Tag: ಫಾರೂಖ್ ಅಬ್ದುಲ್ಲಾ

  • ಉಗ್ರರನ್ನು ಕೊಲ್ಲುವ ಬದಲು ಬಂಧಿಸಿ: ಫಾರೂಖ್ ಅಬ್ದುಲ್ಲಾ ಆಗ್ರಹ

    ಉಗ್ರರನ್ನು ಕೊಲ್ಲುವ ಬದಲು ಬಂಧಿಸಿ: ಫಾರೂಖ್ ಅಬ್ದುಲ್ಲಾ ಆಗ್ರಹ

    ಶ್ರೀನಗರ: ಉಗ್ರರನ್ನು ಕೊಲ್ಲುವ ಬದಲು ಜೀವಂತವಾಗಿ ಸೆರೆಹಿಡಿಯಬೇಕು ಎಂದು ಜಮ್ಮು ಮತ್ತು ಕಾಶ್ಮೀರ (Jammu and Kashmir) ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

    ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚುತ್ತಿದೆ. ಇಂದು ಕೂಡ ಎರಡು ಕಡೆ ಎನ್‍ಕೌಂಟರ್ ನಡೆದು, ಮೂವರು ಉಗ್ರರ ಹತ್ಯೆಯಾಗಿದೆ. ಈ ಹೊತ್ತಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ಕಣಿವೆ ನಾಡಲ್ಲಿ ನಡೀತಿರೋ ಎನ್‍ಕೌಂಟರ್‌ಗಳ ಬಗ್ಗೆ ಜನಕ್ಕೆ ಎಷ್ಟೋ ಅನುಮಾನಗಳಿವೆ. ಇತ್ತೀಚಿಗೆ ನಡೆದ ಭಯೋತ್ಪಾದಕ ದಾಳಿಗಳು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನಡೆಯುವಂತೆ ಕಾಣುತ್ತಿವೆ. ಹೀಗಾಗಿ ಉಗ್ರರನ್ನು ಕೊಲ್ಲುವ ಬದಲು, ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಅವರ ವ್ಯೂಹಗಳು ಗೊತ್ತಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಫಾರೂಖ್ ಆಗ್ರಹಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ (BJP) ಬಿಜೆಪಿ, ಉಗ್ರರನ್ನು ಜೀವಂತವಾಗಿ ಸೆರೆ ಹಿಡಿಯಲು ನೋಡಿದ್ರೆ, ಸೈನಿಕರನ್ನು ಅವರು ಸುಮ್ನೆ ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಫಾರೂಖ್ ಅಬ್ದುಲ್ಲಾ ಸರ್ಕಾರಕ್ಕೆ ರಾಜಕೀಯವಾಗಿ ನಷ್ಟ ಆಗಬಾರದು ಎನ್ನುವ ದೃಷ್ಟಿಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇನ್ನೊಂದು ಕಡೆ ಶರದ್ ಪವಾರ್ ಸೇರಿ ಹಲವರು ಫಾರೂಖ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ- ಫಾರೂಖ್ ಅಬ್ದುಲ್ಲ ವಿವಾದಾತ್ಮಕ ಹೇಳಿಕೆ

    ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ- ಫಾರೂಖ್ ಅಬ್ದುಲ್ಲ ವಿವಾದಾತ್ಮಕ ಹೇಳಿಕೆ

    ಶ್ರೀನಗರ: ಪಾಕಿಸ್ತಾನ ಕೈಗೆ ಬಳೆ ತೊಟ್ಟಿಕೊಂಡಿಲ್ಲ. ಭಾರತದ ವಿರುದ್ಧ ಬಳಸಬಹುದಾದ ಪರಮಾಣು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ (Pakistan) ಹೊಂದಿದೆ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ (Farooq Abdullah)  ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ಭಾರತದೊಂದಿಗೆ ವಿಲೀನಗೊಳಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಇದೀಗ ಫಾರೂಕ್‌ ಅಬ್ದುಲ್ಲಾ ವಿವಾದಕ್ಕೀಡಾಗಿದ್ದಾರೆ. ರಕ್ಷಣಾ ಸಚಿವರು ಹೇಳುತ್ತಿದ್ದರೆ, ಮುಂದುವರಿಯಿರಿ, ನಾವು ತಡೆಯಲು ಯಾರು? ಆದರೆ ನೆನಪಿಡಿ, ಪಾಕಿಸ್ತಾನ ಬಳೆಗಳನ್ನು ಧರಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್‍ಗೆ ಮಧ್ಯಂತರ ಜಾಮೀನು

    ರಾಜನಾಥ್ ಸಿಂಗ್ ಹೇಳಿದ್ದೇನು?:‌  ಪಿಓಕೆ ವಶಪಡಿಸಿಕೊಳ್ಳಲು ಸೇನಾ ಬಲ ಪ್ರಯೋಗಿಸುವ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಅಭಿವೃದ್ಧಿಗಳನ್ನು ಕಂಡು ಅಲ್ಲಿನ ಜನರೇ ಭಾರತದ ಭಾಗವಾಗಲು ಬಯಸುತ್ತಾರೆ. ನನ್ನ ಪ್ರಕಾರ, ಭಾರತ ಏನೂ ಮಾಡುವುದು ಬೇಕಿಲ್ಲ ಎಂದು ಸಂದರ್ಶನವೊಂದರಲ್ಲಿ ರಾಜನಾಥ್ ಸಿಂಗ್ ಹೇಳಿದ್ದರು.

    ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಪ್ರಗತಿ ಹಾಗೂ ಶಾಂತಿ ಮರಳಿರುವ ರೀತಿಯನ್ನು ಕಂಡಾಗ ಭಾರತದ ಜೊತೆ ವಿಲೀನಗೊಳ್ಳಬೇಕು ಎಂದು ಪಿಒಕೆ ಜನರೇ ಡಿಮಾಂಡ್‌ ಮಾಡುತ್ತಾರೆ. ಅಲ್ಲದೇ ನಾವು ಭಾರತದೊಂದಿಗೆ ಸೇರಬೇಕು ಎಂದು ಸ್ವತಃ ಜನರೇ ಹೇಳುವುದರಿಂದ ನಾವು ಪಿಒಕೆಯನ್ನು ವಶಪಡಿಸಿಕೊಳ್ಳಲು ಬಲ ಪ್ರಯೋಗಿಸುವ ಅಗತ್ಯ ಬರಲ್ಲ. POK ಹಿಂದೆ, ಈಗ ಮತ್ತು ಎಂದೆಂದಿಗೂ ನಮ್ಮದೇ ಎಂದು ಪುನರುಚ್ಚರಿಸಿದ್ದರು.

  • ಪಾಕಿಸ್ತಾನದ ಜೊತೆ ಭಾರತ ಸಂಬಂಧವನ್ನು ಸುಧಾರಿಸದೇ ಇದ್ದಲ್ಲಿ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು: ಫಾರೂಖ್ ಅಬ್ದುಲ್ಲಾ

    ಪಾಕಿಸ್ತಾನದ ಜೊತೆ ಭಾರತ ಸಂಬಂಧವನ್ನು ಸುಧಾರಿಸದೇ ಇದ್ದಲ್ಲಿ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು: ಫಾರೂಖ್ ಅಬ್ದುಲ್ಲಾ

    ಶ್ರೀನಗರ: ಗಾಜಾ (Gaza) ಮೇಲೆ ಇಸ್ರೇಲ್ (Israel) ಪಡೆಗಳು ದಾಳಿಗಳನ್ನು ಮುಂದುವರೆಸಿದ್ದು, ಅಲ್ಲಿನ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಇದೇ ಹೊತ್ತಲ್ಲಿ ಕಾಶ್ಮೀರವನ್ನು (Kashmir) ಗಾಜಾಗೆ ಸಮೀಕರಿಸಿ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ (Farooq Abdullah) ಹೇಳಿಕೆ ನೀಡಿದ್ದಾರೆ.

    ನೆರೆಯ ಪಾಕಿಸ್ತಾನದ (Pakistan) ಜೊತೆ ಭಾರತ (India) ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳದೇ ಇದ್ದಲ್ಲಿ ಮುಂದೊಂದು ದಿನ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು. ಅಲ್ಲದೇ ಬಾಂಬ್‌ಗಳು ಸದ್ದು ಮಾಡಬಹುದು ಎಂಬ ಎಚ್ಚರಿಕೆಯನ್ನು ಫಾರೂಖ್ ಅಬ್ದುಲ್ಲಾ ನೀಡಿದ್ದಾರೆ. ನೆರೆ ಹೊರೆ ದೇಶಗಳ ಜೊತೆ ಸುಮಧುರ ಬಾಂಧವ್ಯ ಹೊಂದಿದರೆ ಎರಡೂ ದೇಶಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ

    ಇದೇ ಮಾತನ್ನು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಈಗ ಪ್ರಧಾನಿ ಮೋದಿ ಕೂಡ ಯುದ್ಧ ಆಯ್ಕೆಯಲ್ಲ ಎಂದಿದ್ದಾರೆ. ಪಾಕ್ ವಿಚಾರಕ್ಕೂ ಇದನ್ನು ಅನ್ವಯಿಸಬಹುದು. ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ. ಅವರು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ. ಆದರೆ ನಾವು ಏಕೆ ಮಾತನಾಡಲು ಸಿದ್ಧರಿಲ್ಲ? ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೆ ಇಸ್ರೇಲ್‌ನಿಂದ ಬಾಂಬ್ ದಾಳಿಗೊಳಗಾಗುತ್ತಿರುವ ಗಾಜಾ ಮತ್ತು ಪ್ಯಾಲೆಸ್ತೀನ್ ಪರಿಸ್ಥಿತಿಯನ್ನು ನಾವೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಫಾರೂಖ್ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಇದನ್ನೂ ಓದಿ: ರಾಮ ನನ್ನ ಹೃದಯದಲ್ಲಿದ್ದಾನೆ, ಅದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ: ಕಪಿಲ್ ಸಿಬಲ್

  • ಕೊರೊನಾದಿಂದ ಪತ್ನಿಗೆ ಕಿಸ್ ಕೊಡಲಾಗ್ತಿಲ್ಲ: ಫಾರೂಖ್ ಅಬ್ದುಲ್ಲಾ

    ಕೊರೊನಾದಿಂದ ಪತ್ನಿಗೆ ಕಿಸ್ ಕೊಡಲಾಗ್ತಿಲ್ಲ: ಫಾರೂಖ್ ಅಬ್ದುಲ್ಲಾ

    – ಮನಸ್ಸು ಬಯಸಿದ್ರೂ ಅಪ್ಪಿಕೊಳ್ಳಲು ಆಗಲ್ಲ

    ಶ್ರೀನಗರ: ಕೊರೊನಾ ವೈರಸ್ ಬಂದಾಗಿನಿಂದ ಪತ್ನಿಗೆ ಕಿಸ್ ಕೊಡಲು ಆಗುತ್ತಿಲ್ಲ. ಮನಸ್ಸು ಬಯಸಿದರೂ ಅಪ್ಪಿಕೊಳ್ಳಲು ಸಹ ಆಗುತ್ತಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬುಲ್ಲಾ ಹೇಳಿದ್ದಾರೆ.

    ಭಾನುವಾರ ಶ್ರೀನಗರದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ಫಾರೂಖ್ ಅಬ್ದುಲ್ಲಾ ನೆರೆದಿದ್ದ ಜನರನ್ನ ಉದ್ದೇಶಿಸಿ ಸುಮಾರು 35 ನಿಮಿಷ ಮಾತನಾಡಿದರು. ಈ ವೇಳೆ ಕೊರೊನಾದಿಂದ ಜೀವನದಲ್ಲಾದ ಅನಿರೀಕ್ಷಿತ ಬದಲಾವಣೆಗಳ ಬಗ್ಗೆ ಹೇಳುತ್ತಿದ್ದರು. ಪತ್ನಿಗೆ ಮುತ್ತು ಕೊಡಲು ಮತ್ತು ಅಪ್ಪಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿರುವ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮಾಸ್ಕ್ ಧರಿಸದೇ ನಿಮ್ಮ ಜೊತೆಗಿರುವ ಫೋಟೋಗಳನ್ನ ಮಗಳು ನೋಡಿದ್ರೆ ಮನೆಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇಂದು ಜನರು ಹಸ್ತಲಾಘವ, ಆತ್ಮೀಯರನ್ನ ಅಪ್ಪಿಕೊಳ್ಳಲು ಭಯ ಪಡುತ್ತಿದ್ದಾರೆ. ಮಹಾಮಾರಿಯಿಂದ ವಿಶ್ವದಲ್ಲಿ ಇನ್ನು ಜನ ಸಾವನ್ನಪ್ಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಸದ್ಯ ದೇಶದಲ್ಲಿ ನಮ್ಮದೇ ಎರಡು ಲಸಿಕೆಗಳು ಬಂದಿದ್ದು, ವಿತರಣೆ ಸಹ ಮಾಡಲಾಗುತ್ತಿದೆ. ಎರಡೂ ಲಸಿಕೆಗಳು ಯಶಸ್ವಿಯಾಗಲಿ. ನಮ್ಮ ಸಮಾಜ ಮತ್ತೆ ಮೊದಲಿನಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.