Tag: ಪ್ಲಾನ್

  • ಬೆಂಗ್ಳೂರಲ್ಲಿ ಕೊರೊನಾ ತಡೆಗಟ್ಟಲು ಬಿಬಿಎಂಪಿಯಿಂದ ಸಿದ್ಧವಾಗಿದೆ ‘ಪ್ಲಾನ್ ಬಿ’

    ಬೆಂಗ್ಳೂರಲ್ಲಿ ಕೊರೊನಾ ತಡೆಗಟ್ಟಲು ಬಿಬಿಎಂಪಿಯಿಂದ ಸಿದ್ಧವಾಗಿದೆ ‘ಪ್ಲಾನ್ ಬಿ’

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತೆಡೆಗಟ್ಟಲು ಬಿಬಿಎಂಪಿ ಪ್ಲಾನೊಂದನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಬಿಬಿಎಂಪಿ ‘ಪ್ಲಾನ್ ಬಿ’ ರೆಡಿ ಮಾಡಿಕೊಂಡಿದೆ. ಈ ಮೂಲಕ ತನ್ನ ಮೇಲಿನ ಹೊರೆಯನ್ನು ಬಿಬಿಎಂಪಿ ಇಳಿಸಿಕೊಳ್ಳುತ್ತಿದೆ. ಆದರೆ ಈ ಪ್ಲಾನ್ ಕೊರೊನಾ ರೋಗಿ ಮೇಲೆಯೇ ಎಲ್ಲಾ ನಿರ್ಧಾರವಾಗುತ್ತದೆ ಎನ್ನಲಾಗಿದೆ.

    ‘ಪ್ಲಾನ್ ಬಿ’ ಅಸಲಿಯತ್ತೇನು..?:
    ಸರ್ಕಾರಿನಾ? ಖಾಸಗಿನಾ? ಆಸ್ಪತ್ರೆ ಆಯ್ಕೆ ವಿಚಾರವನ್ನು ರೋಗಿಗಳ ನಿರ್ಧಾರಕ್ಕೆ ಬಿಡುವುದು. ರೋಗಿಗಳ ರೋಗಿಗಳ ಮನೆಗೆ ಭೇಟಿ ನೀಡಲು ಡಿಸ್ಟಿಕ್ ಸರ್ವೆಯೆರ್ಸ್ ಆಫೀಸರ್ಸ್ ನೇಮಕ ಮಾಡುವುದು. ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯುವುದು. ಹಾಗೆಯೇ 50 ವರ್ಷ ಮೇಲ್ಪಟ್ಟ ಹಾಗೂ 10ವರ್ಷ ಕೆಳಗಿನ ಮಕ್ಕಳ ಮೇಲೆ ಹೆಚ್ಚು ನಿಗಾ ಇರಿಸುವುದಾಗಿದೆ.

    ದೇಹದ ಉಷ್ಣಾಂಶ ಹೆಚ್ಚಿದ್ರೆ ಅವರನ್ನ ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಿಸುವುದು. ಸಾಂಸ್ಥಿಕ ಕ್ವಾರಂಟೈನ್ ಬದಲು ಹೋಂ ಕ್ವಾರಂಟೈನ್‍ಗೆ ಹೆಚ್ಚು ಒತ್ತು ನೀಡುವುದು. ವಾಣಿಜ್ಯ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ವಹಿಸುವುದು. ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಬಳಸದಿರುವವರಿಗೆ ಹೆಚ್ಚೆಚ್ಚು ದಂಡ ವಿಧಿಸುವುದೇ ಬಿಬಿಎಂಪಿ ಕಂಡುಕೊಂಡ ಪ್ಲಾನ್ ಆಗಿದೆ.

  • ಹೊಸ ವರ್ಷಾಚರಣೆಗೆ ಬೆಂಗ್ಳೂರು ಪೊಲೀಸರ ಹೊಸ ಪ್ಲಾನ್

    ಹೊಸ ವರ್ಷಾಚರಣೆಗೆ ಬೆಂಗ್ಳೂರು ಪೊಲೀಸರ ಹೊಸ ಪ್ಲಾನ್

    ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ಬಾರಿಯ ನ್ಯೂ ಇಯರ್ ಗೆ ಬೆಂಗಳೂರು ಪೊಲೀಸರು ಹೊಸದೊಂದು ಪ್ಲಾನ್ ಮಾಡಿದ್ದಾರೆ.

