Tag: ಫಹಾದ್‌ ಅಹ್ಮದ್‌

  • ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

    ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

    ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಫೆಬ್ರವರಿ 16 ರಂದು ಹಸೆಮಣೆಗೆ ಏರಿ, ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದ್ದರು. ಇದೀಗ ಮತ್ತೊಂದು ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು, ತಾವು ತಾಯಿ ಆಗುತ್ತಿರುವುದಾಗಿ ತಿಳಿಸಿದ್ದಾರೆ. ತಮಗೀಗ ನಾಲ್ಕು ತಿಂಗಳು ಎಂದು ಹೇಳಿಕೊಂಡಿದ್ದಾರೆ. ಮದುವೆಯಾಗಿ ಮೂರುವರೆ ತಿಂಗಳಿಗೆ ನಾಲ್ಕು ತಿಂಗಳ ಗರ್ಭಿಣಿ ಹೇಗೆ ಎಂದು ಸಖತ್ ಟ್ರೋಲ್ (Troll) ಆಗುತ್ತಿದ್ದಾರೆ.

    ತಾವು ತಾಯಿ (Pregnant) ಆಗುತ್ತಿರುವ ವಿಷಯವನ್ನು ಸ್ವತಃ ಸ್ವರಾ ಭಾಸ್ಕರ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ‘ನಿಮ್ಮೆಲ್ಲ ಪ್ರಾರ್ಥನೆಗಳು ಒಟ್ಟಿಗೆ ನೆರವೇರುತ್ತವೆ. ವಿಶ್ ಮಾಡಿ. ಅಕ್ಟೋಬರ್ ಬೇಬಿ’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲಿಗೆ ಅಕ್ಟೋಬರ್ ನಲ್ಲಿ ಕಂದನನ್ನು ಮನೆ ತುಂಬಿಸಿಕೊಳ್ಳಲು ಅವರು ರೆಡಿಯಾಗಿದ್ದಾರೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    ಸ್ವರಾ ಭಾಸ್ಕರ್ ಇತ್ತೀಚಿಗೆ ಪೊಲಿಟಿಕಲ್ ಲೀಡರ್ ಫಹಾದ್ ಅಹ್ಮದ್ (Fahad Ahamad) ಅವರನ್ನ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಬಹುಕಾಲದ ಗೆಳೆಯನ ಜೊತೆ ಸ್ವರಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ತಮ್ಮ ಮೊದಲ ರಾತ್ರಿಯ ಬೆಡ್‌ರೂಮ್ ಫೋಟೋವನ್ನ ನಟಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು.

    ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇತ್ತೀಚಿಗೆ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು. ಅಣ್ಣ ಎಂದು ಕರೆದು ಈಗ ಅವರನ್ನೇ ಮದುವೆಯಾಗಿದ್ದೀರಾ ಎಂದು ಟ್ರೋಲ್ ಮಾಡಲಾಯ್ತು. ಹೀಗೆ ಸಾಕಷ್ಟು ಟೀಕೆಗಳ ನಡುವೆ ಈ ನವಜೋಡಿ ದಾಂಪತ್ಯ ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದಾರೆ.

     

    ಬರೀ ವಿವಾದದ ಮೂಲಕವೇ ಗುರುತಿಸಿಕೊಂಡಿದ್ದ ಸ್ವರಾ, ನೇರ ದಿಟ್ಟ ಮಾತುಗಳಿಂದ ಸಾಕಷ್ಟು ವಿರೋಧಿಗಳನ್ನು ಗಳಿಸಿದ್ದರು. ಸ್ವರಾ ಏನೇ ಮಾತನಾಡಿದರೂ, ಅದು ವಿವಾದವಾಗಿ ಬದಲಾಗುತ್ತಿತ್ತು. ಈಗ ಅವೆಲ್ಲದರಿಂದ ದೂರ ಸರಿದು, ಹೊಸ ಜೀವನ ಕಟ್ಟಿಕೊಂಡಿದ್ದಾರೆ. ಆ ಜೀವನಕ್ಕೆ ಮತ್ತೊಂದು ಜೀವ ಬಂದು ಸೇರುತ್ತಿದೆ.

