Tag: ಪ್ರೊ.ಮಹೇಶ್ ಚಂದ್ರಗುರು

  • ಪ್ರತಾಪ್ ಸಿಂಹ ಓರ್ವ ನರಿ, ಉಗ್ರಗಾಮಿ: ಪ್ರೊ.ಮಹೇಶ್ ಚಂದ್ರ ಗುರು ಗುಡುಗು

    ಪ್ರತಾಪ್ ಸಿಂಹ ಓರ್ವ ನರಿ, ಉಗ್ರಗಾಮಿ: ಪ್ರೊ.ಮಹೇಶ್ ಚಂದ್ರ ಗುರು ಗುಡುಗು

    – ದಲಿತರ ನಿಜವಾದ ಶತ್ರು ಬಿಎಸ್‍ಪಿ, ಬಿಜೆಪಿ

    ಮೈಸೂರು: ಸಂಸದ ಪ್ರತಾಪ್ ಸಿಂಹ ಕ್ಷೇತ್ರವನ್ನ ಅಭಿವೃದ್ಧಿ ಮಾಡಿದ್ದೇನೆ ಎಂದು ಬ್ರೋಷರ್ ಹಿಡಿದು ಓಡಾಡುತ್ತಿದ್ದಾರೆ. ಅವರು ಕೇವಲ ಪೇಪರ್ ಲಯನ್, ನರಿ, ಉಗ್ರಗಾಮಿ ಎಂದು ಪ್ರೊ.ಮಹೇಶ್ ಚಂದ್ರ ಗುರು ಗುಡುಗಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಪೇಪರ್ ಲಯನ್, ನರಿ, ಉಗ್ರಗಾಮಿ. ಅಭಿವೃದ್ಧಿ ಮಾಡಿದ್ದೇನೆ ಎಂದು ಬ್ರೋಷರ್ ಹಿಡಿದು ಓಡಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ. ಇಂತಹ ಅವರಿಗೆ ಮತ ಹಾಕ ಬೇಕಾ ಎಂದು ಪ್ರಶ್ನೆ ಮಾಡುವ ಮೂಲಕ ಈ ಬಾರಿ ಚುನಾವಣೆಯಲ್ಲಿ ಇಂತಹವರು ಗೆಲ್ಲಬಾರದು ಎಂದು ಹೇಳಿದರು.

    ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಸುಮಲತಾ ಅವರು ಗೆಲ್ಲಬಾರದು. ಏಕೆಂದರೆ ಸುಮಲತಾ ಒಬ್ಬರು ನಟಿ. ಸಿನಿಮಾ ನಟರ, ಕ್ರೀಡಾಪಟುಗಳ ಹಿಂದೆ ಹೋದರೆ ಅಭಿವೃದ್ಧಿ ಆಗಲ್ಲ. ಸುಮಲತಾ ಅವರಗಿಂತ ನಿಖಿಲ್ ಪ್ರಮುಖ ಹಾಗೂ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಪ್ರಕಾಶ್ ರೈ ಒಬ್ಬ ನಟನಾಗಿ ಅಷ್ಟೇ ಅಲ್ಲ, ಚಿಂತಕ ಹಾಗೂ ಹೋರಾಟಗಾರ. ಅವರ ಬಗ್ಗೆ ಪ್ರಬುದ್ಧ ಮತದಾರರು ಈ ಬಾರಿಯ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

    ರಾಷ್ಟ್ರದಲ್ಲಿ ಬಿಜೆಪಿ ಪಕ್ಷದೊಂದಿಗೆ ಬಿಎಸ್‍ಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ದೇಶ ಮುಗಿಸಲು ಒಳಸಂಚು ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಬಿಎಸ್‍ಪಿ ಒಂದೇ ನಾಣ್ಯದ ಎರಡು ಮುಖಗಳು. ದಲಿತ ಮತಗಳನ್ನು ವಿಭಜನೆ ಮಾಡಿ ಜಾತ್ಯಾತೀತ ಪಕ್ಷವನ್ನು ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ 25 ಸ್ಥಾನ ಗೆದ್ದರೆ, ಉಪಪ್ರಧಾನಿ ನೀಡುವ ಮಾತು ಮೋದಿ ಕೊಟ್ಟಿದ್ದಾರೆ. ಆದ್ದರಿಂದ ಒಳಮೈತ್ರಿಯನ್ನು ಸೋಲಿಸಬೇಕಿದೆ ಎಂದರು.