Tag: ಪ್ಲಾಸ್ಟಿಕ್ ಬ್ಯಾಗ್

  • ಪ್ಲಾಸ್ಟಿಕ್ ಬ್ಯಾಗ್ ಕೊಡಲ್ಲ ಎಂದ ಬೇಕರಿ ಉದ್ಯೋಗಿಯನ್ನ ಕೊಂದೇ ಬಿಟ್ಟ

    ಪ್ಲಾಸ್ಟಿಕ್ ಬ್ಯಾಗ್ ಕೊಡಲ್ಲ ಎಂದ ಬೇಕರಿ ಉದ್ಯೋಗಿಯನ್ನ ಕೊಂದೇ ಬಿಟ್ಟ

    ನವದೆಹಲಿ: ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದಿದ್ದಕ್ಕೆ ಗ್ರಾಹಕನೊಬ್ಬ ಬೇಕರಿ ಉದ್ಯೋಗಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿ ನಿವಾಸಿ ಖಲೀಲ್ ಅಹ್ಮದ್ (45) ಕೊಲೆಯಾದ ಬೇಕರಿ ಉದ್ಯೋಗಿ. ಈಶಾನ್ಯ ದೆಹಲಿಯ ದಯಾಲ್ಪುರ್ ಪ್ರದೇಶದ ಬೇಕರಿಯಲ್ಲಿ ಅಕ್ಟೋಬರ್ 15ರಂದು ಘಟನೆ ನಡೆದಿದೆ. ಫೈಝನ್ ಖಾನ್ (24) ಕೊಲೆಗೈದ ಗ್ರಾಹಕ. ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕ್!

    ದಯಾಲ್ಪುರ್ ಪ್ರದೇಶದ ಬೇಕರಿಗೆ ಫೈಝನ್ ಖಾನ್ ಬಂದಿದ್ದ. ಸ್ವೀಟ್ ಖರೀದಿಸಿದ್ದ ಫೈಝನ್ ಖಾನ್ ಪ್ಲಾಸ್ಟಿಕ್ ಬ್ಯಾಗ್ ಕೊಡುವಂತೆ ಕೇಳಿದ್ದಾನೆ. ಆದರೆ ಖಲೀಲ್ ಅಹ್ಮದ್ ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಫೈಝನ್ ಖಾನ್ ಬೇಕರಿ ಮುಂದೆ ಇದ್ದ ಇಟ್ಟಿಗೆಯಿಂದ ಖಲೀಲ್ ಅಹ್ಮದ್ ತಲೆಗೆ ಬಲವಾಗಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಲೀಲ್ ಅಹ್ಮದ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಖಲೀಲ್ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಖಲೀಲ್ ಅಹ್ಮದ್ ಪುತ್ರ, ಘಟನೆ ನಡೆದು ಸುಮಾರು ದಿನಗಳು ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಅಷ್ಟೇ ಅಲ್ಲದೆ ಆರೋಪಿಯು ತಾನು ಅಪ್ರಾಪ್ತ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

  • ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ನಗರದ ಸರ್ಕಾರಿ ಆಸ್ಪತ್ರೆಯ ಬಾತ್ ರೂಂನಲ್ಲಿ ಆಗ ತಾನೇ ಜನಿಸಿದ ಕಂದಮ್ಮನನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸುತ್ತಿ ಇಟ್ಟಿರುವುದು ಬೆಳಕಿಗೆ ಬಂದಿದೆ.

    ಇಡೀ ರಾತ್ರಿ ಆ ಪ್ಲಾಸ್ಟಿಕ್ ಬ್ಯಾಗ್‍ನಲ್ಲೇ ಕಳೆದಿದ್ದ ಆ ಶಿಶುವನ್ನು ಬೆಳಗ್ಗೆ ಸಿಬ್ಬಂದಿ ಕಂಡ ತಕ್ಷಣವೇ ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ಚಿಕಿತ್ಸೆ ಕೊಡಿಸಿದ್ರೂ ಮಗುವನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.

    ಗಂಡುಶಿಶುವಿಗೆ ಜನ್ಮ ನೀಡಿದ ಮಹಿಳೆ ಭಾನುವಾರ ಸಂಜೆ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಕಂದಮ್ಮನನ್ನು ಸುತ್ತಿ ಆಸ್ಪತ್ರೆಯ ಬಾತ್‍ರೂಂನಲ್ಲಿ ಮಗುವನ್ನು ಇಟ್ಟು ಬಳಿ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಮುಂಜಾನೆ ವಾರ್ಡ್ ಸಿಬ್ಬಂದಿ ಕಸ ಗುಡಿಸಲು ಹೋದಾಗ ಶಿಶುವನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ವೈದ್ಯರನ್ನು ಕರೆದು ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ನಂತರ ಐಸಿಯುಗೆ ಸೇರಿಸಿದರು. ಆದ್ರೆ ಇಡೀ ರಾತ್ರಿ ಉಸಿರು ಕಟ್ಟಿದಂತಾಗಿದ್ದ ಹಸುಗೂಸು ಬದುಕುಳಿಯಲಿಲ್ಲ.

    ಸದ್ಯ ಆರೋಪಿ ತಾಯಿಗಾಗಿ ಆಸ್ಪತ್ರೆ ಹಾಗೂ ವಾರ್ಡ್‍ನ ಸುತ್ತಮುತ್ತ ಅಳವಡಿಸಿದ್ದ ಸಿಸಿ ಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ ತಮಿಳುನಾಡಿನಲ್ಲಿ ಕೃಷ್ಣಗಿರಿ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಪೊದೆಯೊಂದರ ಮಧ್ಯೆ ಗಂಡು ಶಿಶು ಪತ್ತೆಯಾಗಿದ್ದು, ಮೈತುಂಬ ಇರುವೆಗಳು ಕಡಿದ ಸ್ಥಿತಿಯಲ್ಲಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಾರನೇ ದಿನ ಮಗು ಸಾವನ್ನಪ್ಪಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ಲಾಸ್ಟಿಕ್ ಚೀಲದಲ್ಲಿ 2 ದಿನದ ಗಂಡು ಶಿಶು ಪತ್ತೆ

    ಪ್ಲಾಸ್ಟಿಕ್ ಚೀಲದಲ್ಲಿ 2 ದಿನದ ಗಂಡು ಶಿಶು ಪತ್ತೆ

    ಕಲಬುರಗಿ: ನಗರದ ಸಿದ್ಧಿಬಾಷ ದರ್ಗಾದ ಬಳಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ.

    ಸ್ಥಳೀಯರು ಶಿಶು ಮೃತಪಟ್ಟಿದೆಯೆಂದು ತೆಗೆಯಲು ಹೋದಾಗ, ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಮಗುವನ್ನು ಬಿಸಾಕಿದ್ದಾರೆ ಎಂದು ಶಂಕಿಸಲಾಗಿದೆ.

    ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಆಂಬುಲೆನ್ಸ್ ಮೂಲಕ ಸ್ಥಳಕ್ಕೆ ಬಂದು ಚಿಕಿತ್ಸೆಗೆಂದು ಶಿಶುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಎಳೆಮಗುವನ್ನು ಕ್ಯಾರಿಬ್ಯಾಗ್‍ನಲ್ಲಿ ಕಟ್ಟಿಬಿಸಾಕಿದ ಪಾಪಿ ಪೋಷಕರಿಗೆ ಸ್ಥಳಿಯರು ಹಿಡಿಶಾಪ ಹಾಕಿದ್ದಾರೆ.

    ಈ ಘಟನೆ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.