Tag: ಫಾರೆವರ್ ನವೀನ್ ಕುಮಾರ್

  • ಏಷ್ಯಾ ಸ್ಟಾರ್ ಗಾಲಾದಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್

    ಏಷ್ಯಾ ಸ್ಟಾರ್ ಗಾಲಾದಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್

    ಫ್ಯಾಶನ್ ಲೋಕದಲ್ಲಿ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಸಾಧನೆಗೈಯುತ್ತ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಗೆ ಪಾತ್ರರಾಗಿರುವ ಕನ್ನಡದ ಪ್ರತಿಭೆ ಫಾರೆವರ್ ನವೀನ್ ಕುಮಾರ್. ಸ್ಟಾರ್ ಡಿಸೈನರ್ Forever Naveen Kumar ವಿಶಿಷ್ಟ ವಿನ್ಯಾಸ ಹಾಗೂ ಕಣ್ಣು ಕೋರೈಸೋ ಬಟ್ಟೆಗಳಿಂದ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗಳಿಸಿಕೊಂಡಿದ್ದಾರೆ. ಸದಾ ಹೊಸತನದ ಮೂಲಕ ಫ್ಯಾಶನ್ ಇವೆಂಟ್ ಎದುರುಗೊಳ್ಳುವ ಇವರು ಜಾಗತಿಕ ಮಟ್ಟದ ಫ್ಯಾಶನ್ ಡಿಸೈನರ್‌ಗಳಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಇದೀಗ ಫಾರೆವರ್ ನವೀನ್ ಕುಮಾರ್ ಮತ್ತೊಂದು ಖ್ಯಾತಿಗೆ ಪಾತ್ರರಾಗಿದ್ದಾರೆ.

    ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್ ಡಿಸೆಂಬರ್ 31, 2021ರಂದು ಕೊಲಂಬೋದಲ್ಲಿ ನಡೆದಿದೆ. ಮೆಟ್ ಗಾಲಾ ಜಾಗತಿಕ ಮಟ್ಟದ ಅತ್ಯುನ್ನತ ಶ್ರೇಣಿಯ ಫ್ಯಾಶನ್ ಇವೆಂಟ್. ಇವರು ಮೊಟ್ಟ ಮೊದಲ ಬಾರಿಗೆ ಏಷ್ಯಾ ಮಟ್ಟದಲ್ಲಿ ಹಮ್ಮಿಕೊಂಡ ಏಷ್ಯಾ ಸ್ಟಾರ್ ಗಾಲಾ (Asia Star Gala) ಇವೆಂಟ್ ಕಳೆದ ವರ್ಷದ ಕೊನೆಯ ದಿನ ನಡೆದಿದೆ. ಸಾಕಷ್ಟು ವಿಶೇಷತೆಯನ್ನು ಒಳಗೊಂಡ ಈ ಇವೆಂಟ್ ವಿಮಾನ ನಿಲ್ದಾಣದ ರನ್ ವೇನಲ್ಲಿ ನಡೆದಿದ್ದು, ಇದೇ ಮೊದಲ ಬಾರಿಗೆ ಬೇರೆ- ಬೇರೆ ದೇಶದ ಪ್ರಖ್ಯಾತ ಫ್ಯಾಶನ್ ಡಿಸೈನರ್‌ಗಳು ಹಾಗೂ ನಟಿಮಣಿಯರು ಪಾಲ್ಗೊಂಡ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಭಾರತದಿಂದ ಪ್ರತಿನಿಧಿಸಿದ ಏಕೈಕ ಫ್ಯಾಶನ್ ಡಿಸೈನರ್ ಎಂದರೆ ಅದು ಫಾರೆವರ್ ನವೀನ್ ಕುಮಾರ್.

    ಇವರ ಜೊತೆಗೆ ಇವ್ರ ಫ್ಯಾಶನ್ ಡಿಸೈನ್‌ಗಳ ಬ್ರ್ಯಾಂಡ್ ಅಂಬಾಸಿಡರ್ ನಟಿ ಸಂಹಿತ ವಿನ್ಯಾ ಕೂಡ ಪಾಲ್ಗೊಂಡಿದ್ದಾರೆ. ಭಾರತದಿಂದ ಮೆಟ್ ಗಾಲಾ ಫ್ಯಾಶನ್ ಶೋನಲ್ಲಿ ಹೆಜ್ಜೆ ಹಾಕಿದ ನಟಿಮಣಿಯರೆಂದರೆ ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ದೀಪಿಕಾ ಪಡುಕೋಣೆ. ಇವರ ಸಾಲಿಗೆ ಕನ್ನಡದ ನಟಿ ಸಂಹಿತ ವಿನ್ಯಾ ಸೇರಿರೋದು ಹೆಮ್ಮೆಯ ವಿಚಾರ. ಏಷ್ಯಾ ಸ್ಟಾರ್ ಗಾಲಾ ಇವೆಂಟ್ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಫಾರೆವರ್ ನವೀನ್ ಕುಮಾರ್ 5.7 ಅಡಿ ಎತ್ತರದ ಫೆದರ್ ವಿಂಗ್ಸ್ ಡಿಸೈನ್ ಶೋಕೇಸ್ ಮಾಡಿದ್ದಾರೆ. ಈ ಡಿಸೈನ್ ಅಲ್ಲಿ ನೆರೆದಿದ್ದವರ ಕಣ್ಣು ಕೋರೈಸಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ಇವೆಂಟ್ ಡಿಸೈನರ್ ನವೀನ್ ಕುಮಾರ್ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಗದಷ್ಟು ದುಪ್ಪಟ್ಟು ಮಾಡಿದೆ.

