Tag: ಪ್ಲೇಸ್ಟೋರ್

  • ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

    ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

    ನವದೆಹಲಿ: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲಕ ಟಿಕ್‍ಟಾಕ್ ಆ್ಯಪ್ ಮತ್ತೆ ಕೆಲ ತಿಂಗಳಲ್ಲಿ ಆರಂಭವಾಗುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.

    ಟಿಕ್‍ಟಾಕ್ ಮಾಲೀಕತ್ವದ ಕಂಪನಿ ಬೈಟ್‍ಡಾನ್ಸ್ ಭಾರತದಲ್ಲಿ ಟಿಕ್‍ಟಾಕ್ ಅನ್ನು ಮತ್ತೆ ಆರಂಭಿಸಲು ಮುಂಬೈ ಮೂಲದ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳಿಂದ ವರದಿಯಾಗಿದೆ. ಅಲ್ಲದೆ ಕೆಲ ತಿಂಗಳಲ್ಲಿ ಟಿಕ್‍ಟಾಕ್ ಆ್ಯಪ್ ಮತ್ತೆ ಕಾಣಸಿಗಲಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಐಟಿ ನಿಯಮ – ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರದಿಂದ 105 ಆದೇಶ

    ಈ ಹಿಂದೆ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಟಿಕ್‍ಟಾಕ್ ಆ್ಯಪ್‍ನ್ನು ಭಾರತ ಸರ್ಕಾರ 2020ರಲ್ಲಿ ನಿಷೇಧಿಸಿತ್ತು. ಚೀನಾ ಅಪ್ಲಿಕೇಶನ್‍ಗಳ ಮೂಲಕ ಭಾರತದ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‍ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‍ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‍ಟಾಕ್ ಸೇರಿದಂತೆ 58 ಚೀನಾದ ಅಪ್ಲಿಕೇಶನ್‍ಗಳನ್ನು ನಿಷೇಧಿಸಿತ್ತು. ಇದನ್ನೂ ಓದಿ: Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    ಆ ಬಳಿಕ ಇದೀಗ ಮತ್ತೆ ದೇಶದಲ್ಲಿ ಟಿಕ್‍ಟಾಕ್ ಮತ್ತು ಬಿಜಿಎಮ್‍ಐ ಆ್ಯಪ್‍ಗಳನ್ನು ಆರಂಭಿಸಲು ಚರ್ಚೆ ನಡೆದಿದೆ. 5 ತಿಂಗಳ ಅಂತರದ ಒಳಗಾಗಿ ಆ್ಯಪ್‍ಗಳು ಪ್ಲೇಸ್ಟೋರ್‌ನಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಈ ಹಿಂದೆ ಬ್ಯಾನ್ ಆದ ಅಪ್ಲಿಕೇಶನ್‍ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಬಳಕೆದಾರರ ಡೇಟಾ ಸಂಗ್ರಹಿಸ್ತಿದ್ದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಗೂಗಲ್

    ಬಳಕೆದಾರರ ಡೇಟಾ ಸಂಗ್ರಹಿಸ್ತಿದ್ದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಗೂಗಲ್

    ವಾಷಿಂಗ್ಟನ್: ಬಳಕೆದಾರರ ಫೋನ್ ನಂಬರ್ ಹಾಗೂ ಇತರ ಪ್ರಮುಖ ಡೇಟಾಗಳನ್ನು ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಹತ್ತಾರು ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಬ್ಯಾನ್ ಮಾಡಿದೆ.

    ಗೂಗಲ್ ನಿಷೇಧಿಸಿರುವ ಆ್ಯಪ್‌ಗಳಲ್ಲಿ ಮುಖ್ಯವಾಗಿ 1 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದ್ದ ಮುಸ್ಲಿಂ ಪ್ರಾರ್ಥನೆಯ ಅಪ್ಲಿಕೇಶನ್‌ಗಳು, ಬಾರ್‌ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್‌ಗಳು, ಹೈವೇ ಸ್ಪೀಡ್ ಟ್ರ್ಯಾಪ್ ಡಿಟೆಕ್ಷನ್ ಅಪ್ಲಿಕೇಶನ್ ಹಾಗೂ ಇತರ ಹಲವಾರು ಬಳಕೆದಾರರ ಡೇಟಾಗಳನ್ನು ಸಂಗ್ರಹಿಸುತ್ತಿದ್ದ ಅಪ್ಲಿಕೇಶನ್‌ಗಳನ್ನು ಗೂಗಲ್ ಬ್ಯಾನ್ ಮಾಡಿದೆ. ಇದನ್ನೂ ಓದಿ: 48 ಗಂಟೆಗಳಲ್ಲಿ 3ನೇ ಸರ್ಕಾರಿ ಟ್ವಿಟ್ಟರ್ ಖಾತೆ ಹ್ಯಾಕ್

    ಗೂಗಲ್ ಪ್ಲೇಸ್ಟೋರ್‌ನಿಂದ ನಿಷೇಧಿಸಲಾದ ಅಪ್ಲಿಕೇಶನ್‌ಗಳು ಬಳಕೆದಾರರ ಸ್ಥಳ ಮಾಹಿತಿ, ಇ-ಮೇಲ್, ಫೋನ್ ನಂಬರ್, ಹತ್ತಿರದ ಸಾಧನಗಳು ಹಾಗೂ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಿದ್ದವು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

    ಬಳಕೆದಾರರ ಡೇಟಾವನ್ನು ಹೊರತೆಗೆಯಲು ಈ ಅಪ್ಲಿಕೇಶನ್‌ಗಳಲ್ಲಿ ಕೋಡ್‌ಗಳನ್ನು ಸೇರಿಸಲಾಗುತ್ತಿದ್ದು, ಇದಕ್ಕಾಗಿ ಹಲವು ಕಂಪನಿಗಳು ಅಪ್ಲಿಕೇಶನ್‌ಗಳಿಗೆ ಪಾವತಿಸಿದೆ. ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕಂಡುಬಂದಿರುವ ಕೋಡ್‌ಗಳನ್ನು ಇತ್ತೀಚೆಗೆ ಸಂಶೋಧಕರು ಕಂಡುಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ಭಾರತೀಯರ ಇಷ್ಟದ ಯುಸಿ ಬ್ರೌಸರ್ ಗೂಗಲ್ ಪ್ಲೇ ಸ್ಟೋರ್ ನಿಂದ ಕಿಕ್ ಔಟ್

    ಭಾರತೀಯರ ಇಷ್ಟದ ಯುಸಿ ಬ್ರೌಸರ್ ಗೂಗಲ್ ಪ್ಲೇ ಸ್ಟೋರ್ ನಿಂದ ಕಿಕ್ ಔಟ್

    ನವದೆಹಲಿ: ಭಾರತೀಯ ಆಂಡ್ರಾಯ್ಡ್ ಗ್ರಾಹಕರು ಸರ್ಚ್ ಮಾಡಲು ಬಳಸುತ್ತಿದ್ದ ಯುಸಿ ಬ್ರೌಸರ್ ಅಪ್ಲಿಕೇಶನನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದೆ.

    ಯುಸಿ ಬ್ರೌಸರ್ ತೆಗೆದು ಹಾಕಿದ್ದರೂ ಯುಸಿ ಬ್ರೌಸರ್ ಮಿನಿ ಮತ್ತು ಯುಸಿ ನ್ಯೂಸ್ ಅಪ್ಲಿಕೇಶನ್ ಗಳು ಈಗಲೂ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

