Tag: ಫಲಕ

  • ಐಪಿಎಲ್ ಪಂದ್ಯಕ್ಕೂ ಎಂಟ್ರಿ ಕೊಟ್ಟಿತ್ತು ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್

    ಐಪಿಎಲ್ ಪಂದ್ಯಕ್ಕೂ ಎಂಟ್ರಿ ಕೊಟ್ಟಿತ್ತು ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್ ಈಗ ಐಪಿಎಲ್ ಮ್ಯಾಚ್ ಸ್ಟೇಡಿಯಂನಲ್ಲೂ ಎಂಟ್ರಿ ಕೊಟ್ಟಿದೆ.

    ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಿತು. ಈ ವೇಳೆ ಯುವಕನೊಬ್ಬ ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎನ್ನುವ ಫಲಕವನ್ನು ಪ್ರದರ್ಶಿಸಿದ್ದಾರೆ.

    ‘ಜಾಗ್ವಾರ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಈ ಡೈಲಾಗ್ ಈಗ ರಾಜ್ಯಾದ್ಯಂತ ಮನೆ ಮಾತಾಗಿದೆ. ರಾಜಕೀಯವಾಗಿ ಇದನ್ನು ಸಿಕ್ಕ ಸಿಕ್ಕ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ಈ ಬಗ್ಗೆ ನಿಖಿಲ್ ಕೂಡ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದರು. “ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡೋರಿಗೆ, ಟ್ರೋಲ್ ಮಾಡೋರಿಗೆ ಒಂದು ಪದ ಬಳಸ್ತೀನಿ ತಪ್ಪು ತಿಳ್ಕೋಬೇಡಿ ಅಂದಿದ್ದರು. ಇಂಥವರೆಲ್ಲ ಸ್ಯಾಡಿಸ್ಟ್ ಗಳು, ಅವರು ವೋಟು ಹಾಕಲ್ಲ. ಅವರ ಬಗ್ಗೆ ನಾನು ತಲೆನೂ ಕೆಡಿಸಿಕೊಳ್ಳಲ್ಲ” ಎಂದು ಮಾತಿನ ಚಾಟಿ ಬೀಸಿದ್ದರು.

    ಇಷ್ಟೇ ಅಲ್ಲ ನಮ್ಮ ಕಾರ್ಯಕರ್ತರು ಸಹ ಬಿಜೆಪಿ ಅವರು ಎಲ್ಲಿದ್ದೀರಪ್ಪ. ಮಂಡ್ಯದಲ್ಲಿ ಹುಡುಕ್ತಿದ್ದೀನಿ ಎಂದು ಟ್ರೋಲ್ ಮಾಡಿ ನನಗೂ ಕಳುಹಿಸುತ್ತಿದ್ದಾರೆ. ಬಟ್ ಇಟ್ಸ್ ನಾಟ್ ಗುಡ್ ಎಂದು ಹೇಳಿದ್ದರು. ಬಳಿಕ ಇಂತಹ ಟ್ರೋಲ್ ಮಾಡೋರಿಗೆ ಅಂದು ಆತ್ಮಹತ್ಯೆ ಮಾಡಿಕೊಂಡ 75 ರೈತ ಕುಟುಂಬಗಳಿಗೆ ಚೆಕ್ ವಿತರಿಸಿದ್ದು ಯಾಕೆ ಕಣ್ಣಿಗೆ ಕಾಣಿಸಲಿಲ್ಲ ಎಂದು ಪ್ರಶ್ನೆ ಕೂಡ ಹಾಕಿದ್ದರು. ನಾವೆಲ್ಲ ಇರೋದು ಗಾಜಿನ ಮನೆಯಲ್ಲಿ, ಒಡೆದರೆ ನಮ್ಮ ಮನೆ ಗಾಜು ಒಡೆದೋಗುತ್ತೆ, ಅವರ ಮನೆಯ ಗಾಜು ಕೂಡ ಒಡೆದೋಗುತ್ತೆ ಎಂದು ಕಿವಿಮಾತು ಹೇಳಿದ್ದರು.