    2016ರಿಂದ ಫ್ಯಾಶನ್ ಲೋಕದಲ್ಲಿ ಡಿಸೈನರ್ ಆಗಿ ಗುರುತಿಸಿಕೊಂಡಿರುವ ನವೀನ್ ಕುಮಾರ್ ಫಾರೆವರ್ ನವೀನ್ ಕುಮಾರ್ ಬ್ರ್ಯಾಂಡ್ ಮೂಲಕವೇ ಗುರುತಿಸಿಕೊಂಡಿದ್ದಾರೆ. ತಮ್ಮ ಬ್ರ್ಯಾಂಡ್, ವಿಶಿಷ್ಟ ವಿನ್ಯಾಸ ಹಾಗೂ ವಿಶೇಷತೆಯಿಂದ ಅತಿ ಕಡಿಮೆ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಫಾರೆವರ್ ನವೀನ್ ಕುಮಾರ್ ಸ್ಟಾರ್ ಡಿಸೈನರ್ ಆಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಭಾರತದ ಹಲವು ಸ್ಟಾರ್ ನಟ ನಟಿಯರ ನೆಚ್ಚಿನ ಡಿಸೈನರ್ ಇವರಾಗಿದ್ದು, ಅನೇಕ ಟಿವಿ ಶೋಗಳಿಗೆ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪರಿಶ್ರಮ, ಶ್ರದ್ಧೆ ಹಾಗೂ ವಿಶಿಷ್ಟತೆ ಮೂಲಕ ಭಾರತದ ಕೀರ್ತಿಯನ್ನು ಫ್ಯಾಶನ್ ಲೋಕದಲ್ಲಿ ಇನ್ನಷ್ಟು ಹೆಚ್ಚಿಸುತ್ತಿರುವ ಫಾರೆವರ್ ನವೀನ್ ಕುಮಾರ್ ಬೆಂಗಳೂರಿನವರು, ಕನ್ನಡಿಗ ಎನ್ನುವುದೇ ಹೆಮ್ಮೆಯ ವಿಚಾರ.

  • ಫ್ಯಾಶನ್ ಡಿಸೈನರ್ ಫಾರೆವರ್ ನವೀನ್ ಕುಮಾರ್ ಮಡಿಲಿಗೆ ಮತ್ತೊಂದು ಪ್ರಶಂಸೆಯ ಗರಿ

    ಫ್ಯಾಶನ್ ಡಿಸೈನರ್ ಫಾರೆವರ್ ನವೀನ್ ಕುಮಾರ್ ಮಡಿಲಿಗೆ ಮತ್ತೊಂದು ಪ್ರಶಂಸೆಯ ಗರಿ

    ಫ್ಯಾಶನ್ ಲೋಕದಲ್ಲಿ ನೂತನ ವಿನೂತನ ಪ್ರಯತ್ನದ ಮೂಲಕ ಗಮನ ಸೆಳೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವ ಕನ್ನಡದ ಪ್ರತಿಭೆ ಫಾರೆವರ್ ನವೀನ್ ಕುಮಾರ್. ಫಾರೆವರ್ ನವೀನ್ ಕುಮಾರ್( Forever Naveen Kumar) ಬ್ರ್ಯಾಂಡ್ ಮೂಲಕ ಗಮನ ಸೆಳೆಯುತ್ತಿರುವ ಇವರು ಫಾರೆವರ್ ನವೀನ್ ಕುಮಾರ್ ಬೈ ಡಿಸೈನರ್ ನವೀನ್ ಕುಮಾರ್ ಎಂದೇ ಖ್ಯಾತಿ. ಇದೀಗ ಇವರ ಸಾಧನೆಯನ್ನು ಗುರುತಿಸಿರುವ ಇಂಡಿಯನ್ ಫ್ಯಾಶನ್ ಕೌನ್ಸಿಲ್ ಮತ್ತೊಂದು ಪ್ರಶಂಸೆಯ ಗರಿ ನೀಡಿದೆ.

    ಕಳೆದ ನಾಲ್ಕು ವರ್ಷಗಳಿಂದ ದೇಶ ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ಫ್ಯಾಶನ್ ಡಿಸೈನ್ ಗಳನ್ನು ಶೋ ಕೇಸ್ ಮಾಡುತ್ತ ಬಂದಿದ್ದಾರೆ ಫಾರೆವರ್ ನವೀನ್ ಕುಮಾರ್. ಇಲ್ಲಿವರೆಗೆ ಭಾರತದ ಆರು ಝೋನ್ ಗಳಲ್ಲಿ ತಮ್ಮ ಫ್ಯಾಶನ್ ಡಿಸೈನ್ ಕಾಸ್ಟ್ಯೂಮ್ ಪ್ರದರ್ಶನ ಮಾಡಿದ ಫ್ಯಾಶನ್ ಡಿಸೈನರ್ ಎಂಬ ಖ್ಯಾತಿಯೂ ಇವರಿಗಿದೆ. ಇದೀಗ ಇಂಡಿಯನ್ ಫ್ಯಾಶನ್ ಕೌನ್ಸಿಲ್ ಇದನ್ನು ಗುರುತಿಸಿದ್ದು, ಭಾರತದ ಆರು ಝೋನ್ ಗಳಲ್ಲಿ ಫ್ಯಾಶನ್ ಡಿಸೈನ್ ಗಳನ್ನು ಪ್ರದರ್ಶನ ಮಾಡಿದ ಅದರಲ್ಲೂ ಫೀಮೇಲ್ ಕಲೆಕ್ಷನ್ಸ್ ಹ್ಯಾಂಡ್ ವರ್ಕ್ ಸೀಕ್ವೆನ್ಸ್ ಕಾಸ್ಟ್ಯೂಮ್ ಪ್ರದರ್ಶನ ಮಾಡಿದ ಏಕೈಕ ಫ್ಯಾಶನ್ ಡಿಸೈನರ್ ಎಂಬ ಪ್ರಶಂಸೆಯ ಗರಿಯನ್ನು ಫಾರೆವರ್ ನವೀನ್ ಕುಮಾರ್ ಗೆ ನೀಡಿದೆ. ತಮ್ಮ ಹೊಸ ಪ್ರಯತ್ನಗಳಿಗೆ ಮನ್ನಣೆ ಹಾಗೂ ಪ್ರಶಂಸೆ ಸಿಕ್ಕಿರುವುದು ಫಾರೆವರ್ ನವೀನ್ ಕುಮಾರ್ ಅವರಿಗೆ ಸಂತಸ ತಂದಿದೆ.

    ಕೇವಲ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಫ್ಯಾಶನ್ ಡಿಸೈನ್ ಗಳನ್ನು ಪ್ರದರ್ಶನ ಮಾಡಿ ಸೈ ಎನಿಕೊಂಡಿದ್ದಾರೆ. ಕೇವಲ ನಾಲ್ಕು ವರ್ಷದಲ್ಲಿ ಫ್ಯಾಶನ್ ದುನಿಯಾದಲ್ಲಿ ಅಪಾರವಾದ ಖ್ಯಾತಿ ಗಳಿಸಿಕೊಂಡಿರುವ ಫಾರೆವರ್ ನವೀನ್ ಕುಮಾರ್ ಹಲವು ನಟ ನಟಿಯರ ಅಚ್ಚು ಮೆಚ್ಚಿನ ಕಾಸ್ಟ್ಯೂಮ್ ಡಿಸೈನರ್ ಕೂಡ ಹೌದು.

    ಫೇದರ್ ವಿಂಗ್ಸ್ ಮತ್ತು ಹ್ಯಾಂಡ್ ವರ್ಕ್ ಸೀಕ್ವೆನ್ಸ್ ಕಾಸ್ಟೂಮ್ ಡಿಸೈನ್ ನಲ್ಲಿ ತಮ್ಮದೇ ಆದ ಯೂನೀಕ್ ಸ್ಟೈಲ್ ರೂಢಿಸಿಕೊಂಡಿರುವ ಇವರು ಇಲ್ಲಿವರೆಗೆ 14 ರಾಜ್ಯಗಳಲ್ಲಿ ಕಾಸ್ಟ್ಯೂಮ್ ಪ್ರದರ್ಶನ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 83 ಫ್ಯಾಶನ್ ಶೋ ಗಳಲ್ಲಿ ಭಾಗಿಯಾಗಿರುವ ಫಾರೆವರ್ ನವೀನ್ ಕುಮಾರ್ 1600ಕ್ಕೂ ಹೆಚ್ಚು ವೆರೈಟಿ ಡಿಸೈನ್ ಕಾಸ್ಟ್ಯೂಮ್ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಇಂತಹದೊಂದು ಸಾಧನೆ ಮಾಡಿದ ಖ್ಯಾತಿ ಕೂಡ ಇವರಿಗೆ ಸಲ್ಲುತ್ತೆ. ಕನ್ನಡದ ಪ್ರತಿಭಾವಂತರೊಬ್ಬರು ಅಂತರಾಷ್ಟ್ರೀಯ ಮಟ್ಟದಲ್ಲಿ ಬಹು ಬೇಡಿಕೆಯ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರೋದು ನಿಜಕ್ಕೂ ಹೆಮ್ಮೆಯ ಸಂಗತಿ.