Tag: ಫರಿದಾಬಾದ್

  • ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ನಿರಂತರ 2 ಗಂಟೆ ಗ್ಯಾಂಗ್ ರೇಪ್!

    ಕಿಡ್ನಾಪ್ ಮಾಡಿ ಚಲಿಸುತ್ತಿದ್ದ ಕಾರಿನಲ್ಲೇ ನಿರಂತರ 2 ಗಂಟೆ ಗ್ಯಾಂಗ್ ರೇಪ್!

    ಚಂಡೀಗಢ: ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ಬಳಿಕ ಚಲಿಸುತ್ತಿದ್ದ ಕಾರಿನಲ್ಲಿಯೇ ನಿರಂತರ 2 ಗಂಟೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

    ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಆರೋಪಿಯ ಬಂಧನವಾಗಿಲ್ಲ.

    ನಡೆದಿದ್ದೇನು?:
    ಮಹಿಳೆ ಶನಿವಾರ ಸಂಜೆ 7 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ತನ್ನ ಕಚೇರಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎಸ್‍ಯುವಿ ವಾಹನದಲ್ಲಿ ಬಂದ ಕಾಮುಕರು, ಈಕೆಯ ಮುಂದೆ ವಾಹನ ನಿಲ್ಲಿಸಿ, ಆಕೆಯನ್ನು ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ವಾಹನ ಚಲಿಸುತ್ತಿದ್ದಂತೆಯೇ ಕಾಮುಕರು ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಹಿಳೆ ಇದ್ದ ಸ್ಥಳದಿಂದ ಸುಮಾರು 20 ಕಿಮೀ ದೂರದಲ್ಲಿರೋ ಸಿಕ್ರಿ ಗ್ರಾಮದ ಪೆಟ್ರೋಲ್ ಪಂಪ್ ಬಳಿಕ ಆಕೆಯನ್ನು ಎಸೆದು ಹೋಗಿದ್ದಾರೆ.

    ಕ್ರೈಂ ಬ್ರ್ಯಾಂಚ್ ಅಧಿಕಾರಿ ಹೇಳಿದ್ದೇನು?
    ಮಹಿಳೆಯ ದೇಹದಲ್ಲಿ ಗಾಯಗಳಾಗಿವೆ. ಇದೊಂದು ಗ್ಯಾಂಗ್ ರೇಪ್ ಪ್ರಕರಣವಾಗಿದ್ದು, ಈ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಇದೇ ದಿನ ಈ ಘಟನೆ ನಡೆದ ಸ್ಥಳದಿಂದ 175 ಕಿಮೀ ದೂರದಲ್ಲಿ ವಾರದ ಹಿಂದೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಶ್ವಾಸಕೋಶ ಮತ್ತು ಕಿಡ್ನಿ ಛಿದ್ರವಾಗಿದ್ದ ರೀತಿಯಲ್ಲಿ ಶವ ಸಿಕ್ಕಿತ್ತು. ಈ ಕೃತ್ಯ 2 ಅಥವಾ ಮೂರು ಮಂದಿಯಿಂದ ನಡೆದಿದೆ ಎಂದು ಶಂಕಿಸಲಾಗಿದ್ದು, ಬಾಲಕಿಯ ಗುಪ್ತಾಂಗ ಸೇರಿದಂತೆ ದೇಹದ ಇತರ ಅಂಗಗಳು ಹಾನಿಗೊಳಗಾಗಿವೆ ಅಂತ ರೊಹ್ಟಕ್ ಪಿಜಿಐ ಡಾ. ಎಸ್ ಕೆ ದತ್ತಾರ್ವಾಲ್ ಹೇಳಿದ್ದಾರೆ.

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳನ್ನು ಗುರುತಿಸಿ ಶೀಘ್ರವೇ ಬಂಧಿಸುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಭರವಸೆ ನೀಡಿದ್ದಾರೆ.

    ಭಾನುವಾರವೂ ಈ ರೀತಿಯ ಘಟನೆ ನಡೆದಿದ್ದು, 11 ವರ್ಷದ ಬಾಲಕಿಯನ್ನು ಶನಿವಾರ ಸಂಜೆ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆಗೈದು ಬಳಿಕ ಆಕೆಯ ಮನೆ ಪಕ್ಕದಲ್ಲಿರೋ ಚರಂಡಿಗೆ ಎಸದೆಹೋಗಿದ್ದಾರೆ. ಈ ಘಟನೆ ಪಾನಿಪತ್ ನ ಗ್ರಾಮದಲ್ಲಿ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

  • ಜಿಎಸ್‍ಟಿ ತೆರಿಗೆಯ ಶ್ರೇಣಿ ಇಳಿಕೆಗೊಳಿಸುವ ಸುಳಿವು ನೀಡಿದ ಜೇಟ್ಲಿ

    ಜಿಎಸ್‍ಟಿ ತೆರಿಗೆಯ ಶ್ರೇಣಿ ಇಳಿಕೆಗೊಳಿಸುವ ಸುಳಿವು ನೀಡಿದ ಜೇಟ್ಲಿ

    ಫರಿದಾಬಾದ್: ದೇಶದಾದ್ಯಂತ ಜಾರಿಗೊಳಿಸಲಾಗಿರುವ ಜಿಎಸ್‍ಟಿ ತೆರಿಗೆಯ ಶ್ರೇಣಿಯನ್ನು ಇಳಿಕೆಯ ಸಾಧ್ಯತೆಗಳ ಕುರಿತು ಕೇಂದ್ರ ಹಣಕಾಸು ಸಚಿವ ಆರುಣ್ ಜೇಟ್ಲಿ ಸುಳಿವು ನೀಡಿದ್ದಾರೆ.

    ಭಾನುವಾರ ನ್ಯಾಷನಲ್ ಕಸ್ಟಮ್ಸ್ ಅಕಾಡೆಮಿ ಆಯೋಜಿಸಿದ್ದ ಪರೋಕ್ಷ ತೆರಿಗೆ ಪಾವತಿದರರ ಸಮಾರಂಭವನ್ನು ಉದ್ದೇಶಿ ಮಾತಾನಾಡಿದ ಅವರು ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಮೂರು ತಿಂಗಳಷ್ಟೇ ಕಳೆದಿದೆ, ನಾವು ಸಣ್ಣ ಪ್ರಮಾಣದ ತೆರಿಗೆದಾರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಅವಶ್ಯಕತೆಯನ್ನು ತಿಳಿದಿದ್ದೇವೆ. ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆಯಾದ ಬಳಿಕ ತೆರಿಗೆ ಪ್ರಮಾಣವನ್ನು ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದರು.

    ಪ್ರಸ್ತುತ ತೆರಿಗೆ ಶ್ರೇಣಿಯೂ ಈಗ ಶೇ.0, ಶೇ.5, ಶೇ.12, ಶೇ.18, ಶೇ. 28ರವರೆಗೆ ಐದು ಶ್ರೇಣಿಗಳಲ್ಲಿ ಹಂಚಿಕೆಯಾಗಿದೆ. ತೆರಿಗೆ ಪ್ರಮಾಣ ಸಂಗ್ರಹ ನಿರ್ದಿಷ್ಟ ಮಟ್ಟದ ಹಂತವನ್ನು ತಲುಪಿದ ನಂತರ ಈ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದರು. ಈ ಕುರಿತು ಸೆಪ್ಟೆಂಬರ್ 2ರಂದು ಮಾತನಾಡಿದ್ದ ಹಣಕಾಸು ಸಚಿವರು ಜಿಎಸ್‍ಟಿ ಜಾರಿಗೆಯಿಂದ ಪರೋಕ್ಷ ತೆರಿಗೆ ಪ್ರಮಾಣ ಕಡಿಮೆಯಾಗಬಹುದು ಎಂದು ತಿಳಿಸಿದ್ದರು.

    ಜನಸಾಮಾನ್ಯರು ಪ್ರತಿನಿತ್ಯ ಬಳಸುವ ಸರಕು ಮೇಲಿನ ತರಿಗೆಯನ್ನು ಕಡಿಮೆ ಮಾಡುವುದು ಸರ್ಕಾರದ ಆರ್ಥಿಕ ನೀತಿಯ ಒಂದು ಭಾಗವಾಗಿದೆ. ನಮ್ಮಲ್ಲಿ ತೆರಿಗೆ ಪಾವತಿ ಬದ್ಧತೆ ಪ್ರಮಾಣ ಕಡಿಮೆ ಇದೆ. ಅಭಿವೃದ್ಧಿ ಬಯಸುವ ಜನರು, ಸಂಪನ್ಮೂಲ ಸಂಗ್ರಹಿಸಲು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.

    ಒಂದು ದೇಶ ಮತ್ತು ಒಂದು ತೆರಿಗೆ ವ್ಯವಸ್ಥೆ ಎಂಬುವುದು ಜಿಎಸ್‍ಟಿ ಜಾರಿ ಮೂಲ ಉದ್ದೇಶವಾಗಿದೆ. ಒಕ್ಕೂಟ ವ್ಯವಸ್ಥೆಯ ಬಲವರ್ಧನೆಗೆ ಇಂತಹ ನೀತಿಗಳ ಅಗತ್ಯವಿದೆ. ಪ್ರಸ್ತುತ ಜಾರಿಯಾಗಿರುವ ಜಿಎಸ್‍ಟಿ ವ್ಯವಸ್ಥೆಗೂ ಅದರ ಮೂಲ ಉದ್ದೇಶಗಳಿಗೂ ಭಾರೀ ಭಿನ್ನತೆ ಇದ್ದು, ಇದನ್ನು ಸರಳಿಗೊಳಿಸುವ ಕಾರ್ಯ ಆಗಬೇಕಿದೆ ಎಂದರು.

    ಆದಾಯ ಸಂಗ್ರಹ ಎಂಬುವುದು ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಮೂಲ ಆಧಾರವಾಗಿದೆ. ತೆರಿಗೆಯನ್ನು ಪಾವತಿಲು ಹಿಂದೇಟು ಹಾಕುವ ಜನರ ಬಳಿಯಿಂದ ಬಲವಂತವಾಗಿ ತೆರಿಗೆಯನ್ನು ವಸೂಲಿ ಮಾಡುವ ಬದಲು, ತೆರಿಗೆ ಪಾವತಿಸಲು ಅರ್ಹರಾದವರಿಂದ ತೆರಿಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿ ಎಂದು ತೆರಿಗೆ ಅಧಿಕಾರಿಗಳಿಗೆ ಸಲಹೆ ನೀಡಿದರು. ತೆರಿಗೆ ಪಾವತಿಯನ್ನು ತಪ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.