  • ಅಭಿಮಾನಿಗಳಿಗೆ ಗುಡ್ ನ್ಯೂಸ್ : ತಾಯಿ ಆಗಲಿದ್ದಾರೆ ನಟಿ ಸ್ವರಾ ಭಾಸ್ಕರ್

    ಅಭಿಮಾನಿಗಳಿಗೆ ಗುಡ್ ನ್ಯೂಸ್ : ತಾಯಿ ಆಗಲಿದ್ದಾರೆ ನಟಿ ಸ್ವರಾ ಭಾಸ್ಕರ್

    ಬಾಲಿವುಡ್ ಖ್ಯಾತ ನಟಿ ಸ್ವರಾ ಭಾಸ್ವರ್ (Swara Bhaskar) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಅವರು ತಾಯಿ (Pregnant) ಆಗುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ನಿಮ್ಮೆಲ್ಲ ಪ್ರಾರ್ಥನೆಗಳು ಒಟ್ಟಿಗೆ ನೆರವೇರುತ್ತವೆ. ವಿಶ್ ಮಾಡಿ. ಅಕ್ಟೋಬರ್ ಬೇಬಿ’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲಿಗೆ ಅಕ್ಟೋಬರ್ ನಲ್ಲಿ ಕಂದನನ್ನು ಮನೆ ತುಂಬಿಸಿಕೊಳ್ಳಲು ಅವರು ರೆಡಿಯಾಗಿದ್ದಾರೆ.

    ಸ್ವರಾ ಭಾಸ್ಕರ್ ಇತ್ತೀಚಿಗೆ ಪೊಲಿಟಿಕಲ್ ಲೀಡರ್ ಫಹಾದ್ ಅಹ್ಮದ್ (Fahad Ahamad) ಅವರನ್ನ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಬಹುಕಾಲದ ಗೆಳೆಯನ ಜೊತೆ ಸ್ವರಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ತಮ್ಮ ಮೊದಲ ರಾತ್ರಿಯ ಬೆಡ್‌ರೂಮ್ ಫೋಟೋವನ್ನ ನಟಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು. ಇದನ್ನೂ ಓದಿ:ಹಿರಣ್ಯ ಚಿತ್ರಕ್ಕೆ ನಾಯಕಿಯಾದ ಖಾಸಗಿ ಕಂಪೆನಿ ಉದ್ಯೋಗಿ ರಿಹಾನಾ

    ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇತ್ತೀಚಿಗೆ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು. ಅಣ್ಣ ಎಂದು ಕರೆದು ಈಗ ಅವರನ್ನೇ ಮದುವೆಯಾಗಿದ್ದೀರಾ ಎಂದು ಟ್ರೋಲ್ ಮಾಡಲಾಯ್ತು. ಹೀಗೆ ಸಾಕಷ್ಟು ಟೀಕೆಗಳ ನಡುವೆ ಈ ನವಜೋಡಿ ದಾಂಪತ್ಯ ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದಾರೆ.

     

    ಬರೀ ವಿವಾದದ ಮೂಲಕವೇ ಗುರುತಿಸಿಕೊಂಡಿದ್ದ ಸ್ವರಾ, ನೇರ ದಿಟ್ಟ ಮಾತುಗಳಿಂದ ಸಾಕಷ್ಟು ವಿರೋಧಿಗಳನ್ನು ಗಳಿಸಿದ್ದರು. ಸ್ವರಾ ಏನೇ ಮಾತನಾಡಿದರೂ, ಅದು ವಿವಾದವಾಗಿ ಬದಲಾಗುತ್ತಿತ್ತು. ಈಗ ಅವೆಲ್ಲದರಿಂದ ದೂರ ಸರಿದು, ಹೊಸ ಜೀವನ ಕಟ್ಟಿಕೊಂಡಿದ್ದಾರೆ. ಆ ಜೀವನಕ್ಕೆ ಮತ್ತೊಂದು ಜೀವ ಬಂದು ಸೇರುತ್ತಿದೆ.

  • ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಕಂಗೊಳಿಸಿದ ಸ್ವರಾ ಭಾಸ್ಕರ್

    ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಕಂಗೊಳಿಸಿದ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಫಹಾದ್ ಅಹ್ಮದ್ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಸ್ವರಾ -ಫಹಾದ್ ಅವರ ಮತ್ತೊಂದು ಆರತಕ್ಷತೆ ಕಾರ್ಯಕ್ರಮವನ್ನ (Reception) ವರನ ಕುಟುಂಬದಿಂದ ಆಯೋಜಿಸಲಾಗಿತ್ತು. ಈ ಇವೆಂಟ್‌ನಲ್ಲಿ ನಟಿ ಸ್ವರಾ ಅವರು ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿರುವ ಲೆಹೆಂಗಾದಲ್ಲಿ ಮಿಂಚಿದ್ದಾರೆ.‌ ಇದನ್ನೂ ಓದಿ: ಸೆಕ್ಸ್ ಸಿಂಬಲ್ ಅಂತ ಕರೆದರೆ ಬೇಸರವಿಲ್ಲ ಎಂದ ನಟಿ ಮಲೈಕಾ

     

    View this post on Instagram

     

    A post shared by Swara Bhasker (@reallyswara)

    ಸ್ವರಾ- ಫಹಾದ್ ರಿಜಿಸ್ಟರ್ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದೀಗ ಕುಟುಂಬಸ್ಥರ ಆಸೆಯಂತೆ ಸ್ವರಾ ಮತ್ತೆ ಫಹಾದ್ ಜೊತೆ ತೆಲುಗು ಸಂಪ್ರದಾಯದಂತೆ ಮದುವೆಯಾದರು. ನಟಿ ಮನೆ ಕಡೆಯಿಂದ ಅದ್ದೂರಿ ಆರತಕ್ಷತೆ ಮಾಡಲಾಗಿತ್ತು. ಇದೀಗ ವರನ ಮನೆ ಕಡೆಯಿಂದ ಮತ್ತೊಂದು ಆರತಕ್ಷತೆ ಮಾಡಲಾಗಿದೆ.

    ಹೆವಿ ಎಂಬ್ರಾಯಿಡಿರಿ ವರ್ಕ್ ಇರುವ ಲೆಹೆಂಗಾವನ್ನ ನಟಿ ಧರಿಸಿದ್ದರು. ಮೂಗಿಗೆ ದೊಡ್ಡ ರಿಂಗ್ ಧರಿಸಿ, ಗೋಲ್ಡ್ ಬಣ್ಣ ಕುರ್ತಾದಲ್ಲಿ ನಟಿ ಕಂಗೊಳಿದ್ದಾರೆ. ಪಾಕಿಸ್ತಾನ ಪ್ರಸಿದ್ಧ ಡಿಸೈನರ್ ವಿನ್ಯಾಸ ಮಾಡಿರುವ ಲೆಹೆಂಗಾ ಇದಾಗಿದೆ.

     

    View this post on Instagram

     

    A post shared by Swara Bhasker (@reallyswara)

    ಸ್ವರಾ ಪತಿ ಫಹಾದ್ ಅಹ್ಮದ್ ರಾಜಕೀಯ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸಮಾಜವಾದಿ ಪಕ್ಷದ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

  • ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

    ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

    ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಫಹಾದ್ ಅಹ್ಮದ್ (Fahad Ahmad) ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ. ಸ್ವರಾ ಮದುವೆ ಆರತಕ್ಷತೆಯಲ್ಲಿ (Reception) ರಾಹುಲ್ ಗಾಂಧಿ (Rahul Gandhi) ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ

    ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗಿರುವುದಾಗಿ ನಟಿ ಸ್ವರಾ ತಿಳಿಸಿದ್ದರು. ಇದೀಗ ಗುರುಹಿರಿಯರ ಇಷ್ಟದಂತೆ ಹಿಂದೂ ಸಂಪ್ರದಾಯದಂತೆ ಸಮಾಜವಾದಿ ಪಕ್ಷದ ನಾಯಕ ಫಹಾದ್ – ಸ್ವರಾ ಮದುವೆಯಾಗಿದ್ದಾರೆ. ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಕೂಡ ದೆಹಲಿಯಲ್ಲಿ ನಡೆದಿದೆ. ಸಿನಿಮಾ ಸೆಲೆಬ್ರಿಟಿಗಳು ಮತ್ತು ರಾಜಕೀಯ ಪಕ್ಷದ ನಾಯಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

    ಸ್ವರಾ- ಫಹಾದ್ ಆರತಕ್ಷತೆ ಸಂಭ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ. ನವಜೋಡಿಗೆ ಶುಭಹಾರೈಸಿ, ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ.

    ಇನ್ನೂ ರಾಹುಲ್ ಗಾಂಧಿ- ಸ್ವರಾ ಮೊದಲಿನಿಂದಲೇ ಪರಿಚಿತರು. ಕಳೆದ ವರ್ಷ ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ನಡೆದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪಾಲ್ಗೊಳ್ಳುವ ಮೂಲಕ ಗುರುತಿಸಿಕೊಂಡಿದ್ದರು.

  • ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್

    ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ ಇತ್ತೀಚಿಗೆ ಪೊಲಿಟಿಕಲ್ ಲೀಡರ್ ಫಹಾದ್ ಅಹ್ಮದ್ (Fahad Ahamad) ಅವನ್ನ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಬಹುಕಾಲದ ಗೆಳೆಯನ ಜೊತೆ ಸ್ವರಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ತಮ್ಮ ಮೊದಲ ರಾತ್ರಿಯ ಬೆಡ್‌ರೂಮ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇತ್ತೀಚಿಗೆ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು. ಅಣ್ಣ ಎಂದು ಕರೆದು ಈಗ ಅವರನ್ನೇ ಮದುವೆಯಾಗಿದ್ದೀರಾ ಎಂದು ಟ್ರೋಲ್ ಮಾಡಲಾಯ್ತು. ಹೀಗೆ ಸಾಕಷ್ಟು ಟೀಕೆಗಳ ನಡುವೆ ಈ ನವಜೋಡಿ ದಾಂಪತ್ಯ ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಇತ್ತೀಚಿಗಷ್ಟೇ ಸ್ವರಾ- ಫಯಾದ್ ಜೋಡಿ ಮೊದಲ ರಾತ್ರಿಯನ್ನು ಆಚರಿಸಿದ್ದಾರೆ. ಸ್ವರಾ ಅವರ ತಾಯಿ ಮಲಗುವ ಕೋಣೆಯನ್ನು ಸುಂದರವಾಗಿ ಅಲಂಕರಿಸಿದರು. ಈ ಕುರಿತ ಫೋಟೋವನ್ನ ಸ್ವರಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದು ಕೂಡ ಈಗ ಟ್ರೋಲಿಗರ ಬಾಯೊಗೆ ಆಹಾರವಾಗಿದೆ. ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋವನ್ನ ಹಂಚಿಕೊಂಡಿದ್ದ ನಟಿಯ ಪೋಸ್ಟ್ ಸಖತ್ ಟ್ರೋಲ್ ಮಾಡಲಾಗುತ್ತಿದೆ.

  • ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ವರಾ ಭಾಸ್ಕರ್

    ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhaskar) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಬಹುಕಾಲದ ಗೆಳೆಯ ಫಹಾದ್ ಅಹ್ಮದ್ (Fahad Ahamad) ಜೊತೆ ವೈವಾಹಿಕ (Wedding) ಜೀವನಕ್ಕೆ ನಟಿ ಸ್ವರಾ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಮದುವೆ ಬಳಿಕ ಅದಿತಿ ಪ್ರಭುದೇವ ಬದಲಾಗಿದ್ದಾರಾ? ಸ್ಪಷ್ಟನೆ ನೀಡಿದ ನಟಿ ತಾಯಿ

    ನಟಿ ಸ್ವರಾ ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತೆರೆಯ ಮೇಲೆ ಸೈ ಎನಿಸಿಕೊಂಡಿದ್ದರು. ಈಗ ಸದ್ದಿಲ್ಲದೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಪೊಲಿಟಿಕಲ್ ಲೀಡರ್ ಫಹಾದ್ ಜೊತೆ ನಟಿ ಸ್ವರಾ ಅವರು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ವರ್ಷ ಜ.6ರಂದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ಸಿಹಿಸುದ್ದಿಯನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪತಿ ಫಹಾದ್ ಜೊತೆಗಿನ ಫೋಟೋ ಶೇರ್ ಮಾಡಿ, ನನ್ನ ಹೃದಯಕ್ಕೆ ಸ್ವಾಗತ, ಇದು ಅಸ್ತವ್ಯಸ್ತವಾಗಿದೆ, ಆದರೆ ಅದು ನಿಮ್ಮದು ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Swara Bhasker (@reallyswara)

    ಕಳೆದ 2019ರಿಂದ ಫಹಾದ್ (Fahad) ಮತ್ತು ಸ್ವರಾ (Actress Swara) ಡೇಟಿಂಗ್ ಮಾಡ್ತಿದ್ದರು. ಪೊಲಿಟಿಕಲ್‌  ರ‍್ಯಾಲಿವೊಂದರಲ್ಲಿ ಮೊದಲ ಬಾರಿಗೆ ಫಹಾದ್-‌ ಸ್ವರಾ ಭೇಟಿಯಾಗಿದ್ದರು. ಈ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡದೇ, ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯಾಗುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಇನ್ನೂ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದಲ್ಲಿ ಅಧ್ಯಕ್ಷರಾಗಿ ಫಹಾದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k