Tag: ಪ್ರೋಫೆಸರ್

  • ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೊಫೆಸರ್ ಕ್ಷಮೆಯಾಚನೆ

    ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೊಫೆಸರ್ ಕ್ಷಮೆಯಾಚನೆ

    ಬೆಳಗಾವಿ: ಸೋಶಿಯಲ್ ಮೀಡಿಯಾದಲ್ಲಿ ವೀರ ಮದಕರಿ ನಾಯಕನ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚನೆ ಮಾಡಿದ್ದಾರೆ.

    ಬೆಳಗಾವಿ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ಅಭಿಜಿತ್ ಬೈಕೇರಿಕರ್ ಕ್ಷಮಾಪಣೆ ಕೇಳಿದ್ದಾರೆ. ಪ್ರಕರಣದ ಹಿನ್ನೆಲೆ ನೋಡೋದಾದ್ರೆ ಬೆಳಗಾವಿ ನಗರದ ಆರ್‌ಪಿಡಿ ವೃತ್ತಕ್ಕೆ ವೀರ ಮದಕರಿ ನಾಯಕರ ಹೆಸರಿಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿದ್ದವು.

    ನಡೆದಿದ್ದೇನು?
    ಈ ಸಂದರ್ಭದಲ್ಲಿ ಪ್ರೊಫೆಸರ್ ಅಭಿಜಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬೆಳಗಾವಿಗೂ ವೀರಮದಕರಿ ನಾಯಕರಿಗೂ ಸಂಬಂಧ ಏನು? ಅಂತಾ ಪ್ರಶ್ನೆ ಮಾಡಿದ್ದರು. ಪ್ರೊಫೆಸರ್ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿತ್ತು. ‘Remove_Abhijeet’ ಹ್ಯಾಷ್‍ಟ್ಯಾಗ್‍ನಲ್ಲಿ ನೆಟ್ಟಿಗರು ಅಭಿಯಾನ ಆರಂಭಿಸಿದ್ದರು. ಇದನ್ನೂ ಓದಿ: ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಹತ್ತಕ್ಕೂ ಹೆಚ್ಚು ಜನರಿಗೆ ಗಾಯ 

    ಅಭಿಜಿತ್ ಅವರ ವಿರುದ್ಧ ಕ್ರಮಕ್ಕೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಆಗ್ರಹ ಮಾಡಿತ್ತು. ಈ ಸಂಬಂಧ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾಗಿ ಸಂಘಟನೆ ಸದಸ್ಯರು ಮನವಿ ಮಾಡಿಕೊಂಡಿದ್ದರು. ಇತ್ತ ಸಂಘಟನೆ ಒತ್ತಾಯದ ಬೆನ್ನಲ್ಲೇ ಅಭಿಜಿತ್ ಬೈಕೇರಿಕರ್ ಕ್ಷಮೆಯಾಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಪ್ರೊಫೆಸರ್!

    ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಪ್ರೊಫೆಸರ್!

    ಲಕ್ನೋ: ವಿದ್ಯಾರ್ಥಿನಿಯರಿಗೆ ಸ್ವೀಟ್ ಹಾರ್ಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಆರೋಪದ ಮೇಲೆ ಪ್ರೊಫೆಸರ್‍ನನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.

    ಪಿ. ಸೆಂಥಿಲ್ ಕುಮಾರ್ ಸಸ್ಪೆಂಡ್ ಆದ ಪ್ರೊಫೆಸರ್. ಸೆಂಥಿಲ್ ನೋಯ್ಡಾ ವಿಭಾಗದ ಫಿಸಿಯೋಥೇರಪಿ ವಿಭಾಗ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದನು. ಸೆಂಥಿಲ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯರಿಗೆ ಸ್ವೀಟ್ ಹಾರ್ಟ್ ಎಂದು ಹೇಳುತ್ತಾ ಅಶ್ಲೀಲ ವಿಡಿಯೋ, ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಸೋಮವಾರ ನೋಯ್ಡಾ ವಿಶ್ವವಿದ್ಯಾಲಯದ 14 ವಿದ್ಯಾರ್ಥಿನಿಯರು ಪ್ರೊಫೆಸರ್ ಸೆಂಥಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಪ್ರೊಫೆಸರ್ ನಮ್ಮನ್ನು ‘ಸ್ವೀಟ್ ಹಾರ್ಟ್’, ‘ಸ್ವೀಟು’, ಈ ರೀತಿ ಕರೆಯುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.

