Tag: ಪ್ಲೇ ಸ್ಟೋರ್

  • ಭಾರತದ ಡಿಜಿಟಲ್ ಸ್ಟ್ರೈಕ್‌ಗೆ ಗೂಗಲ್‌ನಿಂದ ಬಂತು ಮೊದಲ ಪ್ರತಿಕ್ರಿಯೆ

    ಭಾರತದ ಡಿಜಿಟಲ್ ಸ್ಟ್ರೈಕ್‌ಗೆ ಗೂಗಲ್‌ನಿಂದ ಬಂತು ಮೊದಲ ಪ್ರತಿಕ್ರಿಯೆ

    ನವದೆಹಲಿ: ಚೀನಾದ 59 ಅಪ್ಲಿಕೇಶನ್‌ಗಳು ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದ ಬಳಿಕ ಮೊದಲ ಬಾರಿಗೆ ಗೂಗಲ್‌ ಪ್ರತಿಕ್ರಿಯೆ ನೀಡಿದೆ.

    ಭಾರತ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಡೆವಲಪರ್‌ಗಳಿಗೆ ಮಾಹಿತಿ ನೀಡಿದ್ದು, ಈ ಅಪ್ಲಿಕೇಶನ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡಿದ್ದೇವೆ ಎಂದು ಗೂಗಲ್‌ ವಕ್ತಾರರು ತಿಳಿಸಿದ್ದಾರೆ.

    ಗೂಗಲ್‌ ವಕ್ತಾರರು ಎಷ್ಟು ಅಪ್ಲಿಕೇಶನ್‌ ಬ್ಲಾಕ್‌ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಆದರೆ ಡೆವಲಪರ್‌ಗಳೇ ಕೆಲ ಅಪ್ಲಿಕೇಶನ್‌ಗಳನ್ನೆ ಪ್ಲೇ ಸ್ಟೋರ್‌ನಿಂದ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹೀಗಿದ್ದರೂ ಕೆಲವೊಂದು ಅಪ್ಲಿಕೇಶನ್‌ಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ವಿಬೋ, ಎಸ್‌ ಫೈಲ್‌ ಎಕ್ಸ್‌ಪ್ಲೋರರ್‌, ಯುಕ್ಯಾಮ್‌ ಮೇಕ್‌, ಕ್ಯೂಕ್ಯೂ ಆ್ಯಪ್‌ಗಳು  ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ಈ ಅಪ್ಲಿಕೇಶನ್‌ಗಳು ಡೌನ್‌ಲೋಡ್‌ ಮಾಡಿದರೆ ಪೂರ್ಣವಾಗಿ ಕೆಲಸ ಮಾಡುತ್ತದೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿ, ದೇಶದ ಜನಗಳ ಡೇಟಾ ಭದ್ರತೆಗಾಗಿ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್‌ ಸ್ಟ್ರೈಕ್‌. ನಮ್ಮ ದೇಶದ ಜನಗಳ ಮೇಲೆ ಕೆಟ್ಟ ದೃಷ್ಟಿ ಇರಿಸಿದರೆ ನಾವು ಸರಿಯಾಗಿಯೇ ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ನವದೆಹಲಿ: ಭಾರತ ವಿರೋಧಿ ಹಾಗೂ ಪ್ರತ್ಯೇಕತಾವಾದದ ಕುರಿತ ‘2020 ಸಿಖ್ ರೆಫೆರೆಂಡಮ್’ ಎಂಬ ಆ್ಯಪ್‍ನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

    ಈ ದೇಶ ವಿರೋಧಿ ಹಾಗೂ ಪ್ರತ್ಯೇಕತಾ ವಾದದ ಕುರಿತ ಆ್ಯಪ್‍ನ್ನು ತೆಗೆದು ಹಾಕುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದರು. ಸಿಎಂ ಮನವಿಯನ್ನು ಪರಿಗಣಿಸಿದ ಗೂಗಲ್ ತನ್ನ ಪ್ಲೇ ಸ್ಟೋರಿನಿಂದ 2020 ಸಿಖ್ ರೆಫೆರೆಂಡಮ್(2020 ಸಿಖ್ ಜನಾಭಿಪ್ರಾಯ ಸಂಗ್ರಹ) ಆ್ಯಪ್‍ನ್ನು ತೆಗೆದು ಹಾಕಿದೆ. ಈ ಕುರಿತು ಪಂಜಾಬ್‍ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಭಾರತದ ಮೊಬೈಲ್ ಬಳಕೆದಾರರಿಗೆ ಈ ಆ್ಯಪ್ ಇನ್ನು ಮುಂದೆ ಲಭ್ಯವಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

    ಈ ಕುರಿತು ಗೂಗಲ್ ಗೆ ಮನವರಿಕೆ ಮಾಡುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ICETEC ರಚಿಸಿರುವ ಈ ಆ್ಯಪ್ ಬಿಡುಗಡೆಯಿಂದ ಉಂಟಾಗಿರುವ ಬೆದರಿಕೆಯನ್ನು ನಿಭಾಯಿಸಲು ಕೇಂದ್ರದ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅಮರಿಂದರ್ ಸಿಂಗ್ ಆದೇಶಿಸಿದ್ದರು.

    ಈ ಆ್ಯಪ್ ಮೂಲಕ ಪಂಜಾಬ್ ಜನಾಭಿಪ್ರಾಯ 2020 ಖಲಿಸ್ತಾನ್ ಎಂಬ ಹೆಸರಲ್ಲಿ ಮತ ಸಂಗ್ರಹಿಸಲಾಗುತ್ತಿತ್ತು. ನೋಂದಾಯಿಸಿಕೊಳ್ಳುವಂತೆ ಆ್ಯಪ್ ಸಾರ್ವಜನಿಕರಿಗೆ ಸೂಚಿಸಿತ್ತು. ಅಲ್ಲದೆ ಎಸ್2ಖಲಿಸ್ತಾನ್ ಎಂಬ ವೆಬ್‍ಸೈಟನ್ನು ಸಹ ಇದೇ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿತ್ತು.

    ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದುಹಾಕಲು ಹಾಗೂ ಭಾರತದಲ್ಲಿ ವೆಬ್‍ಸೈಟ್ ಬಳಕೆಯನ್ನು ನಿರ್ಬಂಧಿಸಲು ಪಂಜಾಬ್‍ನ ತನಿಖಾ ದಳ ಹಾಗೂ ಸೈಬರ್ ಅಪರಾಧ ವಿಭಾಗವು ಪ್ರಯತ್ನ ನಡೆಸಿತ್ತು. ಈ ಹಿನ್ನೆಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)ಬಿ ಅಡಿಯಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದು ಹಾಕುವಂತೆ ನ.8ರಂದು ಗೂಗಲ್‍ಗೆ ಸೂಚಿಸಲಾಗಿತ್ತು ಎಂದು ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.

  • ಮಾಹಿತಿ ಸೋರಿಕೆ- ಪ್ಲೇ ಸ್ಟೋರ್‌ನಿಂದ 7 ಆಪ್‍ಗಳನ್ನು ತೆಗೆದು ಹಾಕಿದ ಗೂಗಲ್

    ಮಾಹಿತಿ ಸೋರಿಕೆ- ಪ್ಲೇ ಸ್ಟೋರ್‌ನಿಂದ 7 ಆಪ್‍ಗಳನ್ನು ತೆಗೆದು ಹಾಕಿದ ಗೂಗಲ್

    ನವದೆಹಲಿ: ಆಪ್ ಮೂಲಕ ಬಳಕೆದಾರರನ್ನು ಟ್ರಾಕ್ ಹಾಗೂ ಅವರ ಮಾಹಿತಿ ಸೋರಿಕೆ ಮಾಡುತ್ತಿದ್ದ 7 ಆಪ್‍ಗಳನ್ನು ಗೋಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

    ಈ ಆಪ್ ಗಳನ್ನು ಆಂಟಿ ವೈರಸ್ ಕಂಪನಿ ಅವಸ್ತ್ ವರದಿ ಮಾಡಿದ್ದು, ಈ ಸ್ಟಾಕರ್ ವೇರ್ ಆಪ್ ಗಳಿಂದ ಬಳಕೆದಾರರನ್ನು ಟ್ರ್ಯಾಕ್ ಮಾಡಲಾಗುತ್ತಿತ್ತು ಎಂದು ಕಂಪನಿ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಈ ಅಪ್ಲಿಕೇಶನ್‍ಗಳ ಮೂಲಕ ಟ್ರ್ಯಾಕ್ ಮಾಡುವುದು ಮಾತ್ರವಲ್ಲದೆ, ಲೊಕೇಶನ್ ಡಾಟಾ, ಕಾಂಟ್ಯಾಕ್ಟ್ಸ್, ಕಾಲ್ ಲಾಗ್ಸ್ ಹಾಗೂ ಎಸ್‍ಎಂಎಸ್ ಮಾಹಿತಿಗಳನ್ನು ಕದಿಯುತ್ತಿದ್ದವು. ಇವು ರಷ್ಯನ್ ಅಭಿವೃದ್ಧಿಪಡಿಸಿರುವ ಆಪ್‍ಗಳಾಗಿವೆ ಎಂದು ಅವಸ್ತ್ ತಿಳಿಸಿದೆ.

    ಈ ಎಲ್ಲ ಆಪ್‍ಗಳನ್ನು ಗೂಗಲ್ ತೆಗೆದು ಹಾಕಿದ್ದು ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಮೊಬೈಲ್‍ನಲ್ಲಿದೆಯೇ ಪರಿಶೀಲಿಸಿಕೊಳ್ಳಿ. ಇದ್ದಲ್ಲಿ ಕೂಡಲೇ ತೆಗೆದುಹಾಕಿ ಎಂದು ಗೂಗ್ಲ್ ಸೂಚಿಸಿದೆ. ಈ ಆಪ್‍ಗಳನ್ನು 1.30 ಲಕ್ಷ ಬಾರಿ ಇನ್‍ಸ್ಟಾಲ್ ಮಾಡಲಾಗಿದ್ದು, ಇದೀಗ ಸ್ನೂಪ್‍ಗಳ ಮೂಲಕ ಆ ಆಪ್‍ಗಳನ್ನು ಡೌನ್‍ಲೋಡ್ ಮಾಡಬಹುದಾಗಿದ್ದು, ಕೇವಲ ಉದ್ದೇಶಿತ ಮೊಬೈಲ್‍ಗಳಲ್ಲಿ ಮಾತ್ರ ಬಳಸಬಹುದಾಗಿದೆ.

    ಹೇಗೆ ಮಾಹಿತಿ ಕದಿಯುತ್ತಾರೆ
    ಆಪ್ ಇನ್‍ಸ್ಟಾಲ್ ಮಾಡಿಕೊಂಡ ತಕ್ಷಣ ಇ-ಮೇಲ್ ಅಡ್ರೆಸ್ ಹಾಗೂ ಪಾಸ್‍ವರ್ಡ್‍ಗಳನ್ನು ಕೇಳುತ್ತದೆ. ನೀವು ಲಾಗಿನ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್‍ಗೆ ಬೇಹುಕಾರಿಕೆ ಅಪ್ಲಿಕೇಶನ್‍ನ್ನು ಕಳುಹಿಸಲಾಗುತ್ತದೆ. ಆದರೆ, ಈ ಅಪ್ಲಿಕೇಷನ್ ಐಕಾನ್ ಇಲ್ಲದಿರುವುದರಿಂದ ನಮಗೆ ಅಪ್ಲಿಕೇಷನ್ ಇನ್ಸ್‍ಟಾಲ್ ಆಗಿರುವ ಕುರಿತು ತಿಳಿಯುವುದಿಲ್ಲ. ಅಂದರೆ, ಇನ್ಸ್‍ಟಾಲ್ ಮಾಡಿದ ನಂತರ ಆ ಸಾಫ್ಟ್‍ವೇರ್ ನಿಮ್ಮ ಮೊಬೈಲ್‍ನಲ್ಲಿ ಇರುವ ಕುರಿತು ತಿಳಿಯುವುದಿಲ್ಲ. ಅದು ನಿಮ್ಮ ಮೊಬೈಲ್ ಹೊಕ್ಕ ನಂತರ ನಿಮ್ಮ ಎಲ್ಲ ಮಾಹಿತಿಯನ್ನು ಬೇರೆಲ್ಲೋ ಕೂತು ಕದಿಯುತ್ತಾರೆ.

    ಹೀಗೆ ಪತ್ತೆ ಹಚ್ಚಿ, ಅನ್‍ಇನ್ಸ್ಟಾಲ್ ಮಾಡಿ
    ನಿಮ್ಮ ಮೊಬೈಲ್‍ನಲ್ಲಿ ಸೆಟಿಂಗ್‍ನಲ್ಲಿರುವ ಆಪ್ ಸೆಟಿಂಗ್‍ನ್ನು ಕ್ಲಿಕ್ ಮಾಡಿ, ನಂತರ ಆಪ್ಸ್ ಆಂಡ್ ನೋಟಿಫಿಕೇಶನ್ ಕ್ಲಿಕ್ ಮಾಡಿ. ಈ ಸೆಕ್ಷನ್‍ಗೆ ವಿವಿಧ ಮೊಬೈಲ್‍ಗಳಲ್ಲಿ ಬೇರೆ ರೀತಿಯ ಹೆಸರುಗಳಿರುತ್ತವೆ. ಆದರೆ, ಸೆಟಿಂಗ್‍ನಲ್ಲಿ ನಿಮಗೆ ಎಲ್ಲಿ ನೋಟಿಫಿಕೇಷನ್ ಬರುತ್ತವೆಯೋ ಅದನ್ನು ನೀವು ಸಹಜವಾಗಿ ನಿಮ್ಮ ಮೊಬೈಲ್‍ನಲ್ಲಿ ಪತ್ತೆ ಹಚ್ಚಬಹುದು. ನಂತರ ಆ ಆಪ್‍ನ್ನು ನೀವು ಅನ್‍ಇನ್ಸ್ಟಾಲ್ ಮಾಡಬಹುದಾಗಿದೆ.