Tag: ಫಸ್ಟ್ ಗ್ಲಿಂಪ್ಸ್

  • ‘ಡೆವಿಲ್’ ಅಂಗಳದಲ್ಲಿ ಪವರ್ ಫುಲ್ ರಾಜಕಾರಣಿಯಾದ ಮಾಳವಿಕ

    ‘ಡೆವಿಲ್’ ಅಂಗಳದಲ್ಲಿ ಪವರ್ ಫುಲ್ ರಾಜಕಾರಣಿಯಾದ ಮಾಳವಿಕ

    ಜ್ಯೂನಿಯರ್‌ ಎನ್‌ಟಿಆರ್‌ ಸಹೋದರ ಕಲ್ಯಾಣ್‌ ರಾಮ್‌ ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾವೇ ಡೆವಿಲ್. ಫಸ್ಟ್ ಗ್ಲಿಂಪ್ಸ್ (First Glimpse) ಮೂಲಕ ಭಾರೀ ಸದ್ದು ಮಾಡಿದ್ದ ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ (Nandamuri Kalyan Ram) ಗೂಢಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಡೆವಿಲ್ (Devil) ಚಿತ್ರತಂಡ ಪವರ್ ಫುಲ್ ಪೊಲಿಟಿಕಲ್ ಲೇಡಿಯನ್ನು ಪರಿಚಯಿಸಿದೆ.

    ಡೆವಿಲ್ ಸಿನಿಮಾ ಅಂಗಳಕ್ಕೆ ಮಾಳವಿಕಾ ನಾಯರ್ (Malavika Nair) ಎಂಟ್ರಿ ಕೊಟ್ಟಿದ್ದಾರೆ. ಮಣಿಮೇಕಲಾ ಎಂಬ ಪ್ರಬಲ ರಾಜಕಾರಣಿ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ರಾಜಕಾರಣಿಯಂತೆ ಬಿಳಿ ಬಣ್ಣದ ಕಾಟನ್ ಸೀರೆ ತೊಟ್ಟು ಭಾಷಣ ಮಾಡುತ್ತಿರುವ ಮಾಳವಿಕಾ ನಾಯರ್ ಫಸ್ಟ್ ಲುಕ್ ನಲ್ಲಿ ಶಾಂತಿಯ ಸಂಕೇತವಾದ ಪಾರಿವಾಳವೂ ಇದೆ.

    ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

    ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ, ಸೌಂದರ್ಯ ರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದ್ದು,‌ ನವೆಂಬರ್ 24ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಾಜೆಕ್ಟ್ ಕೆ ಚಿತ್ರದ ದೀಪಿಕಾ ಲುಕ್ ಸೂಪರ್: ಜುಲೈ 20ಕ್ಕೆ ಫಸ್ಟ್ ಗ್ಲಿಂಪ್ಸ್ ರಿಲೀಸ್

    ಪ್ರಾಜೆಕ್ಟ್ ಕೆ ಚಿತ್ರದ ದೀಪಿಕಾ ಲುಕ್ ಸೂಪರ್: ಜುಲೈ 20ಕ್ಕೆ ಫಸ್ಟ್ ಗ್ಲಿಂಪ್ಸ್ ರಿಲೀಸ್

    ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಂಬಿನೇಷನ್ ನ ‘ಪ್ರಾಜೆಕ್ಟ್ ಕೆ’ (Project K) ಸಿನಿಮಾದಲ್ಲಿ ದೀಪಿಕಾ ಹೇಗೆ ಕಾಣಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಚಿತ್ರತಂಡವು ದೀಪಿಕಾ ಅವರ ಫೇಸ್ ಬಹಿರಂಗ ಪಡಿಸಿದೆ. ಅಲ್ಲದೇ, ಮತ್ತೊಂದು ಕುತೂಹಲವನ್ನೂ ಅದು ಉಳಿಸಿಕೊಂಡಿದೆ.

    ಪ್ರಾಜೆಕ್ಟ್ ಕೆ ಸಿನಿಮಾದ ಹಲವಾರು ವಿಚಾರಗಳನ್ನು ಇದೇ ಜುಲೈ 20 ಹಾಗೂ 21ರಂದು ವಿಶ್ವದಾದ್ಯಂತ ಹಂಚಿಕೊಳ್ಳುತ್ತಿದೆ ಚಿತ್ರತಂಡ. ಇದರ ಭಾಗವಾಗ ಫಸ್ಟ್ ಗ್ಲಿಂಪ್ಸ್ (First Glimpses) ಅನ್ನು ಬಿಡುಗಡೆ ಮಾಡಲಿದೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಕಮಲ್ ಹಾಸನ್ ಸೇರಿದಂತೆ ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಲಿದ್ದಾರೆ.

    ಈ ಸಿನಿಮಾಗೆ ದೀಪಿಕಾ ಪಡೆದ ಸಂಭಾವನೆ

    ಬಾಲಿವುಡ್‌ನಲ್ಲಿ (Bollywood) ದುಬಾರಿ ನಾಯಕಿ ಎಂದೆನಿಸಿಕೊಳ್ಳುವ ಮೂಲಕ ದೀಪಿಕಾ ಪಡುಕೋಣೆ (Deepika Padukone) ಸುದ್ದಿಯಲ್ಲಿದ್ದಾರೆ. `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ನಟಿ ಈಗ ಪ್ರಭಾಸ್ ನಟನೆಯ `ಪ್ರಾಜೆಕ್ಟ್ ಕೆ’ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ.

    ಐಶ್ವರ್ಯಾ’ (Aishwarya Kannada Film) ಸಿನಿಮಾ ಮೂಲಕ ರಿಯಲ್ ಸ್ಟಾರ್ ಉಪ್ಪಿಗೆ (Upendra)  ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಕನ್ನಡತಿ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟರು. ಬಳಿಕ ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗಿ `ಓಂ ಶಾಂತಿ ಓಂ’ ಚಿತ್ರದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟರು. ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸೈ ಎನಿಸಿಕೊಂಡಿದ್ದಾರೆ.

    ಈ ವರ್ಷ `ಪಠಾಣ್’ ಚಿತ್ರದ ಮೂಲಕ ಭರ್ಜರಿ ಓಪನಿಂಗ್ಸ್ ಪಡೆದಿದ್ದಾರೆ. ಶಾರುಖ್ ನಾಯಕಿಯಾಗಿ ದೀಪಿಕಾ ಮಿಂಚಿದ್ದಾರೆ. ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

     

    ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮ ಜನ್ಮಭೂಮಿಯಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಿದ ನಟ ಅರು

    ರಾಮ ಜನ್ಮಭೂಮಿಯಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಿದ ನಟ ಅರು

    ಮುದ್ದು ಮನಸ್ಸೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅರುಣ್ ರಾಮ್ ಗೌಡ (Arun Ram Gowda), ನಂತರ 3 ಗಂಟೆ 30 ದಿನ 30 ಸೆಕೆಂಡ್, ಪತಿ ಬೇಕು.ಕಾಮ್ ಹಾಗೂ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರಗಳಲ್ಲಿ ನಟಿಸಿದ್ದರು. ಆನಂತರ ಸಿನಿಮಾ ರಂಗದಿಂದ ದೂರವಾದರು. ಒಳ್ಳೊಳ್ಳೆ ಚಿತ್ರಗಳನ್ನು ಮಾಡಿದ್ದವರು ಸಡನ್ನಾಗಿ ದೂರವಾಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿತ್ತು.

    ಇದೀಗ ಕೆಲವು ವರ್ಷಗಳ ಬಳಿಕ ಅರುಣ್ ರಾಮ್ ಗೌಡ ಪ್ಯಾನ್ ಇಂಡಿಯಾ ಚಿತ್ರವೊಂದರ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅರುಣ್ ರಾಮ್ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಈ ದಿನದಂದು ತಮ್ಮ ಚಿತ್ರದ ಮೊದಲ ಗ್ಲಿಂಪ್ಸನ್ನು (First Glimpse)  ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಇದೊಂದು ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ ಎಂದು ತಿಳಿಸಿರುವ ಅರುಣ್ ರಾಮ್ ಗೌಡ, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ. ಈ ಚಿತ್ರದ ನಾಯಕಿ, ವಿಲನ್ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನುರಿತರವೇ ಇರುತ್ತಾರೆ ಎನ್ನುತ್ತಾರೆ ಅರು ಗೌಡ.

    ಮುಂದುವರೆದು ಮಾತನಾಡಿರುವ ಅವರು, ‘ನನ್ನ ಹುಟ್ಟುಹಬ್ಬದ ದಿನ ಅಯೋಧ್ಯೆಯಲ್ಲಿ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಿ, ಶ್ರೀರಾಮನ ಆಶೀರ್ವಾದ ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇನೆ’ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಸ್ತಾದ್ ರಾಮ್ ಪೋತಿನೇನಿ ಹುಟ್ಟುಹಬ್ಬಕ್ಕೆ ಬೋಯಾಪಾಟಿ ಸೀನು ಮಾಸ್ ಗಿಫ್ಟ್

    ಉಸ್ತಾದ್ ರಾಮ್ ಪೋತಿನೇನಿ ಹುಟ್ಟುಹಬ್ಬಕ್ಕೆ ಬೋಯಾಪಾಟಿ ಸೀನು ಮಾಸ್ ಗಿಫ್ಟ್

    ಟಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ನಟ ಉಸ್ತಾದ್ ರಾಮ್ ಪೋತಿನೇನಿ (Ustad Ram Pothineni) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಮ್ ಜನುಮದಿನದ ಪ್ರಯುಕ್ತ ‘ಬೋಯಾಪಾಟಿರ್ಯಾಂಪೋ’ ಚಿತ್ರದ ಫಸ್ಟ್ ಗ್ಲಿಂಪ್ಸ್ (First Glimpses) ರಿಲೀಸ್ ಆಗಿದೆ. ಕೈಯಲ್ಲಿ ಕತ್ತಿ ಹಿಡಿದು, ಎಮ್ಮೆಯೊಟ್ಟಿಗೆ ಮಾಸ್ ಡೈಲಾಗ್ ಹೊಡೆಯುತ್ತಾ ರಗಡ್ ಲುಕ್ ನಲ್ಲಿ ರಾಮ್ ಪೋತಿನೇನಿ ಎಂಟ್ರಿ ಕೊಟ್ಟಿದ್ದಾರೆ.

    ಮಾಸ್ ಪ್ರಿಯರಿಗೆ ಹೇಳಿಮಾಡಿಸಿದಂತಿರುವ ಈ ಸಿನಿಮಾಗೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಸಾರಥಿ ಬೋಯಾಪಾಟಿ ಸೀನು (Boyapati Seenu) ಆಕ್ಷನ್ ಕಟ್ ಹೇಳಿದ್ದಾರೆ. ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ. ಸದ್ಯ ಬೋಯಾಪಾಟಿರ್ಯಾಂಪೋ ಎಂಬ ಶೀರ್ಷಿಕೆ ಇಡಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಟೈಟಲ್ ರಿವೀಲ್ ಮಾಡಲಿದೆ ಚಿತ್ರತಂಡ. ಇದನ್ನೂ ಓದಿ:ಭದ್ರಾಚಲಂನ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಪ್ರಭಾಸ್ ದೇಣಿಗೆ

    ಬೋಯಾಪಾಟಿ ಶೀನು ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಬೋಯಾಪಾಟಿರ್ಯಾಂಪೋ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಪಕ್ಕ ಮಾಸ್ ಎಂಟರ್ ಟೈನರ್ ಜಾನರ್ ನ ಈ ಚಿತ್ರ ಇದೇ ವರ್ಷ ಅಕ್ಟೋಬರ್ 20ರಂದು ವರ್ಲ್ಡ್  ವೈಡ್ ರಿಲೀಸ್ ಆಗಲಿದೆ.