    ಪ್ರೊಫೆಸರ್ ಸೆಂಥಿಲ್ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸುವುದಕ್ಕೆ ತಡೆ ಹಿಡಿಯಲಾಗಿದೆ. ಈ ಬಗ್ಗೆ ಇಂಟರ್ ನಲ್ ಕಂಪ್ಲೇಟ್ ಕಮಿಟಿ ರಚನೆಯಾಗಿದ್ದು, 72 ಗಂಟೆಯೊಳಗೆ ವರದಿಯನ್ನು ನೀಡಲಿದೆ ಎಂದು ವಿಶ್ವವಿದ್ಯಾನಿಲಯದ ವಕ್ತಾರ ವಿಕ್ರಂ ಸಿಂಗ್ ತಿಳಿಸಿದ್ದಾರೆ.

    ವಿದ್ಯಾರ್ಥಿನಿಯರು ದೂರು ನೀಡಿದ ನಂತರ ಸೆಂಥಿಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ವಿಚ್ಛ್ ಆಫ್ ಆಗಿದೆ ಎಂದು ವರದಿಯಾಗಿದೆ.

  • ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ತುಮಕೂರು: ಡಿಸೆಂಬರ್ 9 ರಂದು ನಾಪತ್ತೆಯಾಗಿದ್ದ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರೋಫೆಸರ್ ಈಶ್ವರ್ ಶವವಾಗಿ ಪತ್ತೆಯಾಗಿದ್ದಾರೆ.

    ಕೊಳೆತ ಸ್ಥಿತಿಯಲ್ಲಿ ತುಮಕೂರು ನಗರದ ಹೆಚ್.ಎಮ್.ಟಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾದ್ದಾರೆ. ಕಳೆದ ಡಿಸೆಂಬರ್ 9 ರಂದು ವಾಯುವಿಹಾರಕ್ಕೆ ಹೋಗಿ ಬರುತ್ತೀನಿ ಎಂದು ಹೋಗಿದ್ದು, ಮತ್ತೆ ವಾಪಸ್ ಬಂದಿರಲಿಲ್ಲ. ಇವರು ವಿವಿಯಲ್ಲಿ ವಿಜ್ಞಾನ ವಿಭಾಗದ ಪ್ರಾಣಿಶಾಸ್ತ್ರ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಶ್ವರ್ ನಾಪತ್ತೆ ಪ್ರಕರಣದಲ್ಲಿ ಹಲವು ಅನುಮಾನಗಳಿವೆ.

    ಈಶ್ವರ್ ಈ ಹಿಂದೆ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ಆಗ ಇನ್ನೂ ಇವರಿಗೆ ಮಾನ್ಯತೆ ಸಿಕ್ಕಿಲ್ಲ ಎಂದು ಹುದ್ದೆಯಿಂದ ಕೆಳಗಿಳಿಸಿದ್ದರು. ಬಳಿಕ ಅಲ್ಲಿಂದ ಸಹೋದ್ಯೋಗಿಗಳು ಸುಖಾಸುಮ್ಮನೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈಶ್ವರ್ಗೆ 57 ವರ್ಷ ವಯಸ್ಸಾದ ಕಾರಣ ಕಣ್ಣಿನ ಸಮಸ್ಯೆ ಇತ್ತು. ಈ ಬಗ್ಗೆ ಆಸ್ಪತ್ರೆಗೂ ತೋರಿಸಿಕೊಂಡಿದ್ದರು. ಇಷ್ಟಾದರೂ ನೀವು ಕಾಲೇಜಿಗೆ ಬರಬೇಡಿ ನಿಮ್ಮಿಂದ ತೊಂದರೆ ಆಗುತ್ತಿದೆ ಅಂತ ಸಹೋದ್ಯೋಗಿಗಳು ಕಿರುಕುಳ ನೀಡುತ್ತಿದ್ದರಂತೆ ಈ ಬಗ್ಗೆ ಸ್ವತಃ ಈಶ್ವರ್ ಅವರೇ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.

    ಈಶ್ವರ್ ಸಾವಿಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಮನೆಯವರು ಕಳೆದ ಒಂದು ತಿಂಗಳಿನಿಂದ ಹುಡುಕಲು ಸಾಕಷ್ಟು ಪ್ರಯತ್ನಿಸಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಈ ಬಗ್ಗೆ ಮಗ ಪವನ್, ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ನಮಗೆ ಅಪ್ಪನ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಅವರು ಸದಾ ನಮಗೆ ಧೈರ್ಯ ತುಂಬುತ್ತಿದ್ದರು. ಆದರೆ ಇಂದು ಅವರೇ ಈ ರೀತಿ ಮಾಡಿಕೊಂಡಿದ್ದಾರೆ ಅಂದರೆ ನಂಬಲು ಸಾಧ್ಯವಿಲ್ಲ ಅಂತ ಹೇಳಿದ್ದಾನೆ.

    ಈ ಕುರಿತು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ

    ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ

    ಉಡುಪಿ: ಮನುಷ್ಯನಿಗೆ ಸಾಧನೆ ಮಾಡಬೇಕು ಎಂಬ ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಇಂದಿನ ಪಬ್ಲಿಕ್ ಹೀರೋನೇ ಸಾಕ್ಷಿ.

    ಲ್ಯಾಬ್ ಇನ್ಸ್‍ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿರುವ ಉಡುಪಿಯ ಮಣಿಪಾಲದ ಪ್ರೊ. ಮನೋಹರ್ ಪೇಟೆಂಟ್‍ಗಳ ಮೇಲೆ ಪೇಟೆಂಟ್ ಪಡೆದುಕೊಂಡಿದ್ದಾರೆ. ಭಾರತೀಯ ಸೇನೆಗೂ ಇವರ ಅನ್ವೇಷಣೆ ಉಪಯುಕ್ತವಾಗಿದೆ. ಪ್ರೊ. ಮನೋಹರ್ ಎಂಐಟಿ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಸ್ವತಃ ಸಂಶೋಧನೆ ಮಾಡಿ, ದೂರದರ್ಶಕವನ್ನು ಕಂಡು ಹಿಡಿದಿದ್ದಾರೆ.

    ಈ ಬೈನಾಕ್ಯುಲರ್ ಒಳಗೆ 9 ಲೆನ್ಸ್ ಅಳವಡಿಸಿದ್ದಾರೆ. ಪಿವಿಸಿ ಪೈಪ್, ಭೂತಕನ್ನಡಿಗಳನ್ನು ಬಳಸಿಕೊಂಡು ಈ ಸಾಧನೆ ಮಾಡಿದ್ದಾರೆ. ಬೇರೆ ದೂರದರ್ಶಕಗಳಲ್ಲಿ ತಲೆಕೆಳಗಾಗಿ ದೃಶ್ಯಗಳು ಕಂಡರೆ, ಮನೋಹರ್ ಕಂಡುಹಿಡಿದಿರೋ ಬೈನಾಕುಲರ್‍ನಲ್ಲಿ ಕಣ್ಣಿನಲ್ಲಿ ಕಾಣಿಸುವಂತೆಯೇ ನೋಡಬಹುದು. ಮಣಿಪಾಲ ವಿವಿಯ ಎಂಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಮನೋಹರ್ ವಿಜ್ಞಾನಿಗಳು ಮಾಡುವ ಸಾಧನೆಯನ್ನು ಮಾಡಿದ್ದಾರೆ. ಈಗ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಣೆ ಮಾಡಿದ್ದು ಮಿಲಿಟರಿ ಅಧಿಕಾರಿಗಳ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ.

    ಮನೋಹರ್ ಅವರ ಸಾಧನೆಗೆ ಭಾರತ ಸರ್ಕಾರದಿಂದ ಪೇಟೆಂಟ್ ಸಿಕ್ಕಿದೆ. ಭಾರತೀಯ ಸೇನೆಯಿಂದ 200 ದೂರದರ್ಶಕಗಳನ್ನು ಸಿದ್ಧಪಡಿಸಿಕೊಡುವಂತೆ ಆರ್ಡರ್ ಬಂದಿದೆ. 10 ಕಿಲೋಮೀಟರ್ ದೂರದಲ್ಲಿರುವ ಬೋರ್ಡ್‍ಗಳನ್ನು ಮನೋಹರ್ ಅವರ ಸಾಧನದಲ್ಲಿ ನೋಡಬಹುದು, ದೂರದಲ್ಲಿರುವ ಬೋರ್ಡ್‍ಗಳನ್ನು ಓದಬಹುದು. ಶತ್ರು ರಾಷ್ಟ್ರದ ವಾಹನಗಳು ನಮ್ಮ ದೇಶದತ್ತ ಬರುತ್ತಿದ್ರೆ ಅದನ್ನು ಓದಿ ಗುರುತಿಸಬಹುದು. ಚಂದ್ರನ ಮೇಲಿನ ಗುಳಿಗಳನ್ನು ಸ್ಪಷ್ಟವಾಗಿ ನೋಡಬಹುದು. ಶನಿಗ್ರಹದ ವರ್ತುಲಗಳನ್ನು ನೋಡಬಹುದು. ಗ್ರಹಣಗಳಾದಾಗ ಈ ದೂರದರ್ಶಕದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುವ ಕೆಲಸವನ್ನು ಪ್ರೊ. ಮನೋಹರ್ ಮಾಡುತ್ತಾ ಬಂದಿದ್ದಾರೆ.

    ಸೂಕ್ಷ್ಮದರ್ಶಕ ಮತ್ತು ದೂರ ದರ್ಶಕವನ್ನು ಬಹಳ ಕಡಿಮೆ ವೆಚ್ಚದಲ್ಲಿ ತಯಾರಿಸಿದ್ದು ಮನೋಹರ್ ಅವರ ಸಾಧನೆ. ಇಡೀ ಟೆಲಿಸ್ಕೋಪ್ ಒಂದೇ ಟ್ಯೂಬ್‍ನಲ್ಲಿ ಫಿಕ್ಸ್ ಮಾಡಿದ ಚಾಕಚಕ್ಯತೆಯನ್ನು ಸ್ಕೆಚ್ ಮಾಡಿದ್ದಾರೆ. 40 ರಿಂದ 50 ಕಿಲೋಮೀಟರ್ ವರೆಗಿನ ಯುದ್ಧಭೂಮಿಗೆ ಬಹಳ ಉಪಯುಕ್ತವಾಗಿದೆ. ಚಂದ್ರಗ್ರಹಣ, ಸೂರ್ಯಗ್ರಹಣ, ಗ್ರಹಗಳು, ಸಮುದ್ರ ಹೀಗೆ ಎಲ್ಲವನ್ನೂ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಮರದ ಕಟ್ಟಿಂಗ್ ಗೇಜ್ ನಿರ್ಮಾಣ ಮಾಡಿದ್ದು, ಆ ಸಾಧನಕ್ಕೂ ಪೇಟೆಂಟ್ ಸಿಕ್ಕಿದೆ. ಒಟ್ಟಿನಲ್ಲಿ ಇಂಡಿಯಾ, ಅಮೆರಿಕಾ ಸೇರಿದಂತೆ 37 ದೇಶಗಳ ಪೇಟೆಂಟ್ ಸಿಕ್ಕ ಮಹಾನ್ ಸಾಧನ ನಮ್ಮ ನಡುವೆ ಇರೋದು ಹೆಮ್ಮೆಯ ಸಂಗತಿ.

    https://www.youtube.com/watch?v=debF78Eud0g