Tag: ಪ್ಲಾಸ್ಟಿಕ್ ಬಳಕೆ

  • ಸ್ವದೇಶಿ ಮೇಳದಲ್ಲಿ ಅದಮ್ಯ ಚೇತನ ಸಂಸ್ಥೆಯಿಂದ ಶೂನ್ಯ ತ್ಯಾಜ್ಯ ಅಭಿಯಾನ

    ಸ್ವದೇಶಿ ಮೇಳದಲ್ಲಿ ಅದಮ್ಯ ಚೇತನ ಸಂಸ್ಥೆಯಿಂದ ಶೂನ್ಯ ತ್ಯಾಜ್ಯ ಅಭಿಯಾನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ಲಾಸ್ಟಿಕ್ ಬಳಕೆ ಜೊತೆಗೆ ತ್ಯಾಜ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಜನರನ್ನು ಎಷ್ಟೇ ಜಾಗೃತಗೊಳಿಸಿದರೂ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಹೆಮ್ಮೆಯ ಸಂಸ್ಥೆಯೊಂದು ಸ್ವದೇಶಿ ಮೇಳದಲ್ಲಿ ಝೀರೋ ವೇಸ್ಟೇಜ್ ಕ್ಯಾಂಪೇನ್ ಮಾಡಿದೆ.

    ವಿವಿಧ ಯೋಜನೆಗಳಲ್ಲಿ ಶೂನ್ಯ ತ್ಯಾಜ್ಯ ಹೇಗೆ ಅನ್ನುವುದನ್ನು ಅರಿವು ಮೂಡಿಸುತ್ತಿದೆ. ಅನ್ನ, ಅಕ್ಷರ, ಆರೋಗ್ಯ, ಘೋಷವಾಕ್ಯದೊಂದಿಗೆ ಆರಂಭವಾದ ಅದಮ್ಯ ಚೇತನ ಬೆಂಗಳೂರಿನ ಹೆಮ್ಮೆ. ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಾ ಬಂದಿದೆ. ಅದರಲ್ಲೂ ಶೂನ್ಯ ತ್ಯಾಜ್ಯ ಅಭಿಯಾನ ಕೂಡ ಒಂದು. ಝೀರೋ ವೇಸ್ಟೇಜ್‍ನಿಂದ ಪ್ಲಾಸ್ಟಿಕ್ ಮುಕ್ತ ಮತ್ತು ತ್ಯಾಜ್ಯ ಮುಕ್ತ ಮಾಡಿ ಅಂತಾ ಜಾಗೃತಗೊಳಿಸುತ್ತಿದೆ. ಬೆಂಗಳೂರಿನ ಜಯನಗರದಲ್ಲಿ ನಡೆದ ಸ್ವದೇಶಿ ಮೇಳದಲ್ಲಿ ಅದಮ್ಯ ಚೇತನ ಸಂಸ್ಥೆ ಝೀರೋ ವೇಸ್ಟೇಜ್ ಕ್ಯಾಂಪೇನ್ ಮಾಡಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಿದೆ. ಇದನ್ನೂ ಓದಿ: ಯಾರು ಸತ್ತರೂ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ: ತಂಗಡಗಿ

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸ್ವದೇಶಿ ಮೇಳ ನಡೆಯುತ್ತಾ ಇದೆ. ಈ ಮೇಳದ ಸಂಯೋಜಕರು ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್. ಈ ಮೇಳದಲ್ಲಿ ಅದಮ್ಯ ಚೇತನ ಸಂಸ್ಥೆಯವರು ಕೂಡ ಸ್ಟಾಲ್ ಹಾಕಿದ್ದು, ಮೂರು ಯೋಜನೆಗಳನ್ನು ಅಳವಡಿಸಿಕೊಂಡು ಝೀರೋ ವೇಸ್ಟೇಜ್ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಅದರಲ್ಲಿ ಮೊದಲನೇ ಯೋಜನೆ ಮೇಳಕ್ಕೆ ಬಂದ ಜನ ಪ್ಲಾಸ್ಟಿಕ್ ಬಳಸಬಾರದು ಅಂತಾ ಸೀರೆಯಲ್ಲಿ ಬ್ಯಾಗ್ ಮಾಡಿ. ಸೀರೆ ಬ್ಯಾಗ್‍ಗಳನ್ನು ವಿತರಿಸಿದ್ದಾರೆ. ಜೊತೆಗೆ ಸೀರೆ ಇದ್ದರೆ ಅದಮ್ಯ ಚೇತನಕ್ಕೆ ತಂದುಕೊಟ್ಟರೆ ಬ್ಯಾಗ್ ಮಾಡಿ ವಿತರಣೆ ಮಾಡುತ್ತಾರಂತೆ. ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದು ಅಂತಾರೆ.

