Tag: ಫಾರೆಸ್ಟ್

  • ಚಿತ್ರೀಕರಣ ಮುಗಿಸಿದ ಚಿಕ್ಕಣ್ಣ ನಟನೆ ‘ಫಾರೆಸ್ಟ್’ ಸಿನಿಮಾ

    ಚಿತ್ರೀಕರಣ ಮುಗಿಸಿದ ಚಿಕ್ಕಣ್ಣ ನಟನೆ ‘ಫಾರೆಸ್ಟ್’ ಸಿನಿಮಾ

    ನ್ನಡದಲ್ಲೀಗ ಕಂಟೆಂಟ್ ಆಧರಿಸಿದ ಚಿತ್ರಗಳದ್ದೇ ಕಾರುಬಾರು. ಉತ್ತಮ ಕಂಟೆಂಟ್ ಇರುವ ಚಿತ್ರಗಳು ಇತ್ತೀಚಿಗೆ ಯಶಸ್ವಿಯಾಗಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿದೆ. ಅಂತಹದೇ ಉತ್ತಮ ಕಂಟೆಂಟ್‌ನೊಂದಿಗೆ ಕನ್ನಡಿಗರ ಮುಂದೆ ಬರುತ್ತಿದೆ ‘ಫಾರೆಸ್ಟ್’  (Forest Film) ಸಿನಿಮಾ. ಸದ್ಯ ಈ ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.

    ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್.ಎಂ ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಫಾರೆಸ್ಟ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ ‘ಓಡೋ ಓಡೋ’ ಹಾಡು ಬಿಡುಗಡೆಯಾಗಿತ್ತು. ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಹಾಡನ್ನು ಈಗಾಗಲೇ 11 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದರು. ಈ ಹಾಡಿಗೆ ಈಗ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಮಲ್ಟಿಸ್ಟಾರ್‌ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಫಾರೆಸ್ಟ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

    ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜೊತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದಾಗಿದೆ. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ ‘ಫಾರೆಸ್ಟ್’ ಚಿತ್ರಕ್ಕಿದೆ. ಇದನ್ನೂ ಓದಿ:ಚಿತ್ರೀಕರಣದ ವೇಳೆ ವರುಣ್ ಧವನ್ ಪಕ್ಕೆಲುಬಿಗೆ ಪೆಟ್ಟು

    ಚಿಕ್ಕಣ್ಣ (Chikkanna), ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ (Sharanya Shetty), ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಮಲ್ಟಿಸ್ಟಾರ್ ನಟನೆಯ ‘ಫಾರೆಸ್ಟ್’  ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್

    ಮಲ್ಟಿಸ್ಟಾರ್ ನಟನೆಯ ‘ಫಾರೆಸ್ಟ್’ ಚಿತ್ರಕ್ಕೆ ಚಂದ್ರ ಮೋಹನ್ ಡೈರೆಕ್ಟರ್

    ನ್ನಡದಲ್ಲಿ ‌ಸದ್ದಿಲ್ಲದೇ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ರೂಪಗೊಳ್ಳುತ್ತಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್,  ಗುರುನಂದನ್ ಹಾಗೂ ರಂಗಾಯಣ ರಘು ಕಾಂಬೋದಲ್ಲಿ ಹೊಸ ಚಿತ್ರವೊಂದು ತಯಾರಾಗುತ್ತಿದೆ. ಈ ನಾಲ್ಕು ಜನ ತಾರೆಯರನ್ನು ಒಂದೇ ಫ್ರೇಮ್ ಗೆ ತಂದು ಆಕ್ಷನ್ ಕಟ್ ಹೇಳುತ್ತಿರುವುದು ಡಬ್ಬಲ್ ಇಂಜಿನ್, ಬ್ರಹ್ಮಚಾರಿ ಸಿನಿಮಾಗಳ‌ ಸಾರಥಿ ಚಂದ್ರ ಮೋಹನ್.

    ಚಂದ್ರ ಮೋಹನ್ (Chandra Mohan) ಹೊಸ ಪ್ರಯತ್ನಕ್ಕೆ ಫಾರೆಸ್ಟ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಟೈಟಲ್ ಹೇಳುವಂತೆ ಫಾರೆಸ್ಟ್  (Forrest) ಅಡ್ವೆಂಚರ್‌ ಕಾಮಿಡಿ ಸಿನಿಮಾ. ಚಿತ್ರ 80%ರಷ್ಟು ಭಾಗ ಕಾಡಿನಲ್ಲಿಯೇ ಸಾಗುತ್ತದೆ.

    ಚಿಕ್ಕಣ್ಣ, ಅನೀಶ್ , ಗುರುನಂದನ್ ಹಾಗೂ ರಂಗಾಯಣ ರಘು ನಾಲ್ಕು ತಾರೆಯರು ಫಾರೆಸ್ಟ್ ಸಿನಿಮಾದ ಆಧಾರ ಸ್ತಂಭಗಳು. ಫನ್ ಜೊತೆಗೆ ಥ್ರಿಲ್ಲಿಂಗ್ ರೈಡ್ ಅನುಭವ ನೀಡುವ ಫಾರೆಸ್ಟ್ ಚಿತ್ರಕ್ಕೆ ಎನ್ ಎಂಕೆ ಸಿನಿಮಾಸ್ ಬ್ಯಾನರ್ ನಡಿ ಕಾಂತರಾಜು ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೇ ಕಾಂತರಾಜು ಅವರಿಗಿದು ಚೊಚ್ಚಲ ಚಿತ್ರ. ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಫಾರೆಸ್ಟ್ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

    ಫಾರೆಸ್ಟ್ ಸಿನಿಮಾಗೆ ವಿ. ರವಿಶಂಕರ್  ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಧರ್ಮವೀರ್-ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸದ್ಯ ಟೈಟಲ್ ರಿವೀಲ್ ಮಾಡಿರುವ ಚಿತ್ರತಂಡವೀಗ ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗದ ಮಾಹಿತಿ ನೀಡಲಿದೆ.

  • ಕಚೇರಿ ಆವರಣದಲ್ಲೇ ಮಿನಿ ಫಾರೆಸ್ಟ್ ಸೃಷ್ಠಿಸಿದ ಕೂಡ್ಲಗಿಯ ಅಗ್ನಿಶಾಮಕ ದಳದ ಸಿಬ್ಬಂದಿ

    ಕಚೇರಿ ಆವರಣದಲ್ಲೇ ಮಿನಿ ಫಾರೆಸ್ಟ್ ಸೃಷ್ಠಿಸಿದ ಕೂಡ್ಲಗಿಯ ಅಗ್ನಿಶಾಮಕ ದಳದ ಸಿಬ್ಬಂದಿ

    ಬಳ್ಳಾರಿ: ಬೆಂಕಿ ಆರಿಸೋದು ಅಗ್ನಿಶಾಮಕ ದಳದ ಸಿಬ್ಬಂದಿ ಕೆಲಸ. ಅದು ಎಲ್ಲರಿಗೂ ಗೊತ್ತಿದೆ. ಆದರೆ ಇಂಥ ಬೆಂಕಿ ನಂದಿರೋ ಕೈಗಳು ಪರಿಸರ ರಕ್ಷಣೆಗೆ ಮುಂದಾಗಿ ತಮ್ಮ ಕಚೇರಿ ಆವರಣದಲ್ಲೇ ಒಂದು ಮಿನಿ ಫಾರೆಸ್ಟ್ ನಿರ್ಮಿಸಿದ್ದಾರೆ. ಬಳ್ಳಾರಿ ಕೂಡ್ಲಗಿಯ ಅಗ್ನಿಶಾಮಕ ಸಿಬ್ಬಂದಿ ಮಾಡಿರೋ ಈ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

    ಬಳ್ಳಾರಿಯ ಕೂಡ್ಲಗಿ ಅಗ್ನಿಶಾಮಕ ಠಾಣೆಯ ಎದುರಿರೋ ಜಮೀನನನ್ನು ಮಿನಿ ಫಾರೆಸ್ಟ್ ಎಂದು ಯಾಕೆ ಹೇಳ್ತಿದ್ದೀವಿ ಅಂದ್ರೆ ಈ ಆವರಣದಲ್ಲಿ ಎಲ್ಲಾ ರೀತಿಯ ಮರಗಳು, ಹೂ-ಗಿಡಗಳಿವೆ. ಬೆಂಕಿ ನಂದಿಸೋ ಕಾರ್ಯಕ್ಕಾಗಿ ದಿನದ 24 ಗಂಟೆಯೂ ಸನ್ನದ್ಧವಾಗಿರೋ ಈ ಠಾಣೆಯ ಅಗ್ನಿಶಾಮಕ ಸಿಬ್ಬಂದಿ, ತಮ್ಮ ಬಿಡುವಿನ ವೇಳೆ ಆವರಣದಲ್ಲೇ ಸಸಿ ನೆಡುವ ಮೂಲಕ ಕೃತಕ ಕಾಡನ್ನ ನಿರ್ಮಿಸಿದ್ದಾರೆ.

    ಕೂಡ್ಲಗಿ ಪಟ್ಟಣದ ಹೊರವಲಯದಲ್ಲಿರುವ ಎರಡೂವರೆ ಎಕರೆ ಜಮೀನಿನಲ್ಲಿ 65 ಮಾವಿನ ಮರ, 80 ತೆಂಗಿನ ಮರ, 50 ಸಪೋಟಾ, 50 ಸೀತಾಫಲ, ನೆರಳೆ, ತೇಗ, ಬೇವು, ಅಂಜೂರ, ನೆಲ್ಲಿ, ನಿಂಬಿಕಾಯಿ, ರಕ್ತಚಂದನ, ಸೇರಿದಂತೆ ಬಗೆ ಬಗೆಯ ಹೂ-ಹಣ್ಣಿನ ಗಿಡ ಮರಗಳನ್ನ ನೆಟ್ಟು ಪೋಷಿಸುತ್ತಿದ್ದಾರೆ. ಕಳೆದ 6 ವರ್ಷಗಳಿಂದ ಈ ಕಾರ್ಯ ನಿರಂತರವಾಗಿ ಸಾಗಿದೆ.

    ರಾಜಕೀಯ ಸುದ್ದಿಯಿಂದಲೇ ಸುದ್ದಿಯಾಗೋ ಬಳ್ಳಾರಿ, ಕೂಡ್ಲಗಿಯಲ್ಲಿ ಅರಣ್ಯ ಇಲಾಖೆ ಮಾಡಬೇಕಾದ ಕಾರ್ಯವನ್ನು ಅಗ್ನಿಶಾಮಕದಳದ ಸಿಬ್ಬಂದಿ ಮಾಡುತ್ತಿರೋದು ಶ್ಲಾಘನಾರ್ಹವೇ ಸರಿ.