    ಚೀನಾದ ಅಲಿಬಾಬಾ ಕಂಪೆನಿ ಅಭಿವೃದ್ಧಿ ಪಡಿಸಿರುವ ಯುಸಿ ಬ್ರೌಸರ್ ಆ್ಯಪನ್ನು ಒಟ್ಟು 5 ಕೋಟಿಗೂ ಅಧಿಕ ಜನ ಡೌನ್ ಲೋಡ್ ಮಾಡಿದ್ದು, ಕಳೆದ ಒಂದೇ ತಿಂಗಳಿನಲ್ಲಿ 1 ಕೋಟಿ ಜನ ಡೌನ್ ಲೋಡ್ ಮಾಡಿದ್ದರು. ಆದರೆ ಇದಕ್ಕಿದ್ದಂತೆ ಗೂಗಲ್ ಯುಸಿ ಬ್ರೌಸರ್ ಅನ್ನು ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದ್ದು ಯಾಕೆ ಎನ್ನುವುದಕ್ಕೆ ನಿಜವಾದ ಕಾರಣ ತಿಳಿದು ಬಂದಿಲ್ಲ.

    ಯುಸಿ ಬ್ರೌಸರ್ ನಲ್ಲಿ ಕೆಲಸ ಮಾಡುತ್ತಿರುವ ಮೈಕ್ ರೋಸ್ ಎಂಬವರು ಈ ಬಗ್ಗೆ ಟ್ವೀಟ್ ಮಾಡಿದ್ದು, 30 ದಿನಗಳಲ್ಲಿ ತಪ್ಪು ಪ್ರಚಾರ ಮಾಡಿ ಡೌನ್ ಲೋಡ್ ಹೆಚ್ಚಳ ಮಾಡಿದೆ ಎನ್ನುವ ಆರೋಪಕ್ಕೆ ಪ್ಲೇ ಸ್ಟೋರ್ ತಾತ್ಕಾಲಿಕವಾಗಿ ಆ್ಯಪನ್ನು ತೆಗೆದು ಹಾಕಿದೆ. ಈ ವಿಚಾರದ ಬಗ್ಗೆ ನಾವು ಗೂಗಲ್ ಕಂಪೆನಿಯನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಆಗಸ್ಟ್ ತಿಂಗಳಿನಲ್ಲಿ ಯುಸಿ ಬ್ರೌಸರ್ ಭಾರತೀಯ ಗ್ರಾಹಕರ ಡೇಟಾವನ್ನು ಚೀನಾದಲ್ಲಿ ಸರ್ವರ್ ಕಳುಹಿಸುತ್ತಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ  ಪ್ರಕಟವಾಗಿತ್ತು. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದಲ್ಲಿ ಚೀನಾದ ಬ್ರೌಸರ್ ಅನ್ನು ನಿಷೇಧಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿತ್ತು.

    ಡೇಟಾ ಸಂಸ್ಥೆ ಸ್ಟೇಟ್‍ಕೌಂಟರ್ ಪ್ರಕಾರ, ಭಾರತದಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಗಿಂತಲೂ ಯುಸಿ ಬ್ರೌಸರ್ ಹೆಚ್ಚು ಪ್ರಸಿದ್ಧವಾಗಿದೆ. ಶೇ.60 ರಷ್ಟು ಭಾರತೀಯ ಬಳಕೆದಾರರು ಯುಸಿ ಬ್ರೌಸರ್ ಬಳಸುತ್ತಿದ್ದಾರೆ ಎಂದು ಹೇಳಿತ್ತು.

    ಪ್ಲೇಸ್ಟೋರ್ ನಿಂದ ಡಿಲೀಟ್ ಆಗಿದ್ದರೂ ಆ್ಯಪ್ ಬೇಕಿದ್ದಲ್ಲಿ ಆಂಡ್ರಾಯ್ಡ್ ಗ್ರಾಹಕರು ಯುಸಿ ಬ್ರೌಸರ್ ಸೈಟಿಗೆ ಹೋಗಿ ಡೌನ್ ಲೋಡ್ ಮಾಡಬಹುದಾಗಿದೆ.