  • ಸ್ಯಾಂಕಿ ಕೆರೆಗೆ ಹೋಗೋ ಮುನ್ನಾ ಈ ಆದೇಶ ಓದಿ

    ಸ್ಯಾಂಕಿ ಕೆರೆಗೆ ಹೋಗೋ ಮುನ್ನಾ ಈ ಆದೇಶ ಓದಿ

    ಬೆಂಗಳೂರು: ಸ್ಯಾಂಕಿ ಟ್ಯಾಂಕಿಗೆ ಹೋಗುವ ಮುನ್ನಾ ಜನರು ಈ ಆದೇಶವನ್ನು ನೋಡಲೇಬೇಕು. ಇನ್ಮುಂದೆ ಸ್ಯಾಂಕಿ ಕೆರೆಯ ದಡದಲ್ಲಿ ವಾಕ್ ಮಾಡುವವರಿಗೆ ಹೊಸ ನಿಯಮ ಜಾರಿಯಾಗಿದೆ.

    ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಇನ್ಮುಂದೆ ತರ್ಪಣ ಬಿಡುವುದು, ಪೂಜೆ ಮಾಡುವುದು, ಫೋಟೋ ತೆಗೆಯೋದು, ನಾಯಿಗಳನ್ನು ವಾಕ್‍ಗೆ ಕರೆದುಕೊಂಡು ಹೋಗುವುದು ಎಲ್ಲವೂ ಕೂಡ ನಿಷಿದ್ಧವಾಗಿದೆ. ಈ ಬಗ್ಗೆ ಆದೇಶ ಫಲಕವನ್ನು ಕೂಡ ಕೆರೆಯಂಗಳದಲ್ಲಿ ಹಾಕಲಾಗಿದೆ.

    ಬಿಬಿಎಂಪಿಯ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ತರ್ಪಣ ಬಿಡುವುದಕ್ಕೆ ಬೆಂಗಳೂರಿನಲ್ಲಿ ಕೆರೆಗಳೇ ಇಲ್ಲ, ನಾವು ಎಂಎಲ್‍ಎ ಮನೆಯಲ್ಲಿ ಅಥವಾ ಬಿಬಿಎಂಪಿ ಅಧಿಕಾರಿಗಳ ಮನೆಯ ಟ್ಯಾಂಕ್‍ನಲ್ಲಿ ಪಿಂಡ ಬಿಡಲು ಆಗುತ್ತಾ ಅಂತಾ ಪುರೋಹಿತರು ಕಿಡಿಕಾರಿದ್ದಾರೆ.

    ಇದರ ಜೊತೆಗೆ ಹವ್ಯಾಸಿ ಫೋಟೋಗ್ರಾಫರ್ ಗಳ ಕೂಡ ಫೋಟೋ ನಿಷೇಧಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ಸೇರಿದಂತೆ ಎಲ್ಲಾ ಕಡೆ ಫೋಟೋಗ್ರಾಫಿಗೆ ನಿಷೇಧ ಹೇರಲಾಗಿದೆ. ಇಲ್ಲೂ ಫೋಟೋಗ್ರಾಫಿ ಬ್ಯಾನ್ ಮಾಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಬಿಬಿಎಂಪಿಗೆ ಮತ್ತೆ ಮನವಿ ಸಲ್ಲಿಸಲಿದ್ದೇವೆ ಎಂದು ಸಾರ್ವಜನಿಕರು ಪಬ್ಲಿಕ್ ಟಿವಿಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಪಂಚಾಯತ್ ಸದಸ್ಯರನ್ನು ಹೂತು ಹಾಕಲು ಗುಂಡಿ ನಿರ್ಮಾಣ’

    ‘ಪಂಚಾಯತ್ ಸದಸ್ಯರನ್ನು ಹೂತು ಹಾಕಲು ಗುಂಡಿ ನಿರ್ಮಾಣ’

    ಚಿಕ್ಕಮಗಳೂರು: ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರನ್ನು ಹೂತು ಹಾಕಲು ಇಲ್ಲಿ ಗುಂಡಿಗಳನ್ನ ತೆಗೆಯಲಾಗಿದೆ, ಜನಸಾಮಾನ್ಯರು ಜಾಗರೂಕತೆಯಿಂದ ಓಡಾಡಿ ಎಂದು ಜನ ರಸ್ತೆ ಬದಿಗೆ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ರಸ್ತೆಯ ಅವ್ಯವಸ್ಥೆ ನೋಡಿ ಸ್ಥಳೀಯರೇ ಇಂತಹ ನಿರ್ಧಾರಕ್ಕೆ ಬಂದ್ದಿದ್ದಾರೆ. ಶೃಂಗೇರಿ ಮಠದಿಂದ ಸಾಗಿ ಎಸ್‍ಬಿಐ ಬ್ಯಾಂಕ್ ಮಾರ್ಗವಾಗಿ ವಿದ್ಯಾರಣ್ಯಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಡಿಯಾಳದ ಗುಂಡಿ ಬಿದ್ದಿವೆ. ರಸ್ತೆ ದುರಸ್ತಿಯಾಗದೇ ಸುಮಾರು ವರ್ಷಗಳೇ ಕಳೆದಿವೆ. ಈ ಬಗ್ಗೆ ಸರ್ಕಾರವಾಗಲಿ, ಗ್ರಾಮ ಪಂಚಾಯತ್ ಸದಸ್ಯರಾಗಲಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಸ್ಥಳಿಯರೇ ಈ ರೀತಿಯ ನಾಮಫಲಕ ಹಾಕಿ ಗ್ರಾಮ ಪಂಚಾಯತ್ ಸದಸ್ಯರಿಗೆ ಧಿಕ್ಕಾರ ಹಾಕಿದ್ದಾರೆ.

    ಅಷ್ಟೇ ಅಲ್ಲದೆ ಇದೇ ನಾಮಫಲಕದ ಕೆಳಗೆ ರಸ್ತೆ ಸರಿಯಾಗದೇ, ಬೋರ್ಡ್ ಅನ್ನು ತೆಗೆದರೆ ಅಂತವರು ನಾಯಿಗೆ ಸಮ ಎಂದು ಬರೆಯಲಾಗಿದೆ. ಇದರಿಂದ ಜನಸಾಮಾನ್ಯರ ನೋವು ಎಷ್ಟಿರಬಹುದು ಎಂದು ಗೊತ್ತಾಗುತ್ತದೆ.

    ನಿತ್ಯವೂ ಈ ರಸ್ತೆಯ ಮೂಲಕ ಮಕ್ಕಳು-ಮಹಿಳೆಯರು ಓಡಾಡುತ್ತಾರೆ. ಹೀಗಾಗಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಸ್ಥಳೀಯರೇ ಪಕ್ಕದ ತುಂಗಾ ನದಿಯ ದಡದಿಂದ ಮಣ್ಣನ್ನು ಹೊತ್ತು ತಂದು ಗುಂಡಿಗಳನ್ನು ಮುಚ್ಚುತ್ತಿದ್ದಾರೆ.

  • ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಮನಿಲಾ: ರಸ್ತೆಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಫಲಕದಲ್ಲಿ ಜಾಹಿರಾತು ಪ್ರಸಾರವಾಗೋ ಬದಲು ಪೋರ್ನ್ ವಿಡಿಯೋ ಪ್ರಸಾರವಾದ ಘಟನೆ ಫಿಲಿಪೈನ್ಸ್ ನ ರಾಜಧಾನಿ ಮನಿಲಾದ ಮಕಾಟಿ ಸಿಟಿಯಲ್ಲಿ ನಡೆದಿದೆ.

    30 ಸೆಕೆಂಡ್‍ಗಳಿರುವ ಈ ಪೋರ್ನ್ ವಿಡಿಯೋ ಅಕಸ್ಮಾತಾಗಿ ರಸ್ತೆ ಮಧ್ಯೆ ಜನಸಂದಣಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಫಲಕದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಒಂದು ಕ್ಷಣ ದಂಗಾಗಿ ಹೋದರು. ವಿಡಿಯೋದಲ್ಲಿದ್ದ ಜೋಡಿ ನಗ್ನವಾಗಿದ್ದು, ಆ ರಸ್ತೆಯಲ್ಲಿದ್ದ ಲಕ್ಷಾಂತರ ಮಂದಿ ಅಂದ್ರೆ ಮಕ್ಕಳಿಂದ ವಯೋವೃದ್ಧರವರೆಗೂ ಈ ವಿಡಿಯೋ ನೋಡುವಂತಾಯಿತು.

    ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಮಕಾಟಿಯ ಮೇಯರ್ ಅಭಿಗೇಲ್ ಬಿನಯ್ ಅದನ್ನು ನಿಲ್ಲಿಸಲ್ಲು ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದಿದ್ದರು. ಇನ್ನೂ ಕೆಲವರು ಆ ವಿಡಿಯೋ ನೋಡಲಾಗದೇ ಅದನ್ನು ನಿರ್ಲಕ್ಷಿಸಿದರು.

    ಫಿಲಿಪೈನ್ಸ್ ನಲ್ಲಿ ಈ ರಸ್ತೆ ಅತ್ಯಂತ ಬ್ಯೂಸಿ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ಹಾಗೂ ಸಾಕಷ್ಟು ಜನರು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಇಂತಹ ರಸ್ತೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.