Tag: ಪ್ರೇರಣಾ ಶಂಕರ್

  • ಪತಿ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಫೋಟೋ ಜೊತೆ ಪ್ರೇರಣಾ ಲವ್ಲಿ ವಿಶ್ಸ್

    ಪತಿ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ಫೋಟೋ ಜೊತೆ ಪ್ರೇರಣಾ ಲವ್ಲಿ ವಿಶ್ಸ್

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾಗೆ(Dhruva Sarja) ಇಂದು ಹುಟ್ಟುಹಬ್ಬದ ಸಂಭ್ರಮ. ನಟ ಧ್ರುವ ಸರ್ಜಾಗೆ ಈ ವರ್ಷ ತುಂಬಾನೇ ಸ್ಪೆಷಲ್ ಆಗಿದ್ದು, ಇತ್ತೀಚೆಗಷ್ಟೇ ಮುದ್ದು ಮಗಳ ಆಗಮನ ಕೂಡ ಆಗಿದೆ. ಈ ಖುಷಿಯಲ್ಲಿ ಪತ್ನಿ ಪ್ರೇರಣಾ(Prerana Shankar) ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಆಗಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

    ಚಂದನವನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಧ್ರುವ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಇಂದು ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿರುವ ಧ್ರುವ ಸರ್ಜಾ ಸದ್ಯ ಮುದ್ದು ಮಗಳ ಆಗಮನದ ಖುಷಿಯಲ್ಲಿದ್ದಾರೆ. ಪತ್ನಿ ಮತ್ತು ಮಗಳ ಆರೋಗ್ಯದ ಹಿತದೃಷ್ಟಿಯಿಂದ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಆಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಸೇರುವುದು ಸೂಕ್ತವಲ್ಲ ಎಂದು ಬರ್ತ್‌ಡೇ ಅನ್ನು ಅಭಿಮಾನಿಗಳ ಜೊತೆ ಧ್ರುವ ಸೆಲೆಬ್ರೇಟ್ ಮಾಡುತ್ತಿಲ್ಲ. ಇನ್ನೂ ಪತ್ನಿ ಪ್ರೇರಣಾ, ಪತಿ ಧ್ರುವ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ

     

    View this post on Instagram

     

    A post shared by Prerana Shankar (@shankar.prerana)

    ನಿಮಗೆ ಜನ್ಮ ದಿನದ ಶುಭಾಶಯಗಳು, ಪ್ರೀತಿಯ ಪತಿ ಮತ್ತು ತಂದೆ. ನನಗೆ ಗೊತ್ತು ಈ ಬಾರಿ ನಾನು ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆಯನ್ನ ನೀಡಿದ್ದೇನೆ ಎಂದು ಪ್ರೇರಣಾ ಸಾಮಾಜಿಕ ಜಾಲತಾಣದಲ್ಲಿ ಲವ್ಲಿ ವಿಶ್ ಜೊತೆ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿದ್ದಾರೆ. ಪ್ರೇರಣಾ ಪೋಸ್ಟ್ ಪತಿ ಧ್ರುವ ಕೂಡ, ಮಗಳ ಆಗಮನ ʻಬೆಸ್ಟ್ ಗಿಫ್ಟ್ʼ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ನೆಚ್ಚಿನ ನಟನಿಗೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

     

    View this post on Instagram

     

    A post shared by Dhruva Sarja (@dhruva_sarjaa)

    ಇನ್ನೂ ಧ್ರುವ ಹುಟ್ಟುಹಬ್ಬದಂದು ಧ್ರುವ ಸರ್ಜಾ ನಟನೆಯ `ಮಾರ್ಟಿನ್'(Martin Film) ಚಿತ್ರದ ಸ್ಪೆಷಲ್ ಪೋಸ್ಟ್‌ ಅನ್ನು ಚಿತ್ರತಂಡ ರಿಲೀಸ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಹಾರೈಸಿದೆ. ಧ್ರುವ ಗನ್ ಹಿಡಿದು ರಾ ಲುಕ್‌ನಲ್ಲಿ ರಗಡ್ ಆಗಿ ಮಿಂಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಣ್ಣನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಸಂತಸದ ನಡುವೆ ಧ್ರುವ ಸರ್ಜಾ ಭಾವುಕ

    ಅಣ್ಣನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಸಂತಸದ ನಡುವೆ ಧ್ರುವ ಸರ್ಜಾ ಭಾವುಕ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ(Dhruva Sarja) ಮನೆಯಲ್ಲಿ ಸಂತಸ ಮನೆ ಮಾಡಿದೆ. ಧ್ರುವ ಪತ್ನಿ ಪ್ರೇರಣಾ ಶಂಕರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಧ್ರುವ ಸರ್ಜಾ ಅಣ್ಣ ಚಿರು ಮತ್ತು ಅಜ್ಜಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ.

