ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಉದ್ಘಾಟನೆ ನೆರವೇರಿಸಿದೆ. ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆಬಾನು ಮುಷ್ತಾಕ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡುವ ಮೂಲಕ ಮಹೋತ್ಸವಕ್ಕೆ ಚಾಲನೆ ಕೊಟ್ಟಿದ್ದಾರೆ. ಬಳಿಕ ಆಹಾರ ಮೇಳ, ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಶತಶತಮಾನಗಳ ಪಾರಂಪರಿಕ ಪ್ರತೀಕ ಹಬ್ಬವಾಗಿರುವ ದಸರಾ ಸೊಬಗು ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದೆ. ಫಲಪುಷ್ಟ ಪ್ರದರ್ಶನ, ಆಹಾರದ ಮೇಳದ ಘಮಲು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದ್ದರೆ, ಅತ್ತ ಅರಮನೆ ವೇದಿಕೆಯಲ್ಲಿ ಮೊಳಗುತ್ತಿರುವ ಸಂಗೀತ ಝೇಂಕಾರ ಕಿವಿಗೆ ಇಂಪು ನೀಡುತ್ತಿವೆ. ಇದೆಲ್ಲವೂ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿರುವ ಫೋಟೋಗಳಿವೆ ಕಣ್ತುಂಬಿಕೊಳ್ಳಿ…
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಿನ್ನೆಲೆ ನಗರದ ಲಾಲ್‌ಬಾಗ್‌ನಲ್ಲಿ ಆ.07ರಿಂದ 18ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಇಂದು ಸಂಜೆ 7 ಗಂಟೆಗೆ ಫಲಪುಷ್ಪ ಪ್ರದರ್ಶನ ಮುಕ್ತಾಯಗೊಳ್ಳಲಿದೆ. ಪ್ರದರ್ಶನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಥೀಮ್‌ನಲ್ಲಿ ಕಿತ್ತೂರು ಸಂಸ್ಥಾನ, ರಾಜರು, ಇತಿಹಾಸ, ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಐತಿಹಾಸಿಕ ಹೆಜ್ಜೆಗುರುತುಗಳ ಪ್ರತಿಬಿಂಬವನ್ನು ಪುಷ್ಪಗಳಲ್ಲಿ ತೋರ್ಪಡಿಸಲಾಗಿತ್ತು.
ಭಾನುವಾರ ಒಂದೇ ದಿನ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ 7,960 ಮಕ್ಕಳು, 7,200 ಶಾಲಾ ಮಕ್ಕಳು, 52,150 ವಯಸ್ಕರು ಸೇರಿದಂತೆ ಒಟ್ಟು 67,310 ಮಂದಿ ಭೇಟಿ ನೀಡಿದ್ದು, ಒಟ್ಟು 37.39 ಲಕ್ಷ ರೂ. ಆದಾಯ ಬಂದಿದೆ. ಈವರೆಗೆ ಒಟ್ಟು 5.80 ಲಕ್ಷ ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದಾರೆ. ಸೋಮವಾರ ಕೊನೆಯ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ದಿನದ ಅಂತ್ಯಕ್ಕೆ ಭೇಟಿ ಕೊಟ್ಟವರ ಒಟ್ಟು ಜನರ ಸಂಖ್ಯೆ 6 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: `ವೇಷಗಳು’ ಚಿತ್ರದ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ ಶರತ್ ಲೋಹಿತಾಶ್ವ
ಆಂಧ್ರಪ್ರದೇಶ, ತಮಿಳುನಾಡು, ಪುಣೆ, ಕೇರಳದಿಂದ ಹೂವುಗಳಿಂದ ತರಿಸಲಾಗಿದ್ದು, 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರು ಕೋಟೆ, ಕಿತ್ತೂರು ರಾಣಿ ಚೆನ್ನಮ್ಮನವರ ಐಕ್ಯ ಮಂಟಪಗಳು ಸಿದ್ಧಗೊಳ್ಳುತ್ತಿವೆ. 600ಕ್ಕೂ ಹೆಚ್ಚು ಕಾರ್ಮಿಕರು, ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಭರ್ಜರಿಯಿಂದ ತಯಾರಿ ನಡೆಯುತ್ತಿದೆ.
ಇನ್ನೂ ಪ್ರದರ್ಶನದಲ್ಲಿ ಹೈಡ್ರಾಂಜಿ, ಕ್ಯಾಲಲಿಲಿ, ಆರ್ಕಿಟ್ಸ್, ಟ್ಯೂಬ್ರೆಟ್ಸ್ ಬೆಗೆನಿಯಾ ಸೇರಿದಂತೆ 105ಕ್ಕೂ ವಿಶೇಷವಾದ ವಾರ್ಷಿಕ ಹೂವುಗಳ ಬಳಕೆ ಮಾಡಲಾಗಿದೆ. ಆ.7ರಿಂದ 18ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.ಇದನ್ನೂ ಓದಿ: ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್
ಮಂಡ್ಯ: ಸಕ್ಕರೆ ನಾಡಿನಲ್ಲಿ ಇಂದಿನಿಂದ ಐದು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನ (Flower Show) ಹಾಗೂ ಮಧುರ ವಸ್ತ್ರೋತ್ಸವಕ್ಕೆ ಸಚಿವ ಎನ್.ಚಲುವರಾಯಸ್ವಾಮಿ (Chaluvaraya Swamy) ಅವರು ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಉದ್ಯಾನವನದಲ್ಲಿ ಆಕರ್ಷಕ ಬಣ್ಣದ ನಾನಾ ಜಾತಿಯ ಹೂಗಳಿಂದ ಹಲವಾರು ಕಲಾಕೃತಿಗಳು ಅರಳಿ ನಿಂತಿದ್ದು, ಜನರನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ಸೆಲ್ಫಿ ಪಾಯಿಂಟ್‌ಗಳಲ್ಲಿ ಪುಷ್ಪ ಪ್ರಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಮತ್ತೊಂದೆಡೆ 9 ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ಗುಲಾಬಿ ಹೂವುಗಳಿಂದ ಪ್ರವಾಸಿ ತಾಣ, ದೇವಾಲಯಗಳ ನಿರ್ಮಾಣವಾಗಿದ್ದು, ಕಣ್ಮನ ಸೆಳೆಯುತ್ತಿದೆ.
ಪ್ರತಿ ದಿನ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆ ವರೆಗೆ ಪ್ರವೇಶ
5 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಯಸ್ಕರಿಗೆ ಟಿಕೆಟ್ ದರ 30 ರೂ. ಟಿಕೆಟ್ ದರ ಇರಲಿದ್ದು, 6-12 ವರ್ಷದ ಮಕ್ಕಳಿಗೆ 20 ರೂ. ಹಾಗೂ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.
ಪ್ರಮುಖ ಆಕರ್ಷಣೆಗಳಿವು:
ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಣ್ಣದ 9 ಲಕ್ಷ ಸೇವಂತಿಗೆ ಹೂವು, ಬಗೆ ಬಗೆಯ ಬಣ್ಣದ ಗುಲಾಬಿ ಬಳಸಿ ಪ್ರಸಿದ್ಧ ದೇವಾಲಯ ಹಾಗೂ ಪ್ರವಾಸಿ ತಾಣಗಳನ್ನು ನಿರ್ಮಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ಯುವ ಜನತೆಯನ್ನು ಸೆಳೆಯಲು ಹತ್ತು ಸ್ಥಳಗಳಲ್ಲಿ ಸೆಲ್ಫಿ ಪಾಯಿಂಟ್, ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯೊನ್ನೊಳಗೊಂಡ ಸ್ಥಬ್ಥ ಚಿತ್ರ, ಆಕರ್ಷಕ ಅಡಿನಿಯಂ ಗಿಡಗಳು, ಬೋನ್ಸಾಯ್ ಗಿಡಗಳು, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳನ್ನ ಕೆತ್ತನೆ ಮಾಡಲಾಗಿದೆ.
ವಿವಿಧ ಜಿಲ್ಲೆಗಳ ಕೈಮಗ್ಗ, ನೇಕಾರರ ಸಹಕಾರ ಸಂಘಗಳು ಭಾಗವಹಿಸಿದ್ದು, ಕೈಮಗ್ಗ ನೇಕಾರರಿಂದ ತಯಾರಿಸಿರುವ ಹತ್ತಿ, ರೇಷ್ಮೆ, ಮೊಳಕಾಲ್ಮೂರು ರೇಷ್ಮೆ ಸೀರೆ, ಚಿಂತಾಮಣಿ ರೇಷ್ಮೆ ಸೀರೆ, ಕಾಟನ್ ಸೀರೆ, ಪಂಚೆ, ಬೆಡ್‌ಶೀಟ್, ಟವಲ್, ಲುಂಗಿ ಹಾಗೂ ಇತರೆ ಕೈ ಮಗ್ಗ ಉತ್ಪನ್ನಗಳನ್ನು ಶೇ.20 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ: ಇಂಗ್ಲಿಷ್ ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಮಕ್ಕಳು – ಸಕಲೇಶಪುರದಲ್ಲಿ ನಾಪತ್ತೆಯಾದವರು ಬೆಂಗಳೂರಲ್ಲಿ ಪತ್ತೆ
ಅಲ್ಲದೇ ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ವತಿಯಿಂದ ಕಲಾಕೃತಿಗಳನ್ನು ಹಾಗೂ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗುತ್ತಿದೆ.
ಚಾಮರಾಜನಗರ: ಬೆಂಗಳೂರು, ಮೈಸೂರಿನಂತಹ ದೊಡ್ಡ ದೊಡ್ಡ ನಗರಗಳಿಗೆ ಫಲಪುಷ್ಪ ಪ್ರದರ್ಶನ ಸೀಮಿತವಾಗಿತ್ತು. ಆದರೆ, ಚೆಲುವ ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ಚಾಮರಾಜನಗರದಲ್ಲಿ (Chamarajanagara) ಆಕರ್ಷಕ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಗಡಿನಾಡಿನ ಜನತೆ ಕಣ್ತುಂಬಿಕೊಳ್ಳುತ್ತಿದ್ದಾರೆ.
ಚೆಲುವ ಚಾಮರಾಜನಗರ ದಸರಾ ಮಹೋತ್ಸವ (Chamarajanagara Dasara) 2024 ಅಂಗವಾಗಿ ಆಯೋಜಿಸಿರುವ ಕಲರ್‌ಫುಲ್ ಫ್ಲವರ್ ಶೋ ಕಣ್ಮನ ಸೆಳೆಯುತ್ತಿದೆ. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಚಾಮರಾಜನಗರ ದಸರಾದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಮಾರ್ಪಟ್ಟಿದ್ದು, ಆಕರ್ಷಣೀಯವಾಗಿದೆ. ವಿವಿಧ ಬಗೆಯ ಪುಷ್ಪಗಳಿಂದ ಪ್ರಾಣಿ ಪಕ್ಷಿಗಳು, ಸಂಗೀತ ಪರಿಕರಗಳು, ಏಳು ಹೆಡೆಯ ಆದಿಶೇಷ, ಹಿಮವದ್ ಗೋಪಾಲಸ್ವಾಮಿ ಸೇರಿದಂತೆ ಹಲವು ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ ಆಚರಣೆ
ಕಲಾವಿದರ ಕುಂಚದಲ್ಲಿ ಮೂಡಿರುವ ಸಿನಿ ತಾರೆಯರು ಹಾಗೂ ಗಣ್ಯರ ಭಾವಚಿತ್ರಗಳು ಆಕರ್ಷಣೀಯವಾಗಿವೆ. ಕಲ್ಲಂಗಡಿ ಹಣ್ಣಿನಲ್ಲಿ ರಚಿಸಲಾಗಿರುವ ಮೇರುನಟ ಡಾ.ರಾಜ್‌ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಜಲಜೀವನ್ ಮಿಷನ್ ಹಾಗೂ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಾರುವ ಬಣ್ಣ ಬಣ್ಣದ ಪುಷ್ಪಗಳಿಂದ ರಚಿಸಿರುವ ಕಲಾಕೃತಿಗಳು ಜಾಗೃತಿ ಮೂಡಿಸುತ್ತಿವೆ. ಕಾಡಿನಲ್ಲಿ ವಾಸಿಸುವ ಸೋಲಿಗರಿಗೂ ಫಲಪುಷ್ಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ವಿಶೇಷವಾಗಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ದೂರದ ಮೈಸೂರು ಬೆಂಗಳೂರಿಗೆ ಹೋಗುತ್ತಿದ್ದ ಜನರು ಇದೀಗ ಸ್ಥಳೀಯವಾಗಿಯೇ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನ ನೋಡಲು ಚಾಮರಾಜನಗರ ಜಿಲ್ಲೆಯ ವಿವಿಧೆಡೆಯಿಂದ ಜನರು ಬರತೊಡಗಿದ್ದಾರೆ. ಇದನ್ನೂ ಓದಿ: ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್
ಬೆಂಗಳೂರು: ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ತೋಟಗಾರಿಕಾ ಇಲಾಖೆಯು ಲಾಲ್‌ಬಾಗ್‌ನಲ್ಲಿ 216ನೇ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಗಾಥೆಯನ್ನ ಹೂಗಳಲ್ಲಿ ಅನಾವರಣಗೊಳಿಸಲಾಗಿದೆ. ಆಗಸ್ಟ್ 8 ರಿಂದ 19ರ ವರೆಗೆ ಈ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 8ರ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್ ಆಸ್ಪತ್ರೆಗೆ ದಾಖಲು
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ 200 ಪ್ರಬೇಧದ ಸುಮಾರು 32 ಲಕ್ಷ ಹೂಗಳನ್ನ ಪ್ರದರ್ಶನಕ್ಕಿಡಲಾಗಿದೆ. ಹೊರ ರಾಜ್ಯದಿಂದ ಆಮದು ಮಾಡಿಕೊಳ್ಳಲಾದ ಗಿಡಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ. ಪ್ರದರ್ಶನ ವೀಕ್ಷಣೆಗೆ ಬರುವವರಿಗೆ ಟಿಕೆಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ವಯಸ್ಕರಿಗೆ 100 ರೂ. ಮಕ್ಕಳಿಗೆ 30 ರೂ. ನಿಗದಿಪಡಿಸಲಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಭಾರತ ಕಾಡಿದ ಆ ಮೂರು ದುರಂತಗಳು – ಬಲಿಯಾದ ಜೀವಗಳೆಷ್ಟು? ದುರಂತ ಆಗಿದ್ದು ಏಕೆ?
ಗಾಜಿನ ಮನೆಯ ಕೇಂದ್ರ ಭಾಗದ ಹಿಂಭಾಗದಲ್ಲಿ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆ ಬಿಂಬಿಸುವ ಮಹಾಡ್ ಸತ್ಯಾಗ್ರಹ, ಕಲಾರಾಮ್ ದೇವಸ್ಥಾನದ ಪ್ರವೇಶ, ಕೊರೆಂಗಾವ್ ವಿಜಯೋತ್ಸವದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಭಾರತದ ಭೂಪಟ ಮತ್ತು ಸಂವಿಧಾನ ಪೀಠಿಕೆ ಸೇರಿದಂತೆ ಇನ್ನೂ ಅನೇಕ ಕಲಾಕೃತಿಗಳು, ಸ್ತಬ್ಧ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಲಿವೆ. ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ (Lalbagh) ಈ ಬಾರಿಯ ಗಣರಾಜ್ಯೋತ್ಸವ ಅಂಗವಾಗಿ ಜನವರಿ 18ರಿಂದ 28ರವರೆಗೆ 215ನೇ ಫಲಪುಷ್ಪ ಪ್ರದರ್ಶನ (Flower Show) ನಡೆಯಲಿದೆ. ಈ ಬಾರಿ ಹಲವು ವಿಶೇಷಗಳೊಂದಿಗೆ ತೋಟಗಾರಿಕಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಈ ಬಾರಿ ಬರೋಬ್ಬರಿ 11 ದಿನಗಳ ಕಾಲ ವಚನ ಸಾಹಿತ್ಯದ ಪರಿಕಲ್ಪನೆಯಡಿ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. 12ನೇ ಶತಮಾನದ ಕನ್ನಡದ ತತ್ವಜ್ಞಾನಿ, ಸಮಾಜ ಸುಧಾರಕರಾದ ಬಸವಣ್ಣನವರು ಲಿಂಗ ತಾರತಮ್ಯದೊಂದಿಗೆ ಮೂಢನಂಬಿಕೆಗಳನ್ನು ನಿರಾಕರಿಸಿದ್ರು. ಮಹಿಳೆಯರಿಗೂ ಸಮಾನತೆ ಪ್ರತಿಪಾಸಿದ್ರು. ಅವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಹೀಗಾಗಿ ಈ ಬಾರಿ ಬಸವಣ್ಣ ಮತ್ತು `ವಚನ ಸಾಹಿತ್ಯ’ ಕುರಿತಂತೆ ಫಲಪುಷ್ಪ ಪ್ರದರ್ಶನ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.
ಕೇವಲ ಬಸವಣ್ಣ ಮಾತ್ರವಲ್ಲ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆಯಂತೆ. ಫಲಪುಷ್ಪ ಪ್ರದರ್ಶನಕ್ಕೆ 80 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಹಾಲಿಡೇಸ್‍ನಲ್ಲಿ 100 ರೂ. ಟಿಕೆಟ್ ದರ ಇರಲಿದೆ. ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತೆ. ಸಮವಸ್ತ್ರ ಇಲ್ಲದ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ.
ಪ್ರಮುಖ ವಿಶೇಷವೇನು..?: 10 ಅಡಿಯ ಬಸವಣ್ಣನ ಪ್ರತಿಮೆ ಮತ್ತು 30 ಅಡಿ ಎತ್ತರದ ಅನುಭವ ಮಂಟಪ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ. ಅನುಭವ ಮಂಟಪದ ಮೂಲ ಪ್ರತಿರೂಪದ ರಚನೆಯನ್ನು ಐರನ್ ಫ್ರೇಮ್‍ವರ್ಕ್‍ನಿಂದ ರೂಪಿಸಿ, ಅದಕ್ಕೆ 750 ಕೆಜಿಗೂ ಹೆಚ್ಚು ವೈರ್ ಮೆಷ್ ಅಳವಡಿಸಿ, 10 ಸಾವಿರಕ್ಕೂ ಹೆಚ್ಚು ಫ್ಲೋರಲ್ ಫೋಮ್‍ಗಳನ್ನು ಬಳಸಿ ಅಂತಿಮ ರೂಪ ಕೊಡಲಾಗಿದೆ. ಅನುಭವ ಮಂಟಪ 34 ಅಡಿ ಅಗಲ ಮತ್ತು 30 ಅಡಿ ಎತ್ತರವಿರುತ್ತೆ. ಕಡುಗೆಂಪು, ಹಳದಿ ಮತ್ತು ಕಿತ್ತಳೆ ವರ್ಣದ 1.5 ಲಕ್ಷ ಗುಲಾಬಿ ಹೂಗಳು, ಹಳದಿ, ಪಿಂಕ್ ಮತ್ತು ಶ್ವೇತ ವರ್ಣದ 1.55 ಲಕ್ಷ ಆಕರ್ಷಕ ಸೇವಂತಿಗೆ ಹೂಗಳು ಹಾಗೂ 1.85 ಲಕ್ಷ ಗುಂಡುರಂಗು (ಗಾಂಫ್ರಿನಾ) ಹೂವುಗಳನ್ನು ಬಳಸಲಾಗುತ್ತದೆ. ಈ ಎಲ್ಲಾ ಹೂಗಳು ಸೇರಿ 4.8 ಲಕ್ಷ ಹೂಗಳನ್ನು ಒಂದು ಬಾರಿಗೆ ಬಳಸಲಾಗುತ್ತಿದೆ.
ಈ ಬಾರಿ ವಚನಕಾರರನ್ನ ಫಲಪುಷ್ಪ ಪ್ರದರ್ಶನದಲ್ಲಿ ಸಂಭ್ರಮಿಸಲು ಹಾಗೂ ಜನತೆಗೆ, ವಿದ್ಯಾರ್ಥಿಗಳಿಗೆ ಫಲಪುಷ್ಪದ ಮೂಲಕ ಅವರನ್ನ ತಲುಪಿಸುವ ಕೆಲಸಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.
ಬೆಂಗಳೂರು: ನಾಳೆಯಿಂದ 10 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಪುಷ್ಪ ಲೋಕ ಅನಾವರಣಗೊಳ್ಳಲಿದೆ. ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ನೆನಪಿನಾರ್ಥವಾಗಿ ಈ ಬಾರಿ ಫ್ಲವರ್ ಶೋ ನಡೆಯುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ವಿವಿಧ ಆಕೃತಿಗಳನ್ನು ಸಿಂಗರಿಸಲಾಗಿದೆ.
ಈ ಬಾರಿಯ 212 ನೇ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಕ್ಷಾಂತರ ಜನರು ಆಗಮಿಸುವ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ರವರ ವಿಷಯ ಆಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನವು ಉದ್ಘಾಟನೆಗೊಳ್ಳಲಿದ್ದು ಖ್ಯಾತ ಚಿತ್ರನಟರಾದ ರಾಘವೇಂದ್ರ ರಾಜಕುಮಾರ್ ಹಾಗೂ ನಟ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರನ್ನು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಗಿದೆ. ಇದನ್ನೂ ಓದಿ:`ಪುಷ್ಪ 2’ನಲ್ಲಿ ಅಲ್ಲು ಅರ್ಜುನ್‌ಗೆ ಟಕ್ಕರ್ ಕೊಡಲಿದ್ದಾರೆ ಈ ಬಾಲಿವುಡ್ ಸ್ಟಾರ್
ಈ ಸಂದರ್ಭದಲ್ಲಿ ಉದ್ಯಾನ ಕಲಾಸಂಘದ ಉಪಾಧ್ಯಕ್ಷರಾದ ಶ್ರೀ ವಾಸುದೇವ್. ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ. ಎಂ ಜಗದೀಶ್ ಹಾಗೂ ಲಾಲ್ ಬಾಗ್ ತೋಟಗಾರಿಕೆ ಉಪನಿರ್ದೇಶಕರಾದ ಶ್ರೀಮತಿ ಜಿ ಕುಸುಮ ಹಾಗೂ ದಿನಿ ಸಿನಿ ಕ್ರಿಯೇಷನ್ಸ್ ನ ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ರೈತರ ಜಾತ್ರೆಯ ಸಂಭ್ರಮ ಜೋರಾಗಿ ನಡೆದಿದೆ. ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಈ ಬಾರಿ ಮೊದಲ ದಿನವೇ ಒಂದು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.
ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ಆಕರ್ಷಣೆ ಎಂಬಂತೆ ಪುಷ್ಪ ಮೇಳ ಗಮನ ಸೆಳೆಯಿತು. ಜರ್ಬೇರಾ, ಲಿಲ್ಲಿ, ಗುಲಾಬಿ ಹೂವುಗಳು ಎಲ್ಲರನ್ನು ತಿರುಗಿ ನೋಡುವಂತೆ ಮಾಡಿದವು. ವಿವಿಧ ತಾಲೂಕು ಹಾಗೂ ಜಿಲ್ಲೆಗಳಿಂದ ಬಂದಿದ್ದ ರೈತರು ವಿವಿಧ ತಳಿ, ತಂತ್ರಜ್ಞಾನವನ್ನು ನೋಡುವುದರಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಯುವಕ, ಯುವತಿಯರು, ಪುಷ್ಪ ಪ್ರದರ್ಶನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.
ಕೃಷಿ ಮೇಳದ ಫ್ಲವರ್ ಶೋದಲ್ಲಿ ಹೂವಿನ ಲೋಕವೇ ಅನಾವರಣಗೊಂಡಿತ್ತು. ಕಣ್ಣಿಗೆ ತಂಪು, ಮನಕ್ಕೆ ಮುದ ನೀಡುವ ತರಹೇವಾರಿ ಪುಷ್ಪಗಳು ಫ್ಲವರ್ ಶೋದ ಹೈಲೈಟ್ ಆಗಿತ್ತು. ಸೌಂದರ್ಯ ಪುಷ್ಪಗಳ ಜೊತೆಗೆ ಅಲಂಕಾರಿಕ ಔಷಧಿ ಪುಷ್ಪಗಳು ಕೂಡಾ ಸುಗಂಧ ಹೊರಸೂಸುವ ಪುಷ್ಪಗಳೊಂದಿಗೆ ಸ್ಪರ್ಧೆಗೆ ಇಳಿದಂತೆ ಕಂಗೊಳಿಸಿದವು. ಜೊತೆಗೆ ಸಂಪಿಗೆ, ಸೇವಂತಿ, ದಾಸವಾಳ, ಚಕ್ರಮಣಿ, ಸರ್ಪಗಂಡ, ಬೃಂದ ರಾಜಾ ಹೂವುಗಳನ್ನ ಅಲಂಕರಿಸಿ ಇಡಲಾಗಿತ್ತು.
ಒಂದು ಕಡೆ ಹೂವಿನ ಅಲಂಕಾರ ಇದ್ದರೆ, ಮತ್ತೊಂದೆಡೆ ಕಲ್ಲಗಂಡಿ ಹಣ್ಣಿನಲ್ಲಿ ದೇಶದ ಪ್ರಮುಖ ಗಣ್ಯರಾದ ಸಿದ್ಧಾರೂಢ ಶ್ರೀ, ಪೇಜಾವರಶ್ರೀ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದ, ಗಾಂಧೀಜಿ, ದ.ರಾ.ಬೇಂದ್ರೆ ಹಾಗೂ ಅಂಬೇಡ್ಕರ್ ಸೇರಿದಂತೆ ಇತರರ ಚಹರೆಯನ್ನು ಕೆತ್ತನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿ ಸಹ ಉತ್ತರ ಕರ್ನಾಟಕದ ಜನತೆ ಕೃಷಿ ಮೇಳದಲ್ಲಿ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು.