Tag: ಫಹಾದ್ ಫಾಸಿಲ್

  • ಧೂಮಂ ಸಿನಿಮಾದಲ್ಲಿ ಅಪ್ಪು ನಟಿಸಬೇಕಿತ್ತು: ಆದರೆ…. ರಹಸ್ಯ ಬಯಲು

    ಧೂಮಂ ಸಿನಿಮಾದಲ್ಲಿ ಅಪ್ಪು ನಟಿಸಬೇಕಿತ್ತು: ಆದರೆ…. ರಹಸ್ಯ ಬಯಲು

    ವನ್ ಕುಮಾರ್ (Pawan Kumar) ನಿರ್ದೇಶನದ ‘ಧೂಮಂ’ (Dhoomam) ಫಹಾದ್ ಫಾಸಿಲ್  (Fahadh Faasil)ನಟಿಸಿದ ಸಿನಿಮಾದ ಈ ಕತೆ ಸಿಗರೇಟು, ತಂಬಾಕು ಈ ರೀತಿಯ ಸುತ್ತ ನಡೆಯುತ್ತದೆ. ಅದಕ್ಕೊಂದು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದಾರೆ ಪವನ್. ಬಹುಶಃ ಸಿಗರೇಟು, ತಂಬಾಕು ಈ ವಿಷಯದಿಂದಲೇ ಇಮೇಜ್‌ಗೆ ಧಕ್ಕೆಯಾಗುತ್ತದೆಂದು ತಿಳಿದು ಅವರ ಆಪ್ತರು ನೋ ಎಂದಿದ್ದಾರೆ.

    ಅದೇನೆ ಇರಲಿ ಕೊನೆಗೂ ಅದೇ ಪವನ್ ಕತೆಯ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು ಅಪ್ಪು (Puneeth Rajkumar). ಹಾಗೆ ನೋಡಲು ಹೋದರೆ ಇದೂ ಮಲಯಾಳಂ ಹಾಗೂ ಕನ್ನಡದಲ್ಲಿ ತಯಾರಾಗಬೇಕಿತ್ತು. ಮಲಯಾಳಂನಲ್ಲಿ ಫಹಾದ್, ಕನ್ನಡದಲ್ಲಿ ಅಪ್ಪು ನಟಿಸಲು ಮಾತು ಕತೆ ಆಗಿತ್ತು ಎನ್ನುತ್ತದೆ ಒಂದು ಮೂಲ.

    ‘ಫಹಾದ್ ಮೊದಲು ನಟಿಸಲಿ. ಅವರು ಹೇಗೆ ನಟಿಸುತ್ತಾರೆಂದು ನೋಡಿ ಆಮೇಲೆ ನಮ್ಮ ಶೆಡ್ಯೂಲ್ ಪ್ಲಾನ್ ಮಾಡೋಣ. ಅವರಂತೆ ನಟಿಸಲು ನನಗೆ ಸಾಧ್ಯವೆ ಎನ್ನುವುದಷ್ಟೇ ನಂಗೆ ಬೇಕು’ ಎಂದು ವಿನೀತರಾಗಿ ಹೇಳಿದ್ದರು ಅಪ್ಪು. ಅದು ಅವರ ದೊಡ್ಡ ಗುಣ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ದ್ವಿತ್ವ ಚಿತ್ರಕ್ಕಾಗಿ ತಾರಾಗಣದಿಂದ ಹಿಡಿದು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು ಪವನ್. ಆದರೆ ಅರ್ಧ ಊಟ ಮುಗಿಸಿ ಅಪ್ಪು ಕೈ ತೊಳೆದುಕೊಂಡರು. ಆಗಲೇ ಪವನ್ ದ್ವಿತ್ವ ಕತೆಯನ್ನು ಅಲ್ಲಲ್ಲೇ ಇಟ್ಟರು. ಧೂಮಂ ಕೈಗೆತ್ತಿಕೊಂಡರು. ಫಹಾದ್ ನಟಿಸಿದ ಈ ಚಿತ್ರ ಕುತೂಹಲ ಮೂಡಿಸಿದೆ. ಅಕಸ್ಮಾತ್ ಅಪ್ಪು ಇದ್ದಿದ್ದರೆ ಮೊದಲ ದಿನ ಮೊದಲ ಶೋ ನೋಡುತ್ತಿದ್ದರೇನೊ ?

