Tag: ಪ್ಲಾಟ್ ಫಾರಂ

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಮುಂಬೈ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಸ್ಲಿಪ್ ಆಗಿ ರೈಲಿನ ಅಡಿಗೆ ಸಿಲುಕುತ್ತಿದ್ದ ಮಧ್ಯ ವಯಸ್ಸಿನ ಮಹಿಳೆಯನ್ನು ಪ್ಲಾಟ್ ಫಾರಂ ನಲ್ಲಿದ್ದ ಕೆಲ ಪ್ರಯಾಣಿಕರು ರಕ್ಷಿಸಿದ್ದಾರೆ.

    ಈ ಘಟನೆಯು ಬೆಳಗ್ಗೆ ಸುಮಾರು 11:45ಕ್ಕೆ ಮುಂಬೈ ನಗರದ ಕುರ್ಲಾ ನಿಲ್ದಾಣದ ಪ್ಲಾಟ್ ಫಾರಂ 1 ರಲ್ಲಿ ನಡೆದಿದೆ.

    ಮಹಿಳೆ ತಮ್ಮ ಮಗನ ಜೊತೆ ಬಂದಿದ್ದರು. ಚಲಿಸುತ್ತಿದ್ದ ರೈಲಲ್ಲಿ ಮೊದಲಿಗೆ ಮಗನನ್ನು ಬೋಗಿಗೆ ಹತ್ತಿಸಿದ್ದಾರೆ. ನಂತರ ತಾವು ಸಹ ಹತ್ತಲು ಹೋದಾಗ ಆಯ ತಪ್ಪಿ ರೈಲಿನ ಮೆಟ್ಟಿಲಿಗೂ ಪ್ಲಾಟ್ ಫಾರಂಗೂ ನಡುವೆ ಇರುವ ಗ್ಯಾಪ್ ಗೆ ಜಾರಿದ್ದಾರೆ. ಇದನ್ನೂ ಓದಿ:ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ಮಹಿಳೆ ಜಾರಿ ರೈಲಿನಡಿ ಸಿಲುಕುವಷ್ಟರಲ್ಲಿಯೇ ಪ್ಲಾಟ್ ಫಾರಂನಲ್ಲಿದ್ದ ಕೆಲವರು ರಕ್ಷಣೆ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲಿನಲ್ಲಿ ಹತ್ತಿದ್ದ ಮಹಿಳೆಯ ಮಗನನ್ನು ಆರ್ ಪಿಎಫ್ ಪೊಲೀಸರು ತಾಯಿಯೊಂದಿಗೆ ಸೇರಿಸಿದ್ದಾರೆ.

     

  • ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಮುಂಬೈ: ಮಹಿಳೆಯೊಬ್ಬರು ಸೋಮವಾರ ರಾತ್ರಿ ನಗರದ ದಾದರ್ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

    26 ವರ್ಷದ ಸಲ್ಮಾ ಶೇಖ್ ಮಗುವಿಗೆ ಜನ್ಮ ನೀಡಿದ ತಾಯಿ. ರೈಲು ಸಿಎಸ್‍ಟಿ ರೈಲ್ವೆ ನಿಲ್ದಾಣದಿಂದ ದಾದರ್ ಮಾರ್ಗವಾಗಿ ಕಲ್ಯಾಣ್ ಗೆ ತೆರಳುತ್ತಿತ್ತು. ರೈಲು ದಾದರ್ ನಿಲ್ದಾಣದ ಮೂರನೇ ಪ್ಲಾಟ್‍ಫಾರಂ ಗೆ ಆಗಮಿಸಿದಾಗ ಸಲ್ಮಾ ಅವರು ಮಗುವಿಗೆ ಜನ್ಮ ನೀಡಿದ್ದಾರೆ.

    ಕೂಡಲೇ ಮಗು ಮತ್ತು ತಾಯಿಯನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಲ್ಮಾ ಅವರನ್ನು ಮೊದಲಿಗೆ ನಿಲ್ದಾಣದಲ್ಲಿರುವ `ಒನ್ ರೂಪಿ ಕ್ಲಿನಿಕ್’ಗೆ ದಾಖಲಿಸಲಾಗಿತ್ತು. ಈ ಕ್ಲಿನಿಕ್ ನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ತುರ್ತು ಸಂದರ್ಭಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ.