Tag: ಪ್ರೌಢಶಾಲೆ

  • ವಿದ್ಯಾರ್ಥಿನಿಯರಿಗೆ ವರ್ಷವಿಡೀ ಶಾಲೆಗೆ ಹೋಗಲು ನಿರ್ಬಂಧಿಸಿದ ತಾಲಿಬಾನ್ ಪರೀಕ್ಷೆ ಬರೆಯಲು ಅನುಮತಿ

    ಕಾಬೂಲ್: ಕಳೆದ ವರ್ಷ ಅಫ್ಘಾನಿಸ್ತಾನವನ್ನು (Afghanistan) ವಶಪಡಿಸಿಕೊಂಡ ತಾಲಿಬಾನ್ (Taliban) 1 ವರ್ಷಕ್ಕಿಂತಲೂ ಹೆಚ್ಚು ಕಾಲ ಹೆಣ್ಣುಮಕ್ಕಳಿಗೆ (Girls) ಪ್ರೌಢಶಾಲೆಗೆ (High School) ಹೋಗಲು ನಿರ್ಬಂಧಿಸಿದ್ದು, ಇದೀಗ ಈ ವಾರ ನಡೆಯಲಿರುವ ಪ್ರೌಢಶಾಲಾ ಪರೀಕ್ಷೆಯನ್ನು (Exam)  ಬರೆಯಲು ಹೆಣ್ಣುಮಕ್ಕಳಿಗೂ ಅನುಮತಿ ನೀಡಿದೆ.

    ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 31 ಪ್ರಾಂತ್ಯಗಳಿಗೆ ತಾಲಿಬಾನ್‌ನ ನಿರ್ಧಾರ ಅನ್ವಯಿಸುತ್ತದೆ. ಪ್ರೌಢಶಾಲಾ ಪರೀಕ್ಷೆ ಬುಧವಾರದಿಂದ ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ವಿದ್ಯಾರ್ಥಿನಿಯರು ಕೂಡಾ ಬರೆಯಲು ಅನುಮತಿಸಲಾಗುವುದು ಎಂದು ಕಾಬೂಲ್ ಶಿಕ್ಷಣ ಇಲಾಖೆಯ ಮುಖ್ಯಸ್ಥ ಎಹ್ಸಾನುಲ್ಲಾ ಕಿತಾಬ್ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಬುಧವಾರ ನಡೆಯಲಿರುವ ಪರೀಕ್ಷೆಗೆ ಡ್ರೆಸ್ ಕೋಡ್ ನೀಡಲಾಗಿದೆ. ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಕಡ್ಡಾಯವಾಗಿ ಹಿಜಬ್ ಅಥವಾ ಸ್ಕಾರ್ಫ್ ಅನ್ನು ಧರಿಸಬೇಕು. ಪರೀಕ್ಷೆಯಲ್ಲಿ ಸೆಲ್‌ಫೋನ್ ಬಳಕೆ ನಿಷೇಧಿಸಲಾಗಿದೆ. ಬುಧವಾರ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಚಳಿಗಾಲದ ರಜೆಯ ಬಳಿಕ ಮಾರ್ಚ್ ಮಧ್ಯದ ವೇಳೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಮೆಜೆಸ್ಟಿಕ್‌ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಗ್ನಿ ಅವಘಡ

    ತಾಲಿಬಾನ್ ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿಯೇ ಹಿಂತೆಗೆದುಕೊಂಡಿತು. ಪ್ರೈಮರಿ ಹಾಗೂ ಪ್ರೌಢಶಾಲೆಗೆ ಹೆಣ್ಣುಮಕ್ಕಳು ಹೋಗುವುದನ್ನು ನಿರ್ಬಂಧಿಸಲಾಯಿತು. ಹಲವು ಉದ್ಯೋಗಗಳಿಂದಲೂ ಮಹಿಳೆಯರನ್ನು ಹೊರಗಿಡಲಾಯಿತು. ಉದ್ಯಾನವನ, ಜಿಮ್‌ಗಳಲ್ಲೂ ಮಹಿಳೆಯರನ್ನು ನಿಷೇಧಿಸಲಾಯಿತು. ಮಾತ್ರವಲ್ಲದೇ ಮಹಿಳೆಯರು ಸಾರ್ವಜನಿಕ ಪ್ರದೇಶಗಳಲ್ಲಿ ಅಡಿಯಿಂದ ಮುಡಿಯವರೆಗೆ ಸಂಪೂರ್ಣವಾಗಿ ಬಟ್ಟೆ ಧರಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಕಲಾಪದ ವೇಳೆ ಫೇಸ್‌ಬುಕ್ ಲೈವ್ ಮಾಡಿದ ಶಾಸಕ ವಿಧಾನ ಸಭೆಯಿಂದ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಹೋಗ್ಬೇಡಿ ಸರ್- ಮಂಡ್ಯದಲ್ಲಿ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು

    ಹೋಗ್ಬೇಡಿ ಸರ್- ಮಂಡ್ಯದಲ್ಲಿ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು

    ಮಂಡ್ಯ: ಸರ್ಕಾರಿ ಶಾಲೆ ಶಿಕ್ಷಕ (Teacher) ರೊಬ್ಬರ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರಿಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ.

    ಭೀಮನಹಳ್ಳಿಯ ಸರ್ಕಾರಿ ಪ್ರೌಢಶಾಲೆ (Bhimanahalli government School) ಯ ಪುಟ್ಟರಾಜು ವರ್ಗಾವಣೆ (Teacher Transfer) ಯಾದ ಮುಖ್ಯ ಶಿಕ್ಷಕ. ಇವರು ಹಲವು ವರ್ಷಗಳಿಂದ ಭೀಮನಹಳ್ಳಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇದೀಗ ಅವರು ಮಂಡ್ಯದ ಡಯಟ್‍ಗೆ ವರ್ಗಾವಣೆಯಾಗಿದ್ದಾರೆ.

    ಶಿಕ್ಷಕರ ವರ್ಗಾವಣೆಯಿಂದ ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದು, ಕಾಲಿಗೆ ಬಿದ್ದು ಶಾಲೆ ಬಿಟ್ಟು ಹೋಗಬೇಡಿ. ಇಲ್ಲೇ ಇರಿ ಮೇಷ್ಟ್ರೇ ಎಂದು ಬೇಡಿಕೊಂಡರು. ಮಕ್ಕಳ ಜೊತೆಗೆ ಸಹ ಶಿಕ್ಷಕರು ಹಾಗೂ ಪೋಷಕರು ಶಿಕ್ಷಕರ ಕಾಲಿಗೆ ಬಿದ್ದ ಪ್ರಸಂಗ ಕೂಡ ನಡೆದಿದೆ. ಇದನ್ನೂ ಓದಿ: ಗೋಲ್ಡ್ ರಿಕವರಿಗೆ ಬಂದ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಲಾಕ್

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕನ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದ ವಿದ್ಯಾರ್ಥಿಗಳು

    ಶಿಕ್ಷಕನ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದ ವಿದ್ಯಾರ್ಥಿಗಳು

    ದಾವಣಗೆರೆ: ನಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕರನ್ನು ಅಪಮಾನಿಸಿದ್ದ ಎಸ್‍ಎಸ್‍ಎಲ್‍ಸಿಯ ಕೆಲ ವಿದ್ಯಾರ್ಥಿಗಳಿಗೆ ಈಗ ತಪ್ಪಿನ ಅರಿವಾಗಿದೆ. ಶಿಕ್ಷಕ ಪ್ರಕಾಶ್ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದು ಕೇಳಿದ್ದಾರೆ.

    ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕ ಪ್ರಕಾಶ್‌ ಅವರು ಉದಾರ ಮನಸ್ಸಿನಿಂದ ಕ್ಷಮಿಸಿದ್ದಾರೆ. ನನ್ನ ಸೇವೆ ಇನ್ನೊಂದು ವರ್ಷ ಇದೆ. ದೂರು ಕೊಟ್ಟರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಸಹಿಸಿಕೊಂಡಿದ್ದೆ ಎಂದು ಪ್ರಕಾಶ್ ಹೇಳಿದ್ದಾರೆ. ಇದನ್ನೂ ಓದಿ: 20 ಲಕ್ಷ ಮೌಲ್ಯದ ಮರಡೋನಾ ವಾಚ್ ಅಸ್ಸಾಂನಲ್ಲಿ ವಶಕ್ಕೆ

    ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಗ್ರಾಮಸ್ಥರು ಮತ್ತು ಕೆಲ ಸಂಘಟನೆಗಳು ಆ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೂಡ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರು ಹಾಗೂ ಶಿಕ್ಷಕರ ಜೊತೆ ಸಭೆ ನಡೆಸಿದರು. ಇದನ್ನೂ ಓದಿ: ನಶೆಯಲ್ಲಿ ಪ್ರಿಯಕರನ ದೇಹ ತುಂಡರಿಸಿದಳು- ಛಿದ್ರವಾದ ದೇಹದ ಜೊತೆಗೆ ನಿದ್ರೆಗೆ ಜಾರಿದಳು

    ನಡೆದಿದ್ದು ಏನು?
    ಪ್ರಕಾಶ್‌ ಅವರು ಪಾಠ ಮಾಡಲೆಂದು ತರಗತಿಗೆ ಬಂದಿದ್ದಾರೆ. ಆದರೆ ಪ್ರಕಾಶ್‌ ಪಾಠ ಮಾಡುತ್ತಿರುವುದನ್ನು ಕೇಳಿಸಿಕೊಳ್ಳದ ನಾಲ್ಕೈದು ವಿದ್ಯಾರ್ಥಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ. ತಲೆಗೆ ಬಕೆಟ್ ಹಾಕಿ ಶಿಕ್ಷಕನ ಮೇಲೆ ಪುಂಡತನ ಮೆರೆದಿದ್ದಾರೆ. ವಿದ್ಯಾರ್ಥಿಗಳ ಪುಂಡತನವನ್ನು ಉಳಿದ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  • ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

    ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

    – ಶಾಲೆಯ ನಿರ್ಮಾಣವನ್ನು ಉತ್ತಮ ಗುಣಮಟ್ಟದಲ್ಲಿ ಮಾಡಬೇಕು ಎಂದು ಸೂಚಿಸಿದ್ದೇನೆ

    ವಿಜಯಪುರ: ಡಾ.ಸುಧಾಮೂರ್ತಿ ಮತ್ತು ಡಾ.ನಾರಾಯಣಮೂರ್ತಿರನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು ಎಂದು ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

    ಪದ್ಮಶ್ರೀ ಕಾಕಾ ಕಾರ್ ಖಾನಿಸ್ ಪ್ರೌಢಶಾಲೆ ನಿರ್ಮಾಣ ಕಾಮಗಾರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಅದಕ್ಕೂ ಮೊದಲು ಮಾಧ್ಯಮಗಳೊಂದಿದಗೆ ಮಾತನಾಡಿದ ಅವರು, ಈ ಶಾಲೆ ನಿರ್ಮಿಸುವ ಕಾರ್ಯ 6 ತಿಂಗಳಲ್ಲಿ ಮುಗಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ಚಟುವಟಿಕೆಗಳು ಪ್ರಾರಂಭ ಆಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಡಾ.ಸುಧಾಮೂರ್ತಿ ಮತ್ತು ಡಾ.ನಾರಾಯಣಮೂರ್ತಿ ಅವರನ್ನು ಈ ಪ್ರೌಢಶಾಲೆ ಕಟ್ಟಡ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕರೆತರುವ ಆಶಯ ತಮ್ಮದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    2020-21ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಅಡಿಯಲ್ಲಿ 10 ಕೋಟಿ ರೂ. ಅನುದಾನ ಮಾಡಲಾಗಿತ್ತು. ಅದರಲ್ಲಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ, ವಾಚನಾಲಯ, ದೈಹಿಕ ಶಿಕ್ಷಣ ವಿಭಾಗದ ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಕಾಲಾವಧಿಯಲ್ಲಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ:ಮದುವೆ ಮನೆಗೆ ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ 100ಕ್ಕೂ ಹೆಚ್ಚು ಜನರು

    1933 ರಲ್ಲಿ ಗಾಂಧೀಜಿಯವರಿಂದ ಪ್ರೇರಣೆ ಪಡೆದು ಕಾಕಾ ಕಾರಖಾನೀಸ ಅವರು ಹರಿಜನ ಕನ್ಯಾ ಮಂದಿರ ಮತ್ತು ಹರಿಜನ ಗಂಡು ಮಕ್ಕಳ ಹಾಸ್ಟೆಲ್ ಪ್ರಾರಂಭ ಮಾಡಿ 236 ಮಕ್ಕಳನ್ನು ಓದಿಸಿ ಕರ್ನಾಟಕದ ಗಾಂಧಿ ಅನಿಸಿಕೊಂಡರು. ದೀನ ದಲಿತರ ಉದ್ಧಾರಕ್ಕಾಗಿ ಅವರ ಜೀವನವನ್ನೇ ಮುಡುಪಾಗಿಟ್ಟವರು ಎಂದು ನೆನೆಪಿಸಿಕೊಂಡರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಸನಗೌಡ ಪಾಟೀಲ ವಹಿಸಿದ್ದರು. ಈ ಕಟ್ಟಡವು 2020-21 ನೇ ಸಾಲಿನ 5054-ಎಸ್.ಸಿ.ಪಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ.ಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಇದನ್ನೂ ಓದಿ:ಹುಬ್ಬಳ್ಳಿಗೆ ಅಮಿತ್ ಶಾರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಿಎಂ

    ಕಟ್ಟಡದಲ್ಲಿ ಏನಿದೆ?

    ಕಟ್ಟಡದ ನೆಲಮಹಡಿ(1140,00 ಚಿ.ಮೀ), ಮೊದಲ ಮಹಡಿ (1180,00 ಚಿ.ಮೀ), ಎರಡನೇ ಮಹಡಿ (980,00 ಚ.ಮೀ) ಹಾಗೂ ಟೆರೆಸ್ ಮಹಡಿ (50.00 ಚ.ಮೀ) ಒಟ್ಟು 3350.00 ಚ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಶಾಲೆಗೆ ಅವಶ್ಯವಿರುವ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ನೆಲ ಮಹಡಿಯು ಅಡ್ಮಿನಿಸ್ಟ್ರೇಟಿವ್ ಆಫೀಸ್, ರಿಸರ್ಚ್ ಸೆಂಟರ್, ಪ್ರಿನ್ಸಿಪಲ್ ಚೇಂಬರ್, ಕ್ಲಾಸ್ ರೂಮ್ಸ್-4, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಯೋಗಾ ಸೆಂಟರ್, ಲೇಡಿಸ್ ವೇಟಿಂಗ್ ರೂಮ್ ಗಳನ್ನು ಒಳಗೊಂಡಿರುತ್ತದೆ.

    ಯಾವ ಸೌಲಭ್ಯವಿದೆ?

    ಮೊದಲನೇ ಮಹಡಿಯ ಕಾನ್ಫರನ್ಸ್ ರೂಮ್, ಲೈಬ್ರರಿ, ಮ್ಯಾನೇಜಮೆಂಟ್ ರೂಮ್, ಸ್ಟಾಫ್ ರೂಮ್, ಕ್ಲಾಸ್ ರೂಮ್ಸ್-4, ಹೆಲ್ತ್ ಸೆಂಟರ್, ಸ್ಟೋರ್ ಮತ್ತು ರೆಕಾಡ್ರ್ಸ್, ಇಂಡೋರ್ ಸ್ಪೋಟ್ರ್ಸ ಫೆಸಿಲಿಟ, ಜೆಂಟ್ಸ್ ವೇಟಿಂಗ್ ರೂಮ್ ಗಳನ್ನು ಒಳಗೊಂಡಿರುತ್ತದೆ. ಎರಡನೇ ಮಹಡಿಯ ರೆಸೋನನ್ಸ್ ಸೆಂಟರ್, ಡಿಜಿಟಲ್ ಲೈಬ್ರರಿ, ಮ್ಯಾನೇಜಮೆಂಟ್ ರೂಮ್, ಕ್ಲಾಸ್ ರೂಮ್ಸ್-4, ಮಲ್ಟಿ ಪರಪಸ್ ಹಾಲ್ ಗಳನ್ನು ಒಳಗೊಂಡಿದ್ದು, ಮೂರನೇ ಮಹಡಿಯು ಸ್ಟೇರಕೇಸ್ ಹೆಡ್ ರೂಮ್ಸ್ ಗಳಿರುತ್ತದೆ. ಇದನ್ನೂ ಓದಿ:ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

    ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ರಮೇಶ್ ಜಿಗಜಿಣಗಿ, ಜಿಲ್ಲಾಧಿಕಾರಿ ಪಿ, ಸುನೀಲ್ ಕುಮಾರ್, ಪೆÇಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ಮುಖಂಡರುಗಳಾದ ಗೋಪಾಲನಾಯಕ್, ಅಡಿವೆಪ್ಪ ಸಾಲಗಲ್, ಸಿದ್ದು ರಾಯಣ್ಣವರ, ರಮೇಶ್ ಆಸಂಗಿ, ಶಂಕರ್, ಭೀರಪ್ಪ ಅರ್ಧಾವೂರ, ಹಾಗೂ ಇತರೆ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

  • ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ

    ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ

    ಬೆಂಗಳೂರು: ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಬುಕ್ ಬ್ಯಾಂಕ್ ಸ್ಥಾಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಪ್ರಕಟಿಸಿದ್ದಾರೆ.

    ಪುಸ್ತಕ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ ಆಗದೇ ಇರಲು ಬುಕ್ ಬ್ಯಾಂಕ್ ಸ್ಥಾಪಿಸುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ : ಭಾರತಕ್ಕೆ ಮತ್ತೊಂದು ಪದಕ ಖಚಿತ – ಸೆಮಿಗೆ ಲವ್ಲೀನಾ ಎಂಟ್ರಿ 

    ಏನಿದು ಬುಕ್ ಬ್ಯಾಂಕ್?
    ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಪಾಸ್ ಆದ ಕೂಡಲೇ ಅ ವಿದ್ಯಾರ್ಥಿಗಳ ಹಿಂದಿನ ತರಗತಿಗಳ ಪಠ್ಯ ಪುಸ್ತಕಗಳನ್ನ ಶಾಲೆಗಳಲ್ಲಿ ಸಂಗ್ರಹ ಇಟ್ಟುಕೊಳ್ಳುವುದು. ಶಾಲೆ ಪ್ರಾರಂಭ ಆದ ಕೂಡಲೇ ಪುಸ್ತಕಗಳು ಲಭ್ಯವಾಗದೇ ಹೋದರೆ ಈ ಹಳೆ ಪುಸ್ತಕಗಳನ್ನ ಬಳಸಿ ಮಕ್ಕಳ ಕಲಿಕೆ ಪ್ರಾರಂಭ ಮಾಡುವುದು.

    ಹೊಸ ಪುಸ್ತಕಗಳು ಬಂದ ಕೂಡಲೇ ಬುಕ್ ಬ್ಯಾಂಕ್ ಅಡಿ ವಿತರಣೆ ಆದ ಪುಸ್ತಕಗಳನ್ನ ಶಾಲಾ ಲೈಬ್ರರಿ ಅಥವಾ ಗ್ರಾಮ ಪಂಚಾಯತ್ ಲೈಬ್ರರಿಗಳಲ್ಲಿ ಇಡುವುದು. ಮುಂದಿನ ವರ್ಷ ಕೂಡಲೇ ಇದೇ ಮಾದರಿಯಲ್ಲಿ ಹಳೆ ಪುಸ್ತಕಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು.

  • ಬೈಕಿನಿಂದ ಬಿದ್ದು ಶಾಲಾ ಶಿಕ್ಷಕಿ ಸಾವು

    ಬೈಕಿನಿಂದ ಬಿದ್ದು ಶಾಲಾ ಶಿಕ್ಷಕಿ ಸಾವು

    ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್ ಮೇಲಿಂದ ಬಿದ್ದು ಶಿಕ್ಷಕಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗಂಗಾಜಲ ತಾಂಡಾದ ಬಳಿ ನಡೆದಿದೆ.

    ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಮೃತ ಶಿಕ್ಷಕಿಯನ್ನು ಲೀಲಾವತಿ ಕಟಿಗೇರ (33) ಎಂದು ಗುರುತಿಸಲಾಗಿದೆ. ಇವರು ಮೆಡ್ಲೇರಿ ಗ್ರಾಮದಲ್ಲಿರು ಬೀರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಇಂದು ಬೆಳಗ್ಗೆ ಲೀಲಾವತಿ ಅವರು ತಮ್ಮ ಗಂಡ ಬಸವರಾಜು ಜೊತೆ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಶಾಲೆಗೆ ತಡವಾಗಿತ್ತು ಎಂದು ವೇಗವಾಗಿ ಹೋಗುತ್ತಿದ್ದಾಗ ಬೈಕ್ ರಸ್ತೆಯಲ್ಲಿದ್ದ ಉಬ್ಬನ್ನು ಜಂಪ್ ಮಾಡಿದೆ. ಈ ವೇಳೆ ಬ್ಯಾಲೆನ್ಸ್ ತಪ್ಪಿದ ಲೀಲಾವತಿಯವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾದ ಕಾರಣ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಣೇಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೆಚ್ಚಿನ ಶಿಕ್ಷಕನ ವರ್ಗಾವಣೆ – ವಿದ್ಯಾರ್ಥಿಗಳಿಂದ ಕ್ಲಾಸ್ ಬಹಿಷ್ಕರಿಸಿ ಪ್ರತಿಭಟನೆ

    ನೆಚ್ಚಿನ ಶಿಕ್ಷಕನ ವರ್ಗಾವಣೆ – ವಿದ್ಯಾರ್ಥಿಗಳಿಂದ ಕ್ಲಾಸ್ ಬಹಿಷ್ಕರಿಸಿ ಪ್ರತಿಭಟನೆ

    ಕೊಪ್ಪಳ: ನೆಚ್ಚಿನ ಶಿಕ್ಷಕ ವರ್ಗಾವಣೆಯಾದ ಹಿನ್ನೆಲೆ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಹೀರೆಸಿಂಧೋಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

    ಇಲ್ಲಿನ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಾರದ ಸೋಮರೆಡ್ಡಿ ಹೆಚ್ಚುವರಿ ಶಿಕ್ಷಕ ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಲಾಸ್ ಬಹಿಷ್ಕಾರ ಮಾಡಿ ಮಕ್ಕಳು ಪ್ರತಿಭಟನೆ ಮಾಡಿದ್ದಾರೆ.

    ಶಿಕ್ಷಕ ಸೋಮರೆಡ್ಡಿ ಅವರನ್ನು ಹೀರೆಸಿಂಧೋಗಿಯ ಸರ್ಕಾರಿ ಪ್ರೌಢಶಾಲೆಯಿಂದ ಕಾರಟಗಿ ತಾಲೂಕಿನ ನವಲಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಶಾಲಾ ಮಕ್ಕಳು ನಮಗೆ ಸೋಮರೆಡ್ಡಿ ಶಿಕ್ಷಕರೇ ಬೇಕೆಂದು ಕ್ಲಾಸ್ ಬಹಿಷ್ಕರಿಸಿ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

  • ಮಾಜಿ ಮಂತ್ರಿ ಊರಲ್ಲೇ ಬೀಳುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ!

    ಮಾಜಿ ಮಂತ್ರಿ ಊರಲ್ಲೇ ಬೀಳುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ!

    ಹಾಸನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಪ್ರಭಾವಿ ಸಚಿವರಾಗಿದ್ದ ಎ ಮಂಜು ಮತ್ತು ಹಾಲಿ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಪ್ರತಿನಿಧಿಸೋ ಕ್ಷೇತ್ರದಲ್ಲಿ ಬರೋ ಸರ್ಕಾರಿ ಪ್ರೌಢಶಾಲೆ ಕುಸಿಯುವ ಹಂತದಲ್ಲಿದೆ.

    ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದಲ್ಲಿರುವ ಪ್ರೌಢಶಾಲೆಯ ಕಟ್ಟಡ ನಿರಂತರ ಮಳೆಯಿಂದಾಗಿ ಕುಸಿಯುವಂತಾಗಿದೆ. ಆದ್ರೆ ವಿದ್ಯಾರ್ಥಿಗಳು ಅದೇ ಕಟ್ಟಡದಲ್ಲಿ ವಿಧಿ ಇಲ್ಲದೆ ಕುಳಿತುಕೊಳ್ಳುವ ಅನಿವಾರ್ಯ ಸ್ಥಿತಿ ಇದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ವಿದ್ಯಾರ್ಥಿಗಳು ಪ್ರಾಣ ಭಯದೊಂದಿದೆ ತರಗತಿಯಲ್ಲಿ ಕುಳಿತುಕೊಂಡು ಆತಂಕದಿಂದಲೇ ಪಾಠ ಕೇಳುತ್ತಿದ್ದಾರೆ.

    ಈ ಕುರಿತಂತೆ ಈಗಾಗಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸಹ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಜೊತೆಗೆ ವಿದ್ಯಾರ್ಥಿಗಳು ಸಹ ಕಟ್ಟಡ ಸರಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

  • ಸಿಎಂ ಕುಮಾರಸ್ವಾಮಿ ಮನೆಗೆ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು!

    ಸಿಎಂ ಕುಮಾರಸ್ವಾಮಿ ಮನೆಗೆ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು!

    ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಚಿತ್ರದುರ್ಗದಿಂದ ವಿದ್ಯಾರ್ಥಿಗಳ ದಂಡೇ ಆಗಮಿಸಿದೆ.

    ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಿಎಂ ಮನೆಗೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳು ಬೆಳಗ್ಗೆ 6 ಗಂಟೆಯಿಂದ ಸಿಎಂ ಭೇಟಿಗಾಗಿ ಕಾಯುತ್ತಿದ್ದಾರೆ.

    ಏಕಾಏಕಿ ಶಾಲೆಯನ್ನು ಹಾಲಘಟ್ಟದಿಂದ ಭರಮಸಾಗರಕ್ಕೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಬ್ಯಾಗ್ ಸಹಿತ ಸುಮಾರು 42 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈವರೆಗೂ ಸ್ಥಳಾಂತರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿದ ಬಳಿಕ ಏಕಾಏಕಿ ಸ್ಥಳಾಂತರ ಮಾಡಲಾಗಿದೆ.

    ಹಾಲಘಟ್ಟದ ಹಳೆಯ ಶಾಲೆಯ ಬಳಿಯೇ ಬಂದು ವಿದ್ಯಾರ್ಥಿಗಳು ಹೋಗುತ್ತಿದ್ದರು. ಮಾಹಿತಿ ಇಲ್ಲದೇ ಸ್ಥಳಾಂತರಗೊಂಡಿರುವುದರಿಂದ ಇದೀಗ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ ಅಂತ ವಿದ್ಯಾರ್ಥಿಗಳೊಂದಿಗೆ ಆಗಮಿಸಿರುವ ಕೆಲ ಪೋಷಕರು ತಿಳಿಸಿದ್ದಾರೆ.

  • ಭಾರೀ ಮಳೆಗೆ ಪ್ರೌಢಶಾಲೆ ಸಂಪೂರ್ಣ ಜಲಾವೃತ!

    ಭಾರೀ ಮಳೆಗೆ ಪ್ರೌಢಶಾಲೆ ಸಂಪೂರ್ಣ ಜಲಾವೃತ!

    ಕೊಪ್ಪಳ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಶಾಲೆಯೊಂದು ಸಂಪೂರ್ಣ ಜಲಾವೃತವಾಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನಡೆದಿದೆ.

    ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಚಿಕ್ಕಮ್ಯಾಗೇರಿ ಗ್ರಾಮದ ನೀಲಮ್ಮ ಶಿವಶಂಕರ್ ದೇಸಾಯಿ ಪ್ರೌಢಶಾಲೆಯು ಸಂಪೂರ್ಣ ಜಲಾವೃತಗೊಂಡಿದೆ. ಶಾಲಾ ಆವರಣವು ಸುಮಾರು 6 ಎಕರೆ ವಿಸ್ತೀರ್ಣ ಹೊಂದಿದ್ದು, ಜಲಾವೃತದಿಂದಾಗಿ ಶಾಲಾ ಆವರಣವು ಕೆರೆಯಂತಾಗಿದೆ.

    ಪ್ರೌಢಶಾಲೆಯಲ್ಲಿ ಸುಮಾರು 270 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ಮುಂಜಾನೆ ಶಾಲೆಗೆ ತೆರಳಲು ಮಕ್ಕಳು ಪರದಾಡುವ ಸ್ಥಿತಿ ಎದುರಾಗಿದೆ. ಮಳೆಯಿಂದಾಗಿ ಕೆಲ ಶಿಕ್ಷಕರು ರಾತ್ರಿಯಿಡೀ ಜಾಗರಣೆ ನಡೆಸಿದ್ದಾರೆ. ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಶಾಲಾ ಆವರಣದಲ್ಲಿ ನಿಂತಿರೋ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.

    ಈ ವೇಳೆ ಮಾತನಾಡಿದ ಗ್ರಾಮಸ್ಥರು, ಪ್ರತಿ ವರ್ಷ ಸುರಿಯುವ ಮಳೆಗೆ ಶಾಲೆ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಶಾಲೆಯ ಮುಂಭಾಗದಲ್ಲಿರುವ ಕಾಲುವೆಯ ಮೂಲಕ ಶಾಲಾ ಆವರಣಕ್ಕೆ ನೀರು ನುಗ್ಗುತ್ತದೆ. ಈ ನೀರನ್ನು ಹೊರಹಾಕುವುದೇ ಹರಸಾಹಸದ ಕೆಲಸ ಎಂದು ಹೇಳಿದ್ದಾರೆ.

    ಕಾಲುವೆಗೆ ಅಡ್ಡಲಾಗಿ ಎತ್ತರವಾದ ಸೇತುವೆಯನ್ನು ನಿರ್ಮಿಸಿಕೊಡುವಂತೆ ಗ್ರಾಮಸ್ಥರು, ಶಾಲಾ ಶಿಕ್ಷಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರತಿ ವರ್ಷ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿಯವರು ಮೇಲಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    https://www.youtube.com/watch?v=–1HkQ4c23c