Tag: ಪ್ರೇರಣಾ

  • 10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

    10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಅವರ ಪತ್ನಿ ಪ್ರೇರಣಾ ಹಳೆಯ ಫೋಟೋವೊಂದನ್ನು ಹಂಚಿಕೊಂಡು ವಿಶ್ ಮಾಡಿರುವುದು ವಿಶೇಷವಾಗಿದೆ.

    ಇದು 10 ವರ್ಷಗಳ ಹಿಂದಿನ ಫೋಟೋ. ಹೆಂಡತಿಯಾಗಿ ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ. ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡು ಇಬ್ಬರು ಜೊತೆಗೆ ಇರುವ ಮುದ್ದಾದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:   ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ

    ಧ್ರುವ ಅಭಿಮಾನಿಗಳು ಜೈ ಆಂಜನೇಯ, ಧ್ರುವ ಅಣ್ಣ, ಮಗುವಿನ ಮನಸಿರೋ ಮಹಾರಾಜ ಎಂದು ಕಾಮೆಂಟ್ ಮಾಡುತ್ತಾ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ: ಶಾರೂಖ್ ಮನೆಗೆ ಭೇಟಿ ಕೊಟ್ಟ ಸಲ್ಮಾನ್ ಖಾನ್

     

    View this post on Instagram

     

    A post shared by Prerana Shankar (@shankar.prerana)

    ಪ್ರತಿವರ್ಷ ಅಕ್ಟೋಬರ್ 6ರಂದು ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಬಹಳ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಕೋವಿಡ್ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಧ್ರುವ ಸರ್ಜಾ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ವೀಡಿಯೋವೊಂದನ್ನು ಹಂಚಿಕೊಂಡಿದ್ದರು.

    ವೀಡಿಯೋದಲ್ಲಿ ಇದೇ ಅಕ್ಟೋಬರ್ 6 ನೇ ತಾರಿಖು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲೆಬ್ರಿಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದರು.

    33ನೇ ವಸಂತಕ್ಕೆ ಕಾಲಿಟ್ಟಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

  • ಪತ್ನಿ ಜೊತೆ ಗೋವಾಗೆ ಹಾರಿದ ಧ್ರುವ ಸರ್ಜಾ

    ಪತ್ನಿ ಜೊತೆ ಗೋವಾಗೆ ಹಾರಿದ ಧ್ರುವ ಸರ್ಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಕೊಂಚ ರಿಲೀಫ್ ಪಡೆದುಕೊಂಡಿರುವ ಧ್ರುವ ಸರ್ಜಾ ಪತ್ನಿ ಜೊತೆ ಗೋವಾ ಪ್ರವಾಸಕ್ಕೆ ಹಾರಿದ್ದಾರೆ. ಇವರಿಬ್ಬರ ಕೆಲವು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸದಾ ಸಿನಿಮಾ, ಶೂಟಿಂಗ್, ಪ್ರಮೋಷನ್ ಎಂದು ಬ್ಯುಸಿಯಾಗಿದ್ದ ನಟ ಧ್ರುವ ಸರ್ಜಾ ಇದೀಗ ಕೊಂಚ ಬಿಡುವು ಮಾಡಿಕೊಂಡಿಕೊಂಡು ಪತ್ನಿ ಪ್ರೇರಣಾ ಜೊತೆ ಕಾಲ ಕಳೆಯಲು ಗೋವಾ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಸಮುದ್ರ ತೀರದ ಮಗ್ಗತ್ತಲಿನಲ್ಲಿ ಧ್ರುವ ಪತ್ನಿ ಮಡಿಲ ಮೇಲೆ ತಲೆಯಿಟ್ಟು ಮಲಗಿಕೊಂಡಿರುವ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

    ಫೋಟೋದಲ್ಲಿ ಧ್ರುವ ಪತ್ನಿಯ ಮಡಿಲ ಮೇಲೆ ಮಲಗಿದ್ದು, ಪ್ರೇರಣಾ ಕೂಡ ಪತಿಯ ಕೆನ್ನೆಯ ಮೇಲೆ ಕೈಯಿಟ್ಟು ಪ್ರೀತಿಯಿಂದ ಮುದ್ದಾಡುವಂತೆ ಕಾಣಿಸುತ್ತದೆ. ಅಲ್ಲದೆ ಧ್ರುವ, ಪ್ರೇರಣಾ ಇಬ್ಬರು ಒಬ್ಬರಿಗೊಬ್ಬರು ನೋಡುತ್ತಾ ಮುಗುಳು ನಗೆ ಬೀರಿದ್ದಾರೆ.

    ಮತ್ತೊಂದರಲ್ಲಿ ಧ್ರುವ ಪತ್ನಿ ಪ್ರೇರಣಾ ಭುಜದ ಮೇಲೆ ಕೈಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೊದಲ್ಲಿ ಧ್ರುವ ಹಳದಿ ಬಣ್ಣದ ಬನಿಯನ್ ಧರಿಸಿದ್ದರೆ, ಪ್ರೇರಣಾ ನೀಲಿ ಬಣ್ಣದ ಉಡುಪು ಧರಿಸಿದ್ದಾರೆ. ಜೊತೆಗೆ ಸೂರ್ಯನ ಬೆಳಕಿನಿಂದ ತಪ್ಪಿಸಿಕೊಳ್ಳಲು ಇಬ್ಬರು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಿಂಚಿದ್ದಾರೆ. ಪ್ರವಾಸಕ್ಕೆ ಧ್ರುವ ಸರ್ಜಾ ಟಿಕ್‍ಟಾಕ್ ಸ್ಟಾರ್ ಅಲ್ಲು ರಘುರನ್ನು ಕೂಡ ಕರೆದೊಯಿದ್ದಾರೆ.

    ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೊಂಡು ಅದ್ದೂರಿ ಪ್ರದರ್ಶನ ಕಾಣುತ್ತಿದ್ದು, ಗಾಂಧಿನಗರದ ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಈ ಸಿನಿಮಾಕ್ಕೆ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದು, ಧ್ರುವಗೆ ಜೋಡಿಯಾಗಿ ರಶ್ಮಿಕ ಮಂದಣ್ಣ ನಟಿಸಿದ್ದರು.

  • ತಂಗಿಗೆ ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಮೇಘನಾ

    ತಂಗಿಗೆ ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಮೇಘನಾ

    ಬೆಂಗಳೂರು: ಧ್ರುವ ಸರ್ಜಾ ಪತ್ನಿ ಪ್ರೇರಣಾ ಹುಟ್ಟುಹಬ್ಬದ ಸಂಭ್ರದಲ್ಲಿದ್ದು, ಧ್ರುವ ಸರ್ಜಾ ಪತ್ನಿಗೆ ಸರ್ಪ್ರೈಸ್ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. ಅದೇ ರೀತಿ ಚಿರು ಪತ್ನಿ ಮೇಘನಾ ರಾಜ್ ಸರ್ಜಾ ಭಾವನಾತ್ಮಕವಾಗಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಮಡಿರುವ ಮೇಘನಾ, ಹ್ಯಾಪಿ ಬರ್ತ್‍ಡೇ ಸಿಲ್ ಅದ್ಭುತವಾಗಿ ಬದುಕಿ. ನೀನೊಂದು ಸುಂದರ ಆತ್ಮ ಎಂದು ಬರೆಯುವ ಮೂಲಕ ಶುಭ ಕೋರಿದ್ದಾರೆ. ಇದಕ್ಕೆ ಪ್ರೇರಣಾ ಅವರು ಪ್ರತಿಕ್ರಿಯಿಸಿದ್ದು, ಥ್ಯಾಂಕ್ಯೂ ಸೋ ಮಚ್ ಸಿಲ್‍ಮಾ ಎಂದಿದ್ದಾರೆ.

    ಧ್ರುವ ಸರ್ಜಾ ಪತ್ನಿ ಜೊತೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿದ್ದು, ಬೀಚ್‍ನ ಹೋಟೆಲ್‍ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸುಂದರವಾದ ಲೈಟಿಂಗ್ಸ್, ಸಿಡಿ ಮದ್ದು ಸೇರಿದಂತೆ ಸಮುದ್ರ ತೀರದಲ್ಲಿ ಫುಲ್ ಎಂಜಾಯ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ಕುರಿತು ಒಂದೂವರೆ ನಿಮಿಷದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಧ್ರುವ ಸರ್ಜಾ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ. ಹ್ಯಾಪಿ ಬರ್ತ್‍ಡೇ ಮೈ ಫ್ರಂಡ್, ಮೈ ವೈಫ್ ಆ್ಯಂಡ್ ಮೈ ಲವ್ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Dhruva Sarja (@dhruva_sarjaa)

