Tag: ಪ್ರೊಫೈಲ್ ಫೋಟೋ

  • ಟ್ವಿಟ್ಟರ್ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ ಸ್ಟಾಲಿನ್

    ಟ್ವಿಟ್ಟರ್ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ ಸ್ಟಾಲಿನ್

    ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ.

    ಹೌದು, ಎಂ.ಕೆ ಸ್ಟಾಲಿನ್ ಅವರು, ಭಾರತದ ತ್ರಿವರ್ಣ ಧ್ವಜದೊಂದಿಗೆ ಎಂ.ಕರುಣಾನಿಧಿ ಅವರು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಧ್ವಜಾರೋಹಣ ಹಕ್ಕನ್ನು ಸಿಎಂಗಳು ಹೊಂದಿರುತ್ತಾರೆ ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತ್ರಿವರ್ಣ ಧ್ವಜದ ಫೋಟೋವನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ ಆಡಳಿತಾರೂಢ ಡಿಎಂಕೆ ಅಧ್ಯಕ್ಷರಾಗಿರುವ ಸ್ಟಾಲಿನ್ ಅವರು, ಎಲ್ಲರೂ ಸೇರಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಿ, ಎಲ್ಲರೂ ಒಟ್ಟಾಗಿ ಆಚರಿಸೋಣ ಎಂದು ಜನರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಯವರು ಕಂಡರೆ ನುಗ್ಗಿ ಹೊಡೆಯುತ್ತೇವೆ: ಕುಲಕರ್ಣಿ

    1974ರ ಆಗಸ್ಟ್ 15ರಂದು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ರಾಜ್ಯದ ಮುಖ್ಯಮಂತ್ರಿಗಳ ಹಕ್ಕನ್ನು ಮುತಮಿಳ್ ಅರಿಗ್ನರ್ (ತಮಿಳು ವಿದ್ವಾಂಸ) ಕಲೈಂಜರ್ ಅವರು ಖಚಿತಪಡಿಸಿದರು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್

    ಫೋಟೋದಲ್ಲಿ ದಿವಂಗತ ಕರುಣಾನಿಧಿ ಅವರನ್ನು ಅಧಿಕಾರಿಗಳು ಸುತ್ತುವರೆದಿದ್ದು, ಮೆಟ್ಟಿಲುಗಳನ್ನು ಇಳಿಯುತ್ತಿರುವುದನ್ನು ಕಾಣಬಹುದಾಗಿದೆ. ಬಹುಶಃ ರಾಜ್ಯ ಸೆಕ್ರೆಟರಿಯೇಟ್ ಇರುವಲ್ಲಿ ಫೋರ್ಟ್ ಸೇಂಟ್ ಜಾರ್ಜ್ ಇದೆ. ಭಾರತದ ರಾಷ್ಟ್ರಧ್ವಜವು ಹಿಂಭಾಗದಲ್ಲಿ ಎತ್ತರದ ಮಾಸ್ಟ್ ಮೇಲೆ ಹಾರುತ್ತಿರುವುದನ್ನು ನೋಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನೋಟಿಫಿಕೇಶನ್‌ನಲ್ಲಿ ಪ್ರೊಫೈಲ್ ಫೋಟೋ – ಐಒಎಸ್‌ಗೂ ಬರಲಿದೆ ವಾಟ್ಸಪ್‌ನ ಹೊಸ ಫೀಚರ್

