುದ್ಧದ ವಿಶೇಷ ಅಭಿಯಾನದ ಭಾಗವಾಗಿ ಕಾನೂನು ಜಾರಿ ಸಂಸ್ಥೆಗಳು ಒಟ್ಟು 203 ಕಂಪನಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಹಿಮಾಚಲ ಪ್ರದೇಶದ 70, ಉತ್ತರಾಖಂಡದ 45 ಹಾಗೂ ಮಧ್ಯಪ್ರದೇಶದ 23 ಕಂಪನಿಗಳು ಸೇರಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳನ್ನ ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಪಾಸಣೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಮೇಶ್‌ ಪಾಲ್‌ ಕಿಡ್ನ್ಯಾಪ್‌, ಕೊಲೆ ಪ್ರಕರಣ – ಮಾಜಿ ಸಂಸದ, ಪಾತಕಿ ಅತೀಕ್‌ ಅಹ್ಮದ್‌ಗೆ ಜೀವಾವಧಿ ಶಿಕ್ಷೆ

    ಈ ಹಿಂದೆ ಮರಿಯನ್ ಬಯೋಟೆಕ್‌ನ ಮೂವರು ಹಿರಿಯ ಉದ್ಯೋಗಿಗಳ ವಿರುದ್ಧ ಕಲಬೆರಕೆ ಔಷಧಗಳ ತಯಾರಿಕೆ ಮತ್ತು ಮಾರಾಟದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ನೋಯ್ಡಾ ಪೊಲೀಸರು ಬಂಧಿಸಿದ್ದರು.

    ಏಕೆಂದರೆ ಮೇರಿಯನ್ ಬಯೋಟೆಕ್ ಕಂಪನಿಯ ಔಷಧಿ ಡಿಸೆಂಬರ್ 2022ರಲ್ಲಿ ಉಜ್ಬೇಕಿಸ್ತಾನ್‌ನಲ್ಲಿ ಅನೇಕ ಮಕ್ಕಳ ಸಾವಿಗೆ ಕಾರಣವಾಗಿತ್ತು. ಆಗ ಭಾರತದ ಕೇಂದ್ರ ಡ್ರಗ್ಸ್ ನಿಯಂತ್ರಣ ಮಂಡಳಿ (CDSCO) ಈ ವಿಷಯದ ಬಗ್ಗೆ ತನಿಖೆ ಆರಂಭಿಸಿತ್ತು.

  • ಡೋಲೋ ಮಾರಾಟಕ್ಕಾಗಿ ವೈದ್ಯರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆ – IT ತನಿಖೆಯಿಂದ ಅಕ್ರಮ ಬಯಲು

    ಡೋಲೋ ಮಾರಾಟಕ್ಕಾಗಿ ವೈದ್ಯರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆ – IT ತನಿಖೆಯಿಂದ ಅಕ್ರಮ ಬಯಲು

    ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ನಡೆದ ವಂಚನೆಯ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಡೋಲೋ-650 ಮಾತ್ರೆಯ ಪ್ರಚಾರಕ್ಕಾಗಿ 1 ಸಾವಿರ ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ನೀಡಲಾಗಿದೆ ಎಂಬ ಆತಂಕಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.

    ಕೋವಿಡ್ ಸಾಂಕ್ರಾಮಿಕದ ವೇಳೆ ದೇಶಾದ್ಯಂತ ಬಹುತೇಕ ಸೋಂಕಿತರಿಗೆ ವೈದ್ಯರು ಮತ್ತು ಮೆಡಿಕಲ್ ಶಾಪ್‌ಗಳಲ್ಲಿ ಬೆಂಗಳೂರು ಮೂಲಕದ ಮೈಕ್ರೋಲ್ಯಾಬ್ ಕಂಪೆನಿ ಉತ್ಪಾದಿಸುವ ಡೋಲೋ-650 ಮಾತ್ರೆಗಳನ್ನು ಪ್ರಮುಖವಾಗಿ ಶಿಫಾರಸು ಮಾಡಲಾಗಿತ್ತು. ಆದರೆ ಇದೇ ಕಂಪೆನಿ ತನ್ನ ಉತ್ಪನ್ನವನ್ನೇ ಹೆಚ್ಚಾಗಿ ಮಾರಾಟ ಮಾಡಲು ವೈದ್ಯರು ಹಾಗೂ ವೃದ್ಯಕೀಯ ಅಧಿಕಾರಿ ವರ್ಗದವರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿತ್ತು ಎಂಬ ಸ್ಫೋಟಕ ವಿಚಾರ ತನಿಖೆ ವೇಳೆ ಕಂಡುಬಂದಿದೆ.

    ಬೆಂಗಳೂರು ಸೇರಿದಂತೆ 50 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳನ್ನ ಪ್ರವಾಸಕ್ಕೆ ಕಳಿಸಿರುವುದು, ಹಣಕಾಸು ನೀಡಲು 1 ಸಾವಿರ ಕೋಟಿ ಉಡುಗೊರೆಗಳನ್ನು ನೀಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಪ್ರತ್ಯೇಕತಾವಾದಿ ಹೇಳಿಕೆ ನೀಡಿದ್ದ ಕುಮಾರ್ ವಿಶ್ವಾಸ್‍ಗೆ ವೈ ಪ್ಲಸ್ ಭದ್ರತೆ

    ಪತ್ರಿಕಾ ಹೇಳಿಕೆಯಲ್ಲಿ 1,000 ಕೋಟಿ ಹಣ ಖರ್ಚು ಮಾಡಿರೋದನ್ನ ಉಲ್ಲೇಖಿಸಲಾಗಿದೆ. ಇದರೊಂದಿಗೆ 300 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆಮಾಡಿದ್ದು, 1.20 ನಗದು ಹಣ ಹಾಗೂ 1.40 ಕೋಟಿ ವಜ್ರದ ಆಭರಣಗಳನ್ನು ವಶಕ್ಕೆ ಪಡೆದಿರುವಾಗಿ ಉಲ್ಲೇಖಿಸಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

    ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೈಕ್ರೋಲ್ಯಾಬ್ಸ್ಗೆ ಸೇರಿದ 9 ರಾಜ್ಯಗಳ 36 ಸ್ಥಳಗಳ ಮೇಲೆ ಜು.6ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿತ್ತು. ಈ ವೇಳೆ 1.20 ಕೋಟಿ ರೂ. ಲೆಕ್ಕ ತೋರಿಸದ ನಗದು ಹಣ ಹಾಗೂ 1.40 ಕೋಟಿ ವಜ್ರಾಭರಣ ಪತ್ತೆಯಾಗಿತ್ತು. ಸಾಕಷ್ಟು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಳ್ಳಲಾದ ದಾಖಲೆ ಪರಿಶೀಲನೆ ಮಾರಾಟದ ವೇಳೆ `ಮಾರಾಟ ಮತ್ತು ಪ್ರಚಾರ’ ಎಂಬ ಶೀರ್ಷಿಕೆ ಅಡಿಯಲ್ಲಿ ವೈದ್ಯರು ಮತ್ತು ವೃತ್ತಿಪರರಿಗೆ ಉಚಿತ ಉಡುಗೊರೆ, ಪ್ರಯಾಣವೆಚ್ಚ ಹಾಗೂ ಪ್ರಚಾರಕ್ಕಾಗಿ ಸಭೆ ಆಯೋಜಿಸುವುದಕ್ಕಾಗಿ 1 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದು ಬೆಳಿಕೆಗೆ ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾಹಿತಿ ನೀಡಿದೆ.

    ವರ್ಷದಲ್ಲಿ 400 ಕೋಟಿ ವಹಿವಾಟು: ಕೋವಿಡ್ ಸಮಯದಲ್ಲಿ ಡೋಲೋ-650 ಮಾತ್ರೆ ಸುಮಾರು 350 ಕೋಟಿ ರೂ.ಗಳಷ್ಟು ವಹಿವಾಟು ನಡೆದಿತ್ತು. ಒಂದೇ ವರ್ಷದಲ್ಲಿ 400 ಕೋಟಿ ಆದಾಯ ಸಂಗ್ರಹಿಸಿರುವುದಾಗಿ ಇತ್ತೀಚೆಗೆ ವ್ಯವಸ್ಥಾಪಕ ದಿಲೀಪ್ ಸುರಾನಾ ಹೇಳಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ವಿಷಕಾರಿ ರಾಸಾಯನಿಕ ಸೋರಿಕೆ ಸಿಬ್ಬಂದಿ ಸಾವು – ಮೂವರು ಅಸ್ವಸ್ಥ

    ವಿಷಕಾರಿ ರಾಸಾಯನಿಕ ಸೋರಿಕೆ ಸಿಬ್ಬಂದಿ ಸಾವು – ಮೂವರು ಅಸ್ವಸ್ಥ

    ರಾಯಚೂರು: ನಗರದ ಹೊರವಲಯದ ವಡ್ಲೂರ್ ಕ್ರಾಸ್ ಬಳಿಯ ಫಾರ್ಮಾ ಕಂಪನಿಯೊಂದರಲ್ಲಿ ವಿಷಕಾರಿ ರಾಸಾಯನಿಕ ಸೋರಿಕೆಯಿಂದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾನೆ. ರಾಯಚೂರು ಲ್ಯಾಬರೋಟಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ದುರ್ಘಟನೆ ನಡೆದಿದೆ. ಲಕ್ಷ್ಮಣ್ (28) ಕಂಪನಿಯ ಕೆಮಿಸ್ಟ್ ಸಾವನ್ನಪ್ಪಿದ್ದಾರೆ.

    ಘಟನೆಯಲ್ಲಿ ಒಟ್ಟು ನಾಲ್ಕು ಜನ ಅಸ್ವಸ್ಥರಾಗಿ ಒರ್ವ ಸಾವನ್ನಪ್ಪಿದ್ದಾರೆ. ಇನ್ನೊರ್ವನ ಸ್ಥಿತಿ ಗಂಭೀರವಾಗಿದೆ. ಇನ್ನೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನ ರಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಐದು ತಿಂಗಳ ಹಿಂದೆ ಲಕ್ಷ್ಮಣ್ ಮದುವೆಯಾಗಿದ್ದರು.

    ಸಿಪಿಪಿ (ಕ್ಲೋರಿನೇಟೆಡ್ ಪಾಲಿಪ್ರೋಪೈಲೇನ್) ರಾಸಾಯನಿಕ ಮಾನವನ ಶ್ವಾಸಕೋಶಕ್ಕೆ ದುಷ್ಪರಿಣಾಮ ಬೀರುತ್ತದೆ. ಕೆಮಿಕಲ್ ಲಕ್ಷ್ಮಣ್ ದೇಹ ಸೇರಿದ್ದರಿಂದ ಉಸಿರಾಟ ತೊಂದರೆಯಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನುಳಿದ ಮೂವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.