Tag: ಪ್ರೋಟೋಕಾಲ್

  • ಸಿಎಂಗೆ ಆಹ್ವಾನ ಕೊಡೋ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ನಿತಿನ್ ಗಡ್ಕರಿ

    ಸಿಎಂಗೆ ಆಹ್ವಾನ ಕೊಡೋ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ನಿತಿನ್ ಗಡ್ಕರಿ

    ಬೆಂಗಳೂರು: ಸಿಗಂಧೂರು ಸೇತುವೆ (Sigandur Bridge) ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಡುವ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅನ್ನೋ ಆರೋಪವನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅಲ್ಲಗಳೆದಿದ್ದಾರೆ.

    ಈ ಕುರಿತು‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಆಹ್ವಾನಿಸುವ ವಿಚಾರದಲ್ಲಿ ಶಿಷ್ಟಾಚಾರ (Protocols) ಉಲ್ಲಂಘನೆ ಆಗಿಲ್ಲ. ಜುಲೈ 11ರಂದೇ ಅಧಿಕೃತ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಲು ಅವರನ್ನ ಆಹ್ವಾನಿಸಲಾಗಿತ್ತು. ಖುದ್ದು ಹಾಜರಾಗಲು ಸಾಧ್ಯವಾಗದಿದ್ರೆ ವರ್ಚುವಲ್ ಮೂಲಕ ಭಾಗಿಯಾಗುವಂತೆ ಪತ್ರದ ಮೂಲಕ ಕೋರಲಾಗಿತ್ತು ಎಂದು ಪತ್ರ ಸಹಿತ ತಿಳಿಸಿದ್ದಾರೆ. ಇದನ್ನೂ ಓದಿ: ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

    ಕೇಂದ್ರ ಸರ್ಕಾರವು ಸ್ಥಾಪಿತ ಶಿಷ್ಟಾಚಾರಗಳನ್ನು ಕೇಂದ್ರ ಸದಾ ಎತ್ತಿ ಹಿಡಿಯುತ್ತೆ. ಕರ್ನಾಟಕ ಸರ್ಕಾರ ಮತ್ತು ಮುಖ್ಯಮಂತ್ರಿಯವರ ಕೊಡುಗೆಗಳು ಮತ್ತು ಸಹಕಾರ ಶ್ಲಾಘಿಸ್ತೇವೆ. ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳೊಂದಿಗೆ ನಿಕಟ ಸಮನ್ವಯಕ್ಕೆ ಕೇಂದ್ರ ಸದಾ ಬದ್ಧವಾಗಿರುತ್ತದೆ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Sigandur Bridge | ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಸಿಎಂಗೆ ಆಹ್ವಾನ ನೀಡಲಾಗಿದೆ: ರಾಘವೇಂದ್ರ ತಿರುಗೇಟು

    ಸೇತುವೆ ಉದ್ಘಾಟನೆ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರಿದೆ. ಆದ್ರೆ ಹೆದ್ದಾರಿ ಸಚಿವಾಲಯದಿಂದ ತಮಗೆ ಯಾವುದೇ ಮಾಹಿತಿ ನೀಡಿಲ್ಲ. ಸಾಧ್ಯವಾದ್ರೆ ಕಾರ್ಯಕ್ರಮ ಮುಂದೂಡಿ. ಇಂತಹ ಕಾರ್ಯಕ್ರಮಗಳ ವಿಚಾರದಲ್ಲಿ ರಾಜ್ಯ ಸರ್ಕಾರದ ಜತೆ ಸೂಕ್ತವಾಗಿ ವ್ಯವಹರಿಸುವಂತೆ ನಿಮ್ಮ ಸಚಿವಾಲಯಕ್ಕೆ ನಿರ್ದೇಶನ ನೀಡಿ ಎಂದು ಸಿದ್ದರಾಮಯ್ಯ ಅವರು ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆ| ಕೇಂದ್ರದಿಂದ ಶಿಷ್ಟಾಚಾರ ಉಲ್ಲಂಘನೆ: ಸಿದ್ದರಾಮಯ್ಯ ಆಕ್ರೋಶ

  • G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ

    G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ

    ನವದೆಹಲಿ: ಜಿ20 ಶೃಂಗಸಭೆಯ (G20 Summit) ಹಿನ್ನೆಲೆ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಬೆಂಗಾವಲು ವಾಹನ ಪಡೆಯ ಚಾಲಕನೊಬ್ಬ ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘಿಸಿದ್ದರಿಂದಾಗಿ ದೆಹಲಿಯಲ್ಲಿ ವಶಕ್ಕೆ ಪಡೆಯಲಾಯಿತು.

    G-20 ಶೃಂಗಸಭೆ ಹಿನ್ನೆಲೆಯಲ್ಲಿ UAE ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ತಂಗಿದ್ದ ತಾಜ್ ಹೋಟೆಲ್‌ಗೆ ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ಕಾರು ಪ್ರವೇಶಿಸಿದ ನಂತರ ಈ ಘಟನೆ ನಡೆದಿದೆ. ವಾಹನ ಚಾಲನೆ ವೇಳೆ ನಿರ್ಲಕ್ಷ್ಯ ತೋರಿದ್ದರಿಂದಾಗಿ ಚಾಲಕನನ್ನ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ನಂತರ ಆತನನ್ನ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Aditya-L1: ಮತ್ತೊಂದು ಎತ್ತರದ ಕಕ್ಷೆ ಸೇರಿದ ಆದಿತ್ಯ ನೌಕೆ – ಸೂರ್ಯನಿಗೆ ಇನ್ನಷ್ಟು ಹತ್ತಿರ

    ಬೆಂಗಾವಲು ವಾಹನದಲ್ಲಿ ಹಲವು ಸ್ಟಿಕರ್‌ಗಳಿರುವುದಾಗಿಯೂ ಭದ್ರತಾ ಸಿಬ್ಬಂದಿ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಕಾರು ಚಾಲಕನು ಜೋ ಬೈಡನ್ ತಂಗಿದ್ದ ಐಟಿಸಿ ಮೌರ್ಯ ಹೋಟೆಲ್‌ಗೆ ಬೆಳಗ್ಗೆ 9:30ಕ್ಕೆ ಬರಬೇಕಿತ್ತು. ಆದರೆ ಚಾಲಕ ಲೋಧಿ ಎಸ್ಟೇಟ್ ಪ್ರದೇಶದಿಂದ ಬಂದ ಉದ್ಯಮಿಯನ್ನ ತಾಜ್‌ಗೆ ಬಿಡಬೇಕಾಗಿದ್ದರಿಂದ ತಾಜ್ ಹೋಟೆಲ್‌ಗೆ ಅದೇ ಕಾರಿನಲ್ಲಿ ಬಂದಿದ್ದ. ಆತನಿಗೆ ಪ್ರೋಟೋಕಾಲ್ (ಶಿಷ್ಟಾಚಾರ) (Protocol) ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆತನನ್ನ ವಿಚಾರಣೆ ನಡೆಸಿದ ನಂತರ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಇತರ ನಾಯಕರು, ಪ್ರತಿನಿಧಿಗಳು ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರ ಹೆಸರು ಹಾಕದೇ ಪ್ರೋಟೋಕಾಲ್‌ ಉಲ್ಲಂಘನೆ – ಶಾಸಕ ಕೆ.ಸಿ ರಾಮಮೂರ್ತಿ ದೂರು

    ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರ ಹೆಸರು ಹಾಕದೇ ಪ್ರೋಟೋಕಾಲ್‌ ಉಲ್ಲಂಘನೆ – ಶಾಸಕ ಕೆ.ಸಿ ರಾಮಮೂರ್ತಿ ದೂರು

    ಬೆಂಗಳೂರು: ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರಿಗೆ ಆಹ್ವಾನ ನೀಡದೇ ಶಿಷ್ಟಾಚಾರ (Protocol) ಉಲ್ಲಂಘನೆ ಮಾಡಲಾಗಿದೆ ಅಂತ ಜಯನಗರ ಶಾಸಕ ಕೆ.ಸಿ ರಾಮಮೂರ್ತಿ (KC Ramamurthy) ಸ್ಪೀಕರ್‌ಗೆ ದೂರು ನೀಡಿದ್ದಾರೆ.