    ಅದಮ್ಯ ಚೇತನದ ಎರಡನೇ ಯೋಜನೆಯಲ್ಲಿ ಊಟ ಮಾಡುವ ಸ್ಥಳದಲ್ಲಿ ಪ್ಲಾಸ್ಟಿಕ್ ಲೋಟ ಮತ್ತು ಪ್ಲೇಟ್ ಬಳಸಬಾರದು ಅಂತಾ ಪ್ಲೇಟ್ ಬ್ಯಾಂಕ್‍ನಿಂದ ಪ್ರತಿ ಸ್ಟಾಲ್‍ಗೆ ಲೋಟ ವಿತರಣೆ ಮಾಡಿದ್ದಾರೆ. ಜೊತೆಗೆ ಊಟ ಮಾಡುವ ಸ್ಥಳದಲ್ಲಿ ಸ್ಟೀಲ್ ಲೋಟ ಮತ್ತು ತಟ್ಟೆಗಳನ್ನು ವ್ಯವಸ್ಥೆ ಮಾಡಿದ್ದಾರೆ. ಸ್ಥಳದಲ್ಲೇ ಡಿಶ್ ವಾಶರ್ ವ್ಯವಸ್ಥೆ ಕೂಡ ಇದ್ದು ಕ್ಲೀನ್ ಮಾಡಿ. ಮತ್ತೆ ಸ್ಟೀಲ್ ತಟ್ಟೆ ಬಳಸಬಹುದು. ಶುಭ ಸಮಾರಂಭ ಕಾರ್ಯಕ್ರಮಗಳಿಗೆ ಅದಮ್ಯ ಚೇತನ ಸಂಸ್ಥೆ ಪ್ಲೇಟ್ ಬ್ಯಾಂಕ್‍ನಿಂದ ಸ್ಟೀಲ್ ಲೋಟ, ತಟ್ಟೆ ಮತ್ತು ಪಾತ್ರೆಗಳನ್ನ ಒದಗಿಸುತ್ತದೆ. ಪ್ಲಾಸ್ಟಿಕ್ ಪೇಪರ್ ಲೋಟ ಮತ್ತು ಬಾಳೆ ಎಲೆ ಆದರೆ ತ್ಯಾಜ್ಯ ಹೆಚ್ಚಾಗುತ್ತೆ. ಮತ್ತೆ ಪ್ಲಾಸ್ಟಿಕ್ ಬಳಕೆಯಿಂದ ಖಾಯಿಲೆ ಅನಾರೋಗ್ಯಕ್ಕೆ ಕಾರಣ ಆಗುತ್ತೆ. ಇದರ ಬದಲು ಅದಮ್ಯ ಚೇತನ ಸಂಸ್ಥೆ ಪ್ಲೇಟ್ ಬ್ಯಾಂಕ್‍ನಿಂದ ಪಾತ್ರೆ ತೆಗೆದುಕೊಂಡು ಶುಭ ಸಮಾರಂಭ ಮಾಡಬಹುದು. ಯಾವುದೇ ಶುಲ್ಕವಿಲ್ಲದೇ ಪಾತ್ರೆ ವಿತರಣೆ ಮಾಡುತ್ತಾರೆ. ಶುಭ ಸಮಾರಂಭ ಮುಗಿದ ಬಳಿಕ ಪ್ಲೇಟ್ ಬ್ಯಾಂಕ್‍ನಿಂದ ಪಡೆದ ಪಾತ್ರೆಗಳನ್ನು ವಾಪಸ್ ತಿರುಗಿಸಬಹುದು ಇದರಿಂದ ಶೂನ್ಯ ತ್ಯಾಜ್ಯ ಮಾಡಬಹುದು. ಇದನ್ನೂ ಓದಿ: ಕಾಂಗ್ರೆಸ್‍ನವರು ಕೇಸರಿ ಶಲ್ಯ ಧರಿಸಿರೋದು ಒಳ್ಳೆಯ ಸಂಕೇತ: ಬೊಮ್ಮಾಯಿ

    ಮನೆಗಳಲ್ಲಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್‍ಗಳನ್ನು ಬಿಸಾಡೋದ್ರಿಂದ ಸಾಕಷ್ಟು ಸಮಸ್ಯೆ ಆಗುತ್ತೆ. ಹಾಗಾಗಿ ವೇಸ್ಟೇಜ್ ಆಗಿರೋ ಪ್ಲಾಸ್ಟಿಕ್ ಡಬ್ಬಿಯಲ್ಲೇ ಸಂಗ್ರಹಣೆ ಮಾಡಿ ರೀಸೈಕಲ್ ಮಾಡಿ. ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್‍ಗಳಿಂದ ಪ್ರಾಣಿಗಳ ಬಾಯಿಗೆ ಸಿಗಬಹುದು ಹಾಗೂ ನೀರಿನ ಕೊಳವೆಗಳಿಗೆ ಸಿಕ್ಕಿ ಸಮಸ್ಯೆ ಆಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚೆತ್ತುಕೊಳ್ಳಬೇಕು. ಚಿಕ್ಕ ಚಿಕ್ಕ ಮಕ್ಕಳನ್ನೇ ಸ್ವದೇಶಿ ಮೇಳಕ್ಕೆ ಕರೆಸಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಒಟ್ಟಾರೆ ಅದಮ್ಯ ಚೇತನ ಸಂಸ್ಥೆ ಝೀರೋ ವೇಸ್ಟೇಜ್ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಾ ಇದೆ. ಜನ ಜಾಗೃತರಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಝೀರೋ ವೇಸ್ಟೇಜ್ ಅನ್ನು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

  • ಪ್ಲಾಸ್ಟಿಕ್ ಮಳಿಗೆ ಮೇಲೆ ಅನಿರೀಕ್ಷಿತ ತಪಾಸಣೆ, ದಂಡ

    ಪ್ಲಾಸ್ಟಿಕ್ ಮಳಿಗೆ ಮೇಲೆ ಅನಿರೀಕ್ಷಿತ ತಪಾಸಣೆ, ದಂಡ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಮಂಗಳವಾರ ನಗರದಾದ್ಯಂತ ಪ್ಲಾಸ್ಟಿಕ್ ಮಾರಾಟ ಮಳಿಗೆ ಹಾಗೂ ಉತ್ಪಾದನಾ ಘಟಕಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಗಿದೆ.

    ನಗರದಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಗೆ ಅವಕಾಶವಿಲ್ಲ. ಹೀಗಾಗಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಕಾರ್ಯವನ್ನು ಆಯಾ ವಲಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ವಲಯವಾರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಪಾಲಿಕೆಯ ಎಂಟೂ ವಲಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುವ ಮಳಿಗೆಗಳಿಗೆ ವಲಯ ಮಾರ್ಷಲ್ ಮೇಲ್ವಿಚಾರಕ, ವಿಭಾಗದ ಮೇಲ್ವಿಚಾರಕ, ಸಕಾಯಕ ಕಾರ್ಯಪಾಲಕ ಇಂಜಿನಿಯರ್, ಕಿರಿಯ ಆರೋಗ್ಯ ನಿರೀಕ್ಷಕ ಹಾಗೂ ಮಾರ್ಷಲ್‍ಗಳ ತಂಡ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಒಮ್ಮೆ ಬಳಸುವ ಪ್ಲಾಸ್ಟಿಕ್ ಮಾರಾಟ ಅಥವಾ ಉತ್ಪಾದನೆ ಕಂಡುಬಂದರೆ ಅದನ್ನು ವಶಪಡಿಸಿಕೊಂಡು ದಂಡ ವಿಧಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಅನಧಿಕೃತ ಬ್ಯಾನರ್, ಫ್ಲೆಕ್ಸ್, ಪೋಸ್ಟರ್ಸ್, ಬಂಟಿಂಗ್ಸ್ ಅಳವಡಿಸುವವರ ವಿರುದ್ಧ FIR

    ಸೊಮವಾರ ದಕ್ಷಿಣ ವಲಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಉತ್ಪಾದಿಸುವ ಎರಡು ಘಟಕಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ ದಂಡ ವಿಧಿಸಿದ್ದಾರೆ. ಈ ಪೈಕಿ ಸುಬ್ರಮಣ್ಯಪುರ ಮುಖ್ಯ ರಸ್ತೆಯಲ್ಲಿರುವ ಅಗ್ರಿ ಎಂಟರ್‍ಪ್ರೈಸೆಸ್ ಘಟಕಕ್ಕೆ ಅನಿರೀಕ್ಷಿತ ಭೇಟಿ ನೀಡಿ 200 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪದ್ಮನಾಭ ನಗರ ವಾರ್ಡ್‍ನ ಗೌಡನಪಾಳ್ಯ ಬಳಿಯಿರುವ ಗ್ರೇಸ್ ಪಾಲಿಮರ್ಸ್ ಘಟಕದಲ್ಲೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದ್ದು 25 ಸಾವಿರ ರೂ. ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದ ಬೇಟೆಗಾರರು-ಬಾಡು ಸವಿಯುವ ಮುನ್ನವೇ ಅಂದರ್!

    ಮಾರ್ಷಲ್ ಗಳಿಂದ ತಪಾಸಣೆ ಹಾಗೂ ಜಾಗೃತಿ:
    ನಗರದಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ಬದಲು ಪುನರ್ ಬಳಕೆ ಮಾಡಬಹುದಾದ ಬಟ್ಟೆ ಬ್ಯಾಗ್, ನಾರಿನ ಬ್ಯಾಗ್, ಪೇಪರ್‍ನಿಂದ ತಯಾರಿಸಿದ ಕವರ್ ಬಳಸುವ ಬಗ್ಗೆ ಮಾರಾಟಗಾರರು ಹಾಗೂ ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕು. ನಗರದಲ್ಲಿ ಯಾರಾದರೂ ಒಮ್ಮೆ ಬಳಸುವ ಪ್ಲಾಸಿಕ್ ಬಳಕೆ ಮಾಡುವುದು ಕಂಡುಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಎಲ್ಲಾ ವಲಯದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

  • ಪ್ಲಾಸ್ಟಿಕ್ ಬಳಕೆ – ಎ2ಬಿ ಹೋಟೆಲ್‍ಗೆ 1 ಲಕ್ಷ ದಂಡ

    ಪ್ಲಾಸ್ಟಿಕ್ ಬಳಕೆ – ಎ2ಬಿ ಹೋಟೆಲ್‍ಗೆ 1 ಲಕ್ಷ ದಂಡ

    ಬೆಂಗಳೂರು: ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಎ2ಬಿ ಯಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳ ತಂಡ ದಾಳಿ ನಡೆಸಿ 1 ಲಕ್ಷ ದಂಡ ವಿಧಿಸಿದ್ದಾರೆ.

    ತಮಿಳುನಾಡು ಮೂಲದ ಎ2ಬಿ ಹೋಟೆಲ್ ಗಳು ಬೆಂಗಳೂರಿನಾದ್ಯಂತ ಅತಿ ಹೆಚ್ಚಾಗಿದ್ದು, ಹೆಚ್.ಎಸ್.ಆರ್ ಲೇಔಟ್‍ನ ಬಿಡಿಎ ಕಾಂಪ್ಲೆಕ್ಸ್ ನಲ್ಲಿರುವ ಎ2ಬಿ ಹೋಟೆಲ್ ನಲ್ಲಿ ಒಂದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಹೇರಿದ್ರು ಸಹ ಇದಕ್ಕೆ ಕ್ಯಾರೆ ಎನ್ನದೇ ಬಳಸುತ್ತಿದ್ದರು. ಈ ಎ2ಬಿ ಹೋಟೆಲ್ ಗಳಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ನ್ನು ಬಳಸುತ್ತಿದ್ದಾರೆ ಎಂಬಾ ಮಾಹಿತಿ ಮೇರೆಗೆ ಇಂದು ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ನೇತೃತ್ವದ ತಂಡ ದಾಳಿ ನಡೆಸಿ 8 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶಕ್ಕೆ ಪಡೆದು 1 ಲಕ್ಷ ರೂಪಾಯಿಗಳ ದಂಡ ವಿಧಿಸಿದ್ದಾರೆ.

    ದಾಳಿ ವೇಳೆ ಮಾತನಾಡಿದ ಜಂಟಿ ಆಯುಕ್ತ ರಾಮಕೃಷ್ಣ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ ಹೋಟೆಲ್, ಅಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಬಳಕೆ ಮಾಡುತ್ತಿರುವುದರ ಬಗ್ಗೆ ಮಾಹಿತಿ ಬಂದಾಗ ಇಂದು ದಾಳಿ ನಡೆಸಲಾಗಿದೆ. 8 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಎ2ಬಿ ಹೋಟೆಲ್‍ನಲ್ಲಿ ದಾಳಿ ವೇಳೆ ಸಿಕ್ಕಿದ್ದು, 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಮುಂದಿನ ದಿನಗಳಲ್ಲಿ ಮತ್ತೆ ಪ್ಲಾಸ್ಟಿಕ್ ಬಳಕೆಯನ್ನು ಮುಂದುವರೆಸಿದರೆ ಲೈಸೆನ್ಸ್ ರದ್ದು ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.