    ಒಬ್ಬ ಸ್ಟಾರ್ ಈ ರೀತಿ ಕಣ್ಣ ಮುಂದೆಯೇ ದೇವರ ದೀಪವಾದರೆ ಯರ‍್ಯಾರದೊ ಕನಸು? ಯಾರ‍್ಯಾರದೊ ಮನಸು ಒದ್ದಾಡುತ್ತದೆ. ಕಂಗಲಾಗುತ್ತದೆ. ಜನರನ್ನು ಪ್ರೀತಿಸುವ, ಸಿನಿಮಾಕ್ಕಾಗಿ ನಿದ್ದೆ ಕೆಡುವ, ಎಲ್ಲರಿಗೂ ಒಳಿತನ್ನೇ ಬಯಸುವ ಮನಸು ನಮಗೆ ಅನ್ಯಾಯ ಮಾಡಬಾರದಿತ್ತು. ಆದರೆ ದೇವರು ಮೊದಲೇ ಎಲ್ಲವನ್ನೂ ನಿರ್ಧರಿಸಿಬಿಟ್ಟಿದ್ದನೇನೊ? ಹಗಲು ಹೊತ್ತಲ್ಲೇ ನಂದಾದೀಪವನ್ನು ಹೊತ್ತುಕೊಂಡು ಹೋಗಿ ಬಿಟ್ಟ.

    ಇನ್ನು ಅನೇಕ ಸಿನಿಮಾ ಕನಸುಗಳನ್ನು ಕಂಡಿದ್ದರು ಅಪ್ಪು. ಅದೆಲ್ಲವನ್ನು ಪತ್ನಿ ಅಶ್ವಿನಿ ಮುಂದುವರೆಸಲು ಸಜ್ಜಾಗಿದ್ದಾರೆ. ಪಿಆರ್‌ಕೆ ಬ್ಯಾನರ್ ಮತ್ತೆ ಮೆರವಣಿಗೆ ಹೊರಡಲಿದೆ. ಅಪ್ಪು ಜೊತೆಜೊತೆಯಲ್ಲಿ ಇದ್ದೇ ಇರುತ್ತಾರೆ. ಅನವರತ.

  • ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಧೂಮಂ’ ಚಿತ್ರದ ಟ್ರೇಲರ್ ರಿಲೀಸ್

    ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಧೂಮಂ’ ಚಿತ್ರದ ಟ್ರೇಲರ್ ರಿಲೀಸ್

    ನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ (Hombale Films) , ‘ಧೂಮಂ’  ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿರುವುದು ಗೊತ್ತೇ ಇದೆ. ಈ ಚಿತ್ರವು ಜೂನ್ 23ಕ್ಕೆ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ.

    ವಿಜಯ್ ಕಿರಗಂದೂರು ನಿರ್ಮಾಣದ, ‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ (Pawan Kumar) ನಿರ್ದೇಶನ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.  ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) (Fahadh Faasil) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಸುತ್ತ ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

    ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪವನ್ ಕುಮಾರ್, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ ಹಾಗೂ ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎನ್ನುತ್ತಾರೆ.

     

    ‘ಧೂಮಂ’ ((Dhoomam)) ಚಿತ್ರದ ಟ್ರೇಲರ್ ಈಗಾಗಲೇ ಬಿಡಗುಡೆಯಾಗಿದ್ದು, ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಇದೇ ಜೂನ್ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ.

  • Hombale Films ನಿರ್ಮಾಣದ  ‘ಧೂಮಂ’ ಫಸ್ಟ್ ಲುಕ್ ಔಟ್

    Hombale Films ನಿರ್ಮಾಣದ ‘ಧೂಮಂ’ ಫಸ್ಟ್ ಲುಕ್ ಔಟ್

    ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್- ಫಹಾದ್ ಫಾಸಿಲ್ ಕಾಂಬಿನೇಷನ್ ‘ಧೂಮಂʼ ಸಿನಿಮಾ ಫಸ್ಟ್ ಲುಕ್ ಇದೀಗ ಹೊಂಬಾಳೆ ಫಿಲ್ಮ್ಸ್ (Hombale Films) ರಿವೀಲ್ ಮಾಡಿದೆ. ಪೋಸ್ಟರ್ ಲುಕ್‌ನಿಂದ ‘ಧೂಮಂ’ ಸಿನಿಮಾ ಗಮನ ಸೆಳೆಯುತ್ತಿದೆ.

    ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌ನಿರ್ಮಾಣದ ಕೆಜಿಎಫ್. ಕೆಜಿಎಫ್ 2, ಕಾಂತಾರ ಸಿನಿಮಾ ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸದ್ದು ಮಾಡ್ತಿದೆ. ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರ ‘ಧೂಮಂ’ (Dhoomam) ಸಿನಿಮಾಗೆ ಸಾಥ್ ನೀಡಿದೆ. ಈ ಚಿತ್ರವನ್ನ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪವನ್‌ ಕುಮಾರ್ (Pawan Kumar) ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಫಹಾದ್ ಫಾಸಿಲ್ – ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ (Aparna Balamurali) ನಟನೆಯ ‘ಧೂಮಂ’ ಸಿನಿಮಾದ ಫಸ್ಟ್ ಲುಕ್ ಏ.17ರಂದು ರಿವೀಲ್ ಆಗಿದೆ. ಡಿಫರೆಂಟ್ ಕಂಟೆಂಟ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ತಮಿಳು ಭಾಷೆಯಲ್ಲೂ ಚಿತ್ರ ಮೂಡಿ ಬಂದಿದೆ. ಇದನ್ನೂ ಓದಿ:ಬಿರುಕಿನ ಸಂಬಂಧಕ್ಕೆ ‘ಮಾವು-ಬೇವು’ ಸಿನಿಮಾ ಅಮೃತ ದಾರ

     

    View this post on Instagram

     

    A post shared by Hombale Films (@hombalefilms)

    ಪೋಸ್ಟರ್ ಫಸ್ಟ್ ಲುಕ್‌ನಲ್ಲಿ ನಟ ಫಹಾದ್, ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಲುಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಕಿಯಿಲ್ಲದೇ ಹೊಗೆ ಇಲ್ಲ, ಇಲ್ಲಿ ಮೊದಲ ಕಿಡಿ ಎಂದು ಅಡಿಬರಹದೊಂದಿಗೆ ಚಿತ್ರದ ಲುಕ್ ರಿವೀಲ್ ಮಾಡಲಾಗಿದೆ.

    ಪವನ್ ಕುಮಾರ್ ಕೂಡ ವಿಭಿನ್ನ ಕಥೆಯನ್ನ ಫಹಾದ್- ಅಪರ್ಣಾ ಜೋಡಿಯೊಂದಿಗೆ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ‘ಧೂಮಂʼ ಸಿನಿಮಾ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ನಾಳೆ ‘ಧೂಮಂ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ :  ಹೊಂಬಾಳೆ ಫಿಲ್ಮ್ಸ್

    ನಾಳೆ ‘ಧೂಮಂ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಹೊಂಬಾಳೆ ಫಿಲ್ಮ್ಸ್

    ಲೂಸಿಯಾ ಪವನ್ (Lucia Pawan) ನಿರ್ದೇಶನದ ಧೂಮಂ (Dhoomam) ಸಿನಿಮಾದ ಫಸ್ಟ್ ಲುಕ್ (First Look) ಅನ್ನು ನಾಳೆ ಬೆಳಗ್ಗೆ 10.45ಕ್ಕೆ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಈ ಕುರಿತು ಸಂಸ್ಥೆಯು ಸೋಷಿಯಲ್ ಮೀಡಿಯಾದಲ್ಲಿ ವಿವರ ಹಂಚಿಕೊಂಡಿದೆ. ಮಲಯಾಳಂ ಸಿನಿಮಾ ಇದಾಗಿದ್ದು, ಪವನ್ ಇದೇ ಮೊದಲ ಬಾರಿಗೆ ಆ ಭಾಷೆಯಲ್ಲಿ ಚಿತ್ರ ಮಾಡಿದ್ದಾರೆ. ಈ ಪೋಸ್ಟರ್ ಪೋಸ್ಟ್ ಮಾಡಿದ ಬೆನ್ನಲ್ಲೇ ಸಲಾರ್ ಸಿನಿಮಾದ ಅಪ್ ಡೇಟ್ ನೀಡಿ ಎಂದು ಅಭಿಮಾನಿಗಳು ಕೇಳಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವಿಶೇಷ. ಪ್ರಧಾನ ಪಾತ್ರದಲ್ಲಿ ಫಾಹದ್ ಫಾಸಿಲ್ (Fahadh Faasil) ನಟಿಸಿದ್ದಾರೆ. ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಪರ್ಣ ಬಾಲಮುರಳಿ  (Aparna Balamurali)ಜೊತೆಯಾಗಿದ್ದಾರೆ. ಸೆಪ್ಟೆಂಬರ್ 30ರಂದು ಘೋಷಣೆಯಾಗಿದ್ದ ಈ ಸಿನಿಮಾ, ಅಕ್ಟೋಬರ್ 9ರಂದು ಮುಹೂರ್ತ ಮಾಡಿತ್ತು. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ‘ಧೂಮಂ’ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ.

    ಧೂಮಂ ಸಿನಿಮಾದ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ಹೊಂಬಾಳೆ ಸಂಸ್ಥೆ (Hombale Films), ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ ಎಂದಿದೆ. ಕ್ರಮವಾಗಿ ಮಲಯಾಳಂ, ಕನ್ನಡ, ತಮಿಳು ತೆಲುಗು ಭಾಷೆಯ ಹೆಸರು ಹಾಕಿರುವುದರಿಂದ ಮೂಲ ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕನ್ನಡ ಮತ್ತು ಇತರ ಭಾಷೆಗೆ ಸಿನಿಮಾವನ್ನು ಡಬ್ ಮಾಡುತ್ತಾರಾ ಕಾದು ನೋಡಬೇಕು.

  • ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಲಯಾಳಂ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ, ಪ್ರತಿಭಾವಂತ ಕಲಾವಿದ ಫಹಾದ್ ಫಾಸಿಲ್ (Fahad Faasil) ಇದೀಗ ಸಿಬಿಐ ಅಧಿಕಾರಿಯಾಗಿದ್ದಾರೆ. ಕನ್ನಡದ ಬಘೀರ (Bagheera)ಸಿನಿಮಾದಲ್ಲಿ ಅವರು ಇಂಥದ್ದೊಂದು ಪಾತ್ರ ನಿರ್ವಹಿಸಲಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ನಾಯಕನಾಗಿ ನಟಿಸಿರುವ ಈ ಚಿತ್ರವು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿಸಿದೆ.

    ಬಘೀರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಗಾಯ ಮಾಡಿಕೊಂಡಿದ್ದ ಶ್ರೀಮುರಳಿ, ಆನಂತರ ಆಸ್ಪತ್ರೆ ಸೇರಿ ಗಾಯಕ್ಕೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಮರಳಲಿದ್ದು, ಆಗ ಫಹಾದ್ ಫಾಸಿಲ್ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕಾಲಿವುಡ್ ವಿಕ್ರಮ್ ಸಿನಿಮಾ ಗೆಲುವಿನ ನಂತರ ಫಹಾದ್ ಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    ಅಂದಹಾಗೆ ಬಘೀರ್ ಸಿನಿಮಾವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಲಕ್ಕಿ ಚಿತ್ರದ ನಂತರ ಸೂರಿ ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ಫಹಾದ್ ಸಿಬಿಐ ಅಧಿಕಾರಿಯಾಗಿ ಶ್ರೀಮುರಳಿಗೆ ಸಾಥ್ ನೀಡಲಿದ್ದಾರೆ. ಮಂಗಳೂರು ಸೇರಿದಂತೆ ಹಲವು ಕಡೆ ಈಗಾಗಲೇ ಹಲವು ಹಂತದ ಚಿತ್ರೀಕರಣ ನಡೆದಿದೆ. ಫೆಬ್ರವರಿಯಿಂದ ಮುಂದಿನ ಹಂತದ ಚಿತ್ರೀಕರಣ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಧೂಮಂ’ ಸೆಟ್ ಗೆ ಭೇಟಿ ನೀಡಿದ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರು

    ‘ಧೂಮಂ’ ಸೆಟ್ ಗೆ ಭೇಟಿ ನೀಡಿದ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರು

    ಹೊಂಬಾಳೆ ಫಿಲಂಸ್​ನಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ‘ಧೂಮಂ’ ಚಿತ್ರದ ಚಿತ್ರೀಕರಣ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿಜಯ್ ಕುಮಾರ್​ ಕಿರಗಂದೂರು, ರಿಷಭ್​ ಶೆಟ್ಟಿ, ಸಪ್ತಮಿ ಗೌಡ ಮುಂತಾದವರು ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಚಿತ್ರೀಕರಣದಲ್ಲಿ ಫಹಾದ್​ ಫಾಸಿಲ್​, ಅಪರ್ಣಾ ಬಾಲಮುರಳಿ ಮತ್ತಿತರರು ಭಾಗವಹಿಸಿದ್ದು ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.

    ‘ಧೂಮಂ’ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ. ಇದನ್ನೂ ಓದಿ: ಅಭಿಷೇಕ್ ಮದುವೆ ಸುಳ್ಳು ಸುಳ್ಳು: ಸುಮಲತಾ ಅಂಬರೀಶ್ ಸ್ಪಷ್ಟನೆ

    ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಒಂದು ವಾರಗಳಿಂದ ಸತತವಾಗಿ ಚಿತ್ರೀಕರಣವಾಗುತ್ತಿದ್ದು, ಫಹಾದ್ ಫಾಸಿಲ್ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ನಡೆದ ಕಾಂತಾರ ಸಿನಿಮಾದ 50 ದಿನದ ಸಂಭ್ರಮದಲ್ಲೂ ಫಾಸಿಲ್ ಭಾಗಿಯಾಗಿದ್ದರು. ಅಲ್ಲದೇ, ಸಿನಿಮಾದ ಬಗ್ಗೆ ಈ ಹಿಂದೆಯೂ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಪವನ್ ಕುಮಾರ್-ಫಾಸಿಲ್ ಕಾಂಬಿನೇಷನ್‌ನ ‘ಧೂಮ್ʼ ಚಿತ್ರದ ಅದ್ಧೂರಿ ಮುಹೂರ್ತ

    ಹೊಂಬಾಳೆ ಬ್ಯಾನರ್‌ನ (Hombale Films) ಬಹುನಿರೀಕ್ಷಿತ ‘ಧೂಮ್’ (Dhoom) ಚಿತ್ರದ ಅದ್ಧೂರಿ ಮುಹೂರ್ತ ನೆರವೇರಿದೆ. ಪವನ್ ಕುಮಾರ್ (Pawan Kumar) ಮತ್ತು ಸೌತ್ ಸ್ಟಾರ್ ಫಾಸಿಲ್ (Fahadh Faasil) ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

     

    View this post on Instagram

     

    A post shared by Hombale Films (@hombalefilms)

    ಸಾಕಷ್ಟು ಸಿನಿಮಾಗಳನ್ನ ಅದರಲ್ಲೂ ಕೆಜಿಎಫ್ (KGF) ಅಂತಹ ಅದ್ಭುತ ಚಿತ್ರವನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಬ್ಯಾನರ್‌ನಲ್ಲಿ ‘ಧೂಮ್’ ಸಿನಿಮಾ ಮೂಡಿ ಬರುತ್ತಿದೆ. ʼಪುಷ್ಪʼ ಸ್ಟಾರ್ ಫಹಾದ್ ಫಾಸಿಲ್‌ಗೆ ಪವನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಿನ್ನ ಕಥೆಯನ್ನ ತೆರೆಯ ಮೇಲೆ ತೋರಿಸಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಧೂಮ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಅದ್ಧೂರಿಯಾಗಿ ಮುಹೂರ್ತ ಆಚರಿಸಿಕೊಂಡಿದೆ. ಇದನ್ನೂ ಓದಿ: `ಗಂಧದಗುಡಿ’ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ

    ಈ ಚಿತ್ರದ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅಪರ್ಣಾ ಬಾಲಮುರಳಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡಕ್ಕೆ ಶುಭಹಾರೈಸಲು ಪ್ರಶಾಂತ್ ನೀಲ್ ಕೂಡ ಪಾಲ್ಗೊಂಡಿದ್ದಾರೆ.

    ಅಪ್ಪುಗಾಗಿ ಮಾಡಿರುವ ಕಥೆಯಲ್ಲಿ ಫಾಸಿಲ್ ನಟಿಸುತ್ತಿದ್ದಾರಾ ಅಥವಾ ಫಾಸಿಲ್‌ಗೆ ಬೇರೆಯದ್ದೇ ಕಥೆಯನ್ನ ಪವನ್ ಕುಮಾರ್ ಸಿದ್ಧಪಡಿಸಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಮನೆಯಲ್ಲಿ ಮಾಡಿದ ಛತ್ರಿ ಕೆಲಸದ ಬಗ್ಗೆ ಬಾಯ್ಬಿಟ್ಟ ಅಮೂಲ್ಯ ಗೌಡ

    Live Tv
    [brid partner=56869869 player=32851 video=960834 autoplay=true]

  • ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಪವನ್ ನಿರ್ದೇಶಕ, ಫಹಾದ್ ಹೀರೋ

    ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಘೋಷಣೆ: ಪವನ್ ನಿರ್ದೇಶಕ, ಫಹಾದ್ ಹೀರೋ

    ಲೂಸಿಯಾ ಖ್ಯಾತಿಯ ಪವನ್ ಕುಮಾರ್ (Pawan Kumar) ಮತ್ತು ಮಲಯಾಳಂ ಹೆಸರಾಂತ ನಟ ಫಹಾದ್ ಫಾಸಿಲ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎಂದು ಮೊದಲ ಬಾರಿಗೆ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಅದೀಗ ನಿಜವಾಗಿದೆ. ಈ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿನ್ನೆಯಷ್ಟೇ ಹೊಸ ಸುದ್ದಿಯೊಂದನ್ನು ಕೊಡಲಿದ್ದೇವೆ ಎಂದು ಹೊಂಬಾಳೆ ಹೇಳಿಕೊಂಡಿತ್ತು.

    ಅಂದುಕೊಂಡಂತೆ ಆಗಿದ್ದರೆ, ಪವನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ದ್ವಿತ್ವ ಸಿನಿಮಾ ಆಗಬೇಕಿತ್ತು. ಪುನೀತ್ ಅವರ ಹಠಾತ್ ನಿಧನದಿಂದಾಗಿ ದ್ವಿತ್ವ ಸೆಟ್ಟೇರಲಿಲ್ಲ. ಈಗ ಅದೇ ಕಥೆಯನ್ನು ಫಾಸಿಲ್ ಗೆ ಮಾಡಲಿದ್ದಾರಾ ಅಥವಾ ಬೇರೆ ಕಥೆಯನ್ನು ಪವನ್ ಆಯ್ಕೆ ಮಾಡಿಕೊಂಡಿದ್ದಾರಾ ಅವರೇ ಹೇಳಬೇಕು. ಒಟ್ಟಿನಲ್ಲಿ ಫಾಸಿಲ್ ಗಾಗಿ ಪವನ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಧೂಮ್ (Dhoom) ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಧೂಮ್ ಸಿನಿಮಾದ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿರುವ ಹೊಂಬಾಳೆ ಸಂಸ್ಥೆ (Hombale Films), ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ ಎಂದಿದೆ. ಕ್ರಮವಾಗಿ ಮಲಯಾಳಂ, ಕನ್ನಡ, ತಮಿಳು ತೆಲುಗು ಭಾಷೆಯ ಹೆಸರು ಹಾಕಿರುವುದರಿಂದ ಮೂಲ ಮಲಯಾಳಂನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಕನ್ನಡ ಮತ್ತು ಇತರ ಭಾಷೆಗೆ ಸಿನಿಮಾವನ್ನು ಡಬ್ ಮಾಡುತ್ತಾರಾ ಕಾದು ನೋಡಬೇಕು.

    ಫಹಾದ್ ಫಾಸಿಲ್ (Fahadh Faasil) ನಾಯಕನಾಗಿ ನಟಿಸುತ್ತಿದ್ದರೆ, ಸೂರರೈ ಪೋಟ್ರು ನಾಯಕಿ ಅಪರ್ಣಾ ಬಾಲಮುರಳಿ (Aparna Balamurali) ಈ ಸಿನಿಮಾದ ನಾಯಕಿ. ಅಕ್ಟೋಬರ್ 9 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಫಹಾದ್ ಪ್ರತಿಭಾವಂತ ನಟ, ಪವನ್ ಕುಮಾರ್ ಹೊಸ ಬಗೆಯ ಯೋಚಿಸುವ ನಿರ್ದೇಶಕ. ಹಾಗಾಗಿ ಧೂಮಂ ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ದುಪ್ಪಟ್ಟಾಗಿದೆ. ಹೊಂಬಾಳೆ ಫಿಲ್ಸ್ಮ್ ನಿಂದ ಈಗಾಗಲೇ ಸಲಾರ್, ಬಘೀರ್, ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳು ರೆಡಿಯಾಗಿದ್ದು, ಈ ಸಿನಿಮಾ ಸಾಲಿಗೆ ಧೂಮ್ ಕೂಡ ಸೇರ್ಪಡೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪುಷ್ಪಾ 2 : ವಿಜಯ್ ಸೇತುಪತಿ ಎಂಟ್ರಿಗೆ ಫಹಾದ್ ಫಾಸಿಲ್ ಮುನಿಸು?

    ಪುಷ್ಪಾ 2 : ವಿಜಯ್ ಸೇತುಪತಿ ಎಂಟ್ರಿಗೆ ಫಹಾದ್ ಫಾಸಿಲ್ ಮುನಿಸು?

    ಲ್ಲು ಅರ್ಜುನ್ ನಟನೆಯ ‘ಪುಷ್ಪಾ 2’ ಸಿನಿಮಾ ಯಾವಾಗಿಂದ ಸೆಟ್ಟೇರುತ್ತದೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಸುದ್ದಿಗಳು ಹೊರ ಬರುತ್ತಲೇ ಇವೆ. ಅವೆಲ್ಲವೂ ವಿವಾದಕ್ಕೆ ಕಾರಣವಾಗುತ್ತಿವೆ. ಈ ಹಿಂದೆ ಪುಷ್ಪಾ 2 ಸಿನಿಮಾದ ಕಥೆಯನ್ನೇ ನಿರ್ದೇಶಕರು ಬದಲಾಯಿಸುತ್ತಿದ್ದಾರೆ ಎಂದಾಯಿತು. ನಂತರ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಇರುತ್ತಾರಾ ಎಂಬ ಪ್ರಶ್ನೆ ಮೂಡಿತ್ತು. ರಶ್ಮಿಕಾ ಮಂದಣ್ಣ ಪಾತ್ರ ಸಿನಿಮಾದ ಅರ್ಧಕ್ಕೆ ಸಾಯುತ್ತದೆ ಎಂದೂ ಸುದ್ದಿ ಹೊರಬಿತ್ತು. ಇದೀಗ ಮತ್ತೊಂದು ರಣರೋಚಕ ವಿಷಯ ಹರಡಿದೆ.

    ತೆಲುಗಿನ ಖ್ಯಾತ ನಟ ವಿಜಯ್ ಸೇತುಪತಿ ಪುಷ್ಪಾ 2 ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಪುಷ್ಪಾನನ್ನು ಹೆಡೆಮೂರಿ ಕಟ್ಟುವುದಕ್ಕೆ ಈ ಪೊಲೀಸ್ ಪಾತ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ಪುಷ್ಪಾ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ಫಹಾದ್ ಫಾಸಿಲ್ ಸಮರ್ಥವಾಗಿ ನಿಭಾಯಿಸಿದ್ದರು. ಈ ಬಾರಿ ಅವರ ಪಾತ್ರ ಇರುತ್ತಾ ಇಲ್ಲವಾ ಎನ್ನುವುದೇ ಸಸ್ಪೆನ್ಸ್. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ವಿಜಯ್ ಸೇತುಪತಿಯ ಪಾತ್ರ ಎಂಟ್ರಿ ಆಗುತ್ತಿದ್ದಂತೆಯೇ ಫಹಾದ್ ಫಾಸಿಲ್ ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪೊಲೀಸ್ ಅಧಿಕಾರಿಯ ಪಾತ್ರವನ್ನು ತಾವು ಮಾಡಿದ್ದರಿಂದ, ಅದನ್ನೇ ಮುಂದುವರೆಸಿಕೊಂಡು ಹೋಗಬಹುದಿತ್ತಲ್ಲ ಎಂದು ಫಾಸಿಲ್ ಕೇಳಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಪಾತ್ರದ ಅವಶ್ಯಕತೆ ನನಗೆ ಕಾಣುತ್ತಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ ಎನ್ನುವುದು ಈಗಿರುವ ಸುದ್ದಿ.

    Live Tv
    [brid partner=56869869 player=32851 video=960834 autoplay=true]

  • Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಅಂದುಕೊಂಡಂತೆ ಆಗಿದ್ದರೆ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ದ್ವಿತ್ವ ಸಿನಿಮಾ ಮಾಡಬೇಕಿತ್ತು. ಪುನೀತ್ ರಾಜ್ ಕುಮಾರ್ ಬದುಕಿದ್ದರೆ, ಈ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿರುತ್ತಿತ್ತು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಇನ್ನೇನು ಸಿನಿಮಾದ ಶೂಟಿಂಗ್ ಗೆ ಹೊರಡಬೇಕಿದ್ದ ಅಪ್ಪು ಲೋಕವನ್ನೇ ಬಿಟ್ಟು ನಡೆದು ಬಿಟ್ಟರು. ಹಾಗಾಗಿ ದ್ವಿತ್ವ ಸೇರಿದಂತೆ ಹಲವು ಸಿನಿಮಾಗಳು ಹಾಗೆಯೇ ಉಳಿದುಕೊಂಡವು.

    ದ್ವಿತ್ವ ಸಿನಿಮಾ ನಿಲ್ಲುತ್ತಿದ್ದಂತೆಯೇ ಈ ಕಥೆಯನ್ನು ಪವನ್ ಕುಮಾರ್ ಏನು ಮಾಡಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿ ಬಂತು. ಈ ಕುರಿತು ಪವನ್ ಕೆಲ ಮಾಧ್ಯಮಗಳಲ್ಲಿ ಸ್ಪಷ್ಟನೆಯನ್ನೂ ನೀಡಿದರು. ಸೂಕ್ತ ಕಲಾವಿದರನ್ನು ಹುಡುಕಿ ಇದೇ ಕಥೆಯನ್ನೇ ಸಿನಿಮಾ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಬಹುಶಃ ಈ ಕಥೆಯನ್ನು ದಕ್ಷಿಣದ ಖ್ಯಾತ ನಟ ಫಹಾದ್ ಫಾಸಿಲ್ ಗಾಗಿ ಮಾಡುತ್ತಿದ್ದಾರಾ ಎನ್ನುವ ಕುತೂಹಲ ಮೂಡಿದೆ. ಕಾರಣ ಅವರು ಫಹಾದ್ ಗಾಗಿ ತಮಿಳಿನಲ್ಲಿ ಸಿನಿಮಾವೊಂದನ್ನು ಮಾಡಲಿದ್ದಾರಂತೆ. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಅಧಿಕೃತವಾಗಿ ಪವನ್ ಕುಮಾರ್ ಈ ವಿಷಯವನ್ನು ಹೇಳದೇ ಇದ್ದರೂ, ಅವರ ಆಪ್ತರ ಖಚಿತ ಮಾಹಿತಿ ಪ್ರಕಾರ ಫಹಾದ್ ಫಾಸಿಲ್ ಜೊತೆ ಈಗಾಗಲೇ ಮಾತುಕತೆ ಮಾಡಿದ್ದಾರಂತೆ. ಅದೇ ಸಿನಿಮಾದ ಕೆಲಸಗಳಲ್ಲೇ ಪವನ್ ಕುಮಾರ್ ಸದ್ಯ ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳಲ್ಲೇ ಈ ಸಿನಿಮಾ ಸೆಟ್ಟೇರಲಿದೆಯಂತೆ. ಆದರೆ, ಫಾಸಿಲ್ ಗಾಗಿ ದ್ವಿತ್ವ ಕಥೆಯನ್ನೇ ಮಾಡುತ್ತಾರಾ ಅಥವಾ ಹೊಸ ಕಥೆಯನ್ನು ಬರೆದುಕೊಂಡಿದ್ದಾರಾ ಎನ್ನುವುದೇ ಸಸ್ಪೆನ್ಸ್.

    Live Tv
    [brid partner=56869869 player=32851 video=960834 autoplay=true]