    ನೋಟಿಫಿಕೇಶನ್‌ನಲ್ಲಿ ಪ್ರೊಫೈಲ್ ಫೋಟೋ – ಐಒಎಸ್‌ಗೂ ಬರಲಿದೆ ವಾಟ್ಸಪ್‌ನ ಹೊಸ ಫೀಚರ್

    ವಾಷಿಂಗ್ಟನ್: ಇಲ್ಲಿಯವರೆಗೆ ನಿಮ್ಮ ಐಒಎಸ್ ಫೋನ್‌ನಲ್ಲಿ ವಾಟ್ಸಪ್ ಸಂದೇಶಗಳು ಬಂದಾಗ ನೋಟಿಫಿಕೇಶನ್‌ನಲ್ಲಿ ಕೇವಲ ಹೆಸರು ಮಾತ್ರ ಗೋಚರಿಸುತ್ತಿತ್ತು. ಇನ್ನು ಮುಂದೆ ವಾಟ್ಸಪ್ ಸಂದೇಶದ ನೋಟಿಫಿಕೇಶನ್‌ನಲ್ಲಿ ಸಂದೇಶ ಕಳುಹಿಸಿದವರ ಪ್ರೊಫೈಲ್ ಫೋಟೋ ಕೂಡಾ ಕಾಣಿಸಲಿದೆ.

    ಹೌದು, ಈ ಫೀಚರ್ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ವರ್ಷಗಳಿಂದಲೂ ಬಳಕೆಯಲ್ಲಿದೆ. ಆದರೆ ಐಒಎಸ್ ಬಳಕೆದಾರರಿಗೆ ಈ ಫೀಚರ್‌ನ ಭಾಗ್ಯ ಇಲ್ಲಿಯವರೆಗೂ ಸಿಕ್ಕಿಲ್ಲ. ಕೊನೆಗೂ ವಾಟ್ಸಪ್ ಈ ಫೀಚರ್ ಅನ್ನು ಐಒಎಸ್‌ಗಳಿಗೂ ತರಲಿರುವ ಸುಳಿವು ನೀಡಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್ ಹೊಸ ಬಳಕೆದಾರರಿಗೆ 5ಜಿಬಿ ಉಚಿತ ಡೇಟಾ

    whatsapp

    ಸದ್ಯ ಈ ಫೀಚರ್ ವಾಟ್ಸಪ್‌ನ 2.22.1.1ಗೆ ಅಪ್ಡೇಟ್ ಮಾಡಿರುವ ಐಒಎಸ್ ಬೀಟಾ ಬಳಕೆದಾರರಿಗೆ ಮಾತ್ರವೇ ಪರೀಕ್ಷಿಸಲು ಸಾಧ್ಯವಾಗುತ್ತಿದೆ. ಇದು ವಾಟ್ಸಪ್‌ನ ಈ ವರ್ಷದ ಮೊದಲ ಬೀಟಾ ಟೆಸ್ಟಿಂಗ್ ಕೂಡಾ ಹೌದು.

    ಈ ಫೀಚರ್‌ನಿಂದ ಬಳಕೆದಾರರು ನೋಟಿಫಿಕೇಶನ್‌ನಲ್ಲಿ ಸಂದೇಶ ಕಳುಹಿಸಿದವರ ಹೆಸರನ್ನು ಓದುವ ಅಗತ್ಯ ಬೀಳುವುದಿಲ್ಲ. ಬದಲಾಗಿ ಪ್ರೊಫೈಲ್ ಫೋಟೋ ನೋಡುತ್ತಿದ್ದಂತೆ ಸಂದೇಶ ಕಳುಹಿಸಿದವರನ್ನು ಗುರುತು ಹಿಡಿಯಬಹುದು. ಇದನ್ನೂ ಓದಿ: ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ

    ವಾಟ್ಸಪ್‌ನ ಬಹುನಿರೀಕ್ಷಿತ ಇನ್ನೊಂದು ಹೊಸ ಫೀಚರ್ ಬಿಸಿನೆಸ್ ನಿಯರ್‌ಬೈ. ಈ ಫೀಚರ್‌ನಿಂದ ಬಳಕೆದಾದರು ಹತ್ತಿರದ ರೆಸ್ಟೋರೆಂಟ್, ಕಿರಾಣಿ ಅಂಗಡಿಗಳು, ಬಟ್ಟೆ ಅಂಗಡಿಗಳು ಹೀಗೆ ಹಲವು ವ್ಯಾಪಾರಗಳನ್ನು ಹುಡುಕಲು ಸಹಾಯ ಮಾಡಲಿದೆ.

  • ಟ್ವಿಟ್ಟರ್ ಪ್ರೊಫೈಲ್ ಫೋಟೋ ಬದಲಿಸಿ ವಿಶೇಷ ಸಂದೇಶ ರವಾನಿಸಿದ ಮೋದಿ

    ಟ್ವಿಟ್ಟರ್ ಪ್ರೊಫೈಲ್ ಫೋಟೋ ಬದಲಿಸಿ ವಿಶೇಷ ಸಂದೇಶ ರವಾನಿಸಿದ ಮೋದಿ

    ನವದೆಹಲಿ: ದೇಶಾದ್ಯಂತ ಮಂಗಳವಾರದಿಂದ ಲಾಕ್‍ಡೌನ್ 2.0 ಮೇ 3ರ ವರೆಗೂ ವಿಸ್ತರಣೆಯಾಗಿದೆ. ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಸಮಯ ಲಾಕ್‍ಡೌನ್ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಇಂತಹ ಸಂದಿಗ್ಧ ಸಂದರ್ಭದಲ್ಲಿ ತ್ಯಾಗವನ್ನು ಮಾಡುತ್ತಿರುವ ದೇಶದ ಜನರಿಗೆ ಮೋದಿ ಧನ್ಯವಾದ ತಿಳಿಸಿದ್ದರು. ದೇಶದ ಜನತೆ ಕುರಿತು ಮಾತನಾಡುವ ವೇಳೆ ಮುಖಕ್ಕೆ ಮಾಸ್ಕ್ ಕೂಡ ಮೋದಿ ಧರಿಸಿದ್ದರು. ಪ್ರಧಾನಿ ಧರಿಸಿದ್ದ ಮಣಿಪೂರ್ ತಯಾರಿಸಿದ ಮಫ್ಲರ್ ಎಲ್ಲರನ್ನು ಆಕರ್ಷಿಸಿತ್ತು.

    ಲಾಕ್‍ಡೌನ್ ವಿಸ್ತರಣೆ ಪ್ರಕಟನೆಯ ಬಳಿಕ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈನಲ್ ಫೋಟೋವನ್ನು ಬದಲಿಸಿದ್ದು, ಮಣಿಪೂರ್ ಮಾಸ್ಕ್ ಧರಿಸಿದ್ದ ಫೋಟೋವನ್ನು ಅಪ್‍ಡೇಟ್ ಮಾಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ದೇಶದ ಎಲ್ಲಾ ಪ್ರಜೆಗಳು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿ ಕೇಂದ್ರ ಸೂಚನೆ ನೀಡಿದೆ. ಪರಿಣಾಮ ಮೋದಿ ತಮ್ಮ ಪ್ರೊಫೈಲ್‍ಗೆ ಮಾಸ್ಕ್ ಧರಿಸಿರುವ ಫೋಟೋವನ್ನು ಅಪ್‍ಲೋಡ್ ಮಾಡಿದ್ದಾರೆ.

    ದೇಶದ ಜನತೆಯನ್ನು ಕುರಿತು ಕೊರೋನಾ ಕುರಿತು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ 4ನೇ ಬಾರಿಗೆ ಮೋದಿ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲದೇ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ 2ನೇ ವಾರಿ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾರೆ. ಇತ್ತ ಲಾಕ್‍ಡೌನ್ ವಿಸ್ತರಣೆ ಕುರಿತು ಪ್ರಧಾನಿ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಈ ವೇಳೆಯೂ ಪ್ರಧಾನಿ ಮೋದಿ ಅವರು ಕಟನ್ ಬಟ್ಟೆಯಿಂದ ತಯಾರಿಸಿದ್ದ ಹೋಮ್ ಮೇಡ್ ಮಾಸ್ಕ್ ಧರಿಸಿದ್ದರು.

    ಇತ್ತ ಭಾರತದಲ್ಲಿ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ 10 ಸಾವಿರವನ್ನು ದಾಟಿದೆ. ಅಲ್ಲದೇ ಸುಮಾರು 350 ಮಂದಿ ಕೋವಿಡ್-19ನಿಂದ ಸಾವನ್ನಪ್ಪಿದ್ದಾರೆ.