Tag: ಫಸಲು

  • ನಿರಂತರ ಸುರಿದ ಮಳೆಗೆ ಕೆರೆಯಂತಾದ ಅಡಿಕೆ ತೋಟ- ರೈತನ ಕಣ್ಣೀರು

    ನಿರಂತರ ಸುರಿದ ಮಳೆಗೆ ಕೆರೆಯಂತಾದ ಅಡಿಕೆ ತೋಟ- ರೈತನ ಕಣ್ಣೀರು

    ಗದಗ/ಹಾಸನ: ನಿರಂತರವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗದಗ, ಹಾಸನ ರೈತರು ಫಸಲನ್ನು ಕಳೆದುಕೊಂಡಿದ್ದಾರೆ. ಮಳೆಯ ಅವಾಂತರದಿಂದಾಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.

    ನಿನ್ನೆ ತಡರಾತ್ರಿ ಸುರಿದ ಮಳೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ವರುಣನ ಅಟ್ಟಹಾಸಕ್ಕೆ ಜಿಲ್ಲೆಯ ಅಂತೂರು ಬೆಂತೂರ ಗ್ರಾಮದಲ್ಲಿ ಅನೇಕ ಬೆಳೆಗಳು ಹಾಳಾಗಿವೆ. ಅದರಲ್ಲಿ ಮಲ್ಲಿಕಾರ್ಜುನ ಗುಡಿಸಾಗರ್  ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆ ಹಾಳಾಗಿದೆ. ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    ಮಲ್ಲಿಕಾರ್ಜುನ ಅವರ ಜಮೀನಿನಲ್ಲಿ ರಾಶಿ ಮಾಡಲು ಕಿತ್ತು ಹಾಕಿದ ಶೇಂಗಾ ಬೆಳೆ ನೀರಲ್ಲಿ ತೇಲಿ ಹೋಗಿದೆ. ಕೈಗೆ ಬಂದ ತುತ್ತು ರೈತರ ಬಾಯಿಗೆ ಬರದಂತಾಗಿದೆ. ಸಾಲಸೂಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚುಮಾಡಿದ ಬೆಳೆಗಳೆಲ್ಲಾ ನೀರಲ್ಲಿ ಕೊಚ್ಚಿಹೋಗಿವೆ. ಸುಮಾರು 7 ಎಕರೆ ಜಮೀನಿನಲ್ಲಿ ಬೆಳೆದ ನೂರಾರು ಕ್ವಿಂಟಲ್ ಬೆಳೆ ನಷ್ಟವಾಗುತ್ತಿದೆ. ಹತ್ತಾರು ಲಕ್ಷದ ರೂಪಾಯಿ ಮೊತ್ತದ ಶೇಂಗಾ ಹಾಳಾಗಿದೆ. ಹಳ್ಳಕ್ಕೆ ತೇಲಿಬಂದ ಅಳಿದುಳಿದ ಬೆಳೆಯನ್ನು ರೈತರು ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ವರುಣನ ಆರ್ಭಟಕ್ಕೆ ರೈತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಶೇಂಗಾ, ಮೆಣಸಿನ ಬೆಳೆ, ಈರುಳ್ಳಿ, ಮೆಕ್ಕೆಜೋಳ ಹೀಗೆ ಅನೇಕ ಬೆಳೆಗಳು ನೀರು ಪಾಲಾಗಿವೆ.

    ಕೆರೆಯಂತಾದ ಅಡಿಕೆ ತೋಟ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕೋಡಿಬಿದ್ದ ಪರಿಣಾಮ ರೈತರ ನೂರಾರು ಎಕರೆ ಅಡಿಕೆ ತೋಟಕ್ಕೆ ನೀರು ನುಗ್ಗಿ ಜಮೀನು ನಾಶವಾಗುವ ಭೀತಿ ಎದುರಾಗಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಾಳೇನಹಳ್ಳಿ ಗ್ರಾಮದ ಹಲವರು ಅಡಿಕೆ ಮತ್ತು ಎಲೆ ಅಂಬು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಕೆರೆ ಕೋಡಿ ಬಿದ್ದು ನೂರಾರು ಎಕರೆಗೆ ನೀರು ನುಗ್ಗಿದೆ. ಕಳೆದ ಒಂದು ವಾರದಿಂದ ತೋಟದಲ್ಲಿ ನೀರು ನಿಂತಿರುವುದರಿಂದ ಅಡಿಕೆ ಮರಗಳು ಬುಡ ಸಮೇತ ಬೀಳುವ ಹಂತ ತಲುಪಿವೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ. ಹೀಗೆ ಆದರೆ ನಮ್ಮಜೀವನ ಬೀದಿಗೆ ಬರಲಿದೆ ಎಂದು ರೈತರು ಅಸಹಾಯಕತೆ ಹೊರಹಾಕುತ್ತಿದ್ದಾರೆ.

  • ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ- ಲಾಕ್‍ಡೌನ್ ಎಫೆಕ್ಟ್‌ಗೆ ಸಿಕ್ಕು ನಲುಗಿದ ಶುಂಠಿ, ಕಲ್ಲಂಗಡಿ

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ- ಲಾಕ್‍ಡೌನ್ ಎಫೆಕ್ಟ್‌ಗೆ ಸಿಕ್ಕು ನಲುಗಿದ ಶುಂಠಿ, ಕಲ್ಲಂಗಡಿ

    ಬೀದರ್: ಕೊರೊನಾ ಭಯದಲ್ಲಿ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರ, ವಹಿವಾಟು ಸೇರಿದಂತೆ ಜನಜೀವನ ಅಸ್ಥವ್ಯಸ್ಥವಾಗಿದೆ. ಹೀಗಿರುವಾಗ ಶುಂಠಿ, ಕಲ್ಲಂಗಡಿ ಬೆಳೆದ ರೈತರು ಕಂಗಾಲಾಗಿದ್ದಾರೆ.

    ರೈತರು ಸಾಲ ಮಾಡಿ ಕಷ್ಟಪಟ್ಟು ಬೆಳೆದ ವಿವಿಧ ರೀತಿಯ ಬೆಳೆಗಳು ಮಾರಾಟ ಮಾಡಲಾಗದೆ ಮತ್ತಷ್ಟು ಸಾಲದ ಸುಳಿಯಲ್ಲಿ ರೈತರು ಸಿಲುಕುವಂತಾಗಿದೆ. ಬೀದರ್ ತಾಲೂಕಿನ ಔರಾದ್ ಎಸ್ ಗ್ರಾಮದ ರೈತ ರಂಗಾರೆಡ್ಡಿ ತಂದೆ ವಿಠಲ್‍ರೆಡ್ಡಿ 2 ಎಕರೆ 17 ಗುಂಟೆಯಲ್ಲಿ 1 ಲಕ್ಷ 40ಸಾವಿರ ಖರ್ಚುಮಾಡಿ ಕಲ್ಲಂಗಡಿ, 2 ಎಕರೆ 30 ಗುಂಟೆಯಲ್ಲಿ 3 ಲಕ್ಷ ಖರ್ಚುಮಾಡಿ ಶುಂಠಿ ಬೆಳೆದು ಉತ್ತಮ ಲಾಭಗಳಿಸಬೇಕು ಎಂದರೆ ಲಾಕ್‍ಡೌನ್ ಎಫೆಕ್ಟ್ ಹಿನ್ನಲೆಯಲ್ಲಿ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುತ್ತಾ? ಅಲರ್ಜಿ ಹೊಂದಿರುವವರು ಲಸಿಕೆ ಪಡೆಯಬಹುದೇ? – ಅನುಮಾನಗಳಿಗೆ ಇಲ್ಲಿದೆ ಉತ್ತರ

    ರೈತ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಸ್ಥಿತಿಗೆ ಕೊರೊನಾ ರೂಪದಲ್ಲಿ ಬಂದ ಮಹಾಮಾರಿ ಅಡ್ಡಿಯಾಗಿದೆ. ತಮ್ಮ ಜಮೀನಿನಲ್ಲಿ ಕಲ್ಲಂಗಡಿ ಮತ್ತು ಶುಂಠಿ ಬೆಳೆದ ರೈತ ಎರಡು ಮೂರು ತಿಂಗಳ ಕಾಲ ನೀರುಣಿಸಿ ಪೋಷಣೆ ಮಾಡಿದ್ದು, ಈಗ ಕೊರೊನಾ ಮಹಾಮಾರಿ ದುಡಿದು ತಿನ್ನುವ ಅನ್ನದಾತನ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ

    ರೈತರು ಬೆಳೆದ ಬೆಳೆಗಳು ಮಾರಾಟವಾಗದೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಹಿಗಾಗೀ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತರು ಆಗ್ರಹ ಮಾಡುತ್ತಿದ್ದಾರೆ.

  • ರೈತ ಮಹಿಳೆ ಬೆಳೆದಿದ್ದ ಕಡಲೆ ಬೆಂಕಿಗಾಹುತಿ

    ರೈತ ಮಹಿಳೆ ಬೆಳೆದಿದ್ದ ಕಡಲೆ ಬೆಂಕಿಗಾಹುತಿ

    ವಿಜಯಪುರ: ರೈತ ಮಹಿಳೆ ಕಡಲೆಯನ್ನು ಬೆಳೆದು ರಾಶಿ ಮಾಡಲು ಇಟ್ಟಿದ್ದರು. ಈ ಕಡಲೆ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.

    ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಸುಮಾರು 30 ಕ್ವಿಂಟಾಲ್ ಕಡಲೆ ಸುಟ್ಟು ಭಸ್ಮವಾಗಿದೆ. ಈ ಮೂಲಕ ಸಾಯವ್ವ ಹುನ್ನೂರ ಅವರು ಬೆಳೆದಿರುವ ಕಡಲೆ ಸಂಪೂರ್ಣವಾಗಿ ದುಷ್ಕರ್ಮಿಗಳಿಟ್ಟಿರುವ ಬೆಂಕಿಗೆ ಆಹುತಿಯಾಗಿದೆ.

    ರೈತ ಮಹಿಳೆ ಸಾಯವ್ವ ಅವರು 6 ಎಕರೆ ಜಮೀನಿನಲ್ಲಿ ಕಡಲೆ ಬೆಳೆದಿದ್ದರು. ಕಡಲೆ ಫಸಲನ್ನು ಕಟಾವು ಮಾಡಿ ಜಮೀನಿನಲ್ಲಿ ಇಟ್ಟಿದ್ದರು. ಆದರೆ ದುಷ್ಕರ್ಮಿಗಳು ಕಟಾವು ಮಾಡಿಟ್ಟಿದ್ದ ಕಡಲೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಒಟ್ಟು ಸುಮಾರು ರೂ. 1.50 ಲಕ್ಷ ಹಾನಿಯಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪರಿಸ್ಥಿತಿಯಿಂದ ರೈತ ಮಹಿಳೆ ಸಾಯವ್ವ ಕಂಗಾಲಾಗಿದ್ದಾರೆ. ಬಬಲೇಶ್ವರ ಪೆÇಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ : ಕಡಲೆ ರಾಶಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ – ಕಂಗಾಲದ ರೈತ

  • 3 ಎಕರೆಯಲ್ಲಿ ಬೆಳೆದಿದ್ದ ಸೋಯಾಬಿನ್ ಫಸಲು ಸುಟ್ಟು ಕರಕಲು

    3 ಎಕರೆಯಲ್ಲಿ ಬೆಳೆದಿದ್ದ ಸೋಯಾಬಿನ್ ಫಸಲು ಸುಟ್ಟು ಕರಕಲು

    – 2ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆಗೆ ಬೆಂಕಿ

    ಹಾವೇರಿ: ಸೋಯಾಬಿನ್ ಫಸಲಿನ ಬಣವೆಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಹಾವೇಯ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ.

    ರೈತ ಶಂಕ್ರಪ್ಪ ಶೆಟ್ಟರ ಬೆಳೆದಿದ್ದ ಸೋಯಾಬಿನ್ ರಾಶಿ ಮಾಡಲು ಹಾಕಲಾಗಿತ್ತು. ಆದರೆ ರಾತ್ರೋರಾತ್ರಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಫಸಲನ್ನು ಸುಟ್ಟು ಹಾಕಿದ್ದರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾಬಿನ್ ಫಸಲನ್ನು ಕೊಯ್ಲು ಮಾಡಿ ಜಮೀನಿನಲ್ಲಿ ರಾಶಿ ಹಾಕಲಾಗಿತ್ತು. ಆದರೆ ಯಾರೋ ದುಷ್ಕರ್ಮಿಗಳು ರಾತ್ರಿ ಬೆಂಕಿ ಹಚ್ಚಿದ್ದರಿಂದ ಸೋಯಾಬಿನ್ ಫಸಲು ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಸೋಯಾಬಿನ್ ಫಸಲು ಸುಟ್ಟು ಹೋಗಿದೆ ಎಂದು ರೈತ ಶಂಕ್ರಪ್ಪ ಕಣ್ಣಿರಿಟ್ಟಿದ್ದಾರೆ.

  • ಮಾರ್ಚ್ ಮುಗಿಯುತ್ತಿದ್ದರೂ ಮಾಗಿಯ ಕಾಲದ ಮಾವು ಬಾರಲೇ ಇಲ್ಲ

    ಮಾರ್ಚ್ ಮುಗಿಯುತ್ತಿದ್ದರೂ ಮಾಗಿಯ ಕಾಲದ ಮಾವು ಬಾರಲೇ ಇಲ್ಲ

    – ಈ ಬಾರಿ ಹೂವು, ಕಾಯಿಗಳು ಅಪರೂಪ
    – ಶೇ.40 ರಷ್ಟು ಮಾತ್ರ ಬೆಳೆ

    ಕೋಲಾರ: ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಅಲ್ಲಿ ಮಾಗಿಯ ಕಾಲದ ಮಾವಿನ ಸೊಬಗು ಕಣ್ಣು ಕುಕ್ಕುತ್ತಿತ್ತು. ಆದರೆ ಈ ವರ್ಷ ಅದ್ಯಾರ ಕಣ್ಣ ದೃಷ್ಟಿ ಬಿತ್ತೋ, ಮರಗಳಲ್ಲಿ ಹೂವು ಕಾಯಿಗಳು ಸಹ ಕಡಿಮೆಯಾಗಿದ್ದು, ಕೇವಲ ಶೇ.40ರಷ್ಟು ಬೆಳೆ ಬರುವುದು ಸಹ ಅನುಮಾನವಾಗಿದೆ.

    ತುಂಬಿ ತುಳುಕಬೇಕಿದ್ದ ಮಾವಿನ ಮರಗಳು ಕಾಯಿಗಳಿಲ್ಲದೆ ಖಾಲಿಯಾಗಿ ಕಾಣುತ್ತಿದ್ದು, ತೇವಾಂಶದ ಕೊರತೆಯಿಂದ ಕಾಯಿಗಳು ಅಲ್ಲಲ್ಲಿ ಮಾತ್ರ ಬಿಟ್ಟಿವೆ. ಪ್ರಪಂಚದ ಪ್ರಸಿದ್ಧ ಮಾವಿನ ತವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈ ದೃಶ್ಯ ಕಾಣಿಸಿಕೊಂಡಿದ್ದು, ಕೋಲಾರ ಜಿಲ್ಲೆಯ ಸುತ್ತಮುತ್ತಲಿನ ಮಾವು ಬೆಳೆಯುವ ರೈತರು ಮಾವಿನ ಮರಗಳಲ್ಲಿ ನಿರೀಕ್ಷೆ ಮಟ್ಟದಲ್ಲಿ ಕಾಯಿಗಳಿಲ್ಲದೆ ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ಮಾತ್ರವೇ ಸುಮಾರು 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಆದರೆ ಮಾವಿನ ಬೆಳೆಗಾರರಿಗೆ ಈ ಬಾರಿ ಕಣ್ಣಲ್ಲಿ ನೀರು ತರಿಸುವಂತಾಗಿದೆ. ಈ ಸಮಯದಲ್ಲಿ ಕಾಯಿಗಳನ್ನು ಬಿಡಬೇಕಾಗಿದ್ದ ಮರಗಳು, ಈ ಬಾರಿ ವಾತಾವರಣದಲ್ಲಿನ ಏರುಪೇರು ಮತ್ತು ತೇವಾಂಶದ ಕೊರತೆಯಿಂದ ಚಿಗುರಿಲ್ಲದ ಕಾರಣ ಹೂವು ಸಹ ಬಿಟ್ಟಿಲ್ಲ.

    ಇದರೊಂದಿಗೆ ಹೂಜಿ ಕಾಟ, ಕಾಡಿಗೆ ರೋಗ ಸೇರಿದಂತೆ ಮಾವಿಗೆ ಬಂದಿರುವ ನಾನಾ ರೋಗಗಳಿಂದ ಮಾವಿನ ಮರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೂ ಬಿಟ್ಟಿಲ್ಲ. ಈಗಾಗಲೆ ತೋಟಗಾರಿಕಾ ಇಲಾಖೆ ವಿಜ್ಞಾನಿಗಳನ್ನು ಕರೆಸಿ ಮಾವು ತಡವಾಗಲು ಕಾರಣಗಳ ಬಗ್ಗೆ ತಿಳಿಸಿಕೊಟ್ಟು, ಅದಕ್ಕೆ ರೈತರು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಆದರೂ ಈ ಬಾರಿ ಕೇವಲ ಶೇ.40ರಷ್ಟು ಮಾತ್ರ ಬೆಳೆ ಬರುವುದು ಅದೂ ಸಹ ಮೇ ಅಂತ್ಯದ ವೇಳೆಗೆ ಮಾವು ಮಾರುಕಟ್ಟೆ ಪ್ರವೇಶ ಮಾಡಬಹುದೆಂದು ನಿರೀಕ್ಷಿಸಲಾಗಿದೆ.

    ಸಾವಿರಾರು ಎಕರೆಯಲ್ಲಿ ಮಾವು ಬೆಳೆಯುವ ಜಿಲ್ಲೆಯ ರೈತರು ದೇಶದ ನಾನಾ ರಾಜ್ಯಗಳು ಸೇರಿದಂತೆ ವಿದೇಶಗಳಿಗೆ ಮಾವನ್ನು ರಫ್ತು ಮಾಡುತ್ತಾರೆ. ಆದರೆ ಮಾವು ಆರಂಭದಲ್ಲೆ ಕೈಕೊಡುವ ಸೂಚನೆ ನೀಡಿದ್ದರಿಂದ ಇಲಾಖೆ ಕೂಡ ರೈತರಿಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯ ಮಾಡಿತು. ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಬಿದ್ದ ಮಳೆಯಿಂದ ತೇವಾಂಶ ಹೆಚ್ಚಾಗಿ ಮಾವು ಚಿಗುರು ಬರೋದು ತಡವಾದ ಪರಿಣಾಮ ಶೇ.40 ರಿಂದ 50 ರಷ್ಟು ಮಾವಿನ ಮರಗಳಲ್ಲಿ ಮಾತ್ರ ಹೂ ಕಾಣಿಸಿಕೊಂಡಿತು.

    ಇದರ ಪರಿಣಾಮ ಮಾರ್ಚ್ ತಿಂಗಳಲ್ಲಿ ಬರಬೇಕಿದ್ದ ಮಾವಿನ ದರ್ಬಾರ್ ಮಾರ್ಚ್ ತಿಂಗಳು ಮುಗಿಯುತ್ತಾ ಬರುತ್ತಿದ್ದು, ಮಾವಿನ ಮರಗಳಲ್ಲಿ ಕಾಯಿಗಳು ನಿರೀಕ್ಷಿತ ಮಟ್ಟದಲ್ಲಿ ಬಿಟ್ಟಿಲ್ಲ. ಇದರಿಂದಾಗಿ ಮರಗಳು ಖಾಲಿ ಖಾಲಿಯಾಗಿ ಕಂಡು ಬರುತ್ತಿವೆ. ಮಾವು ಬೆಳೆಗಾರರು ಈ ವರ್ಷ ಮಾವಿನ ಫಸಲು ಸಿಗೋದು ಅನುಮಾನ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದಿದ್ದಾರೆ.

    ವರ್ಷಕ್ಕೊಂದೇ ಬೆಳೆಯಲ್ಲಿ ಬಾರೀ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಈ ಬಾರಿ ಉಷ್ಣಾಂಶದ ಏರಿಕೆ ಹಾಗೂ ಹವಾಮಾನ ವೈಪರೀತ್ಯ, ಬರೀ ಮಾವು ಬೆಳೆಯನ್ನಷ್ಟೇ ಅಲ್ಲ ರೈತರ ಬದುಕನ್ನು ಸುಟ್ಟುಹಾಕಿದೆ. ಈ ವರ್ಷ ಅಲ್ಪ ಬೆಳೆಯಲ್ಲಿ ರೈತರು ತಮ್ಮ ದೊಡ್ಡ ನಿರೀಕ್ಷೆಗಳನ್ನು ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.