Tag: ಫಹಾದ್‌ ಅಹ್ಮ

  • ಅಮ್ಮನ ಮನೆಗೆ ವಿದಾಯ ಹೇಳುವಾಗ ಕಣ್ಣೀರಿಟ್ಟ ನಟಿ ಸ್ವರಾ ಭಾಸ್ಕರ್

    ಅಮ್ಮನ ಮನೆಗೆ ವಿದಾಯ ಹೇಳುವಾಗ ಕಣ್ಣೀರಿಟ್ಟ ನಟಿ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್‌ (Swara Bhaskar) ಅವರು ಫಹಾದ್ ಅಹ್ಮದ್ (Fahad ahamad) ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೇ ತೆಲುಗು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ವಿಶೇಷ ಕಾಯ್ದೆಯಡಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈಗ ಗುರುಹಿರಿಯರ ಇಷ್ಟದಂತೆ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ಅಮ್ಮನ ಮನೆಗೆ ವಿದಾಯ ಹೇಳುವ ಸಮಯದಲ್ಲಿ ನಟಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾಗಲು ಭಾರಿ ಮೊತ್ತ ಖರ್ಚು ಮಾಡಿದ ರಾಜಮೌಳಿ ಆ್ಯಂಡ್ ಟೀಂ

    ನಟಿ ಸ್ವರಾ ಭಾಸ್ಕರ್ ಅವರು ಮದುವೆ ಸಂದರ್ಭದಲ್ಲಿ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದರು. ಮದುವೆ ಬಳಿಕ ಗಂಡನ ಮನೆಗೆ ಹೊರಡುವಾಗ ಸ್ವರಾ ಭಾಸ್ಕರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸ್ವರಾ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಂಬಾ ಕಷ್ಟದ ಕ್ಷಣವಾಗಿತ್ತು ಎಂದು ಸ್ವರಾ ತಂದೆ ಕೂಡ ಭಾವುಕರಾಗಿದ್ದಾರೆ. ಸ್ವರಾ ಪಕ್ಕದಲ್ಲಿ ತಾಯಿ ಇರಾ ಭಾಸ್ಕರ್ ಹಾಗೂ ಪತಿ ಫಹಾನ್ ನಿಂತಿದ್ದರು. ಒಬ್ಬರು ಕವನವನ್ನು ಓದಿ ಹೇಳುತ್ತಿದ್ದರು. ಆಗ ಸ್ವರಾ ಕಣ್ಣೀರಿಟ್ಟಿದ್ದಾರೆ. ತನ್ನ ತಾಯಿ ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೋಗುವ ಕ್ಷಣ ಅದು. ಸ್ವರಾ ಭಾಸ್ಕರ್ ಭಾವುಕರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ತೆಲುಗು ಶೈಲಿಯಲ್ಲಿ (Telagu Culture Wedding) ಸ್ವರಾ ಮದುವೆಯಾಗಿದ್ದಾರೆ. ತೆಲುಗು ಸಂಸ್ಕೃತಿಯನ್ನು ಸಂಕೇತಿಸುವ ವಿಶೇಷ ಮಂಗಲಸೂತ್ರವನ್ನು ಧರಿಸಿದ್ದಾರೆ. ಸ್ವರಾ ತಾಯಿ ಇರಾ ಭಾಸ್ಕರ್ ಬಿಹಾರದವರು ಆದರೆ ಅವರ ತಂದೆ ಉದಯ್ ಭಾಸ್ಕರ್ ತೆಲುಗು ಮೂಲದವರು. ಹಾಗಾಗಿ ಸ್ವರಾ ತೆಲುಗು ಶೈಲಿಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮಂಗಳಸೂತ್ರ ಧರಿಸಿರುವ ಸ್ವರಾ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವರಾ ಜೋಡಿಗೆ ಫ್ಯಾನ್ಸ್ ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಮದುವೆ ಮತ್ತು ಆರತಕ್ಷತೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತ್ತು. ಸ್ವರಾ ಮದುವೆ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅರವಿಂದ್‌ ಕೇಜ್ರಿವಾಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಹೊಸ ಜೋಡಿಗೆ ಶುಭಹಾರೈಸಿದ್ದರು.