    ಸರ್ಜಾ ಕುಟುಂಬದಲ್ಲಿ (Sarja Family) ಸಂಭ್ರಮ ಮನೆ ಮಾಡಿದೆ. ರಾಯನ್ (Rayan) ನಂತರ ಮಗಳು ಮನೆಗೆ ಬಂದಿರುವುದು ಧ್ರುವಗೆ ಖುಷಿ ಕೊಟ್ಟಿದೆ. ನಾನು ಆಸೆ ಪಟ್ಟಂತೆ ಹೆಣ್ಣು ಮಗು ಆಗಿದೆ. ಇದು ತುಂಬಾ ಸಂತಸದ ವಿಚಾರ. ಆದರೆ ಈ ವೇಳೆ ನಮ್ಮ ಅಣ್ಣ, ಅಜ್ಜಿ ಇಲ್ಲದಿರುವುದು ನೋವಿನ ಸಂಗತಿ. ಅವರಿಬ್ಬರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಧ್ರುವ ಸರ್ಜಾ ಚಿರು ಹಾಗೂ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಾನ್ಯ – ರೂಪೇಶ್ ಶೆಟ್ಟಿ ಮಧ್ಯೆ ಬರಲು ಕಾವ್ಯಶ್ರೀಗೆ ಸಲಹೆ ಕೊಟ್ಟಿದ್ಯಾರು ಗೊತ್ತಾ?‌ ದೊಡ್ಮನೆಯಲ್ಲಿ ಬಿಗ್‌ ಟ್ವಿಸ್ಟ್

    Dhruva Sarja

    ಇನ್ನು ಸಾಮಾನ್ಯವಾಗಿ ಹೆಣ್ಣು ಮಕ್ಕಳಂದ್ರೆ ಒಂದು ಮರ್ಯಾದೆ ಇತ್ತು. ಆದರೀಗ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಎಲ್ಲರ ಲೈಫ್‌ನಲ್ಲೂ ಏರಿಳಿತಗಳಿರುತ್ತೆ. ನಮ್ಮ ಜೀವನದಲ್ಲೂ ಅಂತಹ ಕಷ್ಟಗಳು ಎದುರಾಗಿತ್ತು. ಈ ವೇಳೆಯಲ್ಲಿ ಡಾಕ್ಟರ್ ಸಲಹೆಯಿಂದ ಮುದ್ದಾದ ಮಗು ನಮ್ಮ ಕೈ ಸೇರಿದೆ. ನನಗೆ ಆಶೀರ್ವದಿಸಿದಂತೆ ನನ್ನ ಮಗುವಿನ ಮೇಲೂ ಕೂಡ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಎಂದು ಫ್ಯಾನ್ಸ್‌ಗೆ ಧ್ರುವ ಮನವಿ ಮಾಡಿದ್ದಾರೆ.

    ಧ್ರುವ ಸರ್ಜಾ ಬಾಲ್ಯದ ಗೆಳೆತಿ ಪ್ರೇರಣಾರನ್ನು 2019ರಲ್ಲಿ ವಿವಾಹವಾಗಿದ್ದರು. ಬಳಿಕ 2020ರಲ್ಲಿ ಚಿರು ಸರ್ಜಾ ಅಗಲಿದ್ದರು. ನಂತರ ರಾಯನ್ ರಾಜ್ ಸರ್ಜಾ ಆಗಮನ ಮನೆಗೆ ಹೊಸ ಚೈತನ್ಯ ಕೊಟ್ಟಿತ್ತು. ಇದೀಗ ಧ್ರುವ ಸರ್ಜಾ ದಂಪತಿಗಳ ಮೂಲಕ ಮತ್ತೊಮ್ಮೆ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ಧ್ರುವ ಸರ್ಜಾ, ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್

    ನಟ ಧ್ರುವ ಸರ್ಜಾ, ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ನಿನ್ನೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿತ್ತು.

