Tag: ಪ್ರೇಯಸಿ

  • ಬ್ರೇಕಪ್ ಎಂದಿದ್ದಕ್ಕೆ ಪ್ರೇಯಸಿಯ ತುಟಿ ಕಚ್ಚಿ ಬಿಸಾಕಿದ ಪಾಗಲ್ ಪ್ರೇಮಿ

    ಬ್ರೇಕಪ್ ಎಂದಿದ್ದಕ್ಕೆ ಪ್ರೇಯಸಿಯ ತುಟಿ ಕಚ್ಚಿ ಬಿಸಾಕಿದ ಪಾಗಲ್ ಪ್ರೇಮಿ

    ವಾಷಿಂಗ್ಟನ್: ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಆತ ಆಕೆಯ ತುಟಿ ಕಚ್ಚಿ ಬಿಸಾಕಿದ ಪ್ರಕರಣವೊಂದು ಅಮೆರಿಕದ ದಕ್ಷಿಣ ಕೆರೋಲಿನಾದಲ್ಲಿ ನಡೆದಿದೆ.

    ಕಾಯಲಾ ಒಂದು ವರ್ಷದ ಹಿಂದೆ ನಡೆದ ಘಟನೆಯನ್ನು ಈಗ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನೆಟ್ಟಿಗರು ಮಾಜಿ ಪ್ರಿಯಕರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಪ್ರಕರಣ ದಾಖಲಾಗಿ ಕೋರ್ಟ್ ಈಗ ಆರೋಪಿ ಹಾರೂನ್ ಫ್ಲೇರಿಗೆ 12 ವರ್ಷ ಜೈಲು ಶಿಕ್ಷೆ ನೀಡಿದೆ.

    ಪೋಸ್ಟ್ ನಲ್ಲಿ ಏನಿದೆ?
    2016ರಲ್ಲಿ ಶ್ರೀಮಂತ ವ್ಯಕ್ತಿಯ ಮಗ ಹಾರೂನ್ ಫ್ಲೇರಿ ಜೊತೆ ನಾನು ಡೇಟಿಂಗ್ ಮಾಡುತ್ತಿದ್ದೆ. ಆಗ ನನಗೆ ಕೇವಲ 17 ವರ್ಷವಾಗಿತ್ತು. 1 ವರ್ಷ ಲಿವಿಂಗ್ ರಿಲೇಷನ್ ಬಳಿಕ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂತು.

    ಫ್ಲೇರಿ ನನ್ನನ್ನು ಆತನ ಆಸ್ತಿಯಂತೆ ಉಪಯೋಗಿಸಿಕೊಳ್ಳುತ್ತಿದ್ದ. ನನಗೆ ಇದು ತುಂಬಾ ಬೇಗ ಅನುಭವವಾಯಿತು. ಫ್ಲೇರಿ ಕೆಟ್ಟ ಉದ್ದೇಶದಿಂದ ನನ್ನ ಹತ್ತಿರ ಬರುತ್ತಿದ್ದನು. ಆತ ನನ್ನನ್ನು ಎಂದಿಗೂ ಪ್ರೀತಿಸಲಿಲ್ಲ. ನನ್ನನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದನು. ಆತ ಚಿಕ್ಕ- ಚಿಕ್ಕ ವಿಷಯಕ್ಕೂ ನನ್ನ ಮೇಲೆ ಕೋಪ ಮಾಡಿಕೊಂಡು ಜಗಳವಾಡುತ್ತಿದ್ದನು. ಹಾಗಾಗಿ ನಾನು ಆತನ ಜೊತೆ ಬ್ರೇಕಪ್ ಮಾಡಿಕೊಂಡೆ.

    ಬ್ರೇಕಪ್ ಆಗಿ ಕೆಲವು ವಾರದ ನಂತರ ಫ್ಲೇರಿ ನನ್ನನ್ನು ಭೇಟಿಯಾಗಲು ಬಂದಿದ್ದ. ನಾನು ಆತನನ್ನು ಭೇಟಿಯಾಗಲು ನಿರಾಕರಿಸಿದೆ. ಆದರೆ ಅವನು ಕಾರಿನಲ್ಲಿ ಬಂದು ನನ್ನ ಮನೆಯ ಹೊರಗೆ ನನಗಾಗಿ ಕಾಯುತ್ತಿದ್ದ. ಆತನನ್ನು ನೋಡಿ ನನಗೆ ಸ್ವಲ್ಪ ಹೆದರಿಕೆ ಆಯಿತು. ಆ ದಿನ ಒಂದು ಕೈಯಲ್ಲಿ ಹೂಗುಚ್ಚ ಹಾಗೂ ಕಾರ್ಡ್ ಹಿಡಿದುಕೊಂಡು ನಿಂತಿದ್ದ ಫ್ಲೇರಿ ಕಾರ್ಡ್ ನಲ್ಲಿ ‘ವಾಪಸ್ ಬಾ’ ಎಂದು ಬರೆದು ನನ್ನ ಹತ್ತಿರ ಮನವಿ ಮಾಡಿಕೊಂಡಿದ್ದ.

    ಆತನ ಮನವಿಯನ್ನು ತಿರಸ್ಕರಿಸಿ ಹೋದಾಗ ಆತ ನನ್ನನ್ನು ಜೋರಾಗಿ ಎಳೆದು ಆತನ ಹಲ್ಲಿನಿಂದ ನನ್ನ ತುಟಿಯನ್ನು ಕಚ್ಚಿದ. ಕಚ್ಚಿದ ತೀವ್ರತೆಗೆ ತುಟಿ ಹರಿದು ಕೆಳಗೆ ಬಿತ್ತು. ಇದನ್ನು ನೋಡಿ ಸಂತಸಗೊಂಡ ಆತ, ನಿನ್ನ ಮುಂದಿನ ಬಾಯ್‍ಫ್ರೆಂಡ್‍ಗಾಗಿ ಈ ಗುರುತನ್ನು ಮಾಡಿದ್ದೇನೆ ಎಂದು ಹೇಳಿ ಕೃತ್ಯದ ಬಗ್ಗೆ ಸಮರ್ಥನೆ ನೀಡಿದ. ನಾನು ನೋವಿನಲ್ಲಿ ಅಳುತ್ತಿದ್ದಾಗ ಆತ ಜೋರಾಗಿ ನಗುತ್ತಿದ್ದ. ಬಳಿಕ ಆತ ಅಲ್ಲಿಂದ ಹೊರಟು ಹೋದನು.

    ನಾನು ನೋವಿನಲ್ಲೇ ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಕೊಂಡೆ. ಈಗ ವೈದ್ಯರು 300 ಹೊಲಿಗೆ ಹಾಕಿ ತುಟಿಯನ್ನು ಸರಿ ಮಾಡಿದ್ದಾರೆ. ನನ್ನ ನೋವಿನ ಕಥೆ ಕೇಳಿದ ಆಸ್ಪತ್ರೆ ಸಿಬ್ಬಂದಿ ಬ್ಲೇಕ್ ನನಗೆ ಧೈರ್ಯ ತುಂಬಿದರು. ಅವರ ಉತ್ತಮ ಮನಸ್ಸಿಗೆ ನಾನು ಸೋತು ಈಗ ಅವರನ್ನೇ ಪ್ರೀತಿಸುತ್ತೇನೆ ಎಂದು ಕಾಯಲಾ ಎಫ್‍ಬಿಯಲ್ಲಿ ಹೇಳಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗಳನ್ನು ಮದುವೆ ಮಾಡಿಕೊಡಿ ಎಂದಿದ್ದಕ್ಕೆ ಪ್ರೇಮಿಗೆ ಮಾರಣಾಂತಿಕ ಹಲ್ಲೆ

    ಮಗಳನ್ನು ಮದುವೆ ಮಾಡಿಕೊಡಿ ಎಂದಿದ್ದಕ್ಕೆ ಪ್ರೇಮಿಗೆ ಮಾರಣಾಂತಿಕ ಹಲ್ಲೆ

    ಮಡಿಕೇರಿ: ತಮ್ಮ ಮಕ್ಕಳು ಬೇರೆಯವರನ್ನು ಪ್ರೀತಿಸಿ ಮದುವೆಯಾದರು ಎಂಬ ಕಾರಣಕ್ಕೆ ಸಿಟ್ಟಿಗೆದ್ದು ತೆಲಂಗಾಣ ಹಾಗೂ ಹೈದರಾಬಾದ್‍ನಲ್ಲಿ ಹತ್ಯೆಗೆ ಯತ್ನಿಸಿದ ಘಟನೆಗಳು ನಮ್ಮ ಕಣ್ಣ ಮುಂದಿನಿಂದ ಮಾಸುವ ಮುನ್ನವೇ ರಾಜ್ಯದಲ್ಲೂ ಇಂಥದೇ ಪ್ರಕರಣವೊಂದು ನಡೆದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರಂಗಿಯಲ್ಲಿ ಈ ಘಟನೆ ನಡೆದಿದೆ.

    ಆಗಿದ್ದೇನು?: ಹಾರಂಗಿಯ ಗಿರೀಶ್ ಹಾಗೂ ಯುವತಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿಯನ್ನು ಮದುವೆಯಲ್ಲಿ ಅಂತ್ಯಗೊಳಿಸಲು ಗಿರೀಶ್ ಮುಂದಾಗಿದ್ದ. ಹೀಗಾಗಿ ಗಿರೀಶ್ ಯುವತಿಯ ತಂದೆಯ ಬಳಿ ನಿಮ್ಮ ಮಗಳು ಮತ್ತು ನಾನು ಪ್ರೀತಿಸುತ್ತಿದ್ದೇವೆ. ನಮ್ಮ ಮದುವೆ ಮಾಡಿಕೊಡಿ ಎಂದು ಮನವಿ ಮಾಡಿದ್ದ. ಆದರೆ ಯುವತಿಯ ಮನೆಯವರಿಗೆ ಮದುವೆ ಮಾಡಿಸಿಕೊಡುವುದು ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಪ್ರೇಯಸಿಯ ತಂದೆ ಸೇರಿದಂತೆ ಮೂವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಪ್ರೇಮಿ ಗಿರೀಶ್ ಸ್ಥಿತಿ ಗಂಭೀರವಾಗಿದ್ದು ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿಗಳಾದ ಪ್ರೇಯಸಿಯ ತಂದೆ ವಸಂತ್ ಹಾಗೂ ಸಹೋದರ ಗೌತಮ್‍ನನ್ನು ಪೊಲೀಸರು ಬಂಧಿಸಿದ್ದು, ಪ್ರೇಯಸಿಯ ಮಾವ ಸೋಮಶೇಖರ್ ಪರಾರಿಯಾಗಿದ್ದಾನೆ.

