Tag: ಫರೀದಾಬಾದ್

  • ತಂತ್ರ ಮಂತ್ರದ ಮೊರೆಗಾಗಿ 8 ವರ್ಷದ ಮಗಳನ್ನ ಕೊಂದ ತಾಯಿ

    ತಂತ್ರ ಮಂತ್ರದ ಮೊರೆಗಾಗಿ 8 ವರ್ಷದ ಮಗಳನ್ನ ಕೊಂದ ತಾಯಿ

    -ನನ್ನಲ್ಲಿ ದಿವ್ಯಶಕ್ತಿ ಇದೆ ಎಂದ ಮಹಿಳೆ

    ಲಕ್ನೋ: ತಂತ್ರ ಮಂತ್ರದ ಮೊರೆಗಾಗಿ ಮಹಿಳೆ ತನ್ನ ಎಂಟು ವರ್ಷದ ಮಗಳನ್ನ ಕೊಲೆಗೈದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಮಗು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿಯನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನಕ್ಕೊಳಾಗದ ಮಹಿಳೆ ಆರಂಭದಲ್ಲಿ ತನಗೆ ದಿವ್ಯಶಕ್ತಿಯ ಬಲವಿದೆ ಎಂಬಿತ್ಯಾದಿ ಮಾತುಗಳನ್ನಾಡಿದ್ದಾಳೆ. ನಂತರ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಗಳನ್ನ ಕೊಂದು ಶವವನ್ನ ಬಿಸಾಡಿರುವ ರಸ್ತೆಯನ್ನ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಮಗಳ ಮನೆಗೆ ಬಂದು ಏಕಾಏಕಿ ಪುತ್ರಿ, ಅಳಿಯನ ಮೇಲೆ ಗುಂಡು ಹಾರಿಸಿದ ತಂದೆ

    ಪಲ್ವಲ್ ವ್ಯಾಪ್ತಿಯ ಬಗೋಲಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆರಂಭದಲ್ಲಿ ಮೂಢನಂಬಿಕೆ ಮಾತುಗಳನ್ನಾಡಿದ್ದ ಮಹಿಳೆ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ. ಈ ಮೊದಲು ನೀರಿನ ಟ್ಯಾಂಕ್ ನಲ್ಲಿ ಮಗಳನ್ನ ಮುಳುಗಿಸಿ ಕೊಲ್ಲಲುಪ್ರಯತ್ನಿಸಿದ್ದಳು. ಆದ್ರೆ ಜನರು ಬಂದು ಬಾಲಕಿಯನ್ನ ರಕ್ಷಣೆ ಮಾಡಿದ್ದರು. ಇದನ್ನೂ ಓದಿ: ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ

    ಮೂರು ದಿನಗಳ ಮಗಳು ಕಾಣೆಯಾಗಿರುವ ಬಗ್ಗೆ ಬಾಲಕಿಯ ತಂದೆ ರಾಜೇಶ್, ಸಂಜಯ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರಿಗೆ ಆತನ ಪತ್ನಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೂಢನಂಬಿಕೆಯಲ್ಲಿರುವ ತಾಯಿ ತಂತ್ರ ಮಂತ್ರಗಳ ಮೊರೆಗಾಗಿ ಮಗಳನ್ನ ಕೊಲೆ ಮಾಡಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಕ್ರೈಂ ಬ್ರಾಂಚ್ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.  ಇದನ್ನೂ ಓದಿ: ಸ್ನೇಹಿತನ ಪತ್ನಿಗೆ ಮತ್ತು ಬರೋ ಔಷಧಿ ನೀಡಿ ರೇಪ್ – ಗೆಳೆಯನ ಮಗಳನ್ನೂ ಬಿಡದ ಕಾಮುಕ

  • ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆ

    ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆ

    ಚಂಡೀಗಢ: ಆರ್ಥಿಕ ಸಂಕಷ್ಟಕ್ಕೆ ಮನನೊಂದು ಒಂದೇ ಕುಟುಂಬದ ನಾಲ್ಕು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಫರೀದಾಬಾದ್ ನಲ್ಲಿ ನಡೆದಿದೆ.

    ಮನೆಯಲ್ಲಿನ ಕಡು-ಬಡತನ ಸಹಿಸಲಾಗಲೇ ಓರ್ವ ಸಹೋದರನ ಜೊತೆ ಮೂವರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುರಾಜ್‍ಕುಂದ್ ನಗರದ ಮನೆಯೊಂದರಲ್ಲಿ ವಾಸವಿದ್ದ ಈ ಮಕ್ಕಳು, ತಮ್ಮ ಸಾವಿಗೆ ಆರ್ಥಿಕ ಪರಿಸ್ಥಿತಿ ಕಾರಣವೆಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

    ಈ ದುರ್ಘಟನೆ ನಡೆದು 3-4 ನಾಲ್ಕು ದಿನಗಳ ಬಳಿಕ ಪೊಲೀಸರಿಗೆ ವಿಷಯ ತಿಳಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನ ಕೈಗೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಬಡತನದ ಕಾರಣ ತಿಳಿಸಿದ್ದಾರೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿನ್ನದ ನಾಡು ಕೋಲಾರದ ನಂದಿನಿ UPSCಯಲ್ಲಿ ದೇಶಕ್ಕೇ ಪ್ರಥಮ!

    ಚಿನ್ನದ ನಾಡು ಕೋಲಾರದ ನಂದಿನಿ UPSCಯಲ್ಲಿ ದೇಶಕ್ಕೇ ಪ್ರಥಮ!

    ಬೆಂಗಳೂರು/ಕೋಲಾರ: 2016ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಚಿನ್ನದ ಗಣಿ ನಾಡಿನ ಖ್ಯಾತಿಯ ಕೋಲಾರದ ಹೆಣ್ಣು ಮಗಳು ನಂದಿನಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ಮೂಲಕ ಯುಪಿಎಸ್‍ಸಿ ಇತಿಹಾಸದಲ್ಲಿ ಎರಡನೇ ಬಾರಿಗೆ ಕನ್ನಡತಿಯೊಬ್ಬರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದಂತಾಗಿದೆ.

    ಕೋಲಾರ ಜಿಲ್ಲೆ ಕೆಂಬೋಡಿ ಗ್ರಾಮದ ಕೆ.ಆರ್ ನಂದಿನಿ ಟಾಪರ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸದ್ಯ ಹರ್ಯಾಣಾದ ಫರೀದಾಬಾದ್‍ನಲ್ಲಿ ಐ.ಆರ್.ಎಸ್ ತರಬೇತಿಯಲ್ಲಿರುವ ಕೆ.ಆರ್. ನಂದಿನಿ, ನಿವೃತ್ತ ಹೈಸ್ಕೂಲ್ ಶಿಕ್ಷಕರಾದ ರಮೇಶ್ ಅವರ ಪುತ್ರಿ.

    ಕೋಲಾರದ ಚಿನ್ಮಯ ಸ್ಕೂಲ್‍ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ನಂದಿನಿ, ಪಿಯುಸಿಯನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೂರೈಸಿದರು. ನಂತ್ರ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಬಿಇ ಪದವಿ ಪಡೆದ್ರು. ನಂತರ ದೆಹಲಿ ಕರ್ನಾಟಕ ಭವನದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ರು. ಕಳೆದ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ 849ನೇ ಸ್ಥಾನ ಪಡೆದು ಭಾರತೀಯ ಕಂದಾಯ ಸೇವೆಗೆ ಆಯ್ಕೆಯಾಗಿದ್ದರು. ಐಆರ್‍ಎಸ್ ಅಧಿಕಾರಿಯಾಗಿದ್ದುಕೊಂಡೇ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಕೆ.ಆರ್. ನಂದಿನಿ ಇದೀಗ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಇನ್ನು ಶಿವಮೊಗ್ಗದ ಧ್ಯಾನಚಂದ್ರ 47ನೇ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಿನೋಬನಗರ ಲಕ್ಷ್ಮೀಪೂರ ಬಡವಾಣೆಯ ಹಾಲೇಶಪ್ಪನವರ ಮಗ ಧ್ಯಾನ್ ಚಂದ್ರ ಸದ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸ್ತಿದ್ದಾರೆ. ಈ ಬಾರಿಯ ಇನ್ನೂ ವಿಶೇಷ ಅಂದ್ರೆ, ಸಂಪೂರ್ಣ ಅಂಧತ್ವ ಹೊಂದಿರುವ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯ ಕೆಂಪಹೊನ್ನಯ್ಯ 340ನೇ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸದ್ಯ ಮೈಸೂರಿನ ಒಂಟಿಕೊಪ್ಪಲ್‍ನ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಕೆಂಪಹೊನ್ನಯ್ಯ, ತಮ್ಮ ಮೂರನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಕರ್ನಾಟಕದ ಐಎಎಸ್ ಬಾಬಾ ಸಂಸ್ಥೆಯಲ್ಲಿ ತರಬೇತಿ ಪಡೆದ 6 ಮಂದಿ ಈ ಸಲ ಶ್ರೇಯಾಂಕದ 100ನೇ ಸ್ಥಾನದೊಳಗಿದ್ದಾರೆ. ಅನ್ಮೋಲ್ ಶೇರ್ ಸಿಂಗ್‍ಬೇಡಿ ದ್ವಿತೀಯ ಸ್ಥಾನ ಹಾಗೂ ಗೋಪಾಲಕೃಷ್ಣ ರೋನಂಕಿ ತೃತೀಯ ಸ್ಥಾನ ಪಡೆದಿದ್ದಾರೆ. 2016ನೇ ಸಾಲಿನಲ್ಲಿ ಒಟ್ಟು 1099 ಮಂದಿ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ.

    ಯುಪಿಎಸ್‍ಸಿ ಟಾಪರ್ ಆದ ನಂದಿನಿ ಅವರಿಗೆ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.