    ಉದ್ಯಾನ ನಗರಿ ಬೆಂಗಳೂರು, ಹೊಸ ವರ್ಷಚಾರಣೆಯ ಮೋಜು, ಮಸ್ತಿ, ಪಾರ್ಟಿಗೆ ಹೇಗೆ ಫೇಮಸ್ ಆಗಿದೆಯೋ, ನ್ಯೂಯರ್ ವೇಳೆ ನಡೆಯುವ ಅವಘಡಗಳಿಗೂ ಅಷ್ಟೇ ಫೆಮಸ್ ಆಗಿದೆ. ಪೊಲೀಸರು ಎಷ್ಟೇ ಜಾಗೃತಿ ವಹಿಸಿದರು ಕೂಡ ಒಂದಲ್ಲೊಂದು ಅಚಾತುರ್ಯ ನಡೆದು, ರಾಷ್ಟಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುತ್ತೆ.

    ಕಳೆದ ಎರಡ್ಮೂರು ವರ್ಷಗಳಿಂದ ಯುವತಿಯರ ಜೊತೆ ಅಶ್ಲೀಲ ವರ್ತನೆ, ಲೈಂಗಿಕ ಕಿರುಕುಳ, ಕುಡಿದ ಮತ್ತಿನಲ್ಲಿ ಪುಡಿರೌಡಿಗಳ ದಾಂಧಲೆ ಸೇರಿದಂತೆ ನಗರದಲ್ಲಿ ನಡೆದ ಕೆಲ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ. ಈ ಘಟನೆಯಿಂದ ಎಚ್ಚೆತ್ತಿರುವ ಬೆಂಗಳೂರು ನಗರ ಪೊಲೀಸರು, ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

    ನಗರದ ನೂರು ಅತಿಸೂಕ್ಷ್ಮ ಜಾಗಗಳನ್ನು ಗುರುತಿಸಿರುವ ಪೊಲೀಸರು, ಆ ಏರಿಯಾಗಳಲ್ಲಿ ಡಿಸೆಂಬರ್ 31ರ ರಾತ್ರಿ 12 ಗಂಟೆಗೆ ತಾವೇ ಕೇಕ್ ತಂದು, ಸಾರ್ವಜನಿಕರೊಂದಿಗೆ ಸೇರಿ ಕೇಕ್ ಕಟ್ ಮಾಡಲಿದ್ದಾರೆ. ಆ ಮೂಲಕ ಜನಸ್ನೇಹಿ ವರ್ಷಾಚರಣೆಯನ್ನು ಮಾಡುವುದರ ಜೊತೆಗೆ ಅಪರಾಧ ಚಟುವಟಿಕೆಗಳನ್ನು ತಡೆಯುವುದು, ಇದರ ಜೊತೆಗೆ ಜನರಲ್ಲಿ ನಿರ್ಭೀತ ವಾತಾವರಣ ಸೃಷ್ಟಿ ಮಾಡಿ, ಸಕ್ಸಸ್ ಫುಲ್ ನ್ಯೂ ಇಯರ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ಸಿದ್ಧತೆಗಳು ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾರ್ಗ ಮಧ್ಯೆ ಪ್ಲಾನ್ ಚೇಂಜ್: ನಮ್ಮ ಹೋಟೆಲ್‍ಗೆ ಬನ್ನಿ ಎಂದ ಜಾರ್ಜ್

    ಮಾರ್ಗ ಮಧ್ಯೆ ಪ್ಲಾನ್ ಚೇಂಜ್: ನಮ್ಮ ಹೋಟೆಲ್‍ಗೆ ಬನ್ನಿ ಎಂದ ಜಾರ್ಜ್

    ಬೆಂಗಳೂರು: ಹೈದರಾಬಾದ್ ನಿಂದ ಆಗಮಿಸಿದ ಕಾಂಗ್ರೆಸ್ ಶಾಸಕರು ಇಂದಿರಾನಗರದ 100 ಫೀಟ್ ಎಂಬೆಸಿ ಗಾಲ್ಫ್ ಬುಸಿನೆಸ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಬಸ್ ರೆಸಾರ್ಟ್ ಗೆ ತೆರಳಲಿದೆ ಎಂದು ಆರಂಭದಲ್ಲಿ ಮಾಹಿತಿ ಸಿಕ್ಕಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ಲಾನ್ ಬದಲಾಗಿದ್ದು ಜಾರ್ಜ್ ಅವರು ರೆಸಾರ್ಟ್ ಬೇಡ ನಮ್ಮ ಹೋಟೆಲ್ ಗೆ ಬನ್ನಿ ಎಂದು ಡಿ.ಕೆ ಶಿವಕುಮಾರ್ ಮತ್ತು ಬೈರತಿ ಬಸವರಾಜ್ ಸಹೋದರರಿಗೆ ಸೂಚನೆ ನೀಡಿದ್ದರು.

    ಈ ಸೂಚನೆಯ ಹಿನ್ನೆಲೆಯಲ್ಲಿ ಶಾಸಕರ ಬಸ್ ಈಗ ಜಾರ್ಜ್ ಒಡೆತನದ ಎಂಬೆಸಿ ಗಾಲ್ಫ್ ಹೋಟೆಲ್‍ಗೆ ಆಗಮಿಸಿದ್ದು, ಹೋಟೆಲ್ ನಲ್ಲಿ ಶಾಸಕರು ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರು ಈ ಹೋಟೆಲ್‍ಗೆ ಭೇಟಿ ನೀಡಲಿದ್ದು, ಬಳಿಕ ನೇರವಾಗಿ ಇಲ್ಲಿಂದಲೇ ವಿಧಾನ ಸೌಧಕ್ಕೆ ಶಾಸಕರು ತೆರಳಲಿದ್ದಾರೆ.

    ಹೈದರಾಬಾದ್‍ಗೆ ತೆರಳುವ ಮುನ್ನ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದರು. ಹೀಗಾಗಿ ಇಲ್ಲಿಗೆ ಆಗಮಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬಿಡದಿಯಿಂದ ವಿಧಾನಸೌಧಕ್ಕೆ 40 ಕಿ.ಮೀ ದೂರ ಇರುವ ಕಾರಣ ಎಂಬೆಸಿ ಗಾಲ್ಫ್ ಗೆ ತೆರಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

  • ಕಾಂಗ್ರೆಸ್‍ನಿಂದ ಎಬಿಸಿ ಪ್ಲಾನ್: ರಾಜ್ಯ ರಾಜಕಾರಣದಲ್ಲಿ ಮೂಡಿಸಿದೆ ಸಂಚಲನ

    ಕಾಂಗ್ರೆಸ್‍ನಿಂದ ಎಬಿಸಿ ಪ್ಲಾನ್: ರಾಜ್ಯ ರಾಜಕಾರಣದಲ್ಲಿ ಮೂಡಿಸಿದೆ ಸಂಚಲನ

    ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನದ ಹೊಸ್ತಿಲಲ್ಲಿರುವ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಶತಾಯಗತಾಯ ಬಹುಮತ ಪಡೆಯಲು ಪ್ರಯತ್ನಿಸುತ್ತಿದ್ದು, ಈ ವೇಳೆ ಬಹುಮತ ಪಡೆದು ಅಧಿಕಾರ ಸ್ಥಾಪಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಬಿಸಿ ಪ್ಲಾನ್ ಜಾರಿಗೆ ತರಲು ಮುಂದಾಗಿದೆ.

    ಏನಿದು ಎಬಿಸಿ ಪ್ಲಾನ್?
    ಸದ್ಯ ದೇಶದ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗಬಲ್ಲ ಚುನಾವಣೆ ಎಂದು ರಾಜಕೀಯ ವಿಶ್ಲೇಷಕರು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಕರೆಯುತ್ತಿದ್ದಾರೆ. ಆದರೆ ಚುನಾವಣೆಯ ಪೂರ್ವ ನಡೆದ ಹಲವು ಸಮೀಕ್ಷೆಗಳು ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಫಲಿತಾಂಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಮ್ಮ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ತೀರ್ಮಾನಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಬಿಸಿ ಪ್ಲಾನ್ ರಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಪ್ಲಾನ್ ಎ – ಈ ಪ್ಲಾನ್ ಅನ್ವಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಳ ಬಹುಮತವನ್ನು ಪಡೆಯಬೇಕಿದೆ. ಹೀಗಾಗಿ 112 ಸ್ಥಾನಗಳನ್ನು ಗೆಲ್ಲಬೇಕು. ಈ ಸ್ಥಾನಗಳನ್ನು ಗೆಲ್ಲಲು ಪಕ್ಷದ ಎಲ್ಲಾ ನಾಯಕರು ಎಲ್ಲಾ ರೀತಿಯ ಶ್ರಮವಹಿಸಬೇಕು.

    ಪ್ಲಾನ್ ಬಿ – ಒಂದು ವೇಳೆ ಪಕ್ಷ ಸರಳ ಬಹುಮತ ಪಡೆಯಲು ವಿಫಲವಾದರೆ, ಪ್ಲಾನ್ ಬಿ ಜಾರಿಗೆ ಬರುತ್ತದೆ. ಅಂದರೆ ಚುನಾವಣೆಯಲ್ಲಿ ಪಕ್ಷವು 100 ಆಸುಪಾಸು ಸ್ಥಾನ ಗೆದ್ದರೆ ಈ ವೇಳೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆಯುವುದು. ಪ್ಲಾನ್ ಬಿ ಜಾರಿಗೆ ಹೊಣೆಯನ್ನು ರಾಹುಲ್ ಗಾಂಧಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ.

    ಪ್ಲಾನ್ ಸಿ – ಪ್ಲಾನ್ ಬಿ ಅನ್ವಯ ಸರಳ ಬಹುಮತ ಪಡೆಯಲು ವಿಫಲವಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರ ಬೆಂಬಲ ಪಡೆಯುವುದು. ಆದರೆ ಸದ್ಯ ರಾಜ್ಯ ನಾಯಕರಿಗೆ ಪ್ಲಾನ್ ಸಿ ಬಗೆ ತಲೆ ಕೆಡಿಸಿಕೊಳ್ಳದಿರಲು ಹೈಕಮಾಂಡ್ ಸೂಚನೆ ನೀಡಿದೆ.

    ರಾಹುಲ್ ಗಾಂಧಿ ಸದ್ಯ ರಾಜ್ಯ ನಾಯಕರಿಗೆ ತಮ್ಮ ಎಸಿಬಿ ಪ್ಲಾನ್ ಕುರಿತು ವಿವರಣೆ ನೀಡಿದ್ದಾರೆ ಎನ್ನಲಾಗಿದ್ದು, ಚುನಾವಣೆ ಮುಗಿರುವ ವರೆಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

     

     

  • ಹೊಸ ವರ್ಷಕ್ಕೆ ಬೆಂಗ್ಳೂರು ಪೊಲೀಸರಿಂದ ಹೊಸ ಪ್ಲಾನ್

    ಹೊಸ ವರ್ಷಕ್ಕೆ ಬೆಂಗ್ಳೂರು ಪೊಲೀಸರಿಂದ ಹೊಸ ಪ್ಲಾನ್

    ಬೆಂಗಳೂರು: ಹೊಸ ವರ್ಷಕ್ಕೆ ದಿನಗಣನೆ ಆರಂಭ ಆಗುತ್ತಿದ್ದಂತೆ ಪೊಲೀಸರ ಕೆಲಸ ಹೆಚ್ಚಾಗುತ್ತಿದೆ. ಕಳೆದ ವರ್ಷ ನಡೆದ ಘಟನೆ ಇಡೀ ಪೊಲೀಸರೇ ತಲೆ ತಗ್ಗಿಸುವಂತೆ ಮಾಡಿತ್ತು. ಈ ಬಾರಿ ಅಂತಹ ಘಟನೆ ಆಗಬಾರದು ಅಂತ ಪೊಲೀಸರು ಒಂದು ಹೊಸ ಪ್ಲಾನ್‍ಗೆ ಚಿಂತನೆ ನಡೆಸಿದ್ದಾರೆ.

    ಕಳೆದ ಬಾರಿ ಹೊಸ ವರ್ಷದ ಆಚರಣೆ ವೇಳೆ ನಡೆದ ಅವಾಂತರಗಳಿಂದ ರಾಜ್ಯ ರಾಜಧಾನಿಯಲ್ಲಿ ಮಹಿಳೆಯರು ಸೇಫಾ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಹೀಗಾಗಿ ಈ ಬಾರಿ ಪೊಲೀಸರು ಅಲರ್ಟ್ ಆಗಿದ್ದಾರೆ. ಎಲ್ಲಾ ವಿಭಾಗದ ಡಿಸಿಪಿ ಕಚೇರಿಗಳಿಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಭೇಟಿ ನೀಡಿ, ಸಿದ್ಧತೆ ಕುರಿತು ಮಾಹಿತಿ ಪಡೆದಿದ್ದಾರೆ. ಇನ್ನೊಂದು ವಿಷಯ ಏನಂದ್ರೆ ಈ ಬಾರಿ ಬ್ರಿಗೇಡ್ ಹಾಗೂ ಎಂ.ಜಿ ರಸ್ತೆಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆಗೆ ಚಿಂತನೆ ನಡೆದಿದೆ. ಶೇಕಡಾ 30ರಷ್ಟು ಜಾಗದಲ್ಲಿ ಮಹಿಳೆಯರಿಗೆ ಹಾಗೂ ಶೇಕಡಾ 70ರಷ್ಟು ಜಾಗದಲ್ಲಿ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗುತ್ತಿದೆ.

    ಈ ಬಾರಿ ಯಾವುದೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಗದ ಹಾಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ಗೃಹಸಚಿವ ರಾಮಲಿಂಗರೆಡ್ಡಿ ನಗರ ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ನಗರದ ಹಿರಿಯ ಪೊಲೀಸರು ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿನ ಎಲ್ಲಾ ಅಂಗಡಿ ಮಾಲೀಕರ ಜೊತೆ ಸಭೆ ನಡೆಸಿ, ಅಂಗಡಿಯ ಮುಂಭಾಗವೂ ಸಿಸಿ ಕ್ಯಾಮೆರಾವನ್ನು ಅಳವಡಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಡ್ರೋನ್ ಕ್ಯಾಮೆರಾ ಹಾಗೂ ವಾಚಿಂಗ್ ಟವರ್‍ಗಳು ಕೂಡ ಕಾರ್ಯ ನಿರ್ವಹಿಸಲಿವೆ.

    ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುವುದು ಪೊಲೀಸರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದ್ರೆ ಈ ಹೊಸ ಪ್ಲಾನ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ.

  • ಮದುವೆ ಯಾವಾಗ ಎಂಬ ಪ್ರಶ್ನೆಗೆ ಪ್ರಿಯಾಂಕಾ ಉತ್ತರಿಸಿದ್ದು ಹೀಗೆ!

    ಮದುವೆ ಯಾವಾಗ ಎಂಬ ಪ್ರಶ್ನೆಗೆ ಪ್ರಿಯಾಂಕಾ ಉತ್ತರಿಸಿದ್ದು ಹೀಗೆ!

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಅಲ್ಲದೇ ಹಾಲಿವುಡ್‍ ನಲ್ಲೂ ಬ್ಯೂಸಿಯಾಗಿದ್ದಾರೆ. ಮಂಗಳವಾರ ಪ್ರಿಯಾಂಕಾ ಚೋಪ್ರಾ ಮುಂಬೈನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮದವರು, ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗೋಕೆ ಹುಡುಗನ ಹುಡುಕಾಟದಲ್ಲಿದ್ದೇನೆ ಎಂದು ಹೇಳಿದ್ದಾರೆ.

    “ಮದುವೆಯಾಗೋಕೆ ಹುಡುಗನ ಹುಡುಕಾಟದಲ್ಲಿದ್ದೇನೆ. ನಾವು ಪ್ಲ್ಯಾನ್ ಮಾಡಿದಂತೆ ಯಾವತ್ತೂ ಮದುವೆ ಆಗಲ್ಲ. ನಾನು ಇನ್ನೂ ನನಗೆ ಸೂಟ್ ಆಗೋ ವ್ಯಕ್ತಿಯ ಹುಡುಕಾಟದಲ್ಲಿ ಇದ್ದೀನಿ. ಪ್ರತಿಯೊಬ್ಬರೂ ಅವರಿಗೆ ಹೊಂದುವಂತಹ ವ್ಯಕ್ತಿಯನ್ನು ಆರಿಸಿಕೊಳ್ಳಬೇಕು. ನನಗೆ ಇದುವರೆಗೂ ಅಂತಹ ವ್ಯಕ್ತಿ ಸಿಕ್ಕಿಲ್ಲ. ಒಂದು ವೇಳೆ ಹೊಂದುವಂತಹ ವ್ಯಕ್ತಿ ಸಿಕ್ಕಿದ್ರೆ ಮದುವೆಯಾಗುತ್ತೀನಿ” ಎಂದು ಹೇಳಿದ್ರು.

    ಸದ್ಯ ಪ್ರಿಯಾಂಕಾ ಹಾಲಿವುಡ್ ನ ಎರಡು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ಕ್ರಿಸ್‍ಮಸ್ ರಜೆಗೆಂದು ಭಾರತಕ್ಕೆ ಬಂದಿದ್ದಾರೆ. ‘ಎ ಕಿಡ್ ಲೈಕ್ ಜೇಕ್’ ಚಿತ್ರದಲ್ಲಿ ಕ್ಲೈರ್ ದೇನ್ಸ್, ಅಕ್ಟೋವಿಯಾ ಸ್ಪೆನ್ಸರ್ ಜೊತೆ ನಟಿಸುತ್ತಿದ್ದಾರೆ. ನಂತರ ರೆಬೆಲ್ ವಿಲ್‍ಸನ್, ಆಡಮ್ ದೇವೈನ್ ಹಾಗೂ ಲೈಮ್ ಹೇಮ್ಸ್ ವರ್ತ್ ಜೊತೆ ‘ಇಸಂಟ್ ಇಟ್ ರೋಮ್ಯಾಂಟಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.