    ಸದ್ಯ ಮೇಘನಾ ರಾಜ್ ಸರ್ಜಾ ಮತ್ತು ಅವರ ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮೇಘಾನ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ತಂದೆ ಸುಂದರ್ ರಾಜ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಐಸೋಲೇಟ್ ಆಗಿದ್ದು, ಚಿಕಿತ್ಸೆ ಪಡೆಯುತ್ತುದ್ದಾರೆ. ಹೀಗಾಗಿ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಹೋಟೆಲ್‍ನಲ್ಲಿ ಆಚರಿಸಿದ್ದಾರೆ.

  • ‘ತಪ್ಪದೆ ಬಿಸಿ ನೀರು ಕುಡಿಯಿರಿ’ – ಆಸ್ಪತ್ರೆಯಿಂದ ಬಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು

    ‘ತಪ್ಪದೆ ಬಿಸಿ ನೀರು ಕುಡಿಯಿರಿ’ – ಆಸ್ಪತ್ರೆಯಿಂದ ಬಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಮನೆಗೆ ಬಂದ ಧ್ರುವ ಸರ್ಜಾ ಲೈವ್‍ಗೆ ಬಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

    ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಜುಲೈ 15 ರಂದು ಗೊತ್ತಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇದೀಗ ಮನೆಯಲ್ಲಿ ವರ್ಕೌಟ್ ಮಾಡುತ್ತಿರುವಾಗ ಇನ್‍ಸ್ಟಾಗ್ರಾಂ ಮೂಲಕ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

    ಮನೆಯಲ್ಲಿ ಟ್ರೆಡ್‍ಮೀಲ್ ಮೇಲೆ ನಡೆಯುತ್ತಾ ಲೈವ್‍ನಲ್ಲಿ ಮಾತನಾಡಿದ ಧ್ರುವ ಸರ್ಜಾ, ನಾನು ಮತ್ತು ಪ್ರೇರಣಾ ಆರೋಗ್ಯವಾಗಿದ್ದೇವೆ. ಕ್ಯಾಲರಿ ಕರಗಿಸಬೇಕಾಗಿದೆ ಎಂದ ಧ್ರುವ ಸರ್ಜಾ ಮನೆಯಲ್ಲಿಯೇ ಟ್ರೆಡ್‍ಮಿಲ್ ಇತ್ತು ಹಾಗಾಗಿ ವರ್ಕೌಟ್ ಮಾಡುತ್ತಿದ್ದೀನಿ. ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅಷ್ಟೆ. ಪ್ರೇರಣಾ ಅವರಿಗೂ ವರ್ಕೌಟ್ ಮಾಡಿಸಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ಅತ್ತಿಗೆ ಮೇಘನಾ ಬಗ್ಗೆಯೂ ಮಾತನಾಡಿ, ಮೇಘನಾ ಕೂಡ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಡಿ. ನಾವು ಬೇಗ ಗುಣಮುಖರಾಗಿ ಮನೆಯಿಂದ ಹೊರಗೆ ಬರುತ್ತೇವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

    ಈ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಾಗೃತರಾಗಿರಿ ಎಂದು ಅಭಿಮಾನಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. “ತಪ್ಪದೆ ಪ್ರತಿದಿನ ಬಿಸಿ ನೀರು ಕುಡಿಯಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಎಲ್ಲರೂ ಖುಷಿಯಾಗಿ ಇರಬೇಕು ಅಷ್ಟೇ. ಈ ಕೊರೊನಾವನ್ನು ಒಟ್ಟಾಗಿ ಸೇರಿ ಓಡಿಸೋಣ” ಎಂದು ಧ್ರುವ ಸರ್ಜಾ ಹೇಳಿದರು.

  • ನಟ ಧ್ರುವ ಸರ್ಜಾ, ಪತ್ನಿಗೆ ಕೊರೊನಾ ಪಾಸಿಟಿವ್

    ನಟ ಧ್ರುವ ಸರ್ಜಾ, ಪತ್ನಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದಾರೆ.

    ಅಲ್ಲದೆ ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

    ಈ ಹಿಂದೆ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿತ್ತು. ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿತ್ತು.

     

    ಕಳೆದ ತಿಂಗಳು ಚಿರು ಸಾವು ಕುಟುಂಬ ವರ್ಗಕ್ಕೆ ಭರಿಸಲಾಗದ ನೋವು ತಂದುಕೊಟ್ಟಿದೆ. ಸದ್ಯ ಅರ್ಜುನ್ ಸರ್ಜಾ ಕುಟುಂಬ ಸದಸ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

  • ಭಜರಂಗಿ ಸಮ್ಮುಖದಲ್ಲಿ ಧ್ರುವ-ಪ್ರೇರಣಾ ಆರತಕ್ಷತೆ

    ಭಜರಂಗಿ ಸಮ್ಮುಖದಲ್ಲಿ ಧ್ರುವ-ಪ್ರೇರಣಾ ಆರತಕ್ಷತೆ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಭಜರಂಗಿ ಸಮ್ಮುಖದಲ್ಲಿಯೇ ಆರತಕ್ಷತೆ ನಡೆಯುತ್ತಿದೆ.

    ನಟ ಧ್ರುವ ಸರ್ಜಾ ಹನುಮನ ಭಕ್ತ ಆಗಿರುವದರಿಂದ ವೇದಿಕೆ ಮಧ್ಯಭಾಗದಲ್ಲಿ ವಾಯುಪುತ್ರ ಆಂಜನೇಯ ಮೂರ್ತಿ ಸ್ಥಾಪನೆ ಮಾಡಲಾಗಿದೆ. ವೇದಿಕೆ ಕಾರ್ನೇಷಿಯಾ, ಆರ್ಕೆಡ್, ಬಿಳಿ ಮತ್ತು ಕೆಂಪು ಗುಲಾಬಿಗಳಿಂದ ಅಲಂಕೃತಗೊಳಿಸಲಾಗಿದೆ. ವಧು ಪ್ರೇರಣಾ ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್ ಬಾಟಲ್ ಗ್ರೀನ್ ಲೆಹೆಂಗಾದಲ್ಲಿ ಮಿಂಚುತ್ತಿದ್ದಾರೆ. ಇತ್ತ ಧ್ರುವ ಸರ್ಜಾ ಇಟಲಿಯಿಂದ ತರಲಾಗಿರುವ ವೆಸ್ಟ್ ಕೋಟ್ ಮತ್ತು ಬ್ಲೇಸರ್ ಧರಿಸಿದ್ದಾರೆ.

    ಆರತಕ್ಷತೆ ಕಾರ್ಯಕ್ರಮಕ್ಕೆ ಚಂದನವನದ ತಾರೆಯರು ಸೇರಿದಂತೆ ರಾಜಕಾರಣಿಗಳು ಆಗಮಿಸಿ ವಧು-ವರರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸಚಿವ ಆರ್.ಅಶೋಕ್, ನಿರ್ಮಾಪಕ ಕೆ.ಮಂಜು, ಲಹರಿ ಸಂಸ್ಥೆಯ ಲಹರಿ ವೇಲು, ಸಾರಾ ಗೋವಿಂದ್ ಸೇರಿದಂತೆ ಹಲವು ಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  • ‘ಅದ್ದೂರಿ’ ಹುಡುಗನ ‘ಭರ್ಜರಿ’ ಮದುವೆ

    ‘ಅದ್ದೂರಿ’ ಹುಡುಗನ ‘ಭರ್ಜರಿ’ ಮದುವೆ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆ ನೆರವೇರಿದ್ದು, ಅದ್ದೂರಿ ಹುಡುಗ ಭರ್ಜರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಬೆಳಗ್ಗೆ 7.15ರಿಂದ 7.45ಕ್ಕೆ ಶುಭ ಮೂಹೂರ್ತದಲ್ಲಿ ಧ್ರುವ ಸರ್ಜಾ ಪ್ರೇರಣಾ ಅವರನ್ನು ವರಿಸಿದ್ದಾರೆ. ವೃಶ್ಚಿಕ ಲಗ್ನದಲ್ಲಿ ನವಜೋಡಿ ಸಪ್ತಪದಿ ತುಳಿದಿದ್ದಾರೆ. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಮಹೋತ್ಸವ ನೇರವೇರಿದ್ದು, ಗೌಡ ಸಂಪ್ರದಾಯದಂತೆ ಧ್ರುವ ಹಾಗೂ ಪ್ರೇರಣಾ ಸಪ್ತಪದಿ ತುಳಿದಿದ್ದಾರೆ.

    ಇಂದು ಸಂಜೆ ಏಳು ಗಂಟೆಗೆ ರಿಸೆಪ್ಶನ್ ಇರಲಿದೆ. ನಾಳೆ ಅಭಿಮಾನಿಗಳಿಗಾಗಿ ಸರ್ಜಾ ಕುಟುಂಬ ವಿಶೇಷ ಔತಣ ಕೂಟ ಏರ್ಪಡಿಸಿದೆ. ಜೊತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಇರಲಿವೆ.

    ಕಲ್ಯಾಣದ ಖುಷಿಯಲ್ಲಿ ಧ್ರುವ ಸರ್ಜಾ ಕುಟುಂಬ ಮನೆಯ ಮುಂದೆ ಇಡೀ ಬೀದಿಗೆ ಚಪ್ಪರ ಹಾಕಿ, ಬಾಳೆಕಂಬಗಳಿಂದ ‘ಅದ್ಧೂರಿ’ ಅಲಂಕಾರ ಮಾಡಿದ್ದರು. ವರಪೂಜೆ, ಚಪ್ಪರ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಸರ್ಜಾ ಕುಟುಂಬದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಧ್ರುವ ಸರ್ಜಾ ಮತ್ತು ಪ್ರೇರಣಾ ಮನೆಯಲ್ಲಿ ಶಾಸ್ತ್ರೋಕ್ತವಾದ ನಡೆದ ಕಾರ್ಯಕ್ರಮ ಗುರು-ಹಿರಿಯರ ಸಂಮ್ಮುಖದಲ್ಲಿ ನೆರವೇರಿತ್ತು.

    ಶನಿವಾರ ನಡೆದ ಅರಿಶಿನ ಶಾಸ್ತ್ರದಲ್ಲಿ ಅರ್ಜುನ್ ಸರ್ಜಾ ಫ್ಯಾಮಿಲಿ, ನಟಿ ತಾರಾ ಅನುರಾಧ, ನಿರ್ದೇಶಕ ನಂದಕಿಶೋರ್, ನಿರ್ದೇಶಕ ಎ.ಪಿ ಅರ್ಜುನ್ ಭಾಗಿಯಾಗಿದ್ದರು. ಧ್ರುವ ಸರ್ಜಾಗೆ ಅರಿಶಿನವನ್ನು ಹಚ್ಚಿ ಸಂಭ್ರಮಿಸಿದ್ದರು. ಆ ಬಳಿಕ ಚಪ್ಪರಕ್ಕೆ ಧ್ರುವ ಪೂಜೆ ಸಲ್ಲಿಸಿದ್ದರು. ತಮ್ಮ ಕೈ ಮೇಲೆ ಹಾಕಿಕೊಂಡಿದ್ದ ಆಂಜನೇಯನ ಪ್ರತಿರೂಪವನ್ನು ಅಭಿಮಾನಿಗಳ ಮುಂದೆ ಪ್ರದರ್ಶಿಸಿದ್ದರು.

    ಮೆಹಂದಿ ಶಾಸ್ತ್ರದಲ್ಲಿ ವಧು-ವರದ ಎರಡೂ ಕುಟುಂಬದವರು ಸೇರಿ ಹಾಡಿ ಕುಣಿದು ಸಖತ್ ಎಂಜಾಯ್ ಮಾಡಿದ್ದರು. ನೂರಾರು ಅಭಿಮಾನಿಗಳಿಗೆ ತಾವೇ ಖುದ್ದಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿರೋದು ವಿಶೇಷವಾಗಿತ್ತು.

  • ಧ್ರುವ-ಪ್ರೇರಣಾ ಮದುವೆ ಮುಹೂರ್ತ ಫಿಕ್ಸ್

    ಧ್ರುವ-ಪ್ರೇರಣಾ ಮದುವೆ ಮುಹೂರ್ತ ಫಿಕ್ಸ್

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿಗೆ ರಿಂಗ್ ತೊಡಿಸುವ ಮೂಲಕ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಧ್ರುವ ಮತ್ತು ಪ್ರೇರಣಾ ಅವರ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.