    ವಿಧಾನಸೌಧದಲ್ಲಿ ಸ್ಪೀಕರ್‌ಗೆ ದೂರು ಕೊಟ್ಟ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಆಗಸ್ಟ್‌ 5 ರಂದು ಗೃಹಜ್ಯೋತಿ (Gruhajyothi Scheme) ಉದ್ಘಾಟನೆ ಕಾರ್ಯಕ್ರಮ ಇದೆ. ಸಿಎಂ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಶಿಷ್ಟಾಚಾರದ ಪ್ರಕಾರ ಎಲ್ಲಾ ಶಾಸಕರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಬೇಕು. ಆದ್ರೆ ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇಲ್ಲ. ಶಾಸಕರ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಬಿಜೆಪಿ ಶಾಸಕರ ಅಮಾನತು ಕ್ರಮ ಅಕ್ಷಮ್ಯ; ಮುಳ್ಳು ಚುಚ್ಚಿದ್ದಕ್ಕೆ ಕಾಲು ಕತ್ತರಿಸಿಕೊಂಡಂತೆ: ಕಾಗೇರಿ

    ಅನ್ನಭಾಗ್ಯ ಯೋಜನೆ (Anna Bhagya Scheme) ಉದ್ಘಾಟನೆ ವೇಳೆಯೂ ನನ್ನ ಹೆಸರು ಹಾಕಿರಲಿಲ್ಲ. ಗೋಪಾಲಯ್ಯ ಅವರಿಗೂ ಹೀಗೆ ಮಾಡಿದ್ರು. ಈಗ ನನ್ನ ಹೆಸರು ಹಾಕಿಲ್ಲ. ಹೀಗಾಗಿ ಸ್ಪೀಕರ್‌ಗೆ ದೂರು ನೀಡಿದ್ದೇನೆ. ಇಂತಹ ಕೆಲಸ ಮಾಡಿರೋ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸ್ಪೀಕರ್ ಗೆ ದೂರು ನೀಡಿದ್ದೇನೆ. ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವಂತೆ ಸ್ಪೀಕರ್ ಗೆ ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತಗಳ‌ ನಿಯಂತ್ರಣಕ್ಕೆ ಗಡ್ಕರಿಗೆ ಸಿದ್ದರಾಮಯ್ಯ ಮನವಿ

    ಬಿಜೆಪಿಯಿಂದ ಗೆದ್ದ ಶಾಸಕರಿಗೆ ಹೀಗೆ ಮಾಡ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ಹೀಗೆ ಸರ್ಕಾರ ಮಾಡುತ್ತಿದೆ ಅನ್ನಿಸುತ್ತೆ. ಲೋಪ ಸರಿ ಮಾಡಿ ಹೊಸ ಆಹ್ವಾನ ಪತ್ರಿಕೆ ಮುದ್ರಿಸಬೇಕು. ಇಲ್ಲದೆ ಹೋದ್ರೆ ಆಗಸ್ಟ್ 5 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡ್ತೀನಿ ಅಂತ ಜಯನಗರ ಬಿಜೆಪಿ ಶಾಸಕ ರಾಮಮೂರ್ತಿ ಎಚ್ಚರಿಕೆ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ನವದೆಹಲಿ: ಕ್ಯಾಬ್ ಕಂಪನಿಗಳಾದ ಓಲಾ, ಉಬರ್‌ಗಳಿಗೆ ಬೇಡಿಕೆ ಹೆಚ್ಚಿದಂತೆ ದೂರುಗಳು ಬರಲು ಪ್ರಾರಂಭಿಸಿವೆ. ಆದ್ದರಿಂದ ದೂರುಗಳನ್ನು ಪರಿಹರಿಸಿ, ಇಲ್ಲವೇ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿರುವ ಕೇಂದ್ರ ಸರ್ಕಾರ, ನ್ಯಾಯಯುತ ಬೆಲೆ ನಿಗದಿ ಮಾಡಲು ಮುಂದಾಗಿದೆ. ಅದಕ್ಕಾಗಿ ಕ್ಯಾಬ್ ಕಂಪನಿಗಳಿಗೆ ಮಾರ್ಗಸೂಚಿ ನೀಡಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.

    Uber-1-768x576

    ಈಗಾಗಲೇ ಕೇಂದ್ರ ಮತ್ತು ರಾಜ್ಯ ಸಾರಿಗೆ ಇಲಾಖೆಗಳ ಮಾರ್ಗ ಸೂಚಿಗಳು ಭಿನ್ನವಾಗಿರುತ್ತವೆ. ಮಾಹಿತಿಯ ಪ್ರಕಾರ, ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿಗದಿತ ಗಡುವುಗಳೊಂದಿಗೆ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಗ್ರಾಹಕರ ದೂರುಗಳನ್ನು ಕಟ್ಟುನಿಟ್ಟಾಗಿ ಪರಿಹರಿಸಲು ನಾವು ಕ್ಯಾಬ್ ಕಂಪನಿಗಳನ್ನು ಕೇಳಿದ್ದೇವೆ. ಗ್ರಾಹಕರ ಕುಂದುಕೊರತೆಗಳ ಪರಿಹಾರಕ್ಕೆ ತಕ್ಷಣವೇ ಸಂಭಾವ್ಯ ಪರಿಹಾರಗಳೊಂದಿಗೆ ಬರಲು ನಾವು ಅವರಿಗೆ ಎಚ್ಚರಿಕೆ ನೀಡಿದ್ದೇವೆ ಇಲ್ಲದಿದ್ದರೆ ಸಕ್ಷಮ ಪ್ರಾಧಿಕಾರವು ಅವರ ವಿರುದ್ಧ ಶಿಕ್ಷಾರ್ಹ ಕ್ರಮವನ್ನು ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ಡೆಸ್ಟಿನೇಶನ್ ಜೊತೆ ರದ್ದತಿ ಶುಲ್ಕದ ಪ್ರಕಾರ ದರವು ಎಷ್ಟು ನ್ಯಾಯಯುತ ಮತ್ತು ಸಮಂಜಸವಾಗಿದೆ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    uber cab

    ಏರುತ್ತಿರುವ ಇಂಧನ ಬೆಲೆ ಪ್ರತಿ ವಿರುದ್ಧ ಪ್ರತಿಭಟಿಸಿ ಹಲವಾರು ಆಟೋ ಮತ್ತು ಕ್ಯಾಬ್ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದರಿಂದ ದೆಹಲಿಯಲ್ಲಿ ಕಳೆದ ತಿಂಗಳು ಪ್ರಯಾಣಿಕರು ತೊಂದರೆಗಳನ್ನು ಎದುರಿಸಿದರು. ಇಂಧನ ಬೆಲೆ ಏರಿಕೆ ಮತ್ತು ಕಡಿಮೆ ಕಮಿಷನ್‌ಗಳ ಸಮಸ್ಯೆಯಿಂದ ಕ್ಯಾಬ್ ಚಾಲಕರು `ನೋ ಎಸಿ’ ನೀತಿಯನ್ನು ಅಳವಡಿಸಿಕೊಂಡಿದ್ದರಿಂದ ಕ್ಯಾಬ್ ಕಂಪನಿಗಳು ಓಲಾ ಮತ್ತು ಉಬರ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ಪಶ್ಚಿಮ ಬಂಗಾಳ, ನವದೆಹಲಿ, ನೋಯ್ಡಾ ಮತ್ತು ತೆಲಂಗಾಣ ನಂತರ, ಬೆಂಗಳೂರಿನ ಕ್ಯಾಬ್ ಚಾಲಕರೂ ಈ ಭೀತಿಯನ್ನು ಎದುರಿಸುತ್ತಿದ್ದು ಏಪ್ರಿಲ್ ಆರಂಭದಿಂದ `ನೋ ಎಸಿ’ (ಹವಾನಿಯಂತ್ರಕ) ನೀತಿಯನ್ನು ಪ್ರಾರಂಭಿಸಿದರು. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ

    ಪೆಟ್ರೋಲ್ ಬೆಲೆ 100 ಗಡಿ ದಾಟಿದ ನಂತರ ಓಲಾ, ಉಬರ್ ಬಳಕೆದಾರರು ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ಕೇಳಲು ಮುಂದಾಗಿದ್ದಾರೆ. ಇದಕ್ಕಾಗಿ ಕೋವಿಡ್ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ.

    ಲಾಕ್‌ಡೌನ್‌ನಿಂದ ತಮ್ಮ ಊರುಗಳಿಗೆ ಹೋದ ಎಷ್ಟೋ ರೈಡರ್‌ಗಳು, ಕ್ಯಾಬ್ ಬಳಕೆದಾರರು ಮರಳಿಲ್ಲ. ಶೇ.30 ರಷ್ಟು ಮಂದಿ ಬಾಡಿಗೆ, ಇಂಧನ ಹಾಗೂ ಮಾಸಿಕ ಇಎಂಐ ಪಾವತಿಸುವುದಕ್ಕೂ ಕಷ್ಟವಾಗಿದೆ. ಅದಕ್ಕಾಗಿಯೇ ತಮ್ಮ ಕುಲ ಕಸುಬನ್ನು ಅವಲಂಬಿಸುತ್ತಿದ್ದಾರೆ. ಇನ್ನೂ ಕೆಲ ಕ್ಯಾಬ್ ಚಾಲಕರು ಇಎಂಐ ಗಳನ್ನು ಪಾವತಿಸಲು ಸಾಧ್ಯವಾಗದ ಕಾರಣ ತಮ್ಮ ಕಾರುಗಳನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ಓಲಾ, ಉಬರ್ ಬುಕ್ಕಿಂಗ್ ಮಾಡಿದ 20 ನಿಮಿಷಗಳ ವರೆಗೆ ಬರುವುದೇ ಇಲ್ಲ. ಮತ್ತು ಅದನ್ನು ರದ್ದು ಮಾಡಿದಾಗ ಮುಂದಿನ ಬುಕ್ಕಿಂಗ್ ವೇಳೆ 50 ರೂ. ದಂಡ ನೀಡಬೇಕಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

  • ಅನಾರೋಗ್ಯದಿಂದ 6ರ ಬಾಲಕಿ ಸಾವು – ಕೊರೊನಾ ಪ್ರೋಟೋಕಾಲ್‍ನಂತೆ ಶವಸಂಸ್ಕಾರ

    ಅನಾರೋಗ್ಯದಿಂದ 6ರ ಬಾಲಕಿ ಸಾವು – ಕೊರೊನಾ ಪ್ರೋಟೋಕಾಲ್‍ನಂತೆ ಶವಸಂಸ್ಕಾರ

    – ಬಾಲಕಿ ಗಂಟಲು ದ್ರವ ಮತ್ತು ರಕ್ತ ಮಾದರಿ ಕಲಬುರಗಿಗೆ ರವಾನೆ

    ಯಾದಗಿರಿ: ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದ ಜಿಲ್ಲೆಯ ಶಹಪುರ ತಾಲೂಕಿನ ಕೊಂಗಂಡಿ ಗ್ರಾಮದ ಆರು ವರ್ಷದ ಬಾಲಕಿಯ ಅಂತ್ಯಕ್ರಿಯೆಯನ್ನು ವಿಶ್ವ ಅರೋಗ್ಯ ಸಂಸ್ಥೆಯ ಪ್ರೋಟೋಕಾಲ್ ನಿಯಮದಂತೆ ಅಧಿಕಾರಿಗಳು ನೆರವೇರಿಸಿದ್ದಾರೆ.

    ಕಳೆದ ಮೂರು ದಿನಗಳಿಂದ ಬಾಲಕಿ ತೀವ್ರ ಕೆಮ್ಮು, ಜ್ವರ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿ ಕುಟುಂಬಸ್ಥರು ಅವಳಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿ ಗುಣಮುಖವಾಗದ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ, ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.

    ಮೃತ ಬಾಲಕಿ ಪೋಷಕರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದೇಶವಿದ್ದರೂ ಸಹ ಏಪ್ರಿಲ್ 1ರಂದು ವಾಪಸ್ ಜಿಲ್ಲೆಗೆ ಬಂದಿದ್ದರು. ಏ.4ರಂದು ಬಾಲಕಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಅರಿತ ಆರೋಗ್ಯ ಅಧಿಕಾರಿಗಳು ಮೃತ ಬಾಲಕಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು ಕಲಬುರಗಿಗೆ ಕಳುಹಿಸಿದ್ದಾರೆ. ಸಂಜೆ ಜಿಲ್ಲಾಡಳಿತದಿಂದ ಡಬ್ಲ್ಯುಹೆಚ್‍ಓ ಪ್ರೋಟೋಕಾಲ್ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಗಿದೆ.