Tag: ಪ್ರೊ.ಕೆ.ಎಸ್.ಭಗವಾನ್

  • ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ಮೈಸೂರು: ನಗರದಲ್ಲಿ ಶುಕ್ರವಾರ (ಅ.13) ನಡೆದ ಮಹಿಷ ಉತ್ಸವದ ವೇಳೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ (KS Bhagawan) ಒಕ್ಕಲಿಗ ಸಮುದಾಯದ (Okkaliga Community) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿಂದು ಪ್ರೊ.ಭಗವಾನ್ ನಿವಾಸಕ್ಕೆ ಮೈಸೂರು ಚಾಮರಾಜ ಕ್ಷೇತ್ರದ ಒಕ್ಕಲಿಗರ ಸಂಘದಿಂದ ಮುತ್ತಿಗೆಗೆ ಯತ್ನಿಸಲಾಯಿತು.

    ಅವಹೇಳನಕಾರಿ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು. ಬ್ಯಾರಿಕೇಡ್ ಕಿತ್ತು ಭಗವಾನ್ ಮನೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು (Mysuru City Police) ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಹಾಗೂ ತಳ್ಳಾಟ ನೂಕಾಟವೂ ನಡೆದಿದ್ದು, ಕೆಲವರು ಕೈ ಮತ್ತು ಹಣೆಯ ಭಾಗಕ್ಕೆ ಗಾಯವನ್ನೂ ಮಾಡಿಕೊಂಡರು. ಇದನ್ನೂ ಓದಿ: World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    ಶುಕ್ರವಾರ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಒಕ್ಕಲಿಗರು ಸಂಸ್ಕೃತಿ ಹೀನರೆಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ಮನೆಗೆ ಮುತ್ತಿಗೆಹಾಕಲು ಯತ್ನಿಸಿದರು.

    ಒಕ್ಕಲಿಗ ಜನಾಂಗಕ್ಕೆ ಸಂಸ್ಕೃತಿ ಕಲಿಸಿ, ಭಗವಾನ್ ತಾವೂ ಒಕ್ಕಲಿಗ ಸಮುದಾಯದವರು ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದುಕಡೆ ಸಮುದಾಯವನ್ನೇ ನಿಂದಿಸುತ್ತಾರೆ. ಅವರು ಒಕ್ಕಲಿಗ ಸಮುದಾಯದವರು ಎಂಬುದೇ ಅನುಮಾನವಿದೆ. ಅವರನ್ನು ಈಗಲೆ ಕರೆಸಿ, ಇಲ್ಲವೇ ದೂರು ನೀಡುತ್ತೇವೆ. ಕೂಡಲೇ ಎಫ್‌ಐಆರ್ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಂದ ವಂಚನೆ, ಕೊಲೆ ಬೆದರಿಕೆ ಆರೋಪ- ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಸದ್ಯ ಭಗವಾನ್ ಮನೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ಥಳದಲ್ಲಿ ರಾಜ್ಯ ಮೀಸಲು ಪಡೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ವ್ಯತ್ಯಯ; Ind Vs Pak ಮ್ಯಾಚ್ ನೋಡುವ ಫ್ಯಾನ್ಸ್‌ಗೆ ನಿರಾಸೆ ಸಾಧ್ಯತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್

    ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್

    ಮಂಡ್ಯ: ಚಿಂತಕ ಪ್ರೊ. ಕೆ.ಎಸ್.ಭಗವಾನ್ (Prof KS Bhagwan) ಇದೀಗ ಮತ್ತೆ ಆದರ್ಶ ಪುರುಷ ರಾಮನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ರಾಜ್ಯ ಎಂದು ದೇಶದಲ್ಲಿ ಕಥೆ ಕಟ್ಟಿದ್ದಾರೆ. ರಾಮ ರಾಜ್ಯ ಮಾತು ಹರಡಲು ಮಹಾತ್ಮ ಗಾಂಧೀಜಿ (Mahatma Gandhiji) ಅವರೇ ಕಾರಣ. ವಾಲ್ಮೀಕಿ ರಾಮಾಯಣ (Valmiki Ramayana) ಓದಿ ಉತ್ತರ ಕಾಂಡದಲ್ಲಿ ಓದಿದ್ರೆ ರಾಮ ರಾಜ್ಯಕ್ಕೆ ಅರ್ಥ ಇಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ರಾಜ್ಯ ರಾಜ್ಯಭಾರ ಮಾಡಿಲ್ಲ ಎಂದು ಹೇಳಿದ್ದಾರೆ.

    ಪುರೋಹಿತರ ಜೊತೆ ಕೂತು ಆ ಕಥೆ ಈ ಕಥೆ ಎಂದು ರಾಮ ಹರಟೆ ಹೊಡೆಯುತ್ತಿದ್ದ. ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ರಾಮ ಹೆಂಡ ಕುಡಿಯುತ್ತಿದ್ದ. ಸೀತೆಗೂ ರಾಮ ಹೆಂಡ ಕುಡಿಸುತ್ತಿದ್ದ. ವಾಲ್ಮೀಕಿ ರಾಮಾಯಣ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇವೆ. ರಾಮ ರಾಜ್ಯಭಾರ ಮಾಡಿದ್ದು 11 ವರ್ಷ. ಇದರಲ್ಲಿ ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸಿದ. ಸೀತೆಗೆ ಮಾತನಾಡಲು ರಾಮ ಬಿಡಲಿಲ್ಲ. ಲಕ್ಷ್ಮಣನನ್ನು ರಾಮ ಗಡಿಪಾರು ಮಾಡಿದ ಎಂದರು. ಇದನ್ನೂ ಓದಿ: ಸಿದ್ದು ಸೋಲಿಸಲು ಅಖಾಡಕ್ಕಿಳಿದ ಬಿಎಲ್‌ ಸಂತೋಷ್‌

    ಸರಯೂ ನದಿಯ ದಡಲ್ಲಿ ಅತ್ತುಕೊಂಡು ಲಕ್ಷ್ಮಣ ಸತ್ತು ಹೋದ. ಶೂದ್ರನ ತಲೆಯನ್ನು ರಾಮ ಕಡಿದಿದ್ದಾನೆ. ರಾಮನನ್ನು ಆದರ್ಶ ದೊರೆ ಎಂದು ಕರೆಯಲು ಹೇಗೆ ಸಾಧ್ಯ. ನಮ್ಮ ಜನರಿಗೆ ಸತ್ಯ ಗೊತ್ತಿಲ್ಲದೆ ಮಕ್ಕಳಿಗೆ ರಾಮ ಎಂದು ಹೆಸರಿಟ್ಟಿದ್ದಾರೆ. ಹೆಣ್ಣು ಮಕ್ಕಳು ರಾಮ ರಾಮ ಅಂತಾರೆ, ರಾಮ ತನ್ನ ಹೆಂಡತಿಯನ್ನು ಕಾಡಿಗೆ ಕಳಿಸಿದವ ಎಂದು ಭಗವಾನ್ ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಗವಾನ್ ಮುಖಕ್ಕೆ ಮಸಿ ಪ್ರಕರಣ- ಮೀರಾಗೆ ಜಾಮೀನು ನೀಡಲು ಮುಂದಾದ ಬಿಜೆಪಿ ಕಾರ್ಯಕರ್ತ

    ಭಗವಾನ್ ಮುಖಕ್ಕೆ ಮಸಿ ಪ್ರಕರಣ- ಮೀರಾಗೆ ಜಾಮೀನು ನೀಡಲು ಮುಂದಾದ ಬಿಜೆಪಿ ಕಾರ್ಯಕರ್ತ

    ಮಂಡ್ಯ: ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಕೀಲೆ ಮೀರಾ ರಾಘವೇಂದ್ರ ಅವರಿಗೆ ಜಾಮೀನು ನೀಡಲು ಬಿಜೆಪಿ ಕಾರ್ಯಕರ್ತರೊಬ್ಬರು ಮುಂದಾಗಿದ್ದಾರೆ.

    ಶಿವಕುಮಾರ್ ಆರಾಧ್ಯ, ಜಾಮೀನು ನೀಡಲು ಮುಂದಾದ ಬಿಜೆಪಿ ಕಾರ್ಯಕರ್ತ. ಪದೇ ಪದೇ ಪ್ರೊ.ಕೆ.ಎಸ್.ಭಗವಾನ್ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಲೆ ಬರುತ್ತಿದ್ದಾರೆ. ಇದುವರೆಗೂ ಭಗವಾನ್ ಅವರಿಗೆ ಯಾರು ಕೂಡ ತಕ್ಕ ಶಾಸ್ತಿ ಮಾಡಿರಲಿಲ್ಲ. ಇದೀಗ ವಕೀಲೆ ಮೀರಾ ರಾಘವೇಂದ್ರ ಅವರು ಮಸಿ ಬಳಿಯುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಇದಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಶಿವಕುಮಾರ್ ಆರಾಧ್ಯ ಹೇಳಿದ್ದಾರೆ.

    ಭಗವಾನ್‍ಗೆ ಮಸಿ ಬಳಿದಿರುವ ಕಾರಣದಿಂದ ಪೊಲೀಸ್ ಠಾಣೆಯಲ್ಲಿ ಮೀರಾ ರಾಘವೇಂದ್ರ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹೀಗಾಗಿ ನಾನು ಮೀರಾ ರಾಘವೇಂದ್ರ ಅವರಿಗೆ ನನ್ನ ಸ್ವತಃ ಜಮೀನಿನ ಆರ್‍ಟಿಸಿಯನ್ನು ನೀಡುವ ಮೂಲಕ ಜಾಮೀನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಹಿಂದೂ ಧರ್ಮವೆಂಬುದೆ ಇಲ್ಲ. ಹಿಂದೂ ಧರ್ಮ ಅವಮಾನಕಾರ. ಮಾನ ಮರ್ಯಾದೆ ಇದ್ದವರು ಹಿಂದೂ ಧರ್ಮ ಬಳಸಬಾರದು ಎಂದು ಭಗವಾನ್ ಹೇಳಿಕೆ ನೀಡಿದ್ದರು. ಈ ಸಂಬಂಧ 2020ರ ಅಕ್ಟೋಬರ್ 10 ರಂದು ಭಗವಾನ್ ವಿರುದ್ಧ ಮೀರಾ ರಾಘವೇಂದ್ರ ಕ್ರಿಮಿನಲ್ ಕೇಸ್ ಹೂಡಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭಗವಾನ್‍ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.

    ಗುರುವಾರ ಈ ಪ್ರಕರಣ ಸಂಬಂಧ ಜಾಮೀನು ವಿಚಾರಣೆಗೆ ಭಗವಾನ್ ಕೋರ್ಟಿಗೆ ಆಗಮಿಸಿದ್ದರು. ಈ ವೇಳೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಇಷ್ಟು ವಯಸ್ಸು ಆಗಿದೆ. ಇನ್ನು ನಾಚಿಕೆಯಾಗಲ್ವಾ? ರಾಮನ ಬಗ್ಗೆ ಧರ್ಮದ ಬಗ್ಗೆ ಮಾತಾನಾಡ್ತೀರಾ ಅಂತಾ ಮಸಿ ಬಳಿದು ಮೀರಾ ಅವಾಜ್ ಹಾಕಿದ್ದಾರೆ. ನಾನು ಏನೇ ಬಂದ್ರೂ ಎದುರಿಸಲು ರೆಡಿ ಎಂದು ಮೀರಾ ಹೇಳಿದ್ದರು.

    ಬುದ್ಧಿಜೀವಿ, ಧರ್ಮ ವಿರೋಧಿ ಪ್ರೊ ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. ಜೈಶ್ರೀರಾಮ್ ಎಂದು ಮೀರಾ ರಾಘವೇಂದ್ರ ಟ್ವೀಟ್ ಮಾಡಿ ವೀಡಿಯೋ ಅಪ್ಲೋಡ್ ಮಾಡಿದ್ದರು.

    ಇತ್ತ ಘಟನೆ ಸಂಬಂಧ ಮೀರಾ ವಿರುದ್ಧ ಸಾಹಿತಿ ಭಗವಾನ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯವುದು), 504(ಅವಾಚ್ಯವಾಗಿ ನಿಂದನೆ)ಅಡಿ ಪ್ರಕರಣ ದಾಖಲಾಗಿದೆ.

  • ಕುಸಿದು ಬಿದ್ದ ಪ್ರೊ. ಕೆ.ಎಸ್.ಭಗವಾನ್ – ಆಸ್ಪತ್ರೆಗೆ ದಾಖಲು

    ಕುಸಿದು ಬಿದ್ದ ಪ್ರೊ. ಕೆ.ಎಸ್.ಭಗವಾನ್ – ಆಸ್ಪತ್ರೆಗೆ ದಾಖಲು

    ಮೈಸೂರು: ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪ್ರೊ. ಕೆ.ಎಸ್.ಭಗವಾನ್ ಅವರು ಇಂದು ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಹಾಗೂ ಆಪ್ತರು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮೈಸೂರಿನ ಕುವೆಂಪು ನಗರದಲ್ಲಿ ವಾಸವಿರುವ ಪ್ರೊ. ಕೆ.ಎಸ್. ಭಗವಾನ್ ಅವರು ಒಬ್ಬ ವಿಮರ್ಶಕ, ಅನುವಾದಕ ಹಾಗೂ ಚಿಂತಕರಾಗಿದ್ದು ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಸರಳ ಮದುವೆ ಚಳವಳಿಯಲ್ಲಿ ನೂರಾರು ವಿವಾಹಗಳನ್ನು ನೆರವೇರಿಸಿದ್ದಾರೆ.

    ಭಗವಾನ್ ಹಿಂದೂ ಧರ್ಮವನ್ನು, ಹಿಂದೂ ಧರ್ಮ ದೇವತೆಗಳನ್ನು, ಪುರಾಣಗಳನ್ನು, ಭಗವದ್ಗೀತೆಯನ್ನು, ಪೂಜಾಸ್ಥಳಗಳನ್ನು ಕಟುವಾಗಿ ಟೀಕಿಸಿ ಅನೇಕ ಬಾರಿ ವಿವಾದಕ್ಕೆ ಗುರಿಯಾಗಿದ್ದಾರೆ. “ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ” ಎಂದು ಪ್ರೊ.ಭಗವಾನ್ ಅವರು ಹೇಳಿಕೆ ನೀಡಿ ಹಿಂದೂಗಳ ಕೋಪಕ್ಕೆ ಗುರಿಯಾಗಿದ್ದರು.

  • ಶೂದ್ರ ಅಂದ್ರೆ ಸೂಳೆಮಕ್ಕಳು ಎಂದರ್ಥ ಅಂತ ಮನುಸ್ಮೃತಿಯಲ್ಲಿದೆ – ಕೆ. ಎಸ್ ಭಗವಾನ್

    ಶೂದ್ರ ಅಂದ್ರೆ ಸೂಳೆಮಕ್ಕಳು ಎಂದರ್ಥ ಅಂತ ಮನುಸ್ಮೃತಿಯಲ್ಲಿದೆ – ಕೆ. ಎಸ್ ಭಗವಾನ್

    ಮಂಡ್ಯ: ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ ಕೆ.ಎಸ್ ಭಗವಾನ್ ಮನುಸ್ಮೃತಿ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ರಾಮ ಹಾಗೂ ರಾಮ ಮಂದಿರ ನಿರ್ಮಾಣದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಕೆ.ಎಸ್ ಭಗವಾನ್, ಹಿಂದೂ ಧರ್ಮ ಉಳಿಬೇಕು ಅಂದ್ರೆ ಮೊದಲು ಶೂದ್ರ ಎಂಬ ಪದವನ್ನು ಮನುಸ್ಮೃತಿಯಿಂದ ತೆಗೆದು ಹಾಕಬೇಕು. ಶೂದ್ರ ಅಂದ್ರೆ ಬರೀ ಗುಲಾಮ ಅಂತಷ್ಟೇ ಅರ್ಥವಲ್ಲ. ಮನುಸ್ಮೃತಿಯಲ್ಲಿ ಶೂದ್ರ ಎಂದರೆ ಸೂಳೆಮಕ್ಕಳು ಎಂದರ್ಥ. ಅಂತಹ ಅಸಭ್ಯ ಪದ ನಮಗೆ ಬೇಕಾ? ಅದು ನಮಗೆ ಗೌರವ ತರುತ್ತಿದೆಯಾ? ಅಂತಹ ಮನುಸ್ಮೃತಿಯನ್ನು ಬಿಜೆಪಿಯವರು ತರುತ್ತೇನೆ ಅಂತಾರೆ, ಅದನ್ನು ಒಪ್ಪಿಕೊಳ್ತೀರಾ ಎಂದು ಪ್ರಶ್ನಿಸಿದ್ದಾರೆ.

    ಕಳೆದ ಎರಡು ವರ್ಷಗಳಿಂದ ನಾನು ವಾಲ್ಮೀಕಿ ರಾಮಾಯಣ ಅಧ್ಯಯನ ಮಾಡಿ `ರಾಮ ಮಂದಿರ ಏಕೆ ಬೇಡ’ ಎಂಬ ಪುಸ್ತಕವನ್ನು ಬರೆದಿದ್ದೇನೆ. ಅದನ್ನು ಓದಿದರೇ, ರಾಮ ಜನಸಾಮಾನ್ಯರಿಗೆ ವಿರುದ್ಧವಾಗಿದ್ದ ಎಂಬುದು ನಮಗೆ ಗೊತ್ತಾಗುತ್ತೆ. ರಾಮ ಚತುರ್ವರ್ಣದ ಪ್ರತಿನಿಧಿಯಾಗಿ ಅದನ್ನು ಉದ್ಧಾರ ಮಾಡಲು ರಾಮಾಯಣದಲ್ಲಿ ಗುರುತಿಸಿಕೊಂಡ. ಅವನು ನಿಜವಾದ ಮನುಷ್ಯನಲ್ಲ, ದೇವರಂತೂ ಅಲ್ಲವೇ ಅಲ್ಲ. ರಾಮನನ್ನು ದೇವರು ಎಂದು ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ದೇವರು ಅಂತಾ ಯಾರಿಗೆ ಅನುಕೂಲವಾಯ್ತೋ, ಅಂತ ಪುರೋಹಿತರು ರಾಮ, ಕೃಷ್ಣನನ್ನು ದೇವರೆಂದು ಮಾಡಿಕೊಂಡಿದ್ದಾರೆ ಎಂದು ರಾಮನ ವಿರುದ್ಧ ಕಿಡಿಕಾರಿದರು.

    ಈ ದೇಶದಲ್ಲಿ ಶೇ.95 ರಷ್ಟು ಶೂದ್ರರಿದ್ದಾರೆ. ಅವರನ್ನೆಲ್ಲಾ ನೀವು ಗುಲಾಮರು, ಸೂಳೆಮಕ್ಕಳು ಎಂದರೆ ಒಪ್ಪುತ್ತೀರಾ? ಮನುಸ್ಮೃತಿಯ 8ನೇ ಅಧ್ಯಾಯ 415ನೇ ಶ್ಲೋಕದಲ್ಲಿ ಈ ವಿಚಾರವಿದೆ. ಜನರು ಇದನ್ನೆಲ್ಲ ತಿಳಿಯಬೇಕು ಎಂದು ಹೇಳುತ್ತಿದ್ದೇನೆ. ನನಗೆ ಗುಂಡಿಕ್ಕಿದರೂ ಇದನ್ನೆಲ್ಲ ತಿಳಿಸಿಯೇ ತಿಳಿಸುತ್ತೇನೆ. ನಾನು ಹೇಳುವುದು ವಿವಾದವಾದರು ಪರವಾಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆದಿಚುಂಚನಗಿರಿ ಮಠಕ್ಕೆ ಪ್ರೊ.ಕೆ.ಎಸ್ ಭಗವಾನ್ ಭೇಟಿ

    ಆದಿಚುಂಚನಗಿರಿ ಮಠಕ್ಕೆ ಪ್ರೊ.ಕೆ.ಎಸ್ ಭಗವಾನ್ ಭೇಟಿ

    ಮಂಡ್ಯ: ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಪ್ರೊ.ಕೆ.ಎಸ್ ಭಗವಾನ್ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

    ಟಿಪ್ಪು ಓರ್ವ ಜಾತ್ಯಾತೀತ ರಾಜ. ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ. ತನ್ನ ಆಳ್ವಿಕೆಯಲ್ಲಿ ಎಲ್ಲಾ ಸಮುದಾಯವನ್ನು ಟಿಪ್ಪು ಸಮನಾಗಿ ಕಂಡಿದ್ದಾನೆ. ಆತ ಯಾವ ಸಮುದಾಯಕ್ಕೂ ತೊಂದರೆ ಕೊಟ್ಟವನಲ್ಲ. ಆದರೆ ರಾಜಕೀಯಕ್ಕಾಗಿ ಟಿಪ್ಪು ಜಯಂತಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಭಗವಾನ್ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

    ಟಿಪ್ಪು ಸುಲ್ತಾನ್ ಸಾಧನೆ ಅಪಾರ, ಆತ ಮೈಸೂರು ರಾಜರಿಗಿಂತ ಮೊದಲೇ ಕೆ.ಆರ್.ಎಸ್ ಅಣೆಕಟ್ಟೆ ಕಟ್ಟಲು ಚಿಂತಿಸಿದ್ದ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸಾಯದಿದ್ದರೆ ಅಂದೇ ಅಣೆಕಟ್ಟೆ ನಿರ್ಮಾಣವಾಗ್ತಿತ್ತು. ಆಗ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ಯಾಕೆಂದರೆ ಟಿಪ್ಪು ಸುಲ್ತಾನ್ ಆಳ್ವಿಕೆ ಸಮಯದಲ್ಲಿ ಆತನ ಕೈಕೆಳಗೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಿತ್ತು ಎಂದು ತಿಳಿಸಿದರು.

    ನಾನು ಬಾಲಗಂಗಾಧರ ನಾಥ ಸ್ವಾಮೀಜಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ಅದಕ್ಕಾಗಿಯೇ ಈಗಲೂ ಮಠದವರ ಜೊತೆ ಉತ್ತಮ ಒಡನಾಟ ಇದೆ, ಹಾಗಾಗಿ ಎಡಪಂಥೀಯ ವಿಚಾರವಾದಿಯಾಗಿದ್ದರೂ ಮಠಕ್ಕೆ ಬಂದಿದ್ದೇನೆ. ಆದರೆ ದೇವಾಲಯಕ್ಕೆ ನಾನು ಭೇಟಿ ನೀಡುವುದಿಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರಿನಲ್ಲಿ ಪ್ರಗತಿಪರರಿಂದ ಮಹಿಷಾ ದಸರಾ!- ವಿಡಿಯೋ ನೋಡಿ

    ಮೈಸೂರು: ದಸರಾ ತಯಾರಿ ದಿನದಿಂದಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಗತಿಪರ ಒಕ್ಕೂಟಗಳಿಂದ ಮಹಿಷ ದಸರಾವನ್ನು ಇಂದು ಅದ್ಧೂರಿಯಾಗಿ ಆಚರಿಸಿ, ಮಹಿಷ ಒಬ್ಬ ಜನಪರ ನಾಯಕ. ಆದರೆ ಇತಿಹಾಸಲ್ಲಿ ಆತನ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಮೈಸೂರಿನ ಪುರಭವನದಿಂದ ಆಕರ್ಷಕ ರಥದಲ್ಲಿ ಮಹಿಷಾಸುರ ಭಾವಚಿತ್ರ ಮೆರವಣಿಗೆ ಮಾಡಿದ ಪ್ರಗತಿಪರರು, ವಿವಿಧ ಕಲಾತಂಡಗಳೊಂದಿಗೆ ನಗರದ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಸೇರಿದಂತೆ ಸಾಹಿತಿಗಳಾದ ಪ್ರೊ.ಮಹೇಶ್‍ಚಂದ್ರ ಗುರು, ಪ್ರೊ.ಕೆ.ಎಸ್ ಭಗವಾನ್, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗಿಯಾದ್ದರು.

    ಪುರಭವನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಸಾಗಿ ಚಾಮುಂಡಿ ಬೆಟ್ಟ ತಲುಪಿ, ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಮೆರವಣಿಗೆ ಚಾಮುಂಡಿ ಬೆಟ್ಟ ತಲುಪಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ಮಹಿಷ ಜನಪರವಾಗಿದ್ದ, ಆದರೆ ಇತಿಹಾಸದಲ್ಲಿ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಕಳೆದ 7 ವರ್ಷಗಳಿಂದ ಮಹಿಷ ದಸರಾವನ್ನು ಆಚರಿಸಲಾಗುತ್ತಿದೆ. ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಅನೇಕ ಚಿಂತಕರ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರ ಆಯೋಜನೆ ಮಾಡಲಾಗಿದೆ. ಅವರ ವಿಚಾರಗಳನ್ನು ನಾನು ಪ್ರೋತ್ಸಾಹಿಸುತ್ತಾ ಬಂದಿರುವೆ ಎಂದು ಹೇಳಿದರು.

    ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ವಲಸೆ ಸಂಸ್ಕೃತಿಯವರು ಉದ್ದೇಶಪೂರ್ವಕವಾಗಿ ನಮ್ಮ ಸಂಸ್ಕೃತಿಯ ಮೂಲ ಪ್ರತಿಪಾದಕ ಮಹಿಷನನ್ನು ರಾಕ್ಷಸ ಅಂತಾ ಮಾಡಿ, ಇವರೇ ರಾಕ್ಷಸರಾದರು. ಮಹಿಷ ಕೆಟ್ಟ ಮನುಷ್ಯನಾಗಿದ್ದರೆ ಅವನ ಹೆಸರನ್ನು ಈ ಪ್ರದೇಶಕ್ಕೆ ಇಡುತ್ತಿರಲಿಲ್ಲ. ಕೆಟ್ಟ ವ್ಯಕ್ತಿಯ ಹೆಸರನ್ನು ಊರಿಗೆ, ಪ್ರದೇಶಕ್ಕೆ ಇಡುವುದನ್ನು ಎಲ್ಲಿಯೂ ಕೇಳಿಲ್ಲ. ಮಹಿಷ ರಾಜನಾಗಿದ್ದವನು, ಆದರೆ ಆತನ ಬಗ್ಗೆ ಇತಿಹಾಸದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/rCdHN3PwRNQ