Tag: ಫಾರೂಕ್ ಅಬ್ದುಲ್ಲಾ

  • ನಾವು ಪಾಕಿಸ್ತಾನದ ಭಾಗವಾಗಲ್ಲ: ಉಗ್ರರ ದಾಳಿಗೆ ಫಾರೂಕ್‌ ಅಬ್ದುಲ್ಲಾ ಕೆಂಡ

    ನಾವು ಪಾಕಿಸ್ತಾನದ ಭಾಗವಾಗಲ್ಲ: ಉಗ್ರರ ದಾಳಿಗೆ ಫಾರೂಕ್‌ ಅಬ್ದುಲ್ಲಾ ಕೆಂಡ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ವಿರುದ್ಧ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಗರಂ ಆಗಿದ್ದಾರೆ. ನಾವು ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಅವರ ಕಾಮೆಂಟ್ ಹಿಂದಿನ ರಾಜ್ಯದಲ್ಲಿ ನಡೆದ ಆತಂಕಕಾರಿ ಸರಣಿಯ ಭಯೋತ್ಪಾದಕ ದಾಳಿಯನ್ನು ಅನುಸರಿಸುತ್ತದೆ, ಇದರಲ್ಲಿ ಗುರುವಾರ ತಡರಾತ್ರಿ ಬಾರಾಮುಲ್ಲಾದಲ್ಲಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ನಾಲ್ಕು ಜನರು – ಇಬ್ಬರು ಸೈನಿಕರು ಮತ್ತು ಇಬ್ಬರು ನಾಗರಿಕರು ಕೊಲ್ಲಲ್ಪಟ್ಟರು. ಮೂರು ದಿನಗಳ ಹಿಂದೆ ಆರು ಕಟ್ಟಡ ಕಾರ್ಮಿಕರು ಮತ್ತು ಒಬ್ಬ ವೈದ್ಯರನ್ನು ಗುಂಡಿಕ್ಕಿ ಕೊಲ್ಲಲಾಯಿತು.

    ನಮಗೆ ಸೂಕ್ತ ಪರಿಹಾರ ಸಿಗುವವರೆಗೆ ರಾಜ್ಯದಲ್ಲಿ ಈ (ಭಯೋತ್ಪಾದನಾ ದಾಳಿ) ಮುಂದುವರಿಯುತ್ತದೆ… ನಮಗೆಲ್ಲ ಮೂಲ ಅರಿವಿದೆ. 30 ವರ್ಷಗಳಿಂದ ಅಮಾಯಕರ ಹತ್ಯೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರು (ಪಾಕಿಸ್ತಾನ) ಏಕೆ ಹೀಗೆ ಮಾಡುತ್ತಿದ್ದಾರೆ. ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ನಾವು ಯಾವಾಗಲೂ ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ನಮ್ಮ ಅನೇಕ ಸಹೋದ್ಯೋಗಿಗಳು ಹುತಾತ್ಮರಾಗಿದ್ದಾರೆ. ಆದರೆ ಇದು ಪ್ರತಿ ವರ್ಷವೂ ಮುಂದುವರಿಯುತ್ತದೆ ಇದಕ್ಕೆ ಕಾರಣ ಯಾರು ಎಂದು ನಿಮಗೆ ತಿಳಿದಿದೆ. ಇಂತಹ ಕೃತ್ಯಗಳಿಂದ ಕಾಶ್ಮೀರವು ಪಾಕಿಸ್ತಾನದೊಂದಿಗೆ ಸೇರಿಸಬಹುದು ಎಂದು ಅವರು ತಪ್ಪಾಗಿ ಭಾವಿಸಿದ್ದಾರೆಂದು ಟೀಕಿಸಿಸಿದ್ದಾರೆ.

    ಅವರು ತಮ್ಮ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಇದನ್ನು ಕೊನೆಗಾಣಿಸಲು ಮತ್ತು ಸ್ನೇಹದಿಂದಿರಲು ಒಂದು ಮಾರ್ಗವನ್ನು ಕಂಡುಕೊಳ್ಳಲು ನಾನು ಅವರನ್ನು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ, ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.

  • ಗೌರವದಿಂದ ಬಾಳಿ ಬದುಕೋಣ, ದಾಳಿ ನಿಲ್ಲಿಸಿ – ಪಾಕಿಸ್ತಾನಕ್ಕೆ ಫಾರೂಕ್‌ ಅಬ್ದುಲ್ಲಾ ಮನವಿ

    ಗೌರವದಿಂದ ಬಾಳಿ ಬದುಕೋಣ, ದಾಳಿ ನಿಲ್ಲಿಸಿ – ಪಾಕಿಸ್ತಾನಕ್ಕೆ ಫಾರೂಕ್‌ ಅಬ್ದುಲ್ಲಾ ಮನವಿ

    – ಬುದ್ಗಾಮ್‌ ಕ್ಷೇತ್ರ ತ್ಯಜಿಸಿದ ಜಮ್ಮು & ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ 6 ಮಂದಿ ವಲಸೆ ಕಾರ್ಮಿಕರು ಮತ್ತು ವೈದ್ಯರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆ ಒಂದು ದಿನದ ಹಿಂದೆಯಷ್ಟೇ ನಡೆದಿದೆ. ಈ ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ (Farooq Abdullah) ತೀವ್ರವಾಗಿ ಖಂಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಜೀವನಕ್ಕಾಗಿ ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರು ಮತ್ತು ಒಬ್ಬ ವೈದ್ಯರು ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದಾಳಿಯಿಂದ ಭಯೋತ್ಪಾದಕರು (Terror Attack) ಏನನ್ನು ಸಾಧಿಸುತ್ತಾರೆ? ಇಂತಹ ದಾಳಿಗಳಿಂದ ಪಾಕಿಸ್ತಾನವನ್ನು ಇಲ್ಲಿ ಸೃಷ್ಟಿಸಬಹುದು ಎಂದು ಭಾವಿಸುತ್ತಾರೆಯೇ? ದಾಳಿಗಳು ನಡೆದ ಮಾತ್ರಕ್ಕೆ ಕಾಶ್ಮೀರ ಪಾಕಿಸ್ತಾನ ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನ.19ರ ವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ: ಉಗ್ರ ಪನ್ನುನ್ ಬೆದರಿಕೆ

    ಜಮ್ಮು ಮತ್ತು ಕಾಶ್ಮೀರ (Jammu and Kashmir) ಹಲವು ವರ್ಷಗಳಿಂದ ಉಗ್ರರ ದಾಳಿಗೆ ಸಾಕ್ಷಿಯಾಗಿದೆ. ಇದನ್ನು ಯಾವಾಗ ಕೊನೆಗೊಳಿಸಬಹುದು ಎಂಬುದರ ಕುರಿತು ಅನೇಕ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಪಾಕಿಸ್ತಾನ ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಲು ಉತ್ಸುಕವಾಗಿದ್ದರೆ, ಇಂತಹ ದಾಳಿಗಳನ್ನು ನಿಲ್ಲಿಸಬೇಕು. ಏಕೆಂದರೆ ಇದು ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಮಯ. ಅಮಾಯಕರ ಹತ್ಯೆಯಿಂದ ಮಾತುಕತೆ ಹೇಗೆ ಸಾಧ್ಯ? ಇಂತಹ ಭಯೋತ್ಪಾದಕ ದಾಳಿಗಳು ನಮ್ಮೆಲರ ಮೇಲೆ ಪರಿಣಾಮ ಬೀರುತ್ತದೆ. ಪಾಕಿಸ್ತಾನಕ್ಕೆ ಈಗಲೂ ಹೇಳುತ್ತಿದ್ದೇನೆ ಇಂತಹ ದಾಳಿಗಳನ್ನು ನಿಲ್ಲಿಸಿ, ಗೌರವದಿಂದ ಬಾಳಿ ಬದುಕೋಣ ಎಂದು ಮನವಿ ಮಾಡಿದ್ದಾರೆ.

    ವಲಸೆ ಕಾರ್ಮಿಕರ ಹತ್ಯೆಯನ್ನು ಉಗ್ರರ ದಾಳಿ ಎಂದ ಸಿಎಂ:
    ಈ ಘಟನೆಯನ್ನು ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್‌ ಅಬ್ದುಲ್ಲಾ (Omar Abdullah)  ʻಉಗ್ರರ ದಾಳಿʼ ಕರೆದಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ J&K ಸಿಎಂ, ಸೋನಾಮಾರ್ಗ್ ಪ್ರದೇಶದ ಗಗಾನ್‌ಗೀರ್‌ನಲ್ಲಿ ಸ್ಥಳೀಯರಲ್ಲದ ವಲಸೆ ಕಾರ್ಮಿಕರ ಮೇಲೆ ಉಗ್ರರ ಭೀಕರ ಮತ್ತು ಹೇಡಿತನದ ದಾಳಿಯ ಅತ್ಯಂತ ದುಃಖದ ಸುದ್ದಿ. ಉಗ್ರರ ದಾಳಿಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ನಿರಾಯುಧ ಮುಗ್ಧ ಜನರ ಮೇಲಿನ ದಾಳಿಉನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ಕುಟುಂಬಕ್ಕೆ ನನ್ನ ಸಂತಾಪ ತಿಳಿಸುತ್ತೇನೆ. ಇನ್ನೂ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೀಘ್ರವೇ ಅವರು ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ.

    ಒಮಾರ್‌ ಅಬ್ದುಲ್ಲಾ ಅವರ ಹೇಳಿಕೆಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ʻಭಯೋತ್ಪಾದಕರುʼ ಅನ್ನುವ ಬದಲಿಗೆ, ಉಗ್ರರು ಎಂಬ ಪದವನ್ನು ಏಕೆ ಆಯ್ಕೆ ಮಾಡಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮಹಬೂಬಾ ಮುಫ್ತಿ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಸಿದ್ದಾರೆ. ಇದನ್ನೂ ಓದಿ: ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ | ಕಾಯ್ದೆ ತಿದ್ದುಪಡಿ ಮಾಡಿ ಕಠಿಣ ಕ್ರಮಕ್ಕೆ ಚಿಂತನೆ : ರಾಮ್ ಮೋಹನ್ ನಾಯ್ಡು

    ಬಡ್‌ಗಾಂವ್ ಕ್ಷೇತ್ರಕ್ಕೆ ಒಮರ್ ಅಬ್ದುಲ್ಲಾ ಗುಡ್‌ಬೈ:
    ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಸೋಮವಾರ ಬುದ್ಗಾಮ್ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಭದ್ರಕೋಟೆಯಾಗಿರುವ ಗಂದರ್‌ಬಾಲ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

    Omar Abdullah

    ದಶಕದ ನಂತರ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಮರ್‌ ಅಬ್ದುಲ್ಲಾ, ಗಂದರ್‌ಬಲ್ ಮತ್ತು ಬುದ್ಗಾಮ್ ಎರಡೂ ಕ್ಷೇತ್ರಗಳಲ್ಲೂ ಪ್ರತಿನಿಧಿಸಿ ಗೆದ್ದಿದ್ದರು. ಗಂದರ್‌ಬಲ್‌ನಲ್ಲಿ ಪಿಡಿಪಿಯ ಬಶೀರ್ ಅಹ್ಮದ್ ಮಿರ್ ಅವರನ್ನು 10,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಬುದ್ಗಾಮ್‌ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಮೀರ್ ವಿರುದ್ಧ 10,574 ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಭದ್ರಕೋಟೆಯನ್ನು ಉಳಿಸಿಕೊಂಡು ಬುದ್ಗಾಮ್‌ ಕ್ಷೇತ್ರಕ್ಕೆ ಗುಡ್‌ಬೈ ಹೇಳಿದ್ದಾರೆ. ಇದನ್ನೂ ಓದಿ: ಕೌರವರನ್ನು ಶಕುನಿ ಮುಗಿಸಿದಂತೆ ಸಿದ್ದರಾಮಯ್ಯರನ್ನು ಬೈರತಿ ಸುರೇಶ್‌ ಮುಗಿಸುತ್ತಿದ್ದಾರೆ: ಕರಂದ್ಲಾಜೆ

  • ಎಲ್ಲರ ಜೊತೆಗೂಡಿ ಸಾಗುವಂತೆ ಇಸ್ಲಾಂ, ಅಲ್ಲಾ ನಮಗೆ ಕಲಿಸಿದ್ದಾನೆ- ಮೋದಿಗೆ ಫಾರೂಕ್‌ ಅಬ್ದುಲ್ಲಾ ಟಾಂಗ್

    ಎಲ್ಲರ ಜೊತೆಗೂಡಿ ಸಾಗುವಂತೆ ಇಸ್ಲಾಂ, ಅಲ್ಲಾ ನಮಗೆ ಕಲಿಸಿದ್ದಾನೆ- ಮೋದಿಗೆ ಫಾರೂಕ್‌ ಅಬ್ದುಲ್ಲಾ ಟಾಂಗ್

    ನವದೆಹಲಿ: ಮಂಗಳ ಸೂತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ಖಂಡಿಸಿದ್ದಾರೆ.

    ಈ ಸಂಬಂಧ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಲ್ಲಾ (Allah) ಮತ್ತು ಇಸ್ಲಾಂ (Islam) ನಮಗೆ ಎಲ್ಲರೊಂದಿಗೆ ಒಟ್ಟಾಗಿ ಸಾಗಲು ಕಲಿಸಿದೆ. ನಮ್ಮ ಧರ್ಮವು ನಮಗೆ ಇತರ ಧರ್ಮಗಳನ್ನು ಕೀಳಾಗಿ ಕಾಣುವುದನ್ನು ಕಲಿಸಿಲ್ಲ, ಬದಲಿಗೆ ಯಾವಾಗಲೂ ಇತರ ಧರ್ಮಗಳನ್ನು ಗೌರವಿಸಲು ಕಲಿಸಿದೆ. ಒಬ್ಬ ವ್ಯಕ್ತಿಯು ಮಂಗಳಸೂತ್ರವನ್ನು ಕಿತ್ತುಕೊಂಡರೆ ಅವನು ಮುಸ್ಲಿಮನಲ್ಲ ಎಂದು ವಾಗ್ದಾಳಿ ನಡೆಸಿದರು.

    2024ರ ಲೋಕಸಭಾ ಚುನಾವಣೆಗೆ (Loksabha Elections 2024) ಮುನ್ನ ಭಾನುವಾರ ಬನ್ಸ್ವಾರಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳೋದು ಅಪರಾಧ: ಬೆಂಗ್ಳೂರಿನ ಹಲ್ಲೆ ಪ್ರಸ್ತಾಪಿಸಿ ಮೋದಿ ಕಿಡಿ

    ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಅಲ್ಪಸಂಖ್ಯಾತ ಸಮುದಾಯ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿತ್ತು. ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಮಂಗಳಸೂತ್ರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ನೀಡಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಮೋದಿ ಗಂಭೀರ ಆರೋಪ ಮಾಡಿದ್ದರು.

  • ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

    ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

    ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (NC) ಎಲ್ಲಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ. ಈ ಮೂಲಕ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರುವ ಸುಳಿವು ನೀಡಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, I.N.D.I.A ಒಕ್ಕೂಟದ ಜೊತೆ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ. ಬದಲಾಗಿ ತನ್ನ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರು ಚುಕ್ಕಾಣಿ ಹಿಡಿದಾಗ ನ್ಯಾಷನಲ್ ಕಾನ್ಫರೆನ್ಸ್ ಎನ್‌ಡಿಎ ಭಾಗವಾಗಿತ್ತು.

    ಕಳೆದ ತಿಂಗಳು ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನ ಹಲವಾರು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಬ್ದುಲ್ಲಾ ಅವರ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ತಲಾ ಮೂರು ಸ್ಥಾನಗಳನ್ನು ಗೆದ್ದವು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

  • ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

    ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

    ಜಮ್ಮು-ಕಾಶ್ಮೀರ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನಾ ಸಮಾರಂಭವು ದೇಶದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷವನ್ನು ಕೊನೆಗೊಳಿಸಲು ದಾರಿ ಮಾಡಿಕೊಡಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾನು ಯಾವಾಗಲೂ ಮುಕ್ತ ಮನಸ್ಸಿನಿಂದ ಶ್ರೀರಾಮನನ್ನು (Shri Ram) ಸ್ತುತಿಸುತ್ತೇನೆ ಎಂದು ಒತ್ತಿ ಹೇಳಿದರು. ಅಯೋಧ್ಯೆಯ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಯಾರು ಹೋಗುತ್ತಾರೋ, ಯಾರು ಹೋಗುವುದಿಲ್ಲವೋ ಎಂಬುದು ಅವರವರಿಗೆ ಬಿಟ್ಟ ವಿಚಾರವಾಗಿದೆ. ಆದರೆ ರಾಮಮಂದಿರಲ್ಲಿ ದೇವಸ್ಥಾನದ ಬಾಗಿಲು ತೆರೆಯುವುದರೊಂದಿಗೆ ಜನರ ಹೃದಯದ ಬಾಗಿಲುಗಳೂ ತೆರೆದು ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳಲಿ ಎಂದು ಆಶಿಸುತ್ತೇನೆ. ಇದು ನನ್ನ ಪ್ರಾರ್ಥನೆ ಕೂಡ ಆಗಿದೆ ಎಂದರು.

    ರಾಮನು (Ram) ನನ್ನಂತೆಯೇ ನಿಮ್ಮವನು ಕೂಡ. ನಾನು ಪಾಕಿಸ್ತಾನಿ ವಿದ್ವಾಂಸರ ಕುರಾನ್‌ನ ಅನುವಾದವನ್ನು ಓದಿದ್ದೇನೆ. ಎಲ್ಲರೂ ಸಹೋದರತ್ವ ಮತ್ತು ಪ್ರೀತಿಯಿಂದ ಮುಂದುವರಿಯಬೇಕೆಂದು ರಾಮ ಬಯಸುತ್ತಾರೆ. ಭಾರತವನ್ನು ರಾಮ ‘ರಾಜ್ಯ’ ಮಾಡಲು ಬಯಸಿದ್ದಾರೆ ಎಂದು ಹೇಳುತ್ತಾರೆ. ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ನಾನು ಹಲವಾರು ವರ್ಷಗಳಿಂದ ವಿವಿಧ ದೇವಾಲಯಗಳಲ್ಲಿ ಮನಃಪೂರ್ವಕವಾಗಿ ರಾಮನ ‘ಭಜನೆ’ಗಳನ್ನು ಹಾಡಿದ್ದೇನೆ. ಯಾರ ಟೀಕೆಗಳಿಗೂ ನಾನು ಹೆದರುವುದಿಲ್ಲ. ಏಕೆಂದರೆ ನಾವು ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಉಳಿಸಬೇಕಾದರೆ ಅದನ್ನು ಮಾಡಬೇಕು. ಮುಂದೆ ಸಾಗಲು ನಾವು ಕೈ ಜೋಡಿಸಬೇಕಾಗಿದೆ ಎಂದು ತಿಳಿಸಿದರು.

    ಚುನಾವಣೆ (Election) ಸಮೀಪಿಸುತ್ತಿದ್ದು, ಕೆಲವರು ರಾಮ ಮಂದಿರದ ಹೆಸರಿನಲ್ಲಿ ಜೈ ಶ್ರೀ ರಾಮ್ (Jai Shri Ram) ಎಂದು ಘೋಷಣೆ ಕೂಗಿ ಮತ ಕೇಳುತ್ತಿದ್ದಾರೆ ಎಂದು ಇದೇ ವೇಳೆ ಅಬ್ದುಲ್ಲಾ ಅವರು ಹೆಸರೇಳದೆ ಬಿಜೆಪಿಗೆ (BJP) ಪರೋಕ್ಷವಾಗಿ ಟಾಂಗ್‌ ಕೊಟ್ಟರು. ಧರ್ಮ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಜನರು ಅವರು ಎಂದು ವಾಗ್ದಾಳಿ ನಡೆಸಿದರು.

  • ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ಜಮ್ಮು-ಕಾಶ್ಮೀರ: ಅಯೋಧ್ಯೆ ರಾಮ ಮಂದಿರವು (Ayodhya Ram Mandir) ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುತ್ತಿದೆ. ಈ ಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

    ಅಯೋಧ್ಯೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಕಠಿಣ ಪರಿಶ್ರಮದಿಂದ ಇಂದು ರಾಮಮಂದಿರವು (Ayodhya Ram Temple) ತಲೆ ಎತ್ತಿ ನಿಂತಿದೆ. ಭಗವಾನ್ ರಾಮನು ಹಿಂದೂಗಳಿಗೆ ಮಾತ್ರ ಸೇರಿದವರಲ್ಲ, ಅವರು ಪ್ರಪಂಚದ ಎಲ್ಲರಿಗೂ ಸೇರಿದವರು ಎಂದು ಹೇಳಲು ಇಚ್ಛಿಸುತ್ತೇನೆ. ಪುಸ್ತಕಗಳಲ್ಲಿಯೂ ಇದನ್ನೇ ಬರೆಯಲಾಗಿದೆ ಎಂದು ಹೇಳಿದರು.

    ಭಗವಾನ್‌ ರಾಮ ಸಹೋದರತ್ವ, ಪ್ರೀತಿ ಮತ್ತು ಏಕತೆಯ ಬಗ್ಗೆ ಮಾತನಾಡಿದ್ದಾರೆ. ಅವರು ಯಾವತ್ತೂ ಭಾಷೆ ಹಾಗೂ ಧರ್ಮದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಪ್ರೀತಿ ಹಾಗೂ ಒಗ್ಗಟ್ಟಿನಿಂದ ಬಾಳಬೇಕು ಎಂದು ಇಡೀ ಜಗತ್ತಿಗೆ ಸಾರಿದವರಾಗಿದ್ದಾರೆ ಎಂದು ಫಾರೂಕ್‌ ಅಬ್ದುಲ್ಲಾ ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಹೀಗಾಗಿ ಅವರು ಜಗತ್ತಿಗೆ ಸಾರಿದ್ದ ಆ ಸಹೋದರತ್ವದ ಸಂದೇಶವನ್ನು ಕಾಪಾಡಿಕೊಂಡು ಅದರಂತೆ ಬದುಕುವಂತೆ ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ ಎಂದರು.

  • ರಾಮ ಹಿಂದೂಗಳಿಗಷ್ಟೇ ಅಲ್ಲ, ಎಲ್ಲರಿಗೂ ದೇವರು: ಫಾರೂಕ್ ಅಬ್ದುಲ್ಲಾ

    ರಾಮ ಹಿಂದೂಗಳಿಗಷ್ಟೇ ಅಲ್ಲ, ಎಲ್ಲರಿಗೂ ದೇವರು: ಫಾರೂಕ್ ಅಬ್ದುಲ್ಲಾ

    ಶ್ರೀನಗರ: ಭಗವಂತ ಶ್ರೀರಾಮ (Ram) ಕೇವಲ ಹಿಂದೂಗಳಿಗಷ್ಟೇ (Hindu) ದೇವರಲ್ಲ. ಧರ್ಮದ ಹೊರತಾಗಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ದೇವರು ಎಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮಾಜಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

    ಗುರುವಾರ ಉದಯಪುರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷ ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸುತ್ತಿದೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ ಎಂದು ಕಿಡಿಕಾರಿದ್ದಾರೆ.

    ರಾಮ ಕೇವಲ ಹಿಂದೂಗಳ ದೇವರಲ್ಲ. ದಯವಿಟ್ಟು ಈ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ. ಭಗವಂತ ರಾಮ ಪ್ರತಿಯೊಬ್ಬನಿಗೂ ದೇವರು. ಅದು ಮುಸ್ಲಿಂ ಆಗಿರಲಿ ಅಥವಾ ಕಿಶ್ಚಿಯನ್ ಆಗಿರಲಿ, ಅಮೆರಿಕನ್ ಅಥವಾ ರಷ್ಯನ್ ಆಗಿರಲಿ. ಆತನ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಆತ ದೇವರಾಗುತ್ತಾನೆ ಎಂದು ಹೇಳಿದರು. ಇದನ್ನೂ ಓದಿ: ನನ್ನನ್ನು ಶೂರ್ಪನಖಿ ಎಂದ ಮೋದಿ ವಿರುದ್ಧ ಮಾನನಷ್ಟ ಕೇಸ್‌ ಹಾಕ್ತೀನಿ: ರೇಣುಕಾ ಚೌಧರಿ

    ನಾವು ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರು ಮೂರ್ಖರು. ಅವರು ರಾಮನ ಹೆಸರಿನಲ್ಲಿ ಲಾಭ ಪಡೆದುಕೊಳ್ಳಲು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇರುವುದಿಲ್ಲ. ಬದಲಿಗೆ ಅಧಿಕಾರದ ಮೇಲೆ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಾಗ ಅವರು ಸಾಮಾನ್ಯ ಜನರ ಗಮನ ಬೇರೆಡೆಗೆ ತಿರುಗಿಸಲು ರಾಮ ಮಂದಿರವನ್ನು ಉದ್ಘಾಟಿಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಆದ್ದರಿಂದ ದಯವಿಟ್ಟು ಜನರ ನಡುವೆ ಹೋಗಿ ದ್ವೇಷದ ಪ್ರಚಾರವನ್ನು ನಿಲ್ಲಿಸಲು ಮನವಿ ಮಾಡುತ್ತೇವೆ ಎಂದಿದ್ದಾರೆ.

    ಕಳೆದ ವರ್ಷ ನವೆಂಬರ್‌ನಲ್ಲೂ ಅಬ್ದುಲ್ಲಾ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ರಾಮ ಪ್ರತಿಯೊಬ್ಬರಿಗೂ ದೇವರು. ಕೇವಲ ಹಿಂದೂಗಳಿಗಲ್ಲ ಎಂದಿದ್ದರು. ಇದನ್ನೂ ಓದಿ: ಇಂದಿನಿಂದ ರಂಜಾನ್ ಉಪವಾಸ ಆಚರಣೆ – ಪ್ರಧಾನಿ ಮೋದಿ ವಿಶ್

  • ಬಿಜೆಪಿಯಿಂದಲೇ ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ – 9 ಪ್ರತಿಪಕ್ಷ ನಾಯಕರಿಂದ ಮೋದಿಗೆ ಪತ್ರ

    ಬಿಜೆಪಿಯಿಂದಲೇ ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ – 9 ಪ್ರತಿಪಕ್ಷ ನಾಯಕರಿಂದ ಮೋದಿಗೆ ಪತ್ರ

    ನವದೆಹಲಿ: ಬಿಜೆಪಿಯು (BJP) ತಮ್ಮ ತಮ್ಮ ನಾಯಕರನ್ನ ಬಂಧಿಸಲು ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED) ಅಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ 9 ಪ್ರತಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ.

    ಭಾರತ್ ರಾಷ್ಟ್ರ ಸಮಿತಿಯ (BRS) ಮುಖ್ಯಸ್ಥ ಚಂದ್ರಶೇಖರ್ ರಾವ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (JKNC) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಟಿಎಂಸಿ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪತ್ರದ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಕಲ್ಲಿದ್ದಲಿನಿಂದ ಭಾರತದ ಲಕ್ಷಾಂತರ ಮಂದಿಗೆ ವಿದ್ಯುತ್‌: ಅದಾನಿ ಪರ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಬ್ಯಾಟಿಂಗ್‌

    2014ರಿಂದಲೂ ಬಿಜೆಪಿ ಆಡಳಿತದಲ್ಲಿ ತನಿಖಾ ಸಂಸ್ಥೆಗಳಿಂದ ಪ್ರಕರಣ ದಾಖಲಿಸಿದ, ಬಂಧಿಸಿದ, ದಾಳಿ ಮಾಡಿದ ಅಥವಾ ವಿಚಾರಣೆಗೆ ಒಳಗಾದ ಹೆಚ್ಚಿನ ರಾಜಕಾರಣಿಗಳು ವಿರೋಧ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಆದ್ರೆ ಬಿಜೆಪಿ ಸೇರ್ಪಡೆಗೊಂಡ ವಿರೋಧ ಪಕ್ಷದ ರಾಜಕಾರಣಿಗಳ ವಿರುದ್ಧದ ಮಾತ್ರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ

    ಉದಾಹರಣೆಗೆ, ಕಾಂಗ್ರೆಸ್ ಮಾಜಿ ಸದಸ್ಯ ಮತ್ತು ಪ್ರಸ್ತುತ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರನ್ನ ಚಿಟ್‌ಫಂಡ್ ಹಗರಣದಲ್ಲಿ 2014, 2015 ರಲ್ಲಿ ಸಿಬಿಐ ಮತ್ತು ಇ.ಡಿ ತನಿಖೆ ನಡೆಸಿತ್ತು. ಆದ್ರೆ ಅವರು ಬಿಜೆಪಿ ಸೇರಿದ ನಂತರ ಪ್ರಕರಣ ಪ್ರಗತಿ ಕಾಣಲಿಲ್ಲ. ಅದೇ ರೀತಿ, ಟಿಎಂಸಿ ಮಾಜಿ ನಾಯಕರಾದ ಸುವೇಂದು ಅಧಿಕಾರಿ, ಮುಕುಲ್ ರಾಯ್ ಅವರ ವಿರುದ್ಧ ಇ.ಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳನ್ನು ಚೂ ಬಿಡಲಾಗಿತ್ತು. ಆದ್ರೆ ಅವರು ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ನಂತರ ಪ್ರಕರಣಗಳು ಮುಚ್ಚಿಹೋದವು ಇನ್ನೂ ಅನೇಕ ಉದಾಹರಣೆಗಳಿವೆ ಎಂದು ಪ್ರತಿಪಕ್ಷ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

  • ಫಾರೂಕ್‌ ಅಬ್ದುಲ್ಲಾರನ್ನು ತಬ್ಬಿ ಯಾತ್ರೆಗೆ ಸ್ವಾಗತಿಸಿದ ರಾಹುಲ್‌ ಗಾಂಧಿ

    ಫಾರೂಕ್‌ ಅಬ್ದುಲ್ಲಾರನ್ನು ತಬ್ಬಿ ಯಾತ್ರೆಗೆ ಸ್ವಾಗತಿಸಿದ ರಾಹುಲ್‌ ಗಾಂಧಿ

    ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಇಂದು ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo) ರಾಹುಲ್‌ ಗಾಂಧಿ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಗೆ ಆಗಮಿಸಿದ ಫಾರೂಕ್‌ ಅಬ್ದುಲ್ಲಾ ಅವರನ್ನು ರಾಹುಲ್‌ ಗಾಂಧಿ(Rahul Gandhi ) ತಬ್ಬಿಕೊಂಡು ಸ್ವಾಗತಿಸಿದರು. ಈ ವೇಳೆ ಪ್ರಿಯಾಂಕಾ ಗಾಂಧಿ(Priyanka Gandhi) ಫಾರೂಕ್‌ ಅವರ ಕೈಯನ್ನು ಹಿಡಿದು ಬರ ಮಾಡಿಕೊಂಡರು.

     

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಸೇರಲು ನೋಯ್ಡಾದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಗಾಜಿಯಾಬಾದ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ- ರಾಗಾಗೆ ಅಯೋಧ್ಯೆ ಪ್ರಧಾನ ಅರ್ಚಕ ಪತ್ರ

    9 ದಿನಗಳ ವಿರಾಮದ ನಂತರ ಮಂಗಳವಾರ ಪಾದಯಾತ್ರೆ ಮತ್ತೆ ಪುನರಾರಂಭವಾಗಿದ್ದುಉತ್ತರ ಪ್ರದೇಶವನ್ನು ಪ್ರವೇಶಿಸಿದೆ.

    ಈ ಹಿಂದೆ ಶ್ರೀನಗರದಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌, ಫಾರೂಕ್‌ ಅಬ್ದುಲ್ಲಾ,ಮೆಹಬೂಬಾ ಮುಫ್ತಿ, ಒಮರ್‌ ಅಬ್ದುಲ್ಲಾ ಭಾರತ್‌ ಜೋಡೋ ಯಾತ್ರೆಯನ್ನು ಸೇರಲಿದ್ದಾರೆ ಎಂದು ತಿಳಿಸಿದ್ದರು.

    ಭಾರತ್‌ ಜೋಡೋ ಯತ್ರಾ ಸೆ.7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದ್ದು 3,570 ಕಿ.ಮೀ ಕ್ರಮಿಸಿ ಜ.26 ರಂದು ಶ್ರೀನಗರದಲ್ಲಿ ಮುಕ್ತಾಯವಾಗಲಿದೆ. ಜ. 22 ರಂದು ಜಮ್ಮು ಕಾಶ್ಮೀರವನ್ನು ಪ್ರವೇಶಿಸಲಿರುವ ಯಾತ್ರೆ 4 ದಿನಗಳ ಕಾಲ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ದೇವರು: ಫಾರೂಕ್ ಅಬ್ದುಲ್ಲಾ

    ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ದೇವರು: ಫಾರೂಕ್ ಅಬ್ದುಲ್ಲಾ

    ಶ್ರೀನಗರ: ಯಾವುದೇ ಧರ್ಮವು ಕೆಟ್ಟದ್ದಲ್ಲ. ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಇದ್ದಾನೆ. ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಿ. ನಮ್ಮ ದೇಶವನ್ನು ಬಲಿಷ್ಠಗೊಳಿಸಬೇಕಾದರೆ, ನಾವು ಒಟ್ಟಾಗಿ ನಿಲ್ಲಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

    ಚುನಾವಣೆ ರ್‍ಯಾಲಿಯೊಂದರಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಮ್ಮ ಬಳಿ ಬಂದು ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಾರೆ. ಭಾರತದಲ್ಲಿ ಶೇ.70 ರಿಂದ 80 ರಷ್ಟು ಹಿಂದೂ ಜನಸಂಖ್ಯೆ ಇದೆ. ಅವರು ಅಪಾಯದಲ್ಲಿದ್ದಾರೆ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನಿಸಿದರು.

    ಯಾವುದೇ ಧರ್ಮ ಕೆಟ್ಟದ್ದಲ್ಲ. ಆದರೆ ಮನುಷ್ಯರು ಭ್ರಷ್ಟರಾಗಿದ್ದಾರೆ, ಧರ್ಮವಲ್ಲ. ಚುನಾವಣೆಯ ಸಮಯದಲ್ಲಿ ‘ಹಿಂದೂ ಖತ್ರೇ ಮೈ ಹೈ’ ಅನ್ನು ಹೆಚ್ಚು ಬಳಸುತ್ತಾರೆ. ಆದರೆ ಅದಕ್ಕೆ ಬಲಿಯಾಗಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಮನವಿಮಾಡಿದ್ದಾರೆ. ಇದನ್ನೂ ಓದಿ: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

    ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಶಾಲಾ ಮಕ್ಕಳನ್ನು “ರಘುಪತಿ ರಾಘವ್ ರಾಜಾ ರಾಮ್” ಎಂಬ ಹಿಂದೂ ಶ್ಲೋಕವನ್ನು ಹಾಡುವಂತೆ ಮಾಡಲಾಗಿದ್ದು, ಈ ಮೂಲಕ ಬಿಜೆಪಿ ಶಾಲೆಗಳಲ್ಲಿ ತನ್ನ ಹಿಂದುತ್ವದ ಅಜೆಂಡಾವನ್ನು ಪ್ರಚಾರ ಮಾಡುತ್ತಿದೆ ಎಂಬ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ಅಬ್ದುಲ್ಲಾ ತಿರಸ್ಕರಿಸಿದ್ದಾರೆ. ಇದನ್ನೂ ಓದಿ: ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

    ಸೆಪ್ಟೆಂಬರ್ 13 ರಂದು ಶಾಲೆಗಳಲ್ಲಿ ಸರ್ವ ದೇವರನ್ನು ಪ್ರಾರ್ಥನೆ ಮಾಡುವ ಸಲುವಾಗಿ ರಘುಪತಿ ರಾಘವ್ ರಾಜ ರಾಮ್. ಈಶ್ವರ ಅಲ್ಲಾ ತೇರೋ ನಾಮ್” ಅನ್ನು ಪಠಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿತು. ಹಿಂದೂಗಳು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದರೆ, ಪುರುಷನೇ ಆಗಲಿ ಅಥವಾ ಮಹಿಳೆಯೇ ಆಗಲಿ ಮುಸ್ಲಿಂ ಆಗಿ ಪರಿವರ್ತನೆ ಹೊಂದುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ “ನ್ಯಾಶನಲ್ ಕಾನ್ಫರೆನ್ಸ್ ಎಂದಿಗೂ ಪಾಕಿಸ್ತಾನದ ಪರವಾಗಿರಲಿಲ್ಲ. ಯಾವಾಗಲೂ ಭಾರತದೊಂದಿಗೆ ಗಟ್ಟಿಯಾಗಿ ನಿಂತಿದೆ. ನಾವು ಎಂದಿಗೂ ಪಾಕಿಸ್ತಾನದೊಂದಿಗೆ ಕೈಜೋಡಿಸಲಿಲ್ಲ. ಜಿನ್ನಾ ಅವರು ನನ್ನ ತಂದೆಯನ್ನು ಭೇಟಿಯಾಗಲು ಬಂದಿದ್ದರು, ಆದರೆ ನಾವು ಅವರೊಂದಿಗೆ ಕೈಜೋಡಿಸಲು ನಿರಾಕರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]