    ಕೊರೊನಾ ಸೋಂಕು ದೃಢ ಪಟ್ಟಿರುವ ಬಗ್ಗೆ ಟ್ವೀಟ್ ಮಾಡಿ ಧ್ರುವ ಸರ್ಜಾ ಮಾಹಿತಿ ನೀಡಿದ್ದರು. ಆದರೆ ಕೊರೊನಾ ಸೋಂಕಿನ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿದ್ದ ಅವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ನಿನ್ನೆ ಈ ಬಗ್ಗೆ ಮಾಹಿತಿ ನೀಡಿದ್ದ ಧ್ರುವ ಸರ್ಜಾ, ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದರು. ಅಲ್ಲದೇ ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.

    ಈ ಹಿಂದೆ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿತ್ತು. ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿತ್ತು.

  • ಆಂಜನೇಯನ ಪರಮ ಭಕ್ತನಿಗೆ ದೇವತೆಗಳಿರುವ ಉಂಗುರ ತೊಡಿಸಿದ್ರು ಪ್ರೇರಣಾ

    ಆಂಜನೇಯನ ಪರಮ ಭಕ್ತನಿಗೆ ದೇವತೆಗಳಿರುವ ಉಂಗುರ ತೊಡಿಸಿದ್ರು ಪ್ರೇರಣಾ

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡಿ.9 ರಂದು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದಲ್ಲಿ ಧ್ರುವ ವಜ್ರದ ಉಂಗುರ ತೊಡಿಸಿದರೆ, ಪ್ರೇರಣಾ ದೇವತೆಗಳಿರುವ ಚಿನ್ನದ ಉಂಗುರವನ್ನು ತೊಡಿಸಿದ್ದಾರೆ.

    ಧ್ರುವ ಸರ್ಜಾ ಅವರು ಆಂಜನೇಯನ ಪರಮ ಭಕ್ತ. ಧ್ರುವರಂತೆಯೇ ಪ್ರೇರಣಾ ಕೂಡ ದೇವರ ಭಕ್ತರಾಗಿದ್ದು, ನಿಶ್ಚಿತಾರ್ಥದಲ್ಲಿ ತಮ್ಮ ಬಾಲ್ಯದ ಗೆಳೆಯ ಧ್ರುವ ಅವರಿಗೆ ಶಿವ, ಪಾರ್ವತಿ, ಗಣೇಶ, ನಂದಿ ಇರುವ ಚಿನ್ನದ ಉಂಗುರವನ್ನು ತೊಡಿಸಿದ್ದಾರೆ.

    ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿಗೆ ನಿಶ್ಚಿತಾರ್ಥದಲ್ಲಿ 21 ಲಕ್ಷ ರೂ. ಮೌಲ್ಯದ ವಜ್ರದ ಉಂಗುರವನ್ನು ತೊಡಿಸಿದರು. ಈ ಉಂಗುರದ ವಿಶೇಷವೆನೆಂದರೆ ಮಧ್ಯದಲ್ಲಿರುವ ವಜ್ರದ ಹರಳು 1.45 ಕ್ಯಾರೆಟ್‍ನ ಡೈಮಂಡ್ ಸಾಲಿಟೇರ್ ಇದ್ದು, ಉಂಗುರದ ಸುತ್ತಲಿನ ವಜ್ರದ ಹರಳುಗಳು 2.600 ಕ್ಯಾರೆಟ್ ಹೊಂದಿದೆ.

    ಭಾನುವಾರ ಬನಶಂಕರಿಯ ಆಂಜನೇಯನ ಸನ್ನಿಧಿಯಲ್ಲಿ ಸುಂದರ ಹಸಿರು ಮಂಟಪ, ಪವಿತ್ರ ಗೋವುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಧ್ರುವ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರಿಗೆ 21 ಲಕ್ಷದ ವಜ್ರದ ಉಂಗುರವನ್ನು ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ತೆಂಗಿನ ಗರಿ, ಮಾವಿನ ಎಲೆಯ ಹಸಿರು ತಳಿರು-ತೋರಣಗಳಿಂದ ಕೂಡಿದ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದರು. ಈ ವೇದಿಕೆಯಲ್ಲೇ ಧ್ರುವ ಹಾಗೂ ಪ್ರೇರಣಾ ಉಂಗುರ ಬದಲಾಯಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv