Tag: ಫಾನಿ ಚಂಡ ಮಾರುತ

  • ಫಾನಿ ಚಂಡಮಾರುತದ ಎಫೆಕ್ಟ್ – ಹಲವೆಡೆ ಬಿರುಗಾಳಿ ಮಳೆ, ಬೆಳೆ ಹಾನಿ

    ಫಾನಿ ಚಂಡಮಾರುತದ ಎಫೆಕ್ಟ್ – ಹಲವೆಡೆ ಬಿರುಗಾಳಿ ಮಳೆ, ಬೆಳೆ ಹಾನಿ

    – ಇನ್ನೂ ಮೂರು ದಿನ ಮಳೆಯ ಮುನ್ಸೂಚನೆ

    ಬೆಂಗಳೂರು: ಫಾನಿ ಚಂಡಮಾರುತ ದಕ್ಷಿಣ ಭಾರತದಲ್ಲಿ ಮಳೆಯಬ್ಬರ ಎಬ್ಬಿಸಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದ್ದು ಮುಂದಿನ 72 ಗಂಟೆಗಳಲ್ಲಿ ಆಂಧ್ರ, ತಮಿಳುನಾಡು, ಕೇರಳ, ತೆಲಂಗಾಣದಲ್ಲಿ ಬಿರುಗಾಳಿ ಜೊತೆಗೆ ಮಳೆ ಬರಲಿದೆ.

    ಇಂದು ಕರ್ನಾಟಕದ ಹಲವು ಕಡೆಗಳಲ್ಲಿ ಮಳೆಯಾಗೋ ನಿರೀಕ್ಷೆ ಇದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಎರಡು ವಿದ್ಯುತ್ ಕಂಬಗಳು ಹಾಗೂ ಈಚಲು ಮರಗಳು ನೆಲಕ್ಕೆ ಉರುಳಿವೆ. ಸುಂಟಿಕೊಪ್ಪ, ಕಡಗದಾಳು ಸುತ್ತಮುತ್ತ ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ.

    ಕೋಲಾರದಲ್ಲಿ ಫೋನಿ ಚಂಡಮಾರುತ 1000 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಮಳೆ ಆಗುವ ಮುನ್ಸೂಚನೆ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಬಿರುಗಾಳಿಗೆ ಅರಶಿಣಗೇರಿಯಲ್ಲಿರುವ ಕೋಳಿ ಫಾರಂ ಮೇಲ್ಛಾವಣಿ ಕುಸಿದು 5,000 ಕೋಳಿಗಳು ಸತ್ತಿವೆ. ಬೆಳಗಾವಿ ನಗರದಲ್ಲೂ ಭಾರೀ ಮಳೆ ಆಗಿದ್ದು, ಸುಳೇಭಾವಿಯಲ್ಲಿ ಗಾಳಿಗೆ ಹತ್ತಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.