Tag: ಪ್ರ್ಯಾಂಕ್

  • ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌

    ಬೆಂಗಳೂರು: ಮೆಟ್ರೋಗಳಲ್ಲಿ (Namma Metro) ಕೆಲವರು ಹುಚ್ಚಾಟವಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ (Bengaluru) ಮೆಟ್ರೋದಲ್ಲಿ ಅಂತಹದ್ದೇ ಒಂದು ಪ್ರಕರಣ ಜರುಗಿದೆ. ಯೂಟ್ಯೂಬರ್‌ ಒಬ್ಬನ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡ ಘಟನೆ ನಗರದಲ್ಲಿ ನಡೆದಿದೆ.

    ವಿಜಯನಗರದಿಂದ ಮೆಜೆಸ್ಟಿಕ್‌ಗೆ ಬರುವ ಪರ್ಪಲ್ ಲೈನ್‌ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ ಮಾಡಿದ್ದಾನೆ. ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್‌ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದ. ಇದನ್ನೂ ಓದಿ: ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!

    ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿದ್ದ. ಮತ್ತೊಂದು ವೀಡಿಯೋದಲ್ಲಿ ಎಸ್ಕಲೇಟರ್‌ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರ್ಯಾಂಕ್‌ ಮಾಡಿದ್ದ. ಈ ವೇಳೆ ಸಹಪ್ರಯಾಣಿಕರು ಗಾಬರಿಗೊಂಡಿದ್ದರು.

    ಪ್ರಕರಣವನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರ್ಯಾಂಕ್‌ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೆಸರು ಪ್ರ್ಯಾಂಕ್‌ ಪ್ರಜ್ಜು ಎಂದು ತಿಳಿದುಬಂದಿದೆ. ತನ್ನದೇ ಇನ್ಸ್ಟಾಂಗ್ರಾಮ್‌ನಲ್ಲಿ ವೀಡಿಯೋ ಅಪ್ಲೋಡ್ ಮಾಡಿದ್ದ. ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಹಂಪಿಯಲ್ಲಿ ರೀಲ್ಸ್‌ ಹುಚ್ಚಾಟ – ಸ್ಮಾರಕಗಳಿಗೆ ರಕ್ಷಣೆ ಕೊಡಿ ಎಂದ ಗ್ರಾಮಸ್ಥರು

    ಮೆಟ್ರೋಗಳಲ್ಲಿ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಮುಂಬೈ, ನವದೆಹಲಿ ಮೆಟ್ರೋಗಳಲ್ಲೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಇದು ಈಗ ಬೆಂಗಳೂರಿಗೂ ಕಾಲಿಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

    ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

    ಬಿಗ್ ಬಾಸ್ ಮನೆಯಲ್ಲಿ ಸೋನು ಹಾಗೂ ಅಕ್ಷತಾ ಮಾಡಿದ ಪ್ರ್ಯಾಂಕ್ ಬಗ್ಗೆ ಸೂಪರ್ ಸಂಡೇ ವಿತ್ ಸುದೀಪ ವೇದಿಕೆಯಲ್ಲಿ ಚರ್ಚೆಯಾಗಿತ್ತು. ದೆವ್ವದಂತೆ ಮೇಕಪ್ ಮಾಡ್ಕೊಂಡು ಬಂದಿದ್ದ ಸೋನು ನೋಡಿ ಆರ್ಯವರ್ಧನ್ ಅವರು ತಲೆ ತಿರುಗಿ ಬಿದ್ದುಬಿಟ್ಟಿದ್ದರು. ಆದರೆ ಮನೆಮಂದಿಯೆಲ್ಲಾ ಅವರು ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರಂತೆ. ಆದರೆ ಅಂದು ನಿಜವಾಗಲೂ ಅವರ ಜೀವಕ್ಕೆ ಅಪಾಯ ಬಂದೊದಗಿತ್ತು ಎಂಬುದು ಬಳಿಕ ಗೊತ್ತಾಗಿದೆ.

    ಹೌದು, ಅಕ್ಷತಾ ಮತ್ತು ಸೋನು ಗುರೂಜಿಯನ್ನು ಪ್ರ‍್ಯಾಂಕ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಅದರಂತೆ ಸೋನು ದೆವ್ವದಂತೆ ಮೇಕಪ್ ಕೂಡ ಮಾಡಿಕೊಂಡಳು. ಇದಕ್ಕೂ ಮುನ್ನ ರಾಕೇಶ್ ಹಾಗೂ ರೂಪೇಶ್ ಗುರೂಜಿ ಬಳಿ ಹೋಗಿ ಈ ರೀತಿ ನಿಮಗೆ ಪ್ರ್ಯಾಂಕ್ ಮಾಡುತ್ತಾರೆ, ಅವರು ಬಂದಾಕ್ಷಣ ನೀವೂ ಪ್ರಜ್ಞೆ ತಪ್ಪಿ ಬಿದ್ದು ಬಿಡಿ ಎಂದು ಆರ್ಯವರ್ಧನ್ ಅವರಿಗೆ ಹೇಳಿಕೊಟ್ಟಿದ್ದರು. ಎಲ್ಲವೂ ಹೇಳಿದಂತೆಯೇ ನಡೆಯಿತು. ಗುರೂಜಿ ಬಾತ್ ರೂಮಿನಿಂದ ಹೊರಗೆ ಬಂದಾಗ ಸೋನು ಹೆದರಿಸಿದಳು. ಗುರೂಜಿ ತಕ್ಷಣ ಬಿದ್ದು ಬಿಟ್ಟರು. ಎಷ್ಟೇ ಎಚ್ಚರ ಮಾಡಿದರೂ ಎಚ್ಚರವಾಗಲೇ ಇಲ್ಲ. ರಾಕೇಶ್ ಇದು ಸೂಪರ್ ಪರ್ಫಾಮೆನ್ಸ್ ಎಂದುಕೊಂಡರು. ಆದರೆ ರೂಪೇಶ್‌ಗೆ ಕೊಂಚ ಅನುಮಾನ ಮೂಡಿತ್ತು. ಆಮೇಲೆ ಅವರನ್ನು ಕಷ್ಟಪಟ್ಟು ಹೊರಗೆ ಎಳೆದು ತಂದರು.

    ಇದೆಲ್ಲಾ ನೋಡುತ್ತಿದ್ದಂತೆ ಅಕ್ಷತಾ ಹಾಗೂ ಸೋನು ಗಾಬರಿಗೊಂಡಿದ್ದರು. ಸ್ವಲ್ಪ ಸಮಯವಾದ ಬಳಿಕ ಗುರೂಜಿಗೆ ಪ್ರಜ್ಞೆ ಬಂತು. ಆದರೆ ಜಯಶ್ರೀ ಈ ಮಧ್ಯೆ ಸೋನು ಹಾಗೂ ಅಕ್ಷತಾ ಬಳಿ ಹೋಗಿ, ಇದು ಅವರೆಲ್ಲ ಸೇರಿ ಮಾಡಿದ ಪ್ರ್ಯಾಂಕ್ ಅಂತ ಹೇಳಿದ್ದರು. ಈ ಬಗ್ಗೆ ಸೋನು ಕ್ಲಾರಿಟಿ ತೆಗೆದುಕೊಳ್ಳಲು ಹೋದಾಗ ರಾಕೇಶ್ ಹಾಗೂ ರೂಪೇಶ್ ಬುದ್ಧಿ ಹೇಳಿ ಕಳುಹಿಸಿದ್ದರು. ಇದರ ನಡುವೆ ತಾವು ಮಾಡಿದ ತಪ್ಪನ್ನು ನೆನೆದು ಅಕ್ಷತಾ ಜೋರಾಗಿ ಅತ್ತಿದ್ದು, ರಾಕೇಶ್ ಆಕೆಯನ್ನು ಸಮಾಧಾನ ಮಾಡಿದ್ದ. ಇದನ್ನೂ ಓದಿ: ಮೊದಲ ಜಗಳ, ವಾದ, ಗಾಯ ಆಗಿದ್ದೇ ಉದಯ್‍ಯಿಂದ – ಬೇರೆಯವರ ಇಮೋಷನ್ ನೋಡಿ ಉದಯ್ ಡಿಸ್ಟರ್ಬ್ ಆಗಿದ್ರಾ?

    ಈ ಎಲ್ಲಾ ಡ್ರಾಮಾದ ಬಗ್ಗೆ ಸೂಪರ್ ಸಂಡೇನಲ್ಲಿ ಸುದೀಪ್ ಕೇಳಿದಾಗ ರೂಪೇಶ್ ಮತ್ತು ರಾಕೇಶ್, ನಾವೂ ಕೂಡ ಅದನ್ನು ಆಕ್ಟಿಂಗ್ ಎಂದೇ ಭಾವಿಸಿದ್ದೆವು. ಆದರೆ ಅವರು ನಿಜವಾಗಿಯೂ ಪ್ರಜ್ಞೆ ತಪ್ಪಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸುದೀಪ್ ಗುರೂಜಿ ಅವರಿಗೆ ಧೈರ್ಯ ತುಂಬಿದ್ದಾರೆ. ಇಲ್ಲಿ ಎರಡೇ ದೆವ್ವ ಇರುವುದು. ಪಿಂಕ್ ಕಲರ್ ಹಾಕಿರುವ ದೆವ್ವ ಹಾಗೂ ಹಸಿರು ಬಣ್ಣ ತೊಟ್ಟಿರುವ ದೆವ್ವ. ನೀವು ಯಾವುದಕ್ಕೂ ಹೆದರಬೇಡಿ. ಇಲ್ಲಿ ನಮ್ಮನ್ನು ಹೊರತುಪಡಿಸಿ 300 ಜನ ನಿಮ್ಮ ಕಾವಲಿಗಿದ್ದಾರೆ ಎಂದು ಧೈರ್ಯ ತುಂಬಿದರು.

    ಆಗ ಗುರೂಜಿ ನನಗೆ ದೆವ್ವ ಎಂದರೆ ತುಂಬಾ ಭಯ. ಸೋನು ಬಂದಾಗ ವಿಕಾರವಾಗಿ ಕಂಡಿತು, ತಕ್ಷಣ ಬಿದ್ದು ಬಿಟ್ಟೆ. ಆಮೇಲೆ ಇವರೆಲ್ಲ ಕರೆದು ತಂದು ಮಲಗಿಸಿದ್ದರು ಎಂದರು. ಮತ್ತೆ ಸುದೀಪ್ ನಿಮಗೆ ಏನು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ ಎಂದು ಸೋನು ಹಾಗೂ ಅಕ್ಷತಾಗೂ ಬುದ್ಧಿ ಹೇಳಿದ್ದಾರೆ. ಪ್ರ‍್ಯಾಂಕ್ ಮಾಡಿ ಆದರೆ ಈ ರೀತಿಯಾದ ಟಾಪಿಕ್ ಬೇಡ ಎಂದಿದ್ದಾರೆ. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    Live Tv
    [brid partner=56869869 player=32851 video=960834 autoplay=true]

  • ತಮಾಷೆ ಮಾಡಲು ಹೋಗಿ ತಾನೇ ಸಿಲುಕಿಕೊಂಡ ಸನ್ನಿ ಲಿಯೋನ್: ವಿಡಿಯೋ ನೋಡಿ

    ತಮಾಷೆ ಮಾಡಲು ಹೋಗಿ ತಾನೇ ಸಿಲುಕಿಕೊಂಡ ಸನ್ನಿ ಲಿಯೋನ್: ವಿಡಿಯೋ ನೋಡಿ

    ತಿರುವನಂತಪುರಂ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಚಿತ್ರತಂಡದ ಜೊತೆ ತಮಾಷೆ ಮಾಡಲು ಹೋಗಿ ತಾವೇ ಸಿಕ್ಕಿ ಹಾಕಿಕೊಂಡಿದ್ದಾರೆ. ಸ್ವತಃ ಸನ್ನಿ ಲಿಯೋನ್ ತಾವು ಪ್ರ್ಯಾಂಕ್‍ಗೆ ಒಳಗಾದ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಲಿಯೋನ್ ತನ್ನ ಚಿತ್ರತಂಡದ ಜೊತೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದರು. ಈ ವೇಳೆ ಅವರು ತನ್ನ ಸಹೋದ್ಯೋಗಿ ಹಾಗೂ ಮೇಕಪ್ ಆರ್ಟಿಸ್ಟ್ ಗಳನ್ನು ತಮಾಷೆ ಮಾಡಲು ಹೋಗಿದ್ದಾರೆ. ಸನ್ನಿ ಸ್ವಿಮ್ಮಿಂಗ್ ಪೂಲ್ ಬಳಿ ಹೋಗಿ ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಡ್ಯಾನ್ಸ್ ಮಾಡುತ್ತಿದ್ದಂತೆಯೇ ಅವರು ತನ್ನ ಸ್ನೇಹಿತನನ್ನು ಸ್ವಿಮ್ಮಿಂಗ್ ಪೂಲ್‍ಗೆ ತಳ್ಳಿದ್ದಾರೆ. ಇದನ್ನು ಗಮನಿಸಿದ ಮತ್ತೊಬ್ಬ ಸ್ನೇಹಿತ ಸನ್ನಿ ಅವರನ್ನೇ ಸ್ವಿಮ್ಮಿಂಗ್ ಪೂಲ್‍ಗೆ ತಳ್ಳಿದ್ದಾರೆ. ಈ ಮಸ್ತಿಯ ವಿಡಿಯೋವನ್ನು ಸನ್ನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಸನ್ನಿ ಲಿಯೋನ್ ರಂಗೀಲಾ ಚಿತ್ರದ ಚಿತ್ರೀಕರಣದ ವೇಳೆ ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡಿದ್ದರು. 90ರ ದಶಕದಲ್ಲಿ ನಟ ಗೋವಿಂದ ಹಾಗೂ ನಟಿ ಕರಿಷ್ಮಾ ಕಪೂರ್ ನಟಿಸಿದ `ಕೂಲಿ ನಂ 1′ ಚಿತ್ರದ `ಅ ಜಾನಾ ಅ ಜಾನಾ’ ಹಾಡಿಗೆ ಹೆಜ್ಜೆ ಹಾಕಿದ್ದರು. ಸನ್ನಿ ತಾವು ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ತಂಡದ ಜೊತೆ ದಿನಕ್ಕೆ ಸ್ವಲ್ಪವಾದರೂ ಮಸ್ತಿ ಮಾಡಲೇಬೇಕು” ಎಂದು ಬರೆದು ಪೋಸ್ಟ್ ಮಾಡಿದ್ದರು.

    ಸನ್ನಿ ಲಿಯೋನ್ ಮಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸನ್ನಿ ಮಲಯಾಳಂ ನಟ ಮಮ್ಮುಟಿ ನಟಿಸಿದ `ಮಧುರ ರಾಜ’ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಈಗ ಸನ್ನಿ ಸಂತೋಷ್ ನಾಯರ್ ನಿರ್ದೇಶಿಸುತ್ತಿರುವ `ರಂಗೀಲಾ’ ಚಿತ್ರದ ಚಿತ್ರೀಕರಣವನ್ನು ಶುರು ಮಾಡಿದ್ದಾರೆ. ರಂಗೀಲಾ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಲೀಂ ಕುಮಾರ್, ಸುರಜ್ ವೆಂಜರಮ್ಮೂಡು, ರಮೇಶ್ ಪಿಶಾರೋಡಿ ಹಾಗೂ ಅಜು ವರ್ಗಿಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv