ಬೆಂಗಳೂರು: ಪ್ರೊ ಕಬಡ್ಡಿ 9ನೇ ಸೀಸನ್‍ನಲ್ಲಿ (Pro Kabaddi Season 9) ಅತಿಥೇಯ ಬೆಂಗಳೂರು ಬುಲ್ಸ್ (Bengaluru Bulls) ತಂಡ ತೆಲುಗು ತೈಟಾನ್ಸ್ (Telugu Titans) ವಿರುದ್ಧ 34-29 ಅಂಕಗಳ ಅಂತರದಿಂದ ಗೆದ್ದು ಶುಭಾರಂಭ ಕಂಡಿದೆ.
ಬೆಂಗಳೂರು ಬುಲ್ಸ್ ಒಟ್ಟು 15 ರೈಡ್, 12 ಟೇಕಲ್, 4 ಅಲೌಟ್ ಮತ್ತು ಇತರ 3 ಅಂಕಗಳಿಂದ 34 ಅಂಕ ಗಳಿಸಿತು. ಅತ್ತ ಉತ್ತಮ ಹೋರಾಟ ನೀಡಿದ ತೆಲುಗು ಟೈಟಾನ್ಸ್ 18 ರೈಡ್, 7 ಟೇಕಲ್, 2 ಅಲೌಟ್, 2 ಇತರ ಅಂಕ ಸಹಿತ 29 ಅಂಕ ಕಲೆ ಹಾಕಿ 5 ಅಂಕಗಳಿಂದ ಸೋಲುಂಡಿತು. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ
ಬೆಂಗಳೂರು ಪರ ನೀರಜ್ ನರ್ವಾಲ್ 7 ಮತ್ತು ಭರತ್ ಮತ್ತು ವಿಕಾಸ್ ಖಂಡೋಲ ತಲಾ 5 ಅಂಕ ಕಲೆಹಾಕಿ ಗೆಲುವಿನ ರೂವಾರಿಯಾದರು. ಟೈಟಾನ್ಸ್ ಪರ ರಜನೀಶ್ ಮತ್ತು ವಿನಯ್ ತಲಾ 7 ಅಂಕ ಕಲೆ ಹಾಕಿ ಮಿಂಚಿದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಒಂದು ಕಡೆ ಟಿ20 ವಿಶ್ವಕಪ್ (T20 World Cup) ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಪ್ರೊ ಕಬಡ್ಡಿ 9ನೇ ಸೀಸನ್ (Pro Kabaddi Season 9) ಇಂದಿನಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava Indoor Stadium in Bengaluru) ಆರಂಭವಾಗುತ್ತಿದೆ. ಈ ಮೂಲಕ ಕ್ರೀಡಾ ಪ್ರಿಯರಿಗೆ ಮುಂದಿನ 4 ತಿಂಗಳುಗಳ ಕಾಲ ಹಬ್ಬದ ವಾತಾವರಣ.
ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಫೀವರ್ ಆರಂಭವಾದರೆ, ಸಿಲಿಕಾನ್ ಸಿಟಿಯಲ್ಲಿ ಖೇಲ್ ಕಬಡ್ಡಿ ಕಲರವ ಕೇಳಿಬರಲಿದೆ. ಪ್ರೊ ಕಬಡ್ಡಿ 8ನೇ ಸೀಸನ್ ಕೊರೊನಾದಿಂದಾಗಿ (Corona) ಮುಚ್ಚಿದ ಸ್ಟೇಡಿಯಂನಲ್ಲಿ ನಡೆದಿತ್ತು. ಇದೀಗ 3 ವರ್ಷಗಳ ಬಳಿಕ ವೀಕ್ಷಕರಿಗೆ ಪ್ರವೇಶ ಮುಕ್ತವಾಗುತ್ತಿದೆ. ಹೀಗಾಗಿ ದೇಸಿ ಕ್ರೀಡೆ ಕಬಡ್ಡಿ ಕ್ರೇಜ್ ಹೆಚ್ಚಾಗಿದೆ. ಇದನ್ನೂ ಓದಿ: 22 ಸಿಕ್ಸ್, 17 ಬೌಂಡರಿ – ಟಿ20ಯಲ್ಲಿ ಬರೋಬ್ಬರಿ 205 ರನ್ ಬ್ಲ್ಯಾಸ್ಟ್
ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಾವಳಿ ಬೆಂಗಳೂರು ಸೇರಿದಂತೆ 3 ಕೇಂದ್ರಗಳಲ್ಲಿ ನಡೆಯಲಿದೆ. ಬೆಂಗಳೂರು, ಪುಣೆ ಮತ್ತು ಹೈದರಾಬಾದ್‍ನಲ್ಲಿ ಈ ಬಾರಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಕಳೆದ ವರ್ಷ ಬೆಂಗಳೂರಿನಲ್ಲೇ ಪ್ರೊ ಕಬಡ್ಡಿ ನಡೆದಿದ್ದರೂ, ಬಯೋ ಬಬಲ್‍ನಲ್ಲಿ ನಡೆದಿತ್ತು. ಹಾಗಾಗಿ ಆರಂಭದಲ್ಲಿ ಮಾಧ್ಯಮಗಳಿಗೂ ಪ್ರವೇಶ ನೀಡಿರಲಿಲ್ಲ. ಇದೀಗ ಮಾಧ್ಯಮಗಲೂ ಸೇರಿದಂತೆ ಅಭಿಮಾನಿಗಳಿಗೂ ಪ್ರವೇಶವಿರುವ ಬಗ್ಗೆ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ತಿಳಿಸಿದೆ. ಜೊತೆಗೆ ಒಂದೇ ದಿನ ಮೂರು ಪಂದ್ಯಗಳು ಕೂಡ ಕೆಲದಿನಗಳಲ್ಲಿ ನಡೆಯಲಿದೆ. ಇದನ್ನೂ ಓದಿ: ಕೊನೆಯಲ್ಲಿ ಸ್ಯಾಮ್ಸನ್ ಸಿಕ್ಸರ್, ಬೌಂಡರಿ ಆಟ – ಭಾರತಕ್ಕೆ ವಿರೋಚಿತ ಸೋಲು, ಆಫ್ರಿಕಾಗೆ 9 ರನ್ ಜಯ
ಕರ್ನಾಟಕದ ಬೆಂಗಳೂರು ಬುಲ್ಸ್ (Bengaluru Bulls), ಬೆಂಗಾಲ್ ವಾರಿಯರ್ಸ್ (Bengal Warriors), ಜೈಪುರ್ ಪಿಂಕ್ ಫ್ಯಾಂಥರ್ಸ್ (Jaipur Pink Panthers), ಪುಣೇರಿ ಪಲ್ಟನ್ (Puneri Paltan), ಯು ಮುಂಬಾ (U Mumba), ಯೂಪಿ ಯೋಧಾ (U.P. Yodha), ತಮಿಳ್ ತಲೈವಾಸ್ (Tamil Thalaivas), ಹರಿಯಾಣ ಸ್ಟೀಲರ್ಸ್ (Haryana Steelers), ದಬಾಂಗ್ ಡೆಲ್ಲಿ (Dabang Delhi), ಪಾಟ್ನಾ ಪೈರೇಟ್ಸ್ (Patna Pirates), ತೆಲುಗು ಟೈಟಾನ್ಸ್ (Telugu Titans), ಗುಜಾರಾತ್ ಫಾರ್ಚೂನ್‍ಜೈಂಟ್ಸ್ (Gujarat Giants) ಸೇರಿ ಒಟ್ಟು 12 ತಂಡಗಳ ಈ ಬಾರಿ 9ನೇ ಸೀಸನ್ ಪ್ರಶಸ್ತಿಗಾಗಿ ಕಾದಾಡಲಿವೆ. ಲೀಗ್ ಹಂತದ 132 ಪಂದ್ಯಗಳಿಗೆ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಆತಿಥ್ಯವಹಿಸಲಿದೆ. ಮೊದಲ 41 ಪಂದ್ಯಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿವೆ. ಆ ಬಳಿಕ ಪುಣೆ ನಂತರ ಹೈದರಾಬಾದ್‍ಗೆ ಲೀಗ್ ಸ್ಥಳಾಂತರಗೊಳ್ಳಲಿದೆ. ಲೀಗ್ ಬಳಿಕ ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇಆಫ್‍ಗೇರಲಿವೆ. ಪ್ಲೇಆಫ್‍ನಲ್ಲಿ 2 ಎಲಿಮಿನೇಟರ್, 2 ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ನೆಟ್ಸ್‌ನಲ್ಲಿ ಬೆವರಿಳಿಸಿದ ಬ್ಯೂಟಿ – ಶಹಬ್ಬಾಸ್‌ಗಿರಿ ನೀಡಿ ಫ್ಯಾನ್ಸ್ ಕ್ಲೀನ್ ಬೌಲ್ಡ್
ಬುಲ್ಸ್‌ನಲ್ಲಿಲ್ಲ ಪವನ್ ಶೆರಾವತ್:
ಆತಿಥೇಯ ಬೆಂಗಳೂರು ಬುಲ್ಸ್ ಸ್ಟಾರ್ ಆಟಗಾರ ಪವನ್ ಶೆರಾವತ್ ಈ ಬಾರಿ ತಂಡದಲ್ಲಿಲ್ಲ. ಈ ಬಾರಿಯ ಹರಾಜಿನಲ್ಲಿ ಶೆರಾವತ್ ತಮಿಳ್ ತಲೈವಾಸ್ ಪಾಲಾಗಿದ್ದಾರೆ. ಬುಲ್ಸ್ ನೂತನ ನಾಯಕ ವಿಕಾಸ್ ಖಂಡೋಲ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ.
8 ಆವೃತ್ತಿಗಳ ಚಾಂಪಿಯನ್ಸ್:
2014ರ ಮೊದಲ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರಶಸ್ತಿ ಗೆದ್ದರೆ, 2015ರಲ್ಲಿ ಯು ಮುಂಬಾ, ಮೂರು, ನಾಲ್ಕು ಮತ್ತು ಐದನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್, 6ನೇ ಅವೃತ್ತಿಯಲ್ಲಿ ಬೆಂಗಳೂರು ಬುಲ್ಸ್, 7ನೇ ಅವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು 8ನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ ಪ್ರೋ ಕಬಡ್ಡಿ ಫೈನಲ್ ಪಂದ್ಯದಲ್ಲಿ ಕಡೆಯ ಸೆಕೆಂಡ್‍ನಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 36 – 37, 1 ಅಂಕದ ಮುನ್ನಡೆಯಿಂದ ವಿಜಯ ಪತಾಕೆ ಹಾರಿಸಿದ ದಬಾಂಗ್ ಡೆಲ್ಲಿ ಚಾಂಪಿಯನ್ ಆಗಿದೆ.
4 ಬಾರಿ ಫೈನಲ್ ಪ್ರವೇಶಿಸಿದ ಪಾಟ್ನಾಗೆ ಫೈನಲ್ ಪಂದ್ಯದಲ್ಲಿ ಡೆಲ್ಲಿ ಟಕ್ಕರ್ ನೀಡಿದೆ. ಡೆಲ್ಲಿಯ ವಿಜಯ್ ಮಲಿಕ್ ಮತ್ತು ನವೀನ್ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ಕುಮಾರ್ ಭರ್ಜರಿ ರೈಡ್ ಮೂಲಕ ಪಾಟ್ನಾಗೆ ಪಂಚ್ ನೀಡಿದರು. ಕೊನೆಯ ಸೆಕೆಂಡ್ ವರೆಗೆ ರೋಚಕವಾಗಿ ಕೂಡಿದ ಪಂದ್ಯದಲ್ಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಯಿತು. ಎರಡು ತಂಡಗಳು ಕೂಡ ಬಲಿಷ್ಠ ಕಾದಾಟ ನಡೆಸಿ ಪ್ರಶಸ್ತಿಗೆ ಮುತ್ತಿಕ್ಕುವ ಕನಸಿನಲ್ಲಿತ್ತು. ಈ ಕನಸನ್ನು ಡೆಲ್ಲಿ ನನಸು ಮಾಡಿಕೊಂಡಿತು. ಇದನ್ನೂ ಓದಿ: ಮಾರ್ಚ್ 26ಕ್ಕೆ ಐಪಿಎಲ್ ಆರಂಭ ಮೇ 29ಕ್ಕೆ ಫೈನಲ್ – 2 ನಗರಗಳಲ್ಲಿ 70 ಪಂದ್ಯ
ಡೆಲ್ಲಿ ಪರ ವಿಜಯ್ ಮಲಿಕ್ 8 ರೈಡ್, 1 ಟೇಕಲ್, 5 ಬೋನಸ್ ಸಹಿತ 14 ಅಂಕ ಮತ್ತು ನವೀನ್ ಕುಮಾರ್ 11 ರೈಡ್, 2 ಬೋನಸ್ ಅಂಕ ಸಹಿತ ಒಟ್ಟು 13 ಪಾಯಿಂಟ್ ಕಲೆಹಾಕಿ ಗೆಲುವಿನ ರೂವಾರಿಯಾದರು. ಇತ್ತ ಪಾಟ್ನಾ ಪರ ಸಚಿನ್ 7 ರೈಡ್, 1 ಟೇಕಲ್, 2 ಬೋನಸ್ ಸಹಿತ ಸೂಪರ್ 10 ಪೂರೈಸಿ ಮಿಂಚಿದರೂ ಆ ಹೋರಾಟ ವ್ಯರ್ಥವಾಯಿತು. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ
And we have our first time C.H.A.M.P.I.O.N.S. of #VIVOProKabaddi 🏆
ಪಾಟ್ನಾ ಪೈರೇಟ್ಸ್ 29 ರೈಡ್, 4 ಟೇಕಲ್, 2 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 36 ಅಂಕ ಕಲೆಹಾಕಿತು. ಡೆಲ್ಲಿ 27 ರೈಡ್, 2 ಸೂಪರ್ ರೈಡ್, 4 ಟೇಕಲ್, 2 ಆಲೌಟ್ ಮತ್ತು 4 ಇತರೆ ಅಂಕ ಸಹಿತ 37 ಅಂಕ ಸಂಪಾದಿಸಿ 1 ಅಂಕದ ಜಯ ದಾಖಲಿಸಿ ಪ್ರೊ ಕಬಡ್ಡಿ 8 ಆವೃತ್ತಿಯ ಪ್ರಶಸ್ತಿಗೆ ಮುತ್ತಿಕ್ಕಿತು.
ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಗುಜರಾತ್ ಪರ ಪ್ರದೀಪ್ ಕುಮಾರ್ 12 ರೈಡ್, 2 ಬೋನಸ್ ಸಹಿತ ಒಟ್ಟು 14 ಅಂಕ ಸಂಪಾದಿಸಿದರೆ, ಬುಲ್ಸ್ ಪರ ಪವನ್ ಶೆರವತ್ 10 ರೈಡ್, 2 ಬೋನಸ್ ಸಹಿತ 12 ಅಂಕ ಮತ್ತು ಭರತ್ 10 ರೈಡ್, 1 ಬೋನಸ್ ಸಹಿತ 11 ಅಂಕ ಕಲೆಹಾಕಿ ಮಿಂಚಿದರು. ಇದನ್ನೂ ಓದಿ: U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?
ಬೆಂಗಳೂರು 24 ರೈಡ್, 1 ಸೂಪರ್ ರೈಡ್, 8 ಟೇಕಲ್, 2 ಆಲೌಟ್, 2 ಇತರೆ ಅಂಕ ಸಹಿತ ಒಟ್ಟು 36 ಪಾಯಿಂಟ್ ಪಡೆದರೆ, ಗುಜರಾತ್ 23 ರೈಡ್, 1 ಸೂಪರ್ ರೈಡ್, 11 ಟೇಕಲ್, 2 ಆಲೌಟ್, 4 ಇತರೆ ಸಹಿತ ಒಟ್ಟು 40 ಪಾಯಿಂಟ್ ಸಂಪಾದಿಸಿ 4 ಅಂಕಗಳ ಅಂತರದ ಜಯ ಸಾಧಿಸಿದೆ.
ಬೆಂಗಳೂರು: ಕೊನೆಯ ಸೆಕೆಂಡ್‌ವರೆಗೆ ಗೆಲುವಿಗಾಗಿ ಹೋರಾಡಿದ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.
ಕಡೆಯ 1 ನಿಮಿಷಗಳಲ್ಲಿ ಎರಡು ತಂಡದ ಆಟಗಾರರ ನಡುವೆ ಜಿದ್ದಾಜಿದ್ದಿನ ಕಾಳಗ ರಂಗೇರಿತ್ತು. ಬೆಂಗಳೂರು ಬುಲ್ಸ್ ಪರ ಕೊನೆಯ ರೈಡ್ ಮಾಡಿದ ಪವನ್ ಶೆರವತ್ ಅವರನ್ನು ಡೆಲ್ಲಿ ತಂಡದ ಮಂಜಿತ್ ಚಿಲ್ಲರ್ ಬೇಟೆಯಾಡಿ ಒಂದಂಕ್ಕದ ಮುನ್ನಡೆಯಲ್ಲಿದ್ದ ಪಂದ್ಯವನ್ನು ಸಮಬಲಗೊಳಿಸಿದರು. ಅಂತಿಮವಾಗಿ 4 ಸೆಕೆಂಡ್‍ನ ಆಟ ಬಾಕಿ ಇತ್ತು ಡೆಲ್ಲಿ ಪರ ಕೊನೆಯ ರೈಡ್ ಮಾಡಿದ ನವೀನ್ ಕುಮಾರ್ ಯಾವುದೇ ಅಂಕ ಗಳಿಸದೆ ಹಿಂದಿರುಗಿ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಳ್ಳುವಂತೆ ನೋಡಿಕೊಂಡರು. ಇದನ್ನೂ ಓದಿ: Under-19 World Cup: ಫೈನಲ್‍ನಲ್ಲಿ ಟೀಂ ಇಂಡಿಯಾ ದಾಖಲೆ
ಬೆಂಗಳೂರು ಪರ ಪವನ್ ಶೆರವತ್ 11 ರೈಡ್, 1 ಟೇಕಲ್ ಮತ್ತು 5 ಬೋನಸ್ ಸಹಿತ 17 ಪಾಯಿಂಟ್ ಗಳಿಸಿದರೆ, ಡೆಲ್ಲಿ ಪರ ನವೀನ್ ಕುಮಾರ್ 11 ರೈಡ್, 2 ಬೋನಸ್ ಸಹಿತ 13 ಅಂಕ ಕಲೆಹಾಕಿದರು. ಇವರಿಬ್ಬರೂ ಕೂಡ ಸೂಪರ್ 10 ಸಾಧಿಸಿದರು. ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಡೆಲ್ಲಿ 21 ರೈಡ್, 11 ಟೇಕಲ್, 4 ಆಲೌಟ್ ಅಂಕ ಸಹಿತ ಒಟ್ಟು 36 ಪಾಯಿಂಟ್ ಗಳಿಸಿದರೆ, ಬೆಂಗಳೂರು, 21 ರೈಡ್, 9 ಟೇಕಲ್, 4 ಆಲೌಟ್ ಮತ್ತು 2 ಇತರೆ ಅಂಕ ಸಹಿತ 36 ಅಂಕ ಕಲೆಹಾಕಿ ಸಮಬಲ ಸಾಧಿಸಿತು. ಇದನ್ನೂ ಓದಿ: ಕೊನೆಯ ಎಸೆತದಲ್ಲಿ 5 ರನ್ ಗುರಿ – ಸಿಕ್ಸ್, ಫೋರ್ ಬಾರಿಸದೆ ಪಂದ್ಯ ಗೆದ್ದ ತಂಡ, ವೀಡಿಯೋ ವೈರಲ್!
ಬೆಂಗಳೂರು: ಯುಪಿ ಯೋಧರ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ.
ಎರಡು ತಂಡಗಳ ಬಲಿಷ್ಠ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 31-26 ಅಂಕಗಳಿಂದ ಪಂದ್ಯವನ್ನು 5 ಅಂಕಗಳ ಅಂತರದಿಂದ ಗೆದ್ದಿದೆ. ಎರಡೂ ತಂಡಗಳು ಕೂಡ ರೈಡಿಂಗ್ ಮತ್ತು ಟೇಕಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದವು, ಅಂತಿಮವಾಗಿ ಬುಲ್ಸ್ ಮೇಲುಗೈ ಸಾಧಿಸಿತು. ಇದೀಗ ಅಂಕಪಟ್ಟಿಯಲ್ಲಿ ಒಟ್ಟು 16 ಪಂದ್ಯಗಳಿಂದ 46 ಪಾಯಿಂಟ್ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಪಿಎಲ್ ಹರಾಜು – 590 ಆಟಗಾರರಿಗೆ ಫೈನಲ್ ಪಟ್ಟಿಯಲ್ಲಿ ಸ್ಥಾನ
ಬೆಂಗಳೂರು ಬುಲ್ಸ್ ಪರ ಪವನ್ ಶೆರವತ್ 6 ರೈಡ್, 3 ಬೋನಸ್ ಅಂಕ ಸಹಿತ 9 ಪಾಯಿಂಟ್ ಸಂಪಾದಿಸಿದರೆ, ಯುಪಿ ಯೋಧ ಪರ ನಿತೇಶ್ ಕುಮಾರ್ 6 ಟೇಕಲ್ ಅಂಕ ಪಡೆದು ಮಿಂಚಿದರು. ಬೆಂಗಳೂರು ಬುಲ್ಸ್ 14 ರೈಡ್, 15 ಟೇಕಲ್ ಮತ್ತು 2 ಆಲೌಟ್ ಸಹಿತ ಒಟ್ಟು 31 ಪಾಯಿಂಟ್ ಒಟ್ಟುಗೂಡಿಸಿದರೆ, ಯುಪಿ ಯೋಧ 13 ರೈಡ್, 13 ಟೇಕಲ್ ಸಹಿತ 26 ಅಂಕ ಗಳಿಸಿ 5 ಪಾಯಿಂಟ್‍ನಿಂದ ಸೋಲು ಕಂಡಿತು. ಇದನ್ನೂ ಓದಿ: ಧೋನಿ, ವಿಕ್ರಮ್ ಫೋಟೋ ವೈರಲ್
ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಪಂದ್ಯಾಟಕ್ಕೆ ಕೊರೊನಾ ಅಡ್ಡಿಯಾಗಿದೆ. 2 ತಂಡದ ಕೆಲ ಆಟಗಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮಶಾಲ್ ಸ್ಪೋರ್ಟ್ಸ್ ಆಯೋಜಕತ್ವದಲ್ಲಿ ವಿವೋ ಪ್ರೊ ಕಬಡ್ಡಿ 8ನೇ ಆವೃತ್ತಿ ಬೆಂಗಳೂರಿನ ವೈಟ್‍ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಹಾಗೂ ಕನ್ವೆನ್ಷನ್ ಸೆಂಟರ್‌ನಲ್ಲಿ ಕಠಿಣ ಬಯೋ ಬಬಲ್ ಮೂಲಕ ಟೂರ್ನಿ ನಡೆಯುತ್ತಿದೆ. ಆದರೆ ಇದೀಗ ಪಾಟ್ನಾ ಪೈರೇಟ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಕೆಲ ಆಟಗಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ 2 ತಂಡಗಳ ಕೆಲ ಪಂದ್ಯಗಳನ್ನು ಮುಂದೂಡಲಾಗಿದೆ. ಅಲ್ಲದೆ ಟೂರ್ನಿಯ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಿದೆ. ಇದನ್ನೂ ಓದಿ: ಅಮೆರಿಕದ ನ್ಯಾಷನಲ್ ಕ್ರಿಕೆಟ್ ಟೀಂನಲ್ಲಿ ಕಾಫಿನಾಡ ಪ್ರತಿಭೆ ನಾಸ್ತೋಶ್ ಕೆಂಜಿಗೆ
ಈ ಹಿಂದೆ ದಿನದಲ್ಲಿ ಒಟ್ಟು 2 ಪಂದ್ಯಗಳು ನಡೆಯುತ್ತಿತ್ತು. ಶನಿವಾರ ಮತ್ತು ಭಾನುವಾರ 3 ಪಂದ್ಯಗಳು ನಡೆಯುತ್ತಿತ್ತು. ಇಂದಿನಿಂದ ಮುಂದಿನ ಶುಕ್ರವಾರದ ವರೆಗೆ ಪ್ರತಿದಿನ ಕೇವಲ 1 ಪಂದ್ಯ ನಡೆಯಲಿದೆ. ಜೊತೆಗೆ ಶನಿವಾರ ಮತ್ತು ಭಾನುವಾರ 3 ಪಂದ್ಯಗಳ ಬದಲಾಗಿ 2 ಪಂದ್ಯಗಳು ನಡೆಯಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸ್ಮೃತಿ ಮಂಧಾನಗೆ ಐಸಿಸಿ ವಾರ್ಷಿಕ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಪ್ರಶಸ್ತಿ
Every team right now: Kadam kadam badhaye jaa, #SuperHitPanga mein top-6 ki taraf jaaye jaa!🚶
ಈವರೆಗೆ ಒಟ್ಟು 152 ಪಂದ್ಯಗಳು ನಡೆದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ 14 ಪಂದ್ಯಗಳಿಂದ 8 ಜಯ, 5 ಸೋಲು, 1 ಟೈ ಸೇರಿ ಒಟ್ಟು 46 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ, ಮೂರನೇ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ಇದೆ.
ಬುಲ್ಸ್ ಪರ 5 ರೈಡ್, 5 ಬೋನಸ್ ಅಂಕ ಸಹಿತ ಸೂಪರ್ 10 ಪಾಯಿಂಟ್ ಪಡೆದ ಪವನ್ ಕೊನೆಯ ಗಳಿಗೆಯಲ್ಲಿ ಎಡವಿದರು. ಅತ್ತ ಎದುರಾಳಿ ತಂಡದ ಮೋಹಿತ್ ಗೋಯಟ್ 10 ರೈಡ್, 3 ಟೇಕಲ್ ಸಹಿತ 13 ಅಂಕ ಸಂಪಾದಿಸಿ ಪಲ್ಟನ್ ಗೆಲುವಿನ ರೂವಾರಿಯಾದರು. ಬೆಂಗಳೂರು 24 ರೈಡ್, 8 ಟೇಕಲ್, 3 ಇತರೆ ಸಹಿತ 35 ಅಂಕ ಪಡೆದರೆ, ಪಲ್ಟನ್ 20 ರೈಡ್, 13 ಟೇಕಲ್, 4 ಆಲೌಟ್ ಸಹಿತ 37 ಪಾಯಿಂಟ್ ಪಡೆದು 2 ಅಂಕಗಳ ಜಯ ಸಾಧಿಸಿತು. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್
ಬೆಂಗಳೂರು: ಕ್ರಿಕೆಟ್‌ನಲ್ಲಿ ವಿವಾದಾತ್ಮಕ ತೀರ್ಪು ಆಯ್ತು ಈಗ ಪ್ರೊ ಕಬಡ್ಡಿಯಲ್ಲೂ ವಿವಾದಾತ್ಮಕ ತೀರ್ಪು ಪ್ರಕಟಗೊಂಡಿದ್ದು, ಬೆಂಗಳೂರು ಬುಲ್ಸ್ 1 ಅಂಕಗಳಿಂದ ವಿರೋಚಿತ ಸೋಲನ್ನು ಅನುಭವಿಸಿದೆ.
ಫಸ್ಟ್ ಆಫ್‍ನಲ್ಲಿ 13 – 14 ಪಾಯಿಂಟ್‍ಗಳಿಂದ 1 ಅಂಕಗಳ ಮುನ್ನಡೆಯನ್ನು ಬೆಂಗಾಲ್ ಪಡೆದುಕೊಂಡಿತ್ತು. ಬಳಿಕ ಸೆಕೆಂಡ್ ಆಫ್‍ನಲ್ಲಿ ತೀವ್ರ ಕುತೂಹಲ ಮೂಡಿಸಿದ ಕಾಳಗದಲ್ಲಿ ಒಂದು ಹಂತದಲ್ಲಿ ಬೆಂಗಾಲ್ ಇನ್ನೇನು ಆಲೌಟ್ ಆಗುವ ಸನ್ನಿವೇಶದಲ್ಲಿತ್ತು. ಈ ವೇಳೆ ಕೊನೆಯವರಾಗಿ ರೈಡ್ ಮಾಡಿದ ನಬಿಬಕ್ಷ್ ಒಂದೇ ರೈಡ್‍ನಲ್ಲಿ 8 ಅಂಕಗಳನ್ನು ಪಡೆದ ಪರಿಣಾಮ ತಿರುವು ಪಡೆದ ಪಂದ್ಯ ಅಂತಿಮ ಹಂತದ ವರೆಗೂ ರೋಚಕತೆ ಮೂಡಿಸಿ ಅಂತಿಮವಾಗಿ ಬುಲ್ಸ್ ವಿರುದ್ಧ ಬೆಂಗಾಲ್ 1 ಅಂಕಗಳ ಜಯ ಸಾಧಿಸಿತು. ಬೆಂಗಾಲ್ ಜಯ ಸಾಧಿಸುತ್ತಿದ್ದಂತೆ ಅಂಪೈರ್ ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಪಡೆದ ಬಳಿಕ ಅಜ್ಜನ ಭರ್ಜರಿ ಬ್ಯಾಟಿಂಗ್ – ವೀಡಿಯೋ ವೈರಲ್
Ye Warriors kisi bhi team ke aage jhukenge nahi 😎
Check out the updated points table after Match 67 of #SuperhitPanga 🤩
ಬೆಂಗಳೂರು 25 ರೈಡ್, 10 ಟೇಕಲ್, 2 ಆಲೌಟ್, 2 ಇತರೆ ಅಂಕ ಸೇರಿ ಒಟ್ಟು 39 ಅಂಕ ಗಳಿಸಿದರೆ, ಬೆಂಗಾಲ್ 20 ರೈಡ್, 10 ಟೇಕಲ್, 2 ಆಲೌಟ್, 8 ಇತರೆ ಅಂಕ ಸಹಿತ 40 ಅಂಕ ಸಂಪಾದಿಸಿ 1 ಅಂಕಗಳಿಂದ ಗೆದ್ದು ಬೀಗಿತು. ಬೆಂಗಳೂರು ಪರ ಪವನ್ ಶೆರವತ್ 10 ರೈಡ್, 3 ಬೋನಸ್ ಸಹಿತ 13 ಅಂಕ ಸಂಪಾದಿಸಿದರೆ, ಬೆಂಗಾಲ್ ಪರ ಮನಿಂದರ್ ಸಿಂಗ್ 4 ರೈಡ್, 1 ಟೇಕಲ್, 4 ಬೋನಸ್ ಸಹಿತ 9 ಅಂಕ ತಂಡಕ್ಕೆ ಕೊಡುಗೆ ನೀಡಿದರು. ಇದನ್ನೂ ಓದಿ: ಐಸಿಸಿ ವರ್ಷದ ಟಿ20, ಏಕದಿನ ತಂಡದಲ್ಲಿಲ್ಲ ಭಾರತೀಯರು – ಪಾಕ್ ಆಟಗಾರರ ಮೇಲುಗೈ
ಬೆಂಗಳೂರು: ಬೆಂಗಳೂರು ಬುಲ್ಸ್ ಕಬಡ್ಡಿ ಅಂಗಳದಲ್ಲಿ ತನ್ನ ಗೆಲುವಿನ ನಾಗಲೋಟ ಮುಂದುವರಿಸಿದೆ ಇಂದು ಗುಜರಾತ್ ಜೈಂಟ್ಸ್ ವಿರುದ್ಧ 9 ಅಂಕಗಳ ಅಂತರದ ಜಯ ಸಾಧಿಸಿದೆ. ಅಲ್ಲದೇ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಬುಲ್ಸ್ ರೈಡಿಂಗ್ ಮೆಷಿನ್ ಪವನ್ ಶೆರವತ್ ಇಂದು ಕೂಡ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. 16 ರೈಡ್, 3 ಬೋನಸ್ ಪಾಯಿಂಟ್ ಸಹಿತ 19 ಅಂಕ ಕಲೆಹಾಕಿದರು. ಅತ್ತ ಎದುರಾಳಿ ತಂಡದಲ್ಲಿ ರಾಕೇಶ್ ಸುಂಗ್ರೋಯಾ 8 ರೈಡ್, 6 ಬೋನಸ್ ಸಹಿತ 14 ಅಂಕ ಕಲೆಹಾಕಿರು. ಬೆಂಗಳೂರು ರೈಡಿಂಗ್ ಮತ್ತು ಉತ್ತಮ ಡಿಫೆನ್ಸ್ ಮೂಲಕ ಗುಜರಾತ್ ಜೈಂಟ್ಸ್‌ನ್ನು ಕಟ್ಟಿಹಾಕಿತು. ಇದನ್ನೂ ಓದಿ: 3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು – ಸರಣಿ ವಶಪಡಿಸಿಕೊಂಡ ಆಫ್ರಿಕಾ
ಮೊದಲಾರ್ಧದಲ್ಲಿ 17-22 ಪಾಯಿಂಟ್‍ನೊಂದಿಗೆ ಬೆಂಗಳೂರು 5 ಅಂಕಗಳ ಮುನ್ನಡೆ ಪಡೆದುಕೊಂಡಿತು. ಅಂತಿಮವಾಗಿ ಬುಲ್ಸ್ 26 ರೈಡ್, 1 ಸೂಪರ್ ರೈಡ್, 10 ಟೇಕಲ್, 6 ಆಲೌಟ್, 4 ಇತರೆ ಅಂಕ ಸಹಿತ ಒಟ್ಟು 46 ಪಾಯಿಂಟ್ ಗಳಿಸಿದರೆ, ಗುಜರಾತ್ ಜೈಂಟ್ಸ್ 24 ರೈಡ್, 1 ಸೂಪರ್ ರೈಡ್, 11 ಟೇಕಲ್, 2 ಇತರೆ ಸಹಿತ ಒಟ್ಟು 37 ಪಾಯಿಂಟ್ ಗಳಿಸಿ 9 ಅಂಕಗಳ ಸೋಲು ಕಂಡಿತು. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