Tag: ಪ್ರೋಪೆಸರ್

  • ವಾಜಪೇಯಿ ಟೀಕಿಸಿ ಎಫ್‍ಬಿ ಪೋಸ್ಟ್ ಮಾಡಿದ್ದ ಪ್ರಾಧ್ಯಾಪಕನ ಮೇಲೆ ಹಲ್ಲೆ

    ವಾಜಪೇಯಿ ಟೀಕಿಸಿ ಎಫ್‍ಬಿ ಪೋಸ್ಟ್ ಮಾಡಿದ್ದ ಪ್ರಾಧ್ಯಾಪಕನ ಮೇಲೆ ಹಲ್ಲೆ

    ಪಾಟ್ನಾ: ದಿವಂಗತ ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಟೀಕಿಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಾಧ್ಯಾಪಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಪ್ರೊಫೆಸರ್ ಸಂಜಯ್ ಕುಮಾರ್ ಫೇಸ್‍ಬುಕ್ ನಲ್ಲಿ ವಾಜಪೇಯಿ ಅವರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಇವರು ಬಿಹಾರದ ಮೋತಿಹಾರಿಯಲ್ಲಿರುವ ಮಹಾತ್ಮ ಗಾಂಧಿ ಸೆಂಟ್ರಲ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದಾರೆ. ಪ್ರೊಫೆಸರ್ ಮಾಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸುಮಾರು 20-25 ಜನರು ಗುಂಪು ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ.

    ಕುಮಾರ್ ಅವರು ಈ ಬಗ್ಗೆ ದೂರು ಸಲ್ಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಕುಮಾರ್ ಈ ಹಿಂದೆ ವಿಶ್ವವಿದ್ಯಾನಿಲಯದ ಉಪಕುಲಪತಿ ವಿರುದ್ಧ ಮಾಡನಾಡಿದ್ದರು. ನಂತರ ಈ ಬಗ್ಗೆ ಕ್ಷಮೆಯನ್ನು ಕೇಳಿದ್ದರು. ಆದರೆ ಈಗ ಆ ಘಟನೆಯನ್ನು ಟಾರ್ಗೆಟ್ ಮಾಡಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.

    ರಾಹುಲ್ ಪಾಂಡೆ ಮತ್ತು ಅಮನ್ ಬಿಹಾರಿ ವಾಜಪೇಯಿ ಸೇರಿದಂತೆ 20-25 ಜನರ ಗುಂಪು ಮೋತಿಹಾರಿಯಲ್ಲಿರುವ ಆಜಾದ್ ನಗರದಲ್ಲಿ ಕೋಣೆಯಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ.

    ಈ ಘಟನೆ ಸಂಬಂಧ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ಕುಮಾರ್ ಗೆ ಗಂಭೀರವಾಗಿ ಗಾಯವಾಗಿದ್ದು, ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಮಾರ್ ಸಹೋದ್ಯೋಗಿ ಹೇಳಿದ್ದಾರೆ.

    ರಾಹುಲ್ ಕುಮಾರ್ ಪಾಂಡೆ, ಸನ್ನಿ ವಾಜಪೇಯಿ, ಅಮಾನ್ ಬಿಹಾರಿ ವಾಜಪೇಯಿ, ಪುರುಷೋತ್ತಮ್ ಮಿಶ್ರಾ, ರವಿಕೇಶ್ ಮಿಶ್ರಾ, ಜ್ಞಾನೇಶ್ವರ್ ಗೌತಮ್, ಸಂಜಯ್ ಕುಮಾರ್ ಸಿಂಗ್ ಡೈಯಿಕ್ ಭಾಸ್ಕರ್ನ ಸ್ಥಳೀಯ ಬ್ಯೂರೋ ಮುಖ್ಯಸ್ಥ ಡಾ. ಬಾವೇಶ್ ಕುಮಾರ್ ಸಿಂಗ್, ದಿವಾಕರ್ ಸಿಂಗ್, ದಿನೇಶ್ ವ್ಯಾಸ್, ಜಿತೇಂದ್ರ ಗಿರಿ ಮತ್ತು ರಾಕೇಶ್ ಪಾಂಡೆ ಅವರ ಹೆಸರುಗಳನ್ನು ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv