Tag: ಪ್ಲೇನ್

  • ದಿಢೀರ್ ಅಂತಾ ಹೆದ್ದಾರಿಯಲ್ಲಿ ಲ್ಯಾಂಡ್ ಆಯ್ತು ಪ್ಲೇನ್-ವಿಡಿಯೋ ನೋಡಿ

    ದಿಢೀರ್ ಅಂತಾ ಹೆದ್ದಾರಿಯಲ್ಲಿ ಲ್ಯಾಂಡ್ ಆಯ್ತು ಪ್ಲೇನ್-ವಿಡಿಯೋ ನೋಡಿ

    ಕ್ಯಾಲಿಫೋರ್ನಿಯಾ: ಚಿಕ್ಕ ಮಾದರಿಯ ಪ್ಲೇನ್ ದಿಢೀರ್ ಅಂತಾ ಜನಸಂದಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ ಬಳಿ ನಡೆದಿದೆ. ಪ್ಲೇನ್ ಲ್ಯಾಂಡ್ ಆಗುವ ದೃಶ್ಯಗಳು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಪ್ಲೇನ್‍ನಲ್ಲಿ ಇಂಧನದ ಕೊರತೆ ಉಂಟಾಗಿದ್ದರಿಂದ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ವಾಹನಗಳ ನಡುವೆ ಪ್ಲೇನ್ ಲ್ಯಾಂಡ್ ಆಗಿದ್ದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ಲೇನ್‍ಗೂ ಸಹ ಯಾವುದೇ ಡ್ಯಾಮೇಜ್ ಆಗದಂತೆ ಅತ್ಯಂತ ಸುರಕ್ಷಿತ ಮತ್ತು ಜಾಣ್ಮೆಯಿಂದ ಹೆದ್ದಾರಿಯಲ್ಲಿ ಲ್ಯಾಂಡ್ ಮಾಡಲಾಗಿದೆ.

    ಕ್ರಿಸ್ ಎಂಬ ಯುವಕನ ಕಾರಿನ ಡ್ಯಾಶ್ ಕ್ಯಾಮ್‍ನಲ್ಲಿ ಪ್ಲೇನ್ ಲ್ಯಾಂಡ್ ಆಗುವ ದೃಶ್ಯಗಳು ಸೆರೆಯಾಗಿವೆ. ನಾನು ಕಾರು ಚಲಾಯಿಸುತ್ತಿದ್ದಂತೆ ಪ್ಲೇನ್ ಬಂದಂತೆ ಆಯಿತು. ನೋಡ ನೋಡುತ್ತಿದ್ದಂತೆ ನನ್ನ ಮುಂದೆಯೇ ಪ್ಲೇನ್ ಲ್ಯಾಂಡ್ ಆಯಿತು. ಕಾರಿನ ಪಕ್ಕದಲ್ಲಿ ಯುವಕನೊಬ್ಬ ಸೈಕಲ್‍ನಲ್ಲಿ ಬರುತ್ತಿದ್ದರು. ಪ್ಲೇನ್ ಲ್ಯಾಂಡ್ ಆಗುತ್ತಿದ್ದಂತೆ ನಾನು ಭಯಭೀತನಾಗಿ ಹೆಲ್ಪ್ ಲೈನ್ 911ಕ್ಕೆ ಕರೆ ಮಾಡಿದೆ ಎಂದು ಕ್ರಿಸ್ ಹೇಳಿದ್ದಾರೆ.

    ಒಂದು ಇಂಜಿನ್ ಸಾಮರ್ಥ್ಯವುಳ್ಳ ವಿಮಾನ ಇದಾಗಿದ್ದು, ಮಹಿಳಾ ಪೈಲಟ್ ಪ್ಲೇನ್ ನಡೆಸುತ್ತಿದ್ದರು. ಪ್ಲೇನ್‍ನಲ್ಲಿರುವ ಪೈಲಟ್ ಗೆ ಏನಾಯ್ತ ಅಂತಾ ನಾನು ನೋಡಲು ಹೋದಾಗ ಆಕೆ ತನಗೆ ಏನೂ ಆಗಿಲ್ಲ ಸುರಕ್ಷಿತವಾಗಿದ್ದೇನೆ ಎಂದು ಕೈ ಸನ್ನೆ ಮಾಡಿದ್ರು ಅಂತ ಸೈಕಲ್ ಸವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಹಂಟಿಂಗ್ಟನ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳ ಟ್ಟಟ್ಟರ್ ಖಾತೆಯಲ್ಲಿ ಪ್ಲೇನ್ ಲ್ಯಾಂಡ್ ಆಗಿರುವ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಮಹಿಳಾ ಪೈಲಟ್ ರಸ್ತೆ ಬದಿಯ ವಿದ್ಯುತ್ ತಂತಿಗಳಿಗೂ ತಾಗದಂತೆ, ಪ್ಲೇನ್‍ಗೂ ಡ್ಯಾಮೇಜ್ ಆಗದಂತೆ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಲ್ಯಾಂಡ್ ಬಳಿಕ ಕೆಲವು ಸಮಯದ ಬಳಿಕ ಪ್ಲೇನ್ ಟೇಕ್ ಆಫ್ ಆಯ್ತು ಅಂತಾ ಟ್ವಿಟ್ಟರ್‍ನಲ್ಲಿ ಬರೆಯಲಾಗಿದೆ.