    ಕಳೆದ ಕೆಲವು ದಿನಗಳ ಹಿಂದೆ ಗಿರೀಶ್ ತನ್ನ ಪ್ರೀತಿಯ ಕುರಿತು ಪ್ರೇಯಸಿಯ ತಂದೆ ವಸಂತ್ ಹಾಗೂ ಕುಟುಂಬದವರಿಗೆ ತಿಳಿಸಿದ್ದ. ನಮ್ಮ ಮದುವೆ ಮಾಡಿಕೊಡಿ ಎಂದು ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡಿದ್ದ. ಆದರೆ ಇದಕ್ಕೆ ಪ್ರೇಯಸಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

    ಶುಕ್ರವಾರ ಕಾರಿನಲ್ಲಿ ಬಂದ ಗಿರೀಶ್ ನನ್ನು ತಡೆ ಪ್ರೇಯಸಿಯ ಸಂಬಂಧಿಕರು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಗಿರೀಶ್ ನನ್ನು ಮೈಸೂರು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೇಯಸಿಯ ಕೊಚ್ಚಿ ಕೊಚ್ಚಿ ಕೊಂದು ಮಾಂಸವನ್ನು ಟಾಯ್ಲೆಟಲ್ಲಿ ಫ್ಲಷ್ ಮಾಡ್ದ!

    ಪ್ರೇಯಸಿಯ ಕೊಚ್ಚಿ ಕೊಚ್ಚಿ ಕೊಂದು ಮಾಂಸವನ್ನು ಟಾಯ್ಲೆಟಲ್ಲಿ ಫ್ಲಷ್ ಮಾಡ್ದ!

    ಮಾಸ್ಕೋ: ಪ್ರಿಯತಮೆ ತನ್ನ ಜೊತೆ ಬಂದು ವಾಸಿಸಲು ತಯಾರಾಗಿಲ್ಲ ಎಂದು ಸಿಟ್ಟಿಗೆದ್ದ ಕಾಮುಕನೊಬ್ಬ ತನ್ನ ಪ್ರೇಯಸಿಯನ್ನು ಕೊಂದಿದ್ದಾನೆ. ಕೊಂದ ಬಳಿಕ ಆತ ಮಾಡಿದ ಕೆಲಸಕ್ಕೆ ಆತನ ಸಂಬಂಧಿಕರೇ ಬೆಚ್ಚಿ ಬಿದ್ದಿದ್ದು, ಆತ ಇಷ್ಟು ಕ್ರೂರನಾಗಿದ್ದು ಹೇಗೆ ಎಂದು ಕೇಳುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ ಈತನಿಗೆ ಈ ಹಿಂದೆಯೇ ಮದುವೆಯಾಗಿ ಮಕ್ಕಳೂ ಇದ್ದಾರೆ. ಈ ಎಲ್ಲಾ ವಿಚಾರ ಮುಚ್ಚಿಟ್ಟು ಆತ ಇನ್ನೊಬ್ಬಳ ಜೊತೆ ಪ್ರೇಮದಾಟ ಶುರು ಮಾಡಿದ್ದನಂತೆ.

    ಕೊಂದಿದ್ದು ಯಾಕೆ..?
    ರಷ್ಯಾದ 36 ವರ್ಷದ ಡಿಮಿಟ್ರಿ ಝೆಲೆನ್ಸ್ಕಿ 27 ವರ್ಷನ ಟಾಟಿಯಾನಾ ಮೆಲೆಖಿನಾ ಎಂಬಾಕೆಯನ್ನು ಲವ್ ಮಾಡ್ತಿದ್ದ. ಅಲ್ಲದೆ ಆಕೆಯ ಜೊತೆ ಒಂದಾಗಿ ಬಾಳುವ ಕನಸನ್ನೂ ಬಿತ್ತಿದ್ದ. ಟಾಟಿಯಾನ ವಿದ್ಯಾಭ್ಯಾಸ ಮುಗಿದ ಬಳಿಕ ರಷ್ಯಾದ ಪೇಮ್ ನಗರದಲ್ಲಿ ನವ ಜೀವನ ಶುರು ಮಾಡಲು ಯೋಚಿಸಿದ್ದರು. ಹೀಗಾಗಿ ತನ್ನ ವಿದ್ಯಾಭ್ಯಾಸ ಮುಗಿಸಿದ ಬಳಿಕ ಟಾಟಿಯಾನಾ ಪೇಮ್ ನಗರಕ್ಕೆ ಬಂದಿದ್ದಾಳೆ. ಆದರೆ ಈ ಊರಿಗೆ ಬಂದಾಗ ಆಕೆಗೆ ಡಿಮಿಟ್ರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ನಾನು ಯಾವುದೇ ಕಾರಣಕ್ಕೂ ಪೇಮ್ ನಲ್ಲಿ ವಾಸ ಮಾಡಲ್ಲ ಎಂದು ಟಾಟಿಯಾನಾ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಡಿಮಿಟ್ರಿ ಆಕೆಯನ್ನು ಕೊಂದಿದ್ದಾನೆ.

    ಮಾಂಸ, ಮೂಳೆ ಬೇರ್ಪಡಿಸಿ ಪುಡಿ ಪುಡಿ ಮಾಡ್ದ!
    ಪ್ರಿಯತಮೆಯ ವರ್ತನೆಯಿಂದ ಸಿಟ್ಟಿಗೆದ್ದ ಈತ ಪ್ರಿಯತಮೆಯನ್ನು ಕೊಂದಿದ್ದೇನೋ ಆಯ್ತು. ಆದರೆ ಕೊಲೆ ಮಾಡಿದ ವಿಚಾರ ಹೊರಜಗತ್ತಿಗೆ ಗೊತ್ತಾಗಬಾರದಲ್ಲ. ಅದಕ್ಕಾಗಿ ಹೊಸ ಪ್ಲ್ಯಾನ್ ಮಾಡ್ದ. ಪ್ರಿಯತಮೆಯ ಅಂಗಾಂಗಗಳನ್ನು ಕೊಚ್ಚಿ ಕೊಚ್ಚಿ ಕಟ್ ಮಾಡಿದ ಆತ ಅದರಿಂದ ಮೂಳೆ ಹಾಗೂ ಮಾಂಸವನ್ನು ಬೇರ್ಪಡಿಸಿದ. ಇಲ್ಲಿಗೇ ಈತನ ವಿಕೃತಿ ಮುಗಿಯಲಿಲ್ಲ. ಹೇಗಿದ್ದರೂ ತಾನವಳ ಮೃತದೇಹ ಹೊರಗಡೆ ಸಾಗಿಸಲು ಸಾಧ್ಯವಿಲ್ಲ ಎಂದು ಅರಿತಿದ್ದ ಆತ ಆ ಮಾಂಸಗಳನ್ನು ಮತ್ತೆ ಕೊಚ್ಚಿ ಪುಡಿ ಪುಡಿ ಮಾಡಿದ. ಬಳಿಕ ಆ ಮಾಂಸದ ಮುದ್ದೆಯನ್ನು ಟಾಯ್ಲೆಟ್ ನ ಕಮೋಡ್ ಗೆ ಹಾಕಿ ಫ್ಲಷ್ ಮಾಡಿದ್ದಾನೆ. ಬಳಿಕ ಆಕೆಯ ಎಲುಬನ್ನು ಚೂರು ಚೂರು ಮಾಡಿ ಮೀನುಗಳಿಗೆ ಆಹಾರವಾಗಲಿ ಎಂದು ನದಿಗೆಸೆದಿದ್ದಾನೆ. ಆದರೆ ಯಾವಾಗ ಟಾಟಿಯಾನಾಳ ತಂದೆ ಪೊಲೀಸರಿಗೆ ದೂರು ನೀಡಿದರೋ ತನಿಖೆ ಶುರುವಾಗಿದೆ. ಇದರ ವಿಚಾರಣೆ ಆರಂಭಿಸಿದ ಪೊಲೀಸರು ನೇರವಾಗಿ ಬಂದು ಡಿಮಿಟ್ರಿ ಮನೆ ಬಾಗಿಲು ಬಡಿದಿದ್ದಾರೆ.

    ಬರಲಿಲ್ಲ ಫೋನು, ಮಾಡಿದ್ರು ಕಂಪ್ಲೇಂಟು!
    ಯಾವಾಗ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಶುರು ಮಾಡಿದರೋ ಡಿಮಿಟ್ರಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ್ದು ಯಾರಿಗೂ ಗೊತ್ತಾಗದೇ ಇರಲಿ ಎಂದು ಮಾಂಸವನ್ನು ಪುಡಿ ಪುಡಿ ಮಾಡಿ ಟಾಯ್ಲೆಟ್ ಗೆ ಹಾಕಿದ್ದೇನೆ. ಮೂಳೆಗಳನ್ನು ನದಿಗೆ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಮನೆಯಿಂದ ಹೊರಟಿದ್ದ ಟಾಟಿಯಾನಾ ನಾನು ಪೇಮ್ ತಲುಪುತ್ತಿದ್ದಂತೆ ಫೋನ್ ಮಾಡುತ್ತೇನೆ ಎಂದು ಅಪ್ಪನಿಗೆ ಮಾತು ಕೊಟ್ಟಿದ್ದಾಳೆ. ಆದರೆ ಮಗಳ ಫೋನ್ ಕಾಲ್ ಬಾರದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾದ ಅಪ್ಪ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದಾರೆ.

    ಡಿಮಿಟ್ರಿ ಈಗಾಗಲೇ ಮದುವೆಯಾಗಿದ್ದವಳ ಹೆಸರೂ ಟಾಟಿಯಾನಾ. ಸ್ಥಳೀಐ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ನಾವಿಬ್ಬರೂ ಬೇರೆ ಬೇರೆಯಾಗೇ ವಾಸ ಮಾಡುತ್ತಿದ್ದೆವು. ಆದರೆ ಡೈವೋರ್ಸ್ ಆಗಿರಲಿಲ್ಲ. ಆತ ಇಷ್ಟೊಂದು ಕ್ರೂರಿ ಎಂದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಡಿಮಿಟ್ರಿ ಪೊಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಉಳಿಯೋದು ವೇಸ್ಟ್, ನನ್ನನ್ನು ಕ್ಷಮಿಸಿ- ತಾಯಿಗೆ ಮಗನಿಂದ ಸೆಲ್ಫಿ ವಿಡಿಯೋ

    ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಉಳಿಯೋದು ವೇಸ್ಟ್, ನನ್ನನ್ನು ಕ್ಷಮಿಸಿ- ತಾಯಿಗೆ ಮಗನಿಂದ ಸೆಲ್ಫಿ ವಿಡಿಯೋ

    ದಾವಣಗೆರೆ: ಪೊಲೀಸರು ಹಾಗೂ ಪೋಷಕರು ಪ್ರೇಯಸಿಯನ್ನು ದೂರ ಮಾಡಿದ್ದಕ್ಕೆ ಮನನೊಂದು ಪ್ರಿಯಕರ ಸೆಲ್ಫಿ ವಿಡಿಯೋ ಮಾಡಿದ ಘಟನೆ ದಾವಣಗೆರೆಯ ಹದಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ದಾವಣಗೆರೆಯ ಲೋಕಿಕೆರೆ ಗ್ರಾಮದ ಯುವತಿಯೊಬ್ಬಳನ್ನು ಬಳ್ಳಾರಿಯ ರಾಜೇಂದ್ರ ಪ್ರೀತಿಸುತ್ತಿದ್ದರು. ಯುವತಿಯ ಮನೆಯಲ್ಲಿ ಬೇರೆ ಯುವಕನ ಜೊತೆ ಮದುವೆ ಮಾಡಲು ತಯಾರಿ ನಡೆದಿತ್ತು. ಇದರಿಂದ ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

    ಪೊಲೀಸರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ಯುವತಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದರು. ನಂತರ ವಿಚಾರಣೆಗೆ ಕರೆಸಿ ದಾವಣಗೆರೆಯ ಹದಡಿ ಠಾಣಾ ಪೊಲೀಸರು ಪ್ರೇಮಿಗಳನ್ನು ದೂರ ಮಾಡಿದ್ದಾರೆ.

    ತನ್ನ ಪ್ರೇಯಸಿಯಿಂದ ದೂರವಾಗಿದರಿಂದ ಪ್ರಿಯಕರ ರಾಜೇಂದ್ರ ಮನನೊಂದು ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಪೊಲೀಸರು ಹಾಗೂ ಆಕೆಯ ಪೋಷಕರು ನಮ್ಮಿಬ್ಬರನ್ನು ದೂರ ಮಾಡಿದ್ದಾರೆ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಉಳಿಯುವುದು ವೇಸ್ಟ್. ನನ್ನನ್ನು ಕ್ಷಮಿಸಿ ಎಂದು ತಾಯಿಗೆ ವಿಡಿಯೋ ಕಳುಹಿಸಿದ್ದನು.

    ಇದರಿಂದ ಅತಂಕಗೊಂಡ ತಾಯಿ ಪುಷ್ಪ ರಾಜೇಂದ್ರ ಸ್ನೇಹಿತರ ಜೊತೆ ಸೇರಿ ತನ್ನ ಮಗನನ್ನು ಹುಡುಕಾಟ ನಡೆಸುತ್ತಿದ್ದಾರೆ.

  • ಪ್ರೇಯಸಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ದುರಂತ!

    ಪ್ರೇಯಸಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ದುರಂತ!

    ಮೀರತ್: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದಾಗ ಆಕೆಯ ಕುಟುಂಬದವರು ಆತನ ಕೈ- ಕಾಲು ಕಟ್ಟಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಮೀರತ್‍ ನಲ್ಲಿರುವ ಖಾರ್‍ಕೌದ ಕ್ಷೇತ್ರದಲ್ಲಿ ನಡೆದಿದೆ.

    ವಿಶಾಲ್ ಹಲ್ಲೆಗೊಳಗಾದ ಯುವಕ. ಪ್ರೇಯಸಿಯನ್ನು ಭೇಟಿ ಮಾಡಲು ವಿಶಾಲ್ ಹೋಗಿದ್ದನು. ಆಗ ಯುವತಿಯ ಕುಟುಂಬದವರು ಹಾಗೂ ಗ್ರಾಮಸ್ಥರು 1 ಗಂಟೆಕ್ಕೂ ಹೆಚ್ಚು ಕಾಲ ಥಳಿಸಿದ್ದಾರೆ. ವಿಶಾಲ್‍ನನ್ನು ಥಳಿಸುವಾಗ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಆ ವಿಡಿಯೋವನ್ನು ಮಾಡಿದ್ದಾರೆ.

    ಪ್ರೇಯಸಿಯ ಕುಟುಂಬದವರು ಹಾಗೂ ಗ್ರಾಮಸ್ಥರು ವಿಶಾಲ್‍ನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್ ವಿಡಿಯೋ ನೋಡಿದ ಪೊಲೀಸರು ಸ್ವತಃ ಕೇಸ್ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

    ಅತರಾಡಾ ಗ್ರಾಮದ ನಾನಿಹಾಲ್‍ನಲ್ಲಿರುವ ಯುವತಿ ತನ್ನ ಮಾವನ ಮನೆಗೆ ಎಂದು ಬಂದಿದ್ದಳು. ಆಗ ವಿಶಾಲ್ ಹಾಗೂ ಯುವತಿ ನಡುವೆ ಮಾತುಕತೆ ನಡೆದು ವಾಟ್ಸಾಪ್‍ನಲ್ಲಿ ಚಾಟಿಂಗ್ ನಡೆಸುತ್ತಿದ್ದರು. ನಂತರ ವಿಶಾಲ್ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ನಿರ್ಧರಿಸಿದನು. ಆ ವಿಷಯ ಯುವತಿಯ ಕುಟುಂಬದವರಿಗೆ ತಿಳಿದು ಆತನನ್ನು ಹಿಡಿದು ಕೈ-ಕಾಲು ಕಟ್ಟಿ ಥಳಿಸಿದ್ದಾರೆ.

    ಸದ್ಯ ವಿಶಾಲ್ ತಂದೆ ಯುವತಿಯ ಸಹೋದರ ಹಾಗೂ ಆಕೆಯ ತಂದೆಯ ಮೇಲೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 323, 342 ಹಾಗೂ 506 ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡು, ಆರೋಪಿಗಳನ್ನು ಹುಡುಕುತ್ತಿದ್ದಾರೆ.

  • ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಬೆಂಗಳೂರು: ನಾನು ಸಾಯುತ್ತೇನೆ ಎಂದು ಪ್ರೇಯಸಿಗೆ ಹೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ನಡೆದಿದೆ.

    ಕೆವಿನ್ ಫೆಡರಿಕ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆವಿನ್ ಫೆಡರಿಕ್ ಖಾಸಗಿ ಕಾಲೇಜ್ ನಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ವ್ಯಾಸಂಗ ಮಾಡುತ್ತಿದ್ದ. ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕೆವಿನ್ ತನ್ನ ಮೊಬೈಲ್ ನಲ್ಲಿ ಯುವತಿ ಜೊತೆ ಚಾಟ್ ಮಾಡುತ್ತಿದ್ದ. ಈ ವೇಳೆ ಕೆವಿನ್ ತನ್ನ ಪ್ರೇಯಸಿಯೊಂದಿಗೆ ಚಾಟ್ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೇಸೆಜ್ ಮಾಡಿದ್ದಾನೆ. ನಂತರ ತನ್ನ ಪ್ರೇಯಸಿಯ ಪ್ರತಿಕ್ರಿಯೆ ನೋಡಿ ಕೆವಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೆವಿನ್ ನಾನು ಸಾಯುತ್ತೇನೆ ಎಂದಾಗ ಯುವತಿ ‘ಐ ಡೋಂಟ್ ಮೈಂಡ್’ ಎಂದು ಮೇಸಜ್‍ಗೆ ರಿಪ್ಲೇ ಮಾಡಿದ್ದಾಳೆ. ಇದ್ದರಿಂದ ಮನನೊಂದು ಕೆವಿನ್ ತನ್ನ ಪ್ರೇಯಸಿಗೆ ತಾನು ಸಾಯುವ ಮುನ್ನ ಹಗ್ಗವನ್ನು ಫ್ಯಾನ್ ಗೆ ಕಟ್ಟಿರುವ ಫೋಟೋವನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಕೆವಿನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರಡೆ, ಮೂಳೆ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರಡೆ, ಮೂಳೆ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಚಿಕ್ಕಬಳ್ಳಾಪುರ: ಪ್ರೀತಿ, ಪ್ರೇಮ, ಪ್ರಣಯ ಎಂದು ಯುವತಿ ಜೊತೆ ಹಾಸಿಗೆ ಹಂಚಿಕೊಂಡ ಯುವಕನೋರ್ವ ಕೊನೆಗೆ ಯುವತಿ ಮದುವೆಯಾಗು ಅಂತ ಒತ್ತಾಯಿಸಿದ್ದಕ್ಕೆ, ಪ್ರಿಯತಮೆಯ ಮೃತದೇಹವೇ ಸಿಗದ ಹಾಗೆ ಕೊಲೆ ಮಾಡಿರುವ ಭಯಂಕರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಮಾತು ಬಾರದ, ಕಿವಿ ಕೇಳದ ಯುವಕನೋರ್ವ ತನ್ನ ಪ್ರೇಯಸಿಯನ್ನೇ ಪ್ಲಾನ್ ಮಾಡಿ ಮರ್ಡರ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಗೌರಿಬಿದನೂರು ಹೊರವಲಯದ ರೇಮೆಂಡ್ಸ್ ಗಾರ್ಮೆಂಟ್ಸ್ ನಲ್ಲಿ ಸೂಪರ್ ವೈಸರ್ ಆಗಿದ್ದ, ಗೌರಿಬಿದನೂರು ನಗರದ ಮುನೇಶ್ವರ ಬಡಾವಣೆಯ ನಿವಾಸಿ ಕಿಶೋರ್ ಎಂಬಾತ ತನ್ನ ಪ್ರಿಯತಮೆ ಕೋಡಿಗಾನಹಳ್ಳಿ ಗ್ರಾಮದ ಅನಿತಾ (22)ಳನ್ನು ಕೊಲೆ ಮಾಡಿದ್ದಾನೆ.

    ಗಾರ್ಮೆಂಟ್ಸ್ ನಲ್ಲೇ ಕೆಲಸ ಮಾಡುತ್ತಿದ್ದ ಅನಿತಾಳ ಜೊತೆ ಲವ್ವಿ ಡವ್ವಿ ಶುರು ಇಟ್ಟುಕೊಂಡಿದ್ದ ಕಿಶೋರ್ ದೈಹಿಕವಾಗಿ ಆಕೆಯನ್ನೇ ಬಳಸಿಕೊಂಡಿದ್ದಾನೆ. ಕೊನಗೆ ಆಕೆ ಮದುವೆಯಾಗು ಅಂದಾಗ ನಿನ್ನ ಜಾತಿ ಬೇರೆ ನನ್ನ ಜಾತಿ ಬೇರೆ ಅಂತ ಕ್ಯಾತೆ ತೆಗೆದಿದ್ದಾನೆ.

    ಇದೆಲ್ಲದರ ನಡುವೆ ಆನಿತಾ ಹಣಕ್ಕಾಗಿ ಕಿಶೋರ್ ಬಳಿ ಪೀಡಿಸುತ್ತಿದ್ದಳಂತೆ. ಇದರಿಂದ ರೋಸಿ ಹೋದ ಕಿಶೋರ್ ಹಣ ಕೊಡುತ್ತೀನಿ ಬಾ ಅಂತ ಮಾರ್ಚ್ 4ರಂದು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ, ಗೌರಿಬಿದನೂರು ತಾಲೂಕಿನ ನಿರ್ಜನ ಪ್ರದೇಶದವಾದ ದೊಡ್ಡಹನುಮನೇಹಳ್ಳಿ ಅರಣ್ಯಪ್ರದೇಶದಲ್ಲಿ ಗುಂಡಿಗೆ ತಳ್ಳಿ, ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಕೊನೆಗೆ ವೇಲ್ ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿಬಂದಿದ್ದ.

    ಈ ಸಂಬಂಧ ಕೆಲಸಕ್ಕೆ ಹೋದ ಮಗಳು ಬಂದಿಲ್ಲ ಎಂದು ಅನಿತಾಳ ಸಂಬಂಧಿಕರು ಮಾರ್ಚ್ 10 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ?
    ಇದೆಲ್ಲದರ ನಡುವೆ ಮಾರ್ಚ್ 30 ರಂದು ದೊಡ್ಡಹನುಮೇನಹಳ್ಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ತಲೆ ಬುರುಡೆ, ಮೂಳೆಗಳು ಹಾಗೂ ಅದರ ಜೊತೆಗೆ ಅಲ್ಲೆ ಸಿಕ್ಕ ಬ್ಯಾಗ್ ನಿಂದ ಅನಿತಾ ಕೊಲೆಯಾಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಅನಿತಾಳ ಕೊಲೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರು. ಅನಿತಾಳ ಮೊಬೈಲ್ ನಲ್ಲಿದ್ದ ಫೋಟೋಗಳು ಹಾಗೂ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿ, ಕಿಶೋರ್ ನನ್ನ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

    ಈ ಸಂಬಂಧ ಆರೋಪಿ ಕಿಶೋರ್ ನನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರುಡೆ, ಮೂಳೆಗಳು ಪತ್ತೆ!

  • ಕಾರಿನಲ್ಲಿ ಸೆಕ್ಸ್, ಲವ್ವರ್ ಕೊಲೆ- ನಗ್ನ ದೇಹವನ್ನ ಪೋಷಕರ ಬಳಿ ಕೊಂಡೊಯ್ದು ತಪ್ಪೊಪ್ಪಿಕೊಂಡ ಆರೋಪಿ

    ಕಾರಿನಲ್ಲಿ ಸೆಕ್ಸ್, ಲವ್ವರ್ ಕೊಲೆ- ನಗ್ನ ದೇಹವನ್ನ ಪೋಷಕರ ಬಳಿ ಕೊಂಡೊಯ್ದು ತಪ್ಪೊಪ್ಪಿಕೊಂಡ ಆರೋಪಿ

    ನವದೆಹಲಿ: 30 ವರ್ಷದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪ್ರೇಯಸಿಯ ಜೊತೆ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸಿ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರೋ ಘಟನೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?: ದಕ್ಷಿಣ ದೆಹಲಿಯ ಶೇಕ್ ಸಾರೈನ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಪಾರ್ಕ್ ಮಾಡಿದ್ದ ಕಾರಿನಲ್ಲಿ ಆರೋಪಿ ತನ್ನ ಪ್ರೇಯಸಿಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ನಗ್ನ ಮೃತದೇಹವನ್ನು ಮಾಲ್ವಿಯಾ ನಗರದ ಆಕೆಯ ಮನೆಗೆ ತೆಗೆದುಕೊಂಡು ಹೋಗಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾದ ಮಹಿಳೆ ವಿಚ್ಛೇದಿತರಾಗಿದ್ದು, ಘಟನೆಗೆ ಒಂದು ತಿಂಗಳ ಮುಂಚೆ ಆರೋಪಿಯ ಮಗುವನ್ನ ಅಬಾರ್ಷನ್ ಮಾಡಿಸಿದ್ದರು. ಅಂದಿನಿಂದ ಆರೋಪಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಈ ಘಟನೆ ಕಳೆದ ವರ್ಷ ಆಗಸ್ಟ್ 27ರಂದು ನಡೆದಿದ್ದು, ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಕೊಲೆಯಾದ ಮಹಿಳೆ ರೀಟಾ(ಹೆಸರು ಬದಲಾಯಿಸಲಾಗಿದೆ) ತನ್ನ ಗಂಡನಿಂದ ವಿಚ್ಛೇದನ ಪಡೆದಿದ್ದರು. ಅವರಿಗೆ 12 ವರ್ಷದ ಮಗನಿದ್ದ. ಬಾಲಕ ಮಾಲ್ವಿಯಾ ನಗರದ ಅಜ್ಜನ ಮನೆಯಲ್ಲಿ ವಾಸವಿದ್ದ. ಮಹಿಳೆ ಹಾಗೂ ಆರೋಪಿ ಶಾಹ್ಬಾದ್ ಖಾನ್ ಹೆಲ್ತ್‍ಕೇರ್ ಸಂಸ್ಥೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.

    ಮದ್ಯಪಾನ ಮಾಡಿದ್ದರು: 8 ತಿಂಗಳ ಹಿಂದೆ ಆರೋಪಿ ಮದುವೆಯಾಗುವುದಾಗಿ ಹೇಳಿ ಮಹಿಳೆಯನ್ನ ಪರಿಚಯ ಮಾಡಿಕೊಂಡಿದ್ದ. ಜುಲೈನಲ್ಲಿ ಮಹಿಳೆ ಗರ್ಭಿಣಿಯಾಗಿದ್ದು, ಅಬಾರ್ಷನ್ ಮಾಡಿಸುವಂತೆ ಒತ್ತಾಯಿಸಿದ್ದ. ಅಂದಿನಿಂದ ಮಹಿಳೆ ಮದುವೆಗೆ ಒತ್ತಡ ಹೇರಿದ್ದರು. ಆದ್ರೆ ಆರೋಪಿ ಅದನ್ನ ತಿರಸ್ಕರಿಸುತ್ತಲೇ ಬಂದಿದ್ದ. ಘಟನೆ ನಡೆದ ದಿನ ಇಬ್ಬರೂ ಹೊರಗೆ ಹೋಗಿದ್ದು ಮದ್ಯಪಾನ ಮಾಡಿದ್ದರು. ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಕಾರಿನಲ್ಲೇ ಸೆಕ್ಸ್ ಮಾಡಿದ ನಂತರ ಆರೋಪಿ ಮಹಿಳೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ರೀಟಾ ಪರಿಚಯಸ್ಥರೊಬ್ಬರು ಹೇಳಿದ್ದಾರೆ.

    ಕುಟುಂಬದವರ ಬಳಿ ತಪ್ಪೊಪ್ಪಿಕೊಂಡೆ: ಆರೋಪಿ ಘಜಿಯಾಬಾದ್ ನಿವಾಸಿಯಾಗಿದ್ದು, ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ನಡೆದಾಗ ಇಬ್ಬರೂ ಮದ್ಯಪಾನ ಮಾಡಿದ್ದೆವು ಎಂದು ಹೇಳಿದ್ದಾನೆ. ಕಾರಿನ ಫ್ರಂಟ್ ಸೀಟ್‍ನಲ್ಲಿ ಸೆಕ್ಸ್ ಮಾಡುವ ವೇಳೆ ಕತ್ತು ಹಿಸುಕಿದೆ. ಕೆಲವು ಗಂಟೆಗಳ ಬಳಿಕ ರೀಟಾಳನ್ನು ಕೊಲೆ ಮಾಡಿರುವುದು ಅರಿವಾಗಿ ಆಕೆಯ ಕುಟಂಬಸ್ಥರ ಬಳಿ ಹೋಗಿ ನಡೆದಿದ್ದನ್ನು ಹೇಳಿದೆ ಎಂದು ತನ್ನ ಹೇಳಿಕೆಯಲ್ಲಿ ಖಾನ್ ತಿಳಿಸಿದ್ದಾನೆ.

    ರೀಟಾ ತಂದೆ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ಐಪಿಸಿ ಸಸೆಕ್ಷನ್ 302ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧ್ಯರಾತ್ರಿ 1 ಗಂಟೆ ವೇಳೆಯಕಲ್ಲಿ ಶೇಕ್ ಸಾರೈ ಬಳಿ ಕಾರು ನಿಲ್ಲಿಸಿದ್ದರು. ಇಬ್ಬರೂ ಮದ್ಯಪಾನ ಮಾಡಿದ್ದರು. ಇಬ್ಬರ ಮಧ್ಯೆ ಜಗಳವಾಗಿ ಖಾನ್ ನನ್ನ ಮಗಳನ್ನ ಕೊಂದಿದ್ದಾನೆ. ನಂತರ ಶವವನ್ನ ಮನೆಗೆ ತಂದು ನಡೆದಿದ್ದನ್ನು ಹೇಳಿ ತಪ್ಪೊಪ್ಪಿಕೊಂಡ ಎಂದು ರೀಟಾ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

    ಸಂತ್ರಸ್ತೆಯ ಕುಟುಂಬ ಕೂಡಲೇ ರೀಟಾ ಅವರನ್ನು ಏಮ್ಸ್ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅದಾಗಲೇ ಮಹಿಳೆ ಸಾವನ್ನಪ್ಪಿದ್ದಾರೆಂದು ವೈದ್ಯರು ಹೇಳಿದ್ದಾರೆ. ಆರೋಪಿ ನಡೆದ ಘಟನೆಯನ್ನು ವಿವರಿಸಿದ. ಆತ ಎಷ್ಟು ಬಲವಾಗಿ ಆಕೆಯ ಕತ್ತು ಹಿಸುಕಿದ್ದನೆಂದರೆ ಮಹಿಳೆಯ ಕತ್ತಿನ ಭಾಗದ ಮೂಳೆಗಳೇ ಮುರಿದಿದ್ದವು. ಆಮ್ಲಜನಕದ ಕೊರತೆಯಿಂದಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

    ರೀಟಾ 2002ರಲ್ಲಿ ಪ್ರೇಮ ವಿವಾಹವಾಗಿದ್ದರು. ಆಕೆಯ ಗಂಡ ಏರ್‍ಲೈನ್ಸ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಬಹುತೇಕ ಸಮಯ ನಗರದಿಂದ ಹೊರಗಡೆಯೇ ಇರುತ್ತಿದ್ದರು. ನಂತರ ಪತಿಗೆ ಅಕ್ರಮ ಸಂಬಂಧ ಇರುವುದು ರೀಟಾಗೆ ಗೊತ್ತಾಗಿತ್ತು.

    ಖಾನ್ ಜೊತೆ ಸಂಬಂಧ ಇದ್ದಿದ್ದು ಕುಟುಂಬದಲ್ಲಿ ಯಾರಿಗೂ ತಿಳಿದಿರಲಿಲ್ಲ. ಖಾನ್ ನನ್ನ ಮಗಳನ್ನ ಕೇವಲ ಹಣಕ್ಕಾಗಿ ಬಳಸಿಕೊಂಡಿದ್ದ ಎಂಬುದು ಇತ್ತೀಚೆಗೆ ಗೊತ್ತಾಯಿತು. ಆತನಿಗೆ ರೀಟಾ 60 ಸಾವಿರ ರೂ. ಕೊಡಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಕೊಡಲು ಸಾಧ್ಯವಾಗಿರಲಿಲ್ಲ ಎಂದು ರೀಟಾ ತಂದೆ ಹೇಳಿದ್ದಾರೆ.

    ಅರೋಪಿ ಖಾನ್ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ.