Tag: ಫಸ್ಟ್ ನ್ಯೂರೋ ಆಸ್ಪತ್ರೆ

  • ಕೊರೊನಾ ಹಾಟ್‍ಸ್ಪಾಟ್ ಆಯ್ತು ಮಂಗ್ಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ

    ಕೊರೊನಾ ಹಾಟ್‍ಸ್ಪಾಟ್ ಆಯ್ತು ಮಂಗ್ಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗಲಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕು ತಗುಲಿಸಿಕೊಂಡಿದ್ದ ಇಬ್ಬರು ಮಹಿಳೆಯರಿಂದ ಅವರ ಮಕ್ಕಳಿಗೂ ಸೋಂಕು ಹರಡಿದೆ.

    ಎಪ್ರಿಲ್ 19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾ ನಿವಾಸಿ ಮಹಿಳೆಯ 16 ವರ್ಷದ ಪುತ್ರಿಗೆ ಸೋಂಕು ಆಗಿದ್ದರೆ, ಬೋಳೂರಿನ ವೃದ್ಧ ಮಹಿಳೆಯ ಸಂಪರ್ಕದಲ್ಲಿದ್ದ 11 ವರ್ಷದ ಬಾಲಕಿ ಮೊಮ್ಮಗಳು ಮತ್ತು 35 ವರ್ಷದ ಮಗಳಿಗೆ ಸೋಂಕು ಕಾಣಿಸಿಕೊಂಡಿದೆ.

    ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಒಟ್ಟು 13 ಮಂದಿಗೆ ಕೊರೊನಾ ಹರಡಿದ್ದು, ಎಲ್ಲರೂ ಈಗ ವೆನ್ಲಾಕ್ ಮತ್ತು ಫಸ್ಟ್ ನ್ಯೂರೋ ಐಸೊಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಇರುವ ಬಹಳಷ್ಟು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 15 ದಿನಗಳ ಬಳಿಕ ಕೆಲವರಲ್ಲಿ ಸೋಂಕು ದೃಢಪಡುತ್ತಿದೆ.

    ಈಗ ಫಸ್ಟ್ ನ್ಯೂರೋ ಆಸ್ಪತ್ರೆಯೇ ದಕ್ಷಿಣ ಕನ್ನಡದ ಪಾಲಿಗೆ ಕೊರೊನಾ ವಾಹಕ ಆಗಿ ಪರಿವರ್ತನೆಗೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ನಿಗಾ ಇಟ್ಟಿದ್ದು ಬಂಟ್ವಾಳ ಮತ್ತು ಮಂಗಳೂರಿನ ಒಟ್ಟು ಎಂಟು ಕಡೆ ಈಗ ಸೀಲ್‍ಡೌನ್ ಜಾರಿಯಲ್ಲಿದೆ. ಉಳಿದಂತೆ ಜಿಲ್ಲೆಯಾದ್ಯಂತ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಚಟುವಟಿಕೆ ಆರಂಭಗೊಂಡಿದೆ.

  • ರೆಡ್‍ಝೋನ್ ಮಂಗಳೂರಿನಲ್ಲಿ ಮತ್ತೆ ಆತಂಕ- ಮಹಿಳೆಗೆ ಕೊರೊನಾ ಸೋಂಕು

    ರೆಡ್‍ಝೋನ್ ಮಂಗಳೂರಿನಲ್ಲಿ ಮತ್ತೆ ಆತಂಕ- ಮಹಿಳೆಗೆ ಕೊರೊನಾ ಸೋಂಕು

    ಮಂಗಳೂರು: ಮಂಗಳೂರಿನ ಮಹಿಳೆಗೆ ಕೊರೊನಾ ಸೋಂಕು ತಗುಲಿರೋದು ಇಂದು ದೃಢಪಟ್ಟಿದೆ. ಪಾಶ್ರ್ವವಾಯು ಪೀಡಿತರಾಗಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೋಳೂರಿನ ಮಹಿಳೆಗೆ ಸೋಂಕು ತಗಲಿದೆ.

    ಏಪ್ರಿಲ್ 20ರಂದೇ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರೂ, ಅದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಮಹಿಳೆಗೆ ಎರಡು ದಿನಗಳ ಹಿಂದೆ ಸೋಂಕು ತಗುಲಿತ್ತು. ಆಕೆಯ ಸಂಪರ್ಕದಿಂದ ಈಗ ಬೋಳೂರಿನ ಮಹಿಳೆಗೂ ಸೋಂಕು ತಗಲಿದೆ. ಹೀಗಾಗಿ ಮಂಗಳೂರು ನಗರದ ಬೋಳೂರಿನಲ್ಲಿ ಸೋಂಕಿತೆಯ ಮನೆ ಇರುವ 200 ಮೀಟರ್ ಆಸುಪಾಸಿನಲ್ಲಿ ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ.

    ಈ ಪರಿಸರದಲ್ಲಿ 135 ಮನೆಗಳಿದ್ದು ಸುಮಾರು 650 ಮಂದಿ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ. ಇದಲ್ಲದೆ ಮಹಿಳೆಯ ಮನೆಯಲ್ಲಿದ್ದ ಐದು ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇದೇ ವೇಳೆ ಬೋಳೂರಿನಿಂದ ಐದು ಕಿಮೀ ವ್ಯಾಪ್ತಿಯಲ್ಲಿ ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಪೊಲೀಸರು ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ನಿರ್ಬಂಧಿಸಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 22ಕ್ಕೇರಿದ್ದು ಜಿಲ್ಲೆಯನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ.

  • ನರ ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್

    ನರ ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್

    – ಆರೈಕೆ ಮಾಡುತ್ತಿದ್ದ ಮಗನಿಗೂ ಸೋಂಕು

    ಮಂಗಳೂರು: ಕೊರೊನಾ ಸೋಂಕಿತ ವೃದ್ಧೆಯ ಸಾವಿನ ಬಳಿಕ ಕೊರೊನಾ ಹಾಟ್‍ಸ್ಪಾಟ್ ಆಗಿ ಬದಲಾಗಿರುವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ತಗಲಿದೆ.

    ವೃದ್ಧೆಯ ಪಕ್ಕದ ಬೆಡ್ ನಲ್ಲಿದ್ದ 80 ವರ್ಷದ ತಾಯಿ ಮತ್ತು ಆಕೆಯ ಆರೈಕೆಗೆ ಬಂದಿದ್ದ 45 ವರ್ಷದ ಮಗನಿಗೆ ಸೋಂಕು ಕಾಣಿಸಿಕೊಂಡಿದೆ. ಇವರು ಮಂಗಳೂರಿನ ಶಕ್ತಿನಗರದ ನಿವಾಸಿಗಳಾಗಿದ್ದು, ಆ ಏರಿಯಾವನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲಾಗಿದೆ.

    ನರ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯನ್ನು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ವತಃ ಮಗನೇ ಜೊತೆಗಿದ್ದು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಇವರಿಬ್ಬರಿಗೂ ಸೋಂಕು ತಗಲಿದ್ದು ಮತ್ತೊಂದು ರೀತಿಯ ಆತಂಕಕ್ಕೆ ಒಳಗಾಗಿದ್ದಾರೆ. ಏಪ್ರಿಲ್ 23ರಂದು ಇದೇ ಆಸ್ಪತ್ರೆಯಲ್ಲಿದ್ದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದರು. ಆ ಬಳಿಕ ಖಾಸಗಿ ಆಸ್ಪತ್ರೆಯನ್ನು ವಶಕ್ಕೆ ಪಡೆದು ಎಲ್ಲ ಸಿಬಂದಿ ಮತ್ತು ರೋಗಿಗಳನ್ನು ತಪಾಸಣೆಗೆ ಒಳಪಡಿಸಿತ್ತು. ಇದನ್ನು ಓದಿ: ತಾಯಿ, ಮಗನಿಗೆ ಕೊರೊನಾ – ಮಂಗ್ಳೂರು ನಗರ ಸೀಲ್ ಡೌನ್

    ಮೃತ ಪಟ್ಟ ಸೋಂಕಿತೆಯ ಸಂಪರ್ಕದಲ್ಲಿ ಇದ್ದ 190ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಈಗ ದಿನದಿಂದ ದಿನಕ್ಕೆ ಆಸ್ಪತ್ರೆಯಲ್ಲಿ ಇದ್ದವರಿಗೆ ಕಪರೊನಾ ಪಾಸಿಟಿವ್ ಬಂದಿದೆ. ನಿನ್ನೆಯಷ್ಟೆ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಮೂಲಕ ಆಸ್ಪತ್ರೆಗೆ ಬಂದು ಹೋದವರಿಗೆಲ್ಲ ಆತಂಕ ಶುರುವಾಗಿದೆ.