    ಧ್ರುವ ಮತ್ತು ಪ್ರೇರಣಾ ಅವರ ಮದುವೆಯನ್ನು ಗುರು-ಹಿರಿಯರು ಮುಂದಿನ ವರ್ಷ ಏಪ್ರಿಲ್ ನಲ್ಲಿ ಫಿಕ್ಸ್ ಮಾಡಿದ್ದಾರೆ. ಆದರೆ ಇನ್ನೂ ದಿನಾಂಕವನ್ನು ನಿಗದಿ ಮಾಡಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಭಾನುವಾರ ಬನಶಂಕರಿಯ ಆಂಜನೇಯನ ಸನ್ನಿಧಿಯಲ್ಲಿ ಸುಂದರ ಹಸಿರು ಮಂಟಪ, ಪವಿತ್ರ ಗೋವುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಧ್ರುವ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರಿಗೆ 21 ಲಕ್ಷದ ವಜ್ರದ ಉಂಗುರವನ್ನು ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಸರ್ಜಾ ಕುಟುಂಬದ ಸಡಗರ ಸಂಭ್ರಮದಲ್ಲಿ ಸ್ಯಾಂಡಲ್‍ವುಡ್ ತಾರೆಯರೂ ಹಾಗೂ ಆತ್ಮೀಯ ಸ್ನೇಹಿತರು ಆಗಮಿಸಿ ಶುಭ ಕೋರಿದ್ದಾರೆ. ಶಿವಣ್ಣ, ದರ್ಶನ್, ಪುನೀತ್, ರಾಕ್‍ಲೈನ್ ವೆಂಕಟೇಶ್, ರವಿಶಂಕರ್, ಪ್ರಜ್ವಲ್, ಹರಿಪ್ರಿಯಾ, ಅನು ಪ್ರಭಾಕರ್ ಸೇರಿದಂತೆ ಹಲವು ಕಲಾವಿದರ ತಂಡವೇ ಬಂದು ಧ್ರುವ-ಪ್ರೇರಣಾಗೆ ಶುಭ ಹಾರೈಸಿದ್ದು, ಸ್ಯಾಂಡಲ್ ವುಡ್ ನಿರ್ದೇಶಕರಾದ ಅಯೋಗ್ಯ ಮಹೇಶ್, ಬಹದ್ದೂರ್, ಭರ್ಜರಿ ನಿರ್ದೇಶಕ ಚೇತನ್, ಭಜರಂಗಿ ಹರ್ಷ ಹಾಗೂ ಎ.ಪಿ ಅರ್ಜುನ್ ಆಗಮಿಸಿ ಶುಭ ಹಾರೈಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಾಲ್ಯದ ಗೆಳತಿಗಾಗಿ ವಜ್ರದ ಉಂಗುರ

    ಬಾಲ್ಯದ ಗೆಳತಿಗಾಗಿ ವಜ್ರದ ಉಂಗುರ

    ಬೆಂಗಳೂರು: ಭಾನುವಾರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಅವರ ಬಾಲ್ಯದ ಗೆಳತಿಯ ಪ್ರೇರಣ ನಿಶ್ಚಿತಾರ್ಥ. ಈಗಾಗಲೇ ಕುಟುಂಬದವರು ಅದ್ಧೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿಗೆ ನಿಶ್ಚಿತಾರ್ಥದಲ್ಲಿ ತೊಡಿಸಲು ಕೊಂಡಿರುವ ಉಂಗುರದ ಬೆಲೆ 21 ಲಕ್ಷ ರೂ. ಮೌಲ್ಯದ್ದಾಗಿದ್ದು, ಈ ಉಂಗುರ ವಜ್ರ ಖಚಿತವಾಗಿದೆ. ಇದರ ಸ್ಪೆಷಲ್ ಅಂದರೆ ಮಧ್ಯದಲ್ಲಿರುವ ವಜ್ರದ ಹರಳು 1.45 ಕ್ಯಾರೆಟ್‍ನ ಡೈಮಂಡ್ ಸಾಲಿಟೇರ್ ಇದ್ದು, ಉಂಗುರದ ಸುತ್ತಲಿನ ವಜ್ರದ ಹರಳುಗಳು 2.600 ಕ್ಯಾರೆಟ್ ಹೊಂದಿದೆ.

    ಧ್ರುವ ಸರ್ಜಾರ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಗೆ ಈ ಉಂಗುರ ತೊಡಿಸಿ ಮದುವೆ ನಿಶ್ಚಯ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದ ಆವರಣದಲ್ಲಿ ಧ್ರುವ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆ ನಡೆದಿದೆ. ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಸೆಟ್ ನಿರ್ಮಾಣದಲ್ಲಿ ತೊಡಗಿದ್ದಾರೆ.

    ಹಸಿರು ಥೀಮ್‍ನಲ್ಲಿ ತೆಂಗಿನ ಗರಿಗಳಿಂದ ನಿರ್ಮಾಣವಾಗುತ್ತಿರುವ ಸೆಟ್‍ಗೆ ಸಾಂಪ್ರದಾಯಿಕ ಪರಿಕರಗಳನ್ನೇ ಡೆಕೋರೇಷನ್‍ಗೆ ಉಪಯೋಗಿಸಲಾಗಿದೆ. ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ಧ್ರುವ ಸರ್ಜಾ 50 ಗೋವುಗಳನ್ನ ತರಿಸಿ ಗೋ ಪೂಜೆ ಮಾಡಿ ವಿಶೇಷ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಧ್ರುವ ಯೋಚಿಸಿದ್ದು, ಈ ಕಾರ್ಯಕ್ರಮಕ್ಕೆ ಸರ್ಜಾ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ನಟರು ಆಗಮಿಸಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

    `ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

    ಬೆಂಗಳೂರು: ಸ್ಯಾಂಡಲ್‍ವುಡ್ ಆಕ್ಷನ್ ಪ್ರಿನ್ಸ್, ಧ್ರುವ ಸರ್ಜಾ ಅವರ ಮದುವೆ ಸುದ್ದಿ ಕೇಳುತ್ತಿದಂತೆ ಸಂತಸಗೊಂಡಿದ್ದ ಅಭಿಮಾನಿಗಳು ಇಬ್ಬರನ್ನ ಒಟ್ಟಿಗೆ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದರ ನಡುವೆ ನಟ, ಒಳ್ಳೆ ಹುಡುಗ ಪ್ರಥಮ್ ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ತಮ್ಮ ಹುಟ್ಟುಹಬ್ಬ ದಿನದಂದು ಧ್ರುವ ಸರ್ಜಾ ಮದುವೆ ಆಗುತ್ತಿರುವ ವಿಷಯ ಬಿಚ್ಚಿಟ್ಟಿದ್ದರು. ಧ್ರುವ ಸರ್ಜಾ ಯಾವ ಹುಡುಗಿಯನ್ನು ಮದುವೆಯಾಗುತ್ತಾರೆ ಎಂದು ತಿಳಿದುಕೊಳ್ಳಲು ಪ್ರೇರಣಾರ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಪ್ರಥಮ್, ಧ್ರುವ ಸರ್ಜಾರೊಂದಿಗೆ ಪ್ರೇರಣಾ ಅವರನ್ನು ಭೇಟಿ ಮಾಡಿದ್ದು, ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಧೃವ ಸರ್ಜಾ ಅವರ ಬಳಿ ಒಂದೇ ಹಠ ನನ್ನದು. ನನಗೆ ಬರೀ ಗೋಡಂಬಿ ಬೇಡ. ದ್ರಾಕ್ಷಿ-ಗೋಡಂಬಿ ಒಟ್ಟಿಗೆ ಬೇಕು ಎಂದು. ನಿಮ್ಮ ಜೊತೆ ಪ್ರೇರಣಾ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿದೆ. ಬುಧವಾರ ರಾತ್ರಿ 10:30 ರ ಸಮಯದಲ್ಲಿ ಪ್ರೀತಿಯ ಸೋದರ ಧೃವ ಅವರೇ ಕಾರು ಡ್ರೈವ್ ಮಾಡಿಕೊಂಡು ಪ್ರೇರಣಾ ಅವರ ಮನೆಗೆ ಕರೆದುಕೊಂಡು ಹೋದರು.

    ಒಂದು ವಿಷಯ ಹೇಳುತ್ತೇನೆ. ಪ್ರೇರಣಾ ಸಕ್ಕತ್ ಲಕ್ಕಿ ಎಂದು ಎಲ್ಲಾ ಮಾತನಾಡುತ್ತಿದ್ದರು. ಧ್ರುವ ಅವರು ಕೂಡ ಲಕ್ಕಿ. ಅವರ ಮನೆಯಲ್ಲಿ ನಿನ್ನೆ ಅಪ್ಪ-ಅಮ್ಮ ಎಲ್ಲಾ ಇದ್ದರು, ಸಕ್ಕತ್, ತರ್ಲೆ ತಮಾಷೆ ಇತ್ತು. ದಯಾನಂದ ಕಾಲೇಜಲ್ಲಿ ಲೆಕ್ಚರರ್ ಆಗಿರುವ ಪ್ರೇರಣಾ ಅವರು ಧ್ರುವ ಅವರಿಗೆ ಏನು ಪಾಠ ಮಾಡಿರುತ್ತಾರೆ ನೋಡೋಣ ಎಂದು ಹೋಗಿದ್ದೆ. ನಿಜಕ್ಕೂ she is a wonderful soul.

    ಪ್ರೇರಣಾ ಅವರಿಗೆ ಪಬ್ಲಿಸಿಟಿ, ಮೀಡಿಯಾ ಇದು ಯಾವುದು ಇಷ್ಟ ಆಗಲ್ಲ. ಸಿಂಪಲ್ ಲೈಫ್ ಅನ್ನು ಸಖತಾಗಿ ಲೀಡ್ ಮಾಡುತ್ತಿದ್ದಾರೆ. ನನ್ನ ಒತ್ತಡಕ್ಕೆ ಮಣಿದು ಧ್ರುವ ಅವರೇ ಕಾರು ಡ್ರೈವ್ ಮಾಡಿಕೊಂಡು ಕರೆದುಕೊಂಡು ಹೋದರು. ಒಂದು ಮಾತು ನಿಜ. ಒಳ್ಳೆ ಜೋಡಿ ಮೇಡ್ ಫಾರ್ ಇಚ್ ಆದರ್ ನಾನು ಎಷ್ಟೇ ಕಾಲು ಎಳೆದರೂ ನಗುತ್ತಾ ಆರಾಮಾವಾಗಿದ್ದರು. ಅತಿ ಶೀಘ್ರ ಡಿಸೆಂಬರ್ 9 ರಂದು ನಿಶ್ಚಿತಾರ್ಥ. ಉಳಿದ ಎಲ್ಲಾ ವಿಷಯ ಅವರು ಅತಿ ಶೀಘ್ರದಲ್ಲಿ ಮಾಧ್ಯಮದ ಮುಂದೆ ಬಹಿರಂಗವಾಗಿ ಮದುವೆ ಆಮಂತ್ರಣ ಕೊಡುತ್ತಾರೆ. ಅಲ್ಲಿಯವರೆಗೂ ಆರಾಮವಾಗಿ ಇರಲಿ ಬಿಡಿ ಈ ಜೋಡಿ.

    ಬಟ್ ಪ್ರೇರಣಾ ಅವವರ ಪೋಷಕರಿಗೆ ಧ್ರುವ ಸರ್ಜಾ ಅಂದರೆ ಸಖತ್ ಹೆಮ್ಮೆ. ಆಕ್ಚುವಲಿ ಅಳಿಯಾ ಅಲ್ಲ, ಗೆಳೆಯ ಅವರಿಗೆ ಅಷ್ಟು ಆಪ್ತರು. ಲಾಸ್ಟ್ ಒಂದು ಇಂಟರೆಸ್ಟಿಂಗ್ ವಿಷಯ ಹೇಳುತ್ತೇನೆ. ಪ್ರೇರಣಾ ಅವರ ತಂದೆ ಶಂಕರ್ ಮತ್ತು ಅರ್ಜುನ್ ಸರ್ಜಾ ಅವರು ಕೂಡ ಬೆಸ್ಟ್ ಫ್ರೆಂಡ್ಸ್ ಗೊತ್ತಾ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv